Asianet Suvarna News Asianet Suvarna News

ಆಮೀರ್ ಖಾನ್ ಮಗಳ ರಿಸೆಪ್ಷನಲ್ಲಿ ಕತ್ರೀನಾ ಹೀಗೆ ಮಾಡಿರೋದು ಸರೀನಾ ಅಂತಿದ್ದಾರೆ ಫ್ಯಾಷನ್ ಪ್ರಿಯರು!

ಅದ್ವಿತೀಯ ಸೌಂದರ್ಯವತಿ ಕತ್ರೀನಾ ಕೈಫ್ ಫ್ಯಾಷನ್ ವಿಚಾರದಲ್ಲಿ ಹಿಂದೆ ಬೀಳುತ್ತಿದ್ದಾರೆ. ಸೇಮ್ ಸ್ಟೈಲ್, ಸೇಮ್ ಲೆಹೆಂಗಾ, ಸೇಮ್ ಡ್ರೇಪಿಂಗ್, ಸೇಮ್ ಮೇಕಪ್, ಅದೇ ರೀತಿಯ ಸಾಂಪ್ರದಾಯಿಕ ಆಭರಣಗಳನ್ನು ಪ್ರತಿಬಾರಿ ಧರಿಸುತ್ತಿರುವುದು ಕಂಡುಬರುತ್ತಿದೆ. 

Katrina Kaif not experimenting on her looks she floows old style
Author
First Published Jan 18, 2024, 6:30 PM IST

ಕತ್ರೀನಾ ಕೈಫ್ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರು ಫಿಟ್ ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದರೆ ಇಲ್ಲಿಯವರೆಗೂ ಅವರ ದೇಹದ ಮೇಲೆ ಒಂದು ಇಂಚಿನಷ್ಟಾದರೂ ಕೊಬ್ಬು ಎಲ್ಲಿಯೂ ಶೇಖರಣೆಯಾಗಿಲ್ಲ. ಈ ಕಾರಣದಿಂದ ಬಿ-ಟೌನ್ ನ ಯುವ ನಟಿಯರು ಸಹ ಕತ್ರೀನಾ ಮುಂದೆ ಸಪ್ಪೆಯಾಗಿ ಕಾಣುತ್ತಾರೆ. ಫಿಟ್ ನೆಸ್ ಜತೆಗೆ ಆಕೆಯ ಫ್ಯಾಷನ್ ಸೆನ್ಸ್ ಕೂಡ ಅಷ್ಟೇ ಉತ್ತಮವಾಗಿದ್ದು, ಯಾವುದಾದರೂ ಸಮಾರಂಭದಲ್ಲಿ ಆಕೆ ಬಂದರೆ ಎಲ್ಲರ ಕಣ್ಣು ಕತ್ರೀನಾ ಮೇಲೆಯೇ ನಿಲ್ಲುತ್ತದೆ. ಆದರೆ, ಈ ಮಾತು ಇತ್ತೀಚೆಗೆ ಬದಲಾಗುತ್ತಿದೆ. ಕಳೆದ ಕೆಲವು ಸಮಯದಿಂದ ಫ್ಯಾಷನ್ ವಿಚಾರದಲ್ಲಿ ಕತ್ರೀನಾ ಡಲ್ ಎನಿಸುತ್ತಿದ್ದಾರೆ. ಫ್ಯಾಷನ್ ನಲ್ಲಿ ಹೊಸತನದ ಕೊರತೆಯನ್ನು ಅವರು ಎದುರಿಸುತ್ತಿದ್ದಾರೆ. ಕತ್ರೀನಾಳಂತಹ ಕತ್ರೀನಾಗೆ ಹೊಸತನದ ಕೊರತೆ ಏಕಾಗುತ್ತದೆ ಎಂದು ಯಾರಾದರೂ ಪ್ರಶ್ನಿಸಿದರೆ, ಅವರ ಇತ್ತೀಚಿನ ಡ್ರೆಸ್ ಗಳನ್ನು ಗಮನಿಸುವುದು ಸೂಕ್ತ. ಕತ್ರೀನಾ ಫ್ಯಾಷನೇಬಲ್ ಇಲ್ಲವೆಂದಲ್ಲ. ಆದರೆ, ಮದುವೆಯಾಗಿ ಮಿಸೆಸ್ ಕೌಶಲ್ ಆದ ಬಳಿಕ ಕತ್ರೀನಾ ತನ್ನ ಲುಕ್ ನಲ್ಲಿ ಹೆಚ್ಚಿನ ಬದಲಾವಣೆ ಕಾಣಲು ಇಚ್ಛಿಸುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಲೇಟೆಸ್ಟ್ ಸಾಕ್ಷಿಯೂ ದೊರೆತಿದೆ. 

ಆಮೀರ್ ಖಾನ್ ಮಗಳು ಐರಾ ಖಾನ್ ಮತ್ತು ನೂಪುರ್ ಶಿಖರೆ ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸಾಂಪ್ರದಾಯಿಕ ಮದುವೆಯ (Marriage) ಬಳಿಕ ಆಮೀರ್ ಖಾನ್ ಅದ್ದೂರಿ ರಿಸೆಪ್ಷನ್ (Reception)  ಹಮ್ಮಿಕೊಂಡಿದ್ದರು. ಈ ಸಮಾರಂಭಕ್ಕೆ ಆಗಮಿಸಿದ್ದ ಕತ್ರೀನಾ ಕೈಫ್ (Katrina Kaif) ಅನ್ನು ನೋಡಿದ ಫ್ಯಾಷನ್ (Fashion) ಪ್ರಿಯರಿಗೆ ಬೇಸರವಾಗಿದೆ. ಅವರು ಅತಿ ಸುಂದರ ಡ್ರೆಸ್ ಅನ್ನು ಧರಿಸಿದ್ದರು ಎನ್ನುವುದೇನೋ ನಿಜ, ಆದರೆ, ಆ ಉಡುಪಿನ ಒಟ್ಟಾರೆ ಲುಕ್ ಹೇಗಿತ್ತು ಎಂದರೆ, ಹಳೆಯ ಲುಕ್ (Old Look) ನಂತೆಯೇ ಇತ್ತು. ಬಹಳಷ್ಟು ಬಾರಿ ಕತ್ರೀನಾ ಅದೇ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಕೇವಲ ಬಣ್ಣದಲ್ಲಿ ಮಾತ್ರ ವ್ಯತ್ಯಾಸವಿತ್ತೇ ಹೊರತು, ಡಿಸೈನ್ (Design) ಸೇಮ್ ಟು ಸೇಮ್ ಇದ್ದ ಕಾರಣದಿಂದ ಕತ್ರೀನಾ ಫ್ಯಾಷನ್ ನಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಸಲಿಗೆ ಕತ್ರೀನಾಗೆ ಸಾಂಪ್ರದಾಯಿಕ (Ethnic) ದಿರಿಸುಗಳೆಂದರೆ ಭಾರೀ ಇಷ್ಟ. ಆಕೆ ಇದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಆಮೀರ್ ಖಾನ್ ಮಗಳ ರಿಸೆಪ್ಷನ್ ಗೂ ಸಹ ಅವರು ದಂತದ (Ivory) ಬಣ್ಣದ ಲೆಹೆಂಗಾವನ್ನು ಆಯ್ಕೆ ಮಾಡಿದ್ದರು. ಅವರ ಲುಕ್ ಹಿಂದಿನ ಹಲವು ಲುಕ್ ಗಿಂತ ಏನೂ ಬದಲಾವಣೆ ಕಾಣಿಸುತ್ತಿರಲಿಲ್ಲ. ಇದಕ್ಕೂ ಮುನ್ನ ಕತ್ರೀನಾ ಹಲವಾರು ಕಾರ್ಯಕ್ರಮಗಳಲ್ಲಿ ಇಂಥದ್ದೇ ಡ್ರೆಸ್ ಧರಿಸಿದ್ದರು. ಉದ್ದ ತೋಳಿನ ಸ್ಲೀವ್ಸ್ ಹೊಂದಿದ್ದ ಲೆಹೆಂಗಾದಲ್ಲಿ ಕತ್ರೀನಾ ಚೆನ್ನಾಗಿ ಕಾಣಿಸುತ್ತಿದ್ದರೂ ಇಂಪ್ರೆಸಿವ್ ಎನಿಸಲಿಲ್ಲ. 

ಗಂಡನ ಜೊತೆ ಕಾಣಿಸಿಕೊಂಡ ಪ್ರೇಮಲೋಕದ ಬೆಡಗಿ: ಜೊತೆಲಿರೋದು ತಾತನಾ ಅಂತ ಕೇಳಿದ ಜನ

ಹಳೇ ಸ್ಟೈಲ್
ಭಾರತದ ಖ್ಯಾತ ಫ್ಯಾಷನ್ ಡಿಸೈನರ್ (Designer) ಸವ್ಯಸಾಚಿ ಅವರ ವಿನ್ಯಾಸದ ಮಾಸ್ಟರ್ ಪೀಸ್ ಎನ್ನಬಹುದಾದ ಲೆಹೆಂಗಾ (Lehanga) ಮಾದರಿಯಲ್ಲಿ ಕತ್ರೀನಾ ಅದೇ ಹಳೆಯ ಸ್ಟೈಲ್ (Style) ನಲ್ಲಿ ಫುಲ್ ಸ್ಲೀವ್ಸ್ ಧರಿಸಿರುವುದು ಫ್ಯಾಷನ್ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಕಳೆದ ದೀಪಾವಳಿಯಲ್ಲೂ ಅವರು ಇದೇ ರೀತಿಯ ಉಡುಪು ಧರಿಸಿದ್ದರು. 

ದುಬಾರಿ ಬಟ್ಟೆ
ಇನ್ನು, ಕತ್ರೀನಾರ ಸಾಮಾಜಿಕ ಜಾಲತಾಣದ (Social Media) ಖಾತೆಗಳು ಸಹ ಇದಕ್ಕೆ ಹೊರತಾಗಿಲ್ಲ. ಅಲ್ಲೂ ಇದೇ ಮಾದರಿಯ ಲೆಹೆಂಗಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ತಮ್ಮ ಲುಕ್ ನಲ್ಲಿ ಸ್ವಲ್ಪವೂ ಹೊಸತನದ (Newness) ಬಗ್ಗೆ ಅವರು ಕಾಳಜಿ ವಹಿಸುತ್ತಿಲ್ಲ ಅಥವಾ ಹೊಸತಾಗಿ ಕಾಣಿಸಿಕೊಳ್ಳಲು ಅವರಿಗೆ ಇಷ್ಟವಾಗುತ್ತಿಲ್ಲ.

ಘರ್ ಸೇ ನಿಕಲ್ ತೇ ಹಿ ಹಾಡಿನ ಸುಂದ್ರಿ ಮಯೂರಿ ಈಗ ಗೂಗಲ್ ನ ಇಂಡಿಯಾ ಇಂಡಸ್ಟ್ರಿ ಹೆಡ್

ತಮ್ಮ ಚಿತ್ರ “ಸೂರ್ಯವಂಶಿ’ಯ ಪ್ರಮೋಷನ್ ಗೂ ಅವರು ಇದೇ ಮಾದರಿಯ ಕೆಂಪು ಮತ್ತು ಹಳದಿ ಬಣ್ಣದ ಸವ್ಯಸಾಚಿ ವಿನ್ಯಾಸದ ಲೆಹೆಂಗಾ ಧರಿಸಿದ್ದರು. ಪ್ರತಿಬಾರಿ ಇಷ್ಟು ದುಬಾರಿ ಬಟ್ಟೆ ಧರಿಸುವ ಕತ್ರೀನಾ ಹೊಸತನದ ವಿಚಾರದಲ್ಲಿ ಯಾಕೆ ಹೊಸ ಪ್ರಯೋಗ (Experiment) ಮಾಡುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಫ್ಯಾಷನ್ ಪ್ರಿಯರು ಕೇಳುತ್ತಿದ್ದಾರೆ. 

Follow Us:
Download App:
  • android
  • ios