ಕೂದಲು ರೇಷ್ಮೆಯಂತಿರಬೇಕು ಅಂದ್ರೆ ಹೀಗ್ ಮಾಡಿ ಸಾಕು, ಸಿಕ್ಕಾಪಟ್ಟೆ ದುಡ್ಡು ವೇಸ್ಟ್ ಮಾಡ್ಬೇಡಿ!

ಕೂದಲು ಉದುರುತ್ತಿದೆ, ಹೊಟ್ಟಾಗಿದೆ, ಕೂದಲು ಶುಷ್ಕವಾಗಿದೆ ಹೀಗೆ ಕೂದಲಿನ ಯಾವುದೇ ಸಮಸ್ಯೆ ಕಂಡು ಬಂದ್ರೂ ನಾವು ದುಬಾರಿ ಬೆಲೆ ಶಾಂಪೂ, ಆಯಿಲ್ ಖರೀದಿ ಮಾಡಿ ಹಚ್ಚಿಕೊಳ್ತೇವೆ. ಇದ್ರಿಂದ ಜೇಬು ಖಾಲಿಯಾಗುತ್ತೆ ವಿನಃ ಕೂದಲು ಸರಿಯಾಗೋದಿಲ್ಲ. ನಿಮ್ಮ ಕೂದಲು ಆರೋಗ್ಯವಾಗಿರಬೇಕೆಂದ್ರೆ ನೀವು ಮನೆ ಮದ್ದು ಬಳಸಿನೋಡಿ. 
 

Jawed Habibs Hair Care Tips for Achieving Healthy and Glowing Hair roo

ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಗಂಡು ಮಕ್ಕಳು ಹೆಣ್ಣುಮಕ್ಕಳೆನ್ನದೆ ಎಲ್ಲರೂ ನಾನಾ ವಿಧದ ಹೇರ್ ಸ್ಟೈಲ್ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಎಲ್ಲರೂ ತಮ್ಮ ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಕೂದಲು ಉದುರುವುದನ್ನು ತಡೆಗಟ್ಟಲು, ಡ್ಯಾಂಡ್ರಫ್ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅನೇಕ ರೀತಿಯ ಶ್ಯಾಂಪೂ, ಹೇರ್ ಆಯಿಲ್ ಮುಂತಾದ ಹೇರ್ ಕೇರ್ ಪ್ರೊಡಕ್ಟ್ ಗಳನ್ನು ಬಳಸುತ್ತಾರೆ.

ಅನೇಕ ಮಂದಿ ಕೂದಲಿ (Hair) ನ ಆರೈಕೆಗಾಗಿ ದುಬಾರಿ ಶ್ಯಾಂಪೂ, ಸೋಪ್ ಮತ್ತು ಹೇರ್ ಆಯಿಲ್ ಗಳನ್ನು ಬಳಸುತ್ತಾರೆ. ಆದರೆ ಕಲುಷಿತ ವಾತಾವರಣದ ಕಾರಣದಿಂದಲೋ ಅಥವಾ ಒತ್ತಡ (stress) ದ ಜೀವನ ಶೈಲಿಯಿಂದಲೋ ಕೂದಲು ಉದುರುವುದು ಹಾಗೂ ತಲೆ ಹೊಟ್ಟಿನ ಸಮಸ್ಯೆ ಮತ್ತು ಬಿಳಿ ಕೂದಲ ಸಮಸ್ಯೆ ಅನೇಕರಲ್ಲಿದೆ. ಕೂದಲಿನ ಇಂತಹ ಸಮಸ್ಯೆಗಳಿಗೆ ಹೇರ್ ಆರ್ಟಿಸ್ಟ್ (hair artist) ಆದ ಜಾವೇದ್ ಹಬೀಬ್ ಅವರು ಕೆಲವು ಹೇರ್ ಕೇರ್ ಟಿಪ್ಸ್ ಗಳನ್ನು ಹೇಳಿದ್ದಾರೆ.

ಸೀರೆಯಲ್ಲಿ ಸಾರಾ, ಸೈಕೋ ಆದ್ರೂ ಸಖತ್ ಬ್ಯೂಟಿ ಎಂದ ನೆಟ್ಟಿಗರು

ಕೆಮಿಕಲ್ ನಿಂದ ಹಾಳಾಗುತ್ತೆ ನಿಮ್ಮ ಕೂದಲು : ಇಂದು ಅನೇಕ ಮಂದಿ ತಮ್ಮ ಕೂದಲು ಸ್ಟೈಲಿಶ್ ಆಗಿ ಕಾಣಬೇಕೆಂದು ಅನೇಕ ರೀತಿಯ ಕೆಮಿಕಲ್ ಗಳನ್ನು ಬಳಸುತ್ತಾರೆ. ಕೂದಲ ಸೆಟಿಂಗ್ ಮತ್ತು ಸ್ಟೈಲಿಂಗ್ ಮಾಡುವ ಸಮಯದಲ್ಲಿ ಬಳಸಲಾಗುವ ಸೆಟ್ಟಿಂಗ್ ಉತ್ಪನ್ನಗಳ ಅತಿಯಾದ ಬಳಕೆಯಿಂದ ಕೂದಲು ಹಾನಿಯಾಗುತ್ತದೆ. ಕೂದಲಿನ ಸೆಟ್ಟಿಂಗ್ ಉತ್ಪನ್ನಗಳ ಅತಿಯಾದ ಬಳಕೆಯಿಂದ ಕೂದಲು ಹಾಳಾಗಿದ್ದರೆ ನಿಮ್ಮ ಕೂದಲನ್ನು ಎಷ್ಟು ಸಾಧ್ಯವೋ ಅಷ್ಟು ಕತ್ತರಿಸಿಬಿಡಿ ಎನ್ನುತ್ತಾರೆ ಜಾವೇಬ್ ಹಬೀಬ್. ಹಾನಿಗೊಳಗಾದ ಕೂದಲನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಕೂದಲಿನ ಫ್ರೀ ಕಂಡೀಶನಿಂಗ್ ಮಾಡಿಸಿ ಹಾಗೂ ತಲೆ ಸ್ನಾನ ಮಾಡುವ ಮೊದಲು ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಿ ಎಂದು ಹಬೀಬ್ ಸಲಹೆ ನೀಡಿದ್ದಾರೆ.

ಕೂದಲು ಉದುರುವುದನ್ನು ಹೀಗೆ ನಿಲ್ಲಿಸಿ : ತಲೆ ಸ್ನಾನ ಮಾಡುವ ಮೊದಲು ತಲೆಗೆ ಎಣ್ಣೆ ಹಚ್ಚಿ 10 ನಿಮಿಷದ ನಂತರ ಸ್ನಾನ ಮಾಡಿ. 8 ರಿಂದ 10 ವಾರಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಿಸಿ. ವಾರಕ್ಕೊಮ್ಮೆ ಈರುಳ್ಳಿ ರಸವನ್ನು ತಲೆಗೆ ಹಚ್ಚಿ ಸ್ನಾನ ಮಾಡಿ. ಇದರ ನಂತರವೂ ನಿಮಗೆ ಕೂದಲು ಉದುರುತ್ತಿದೆ ಎಂದಾದರೆ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿ. ಕೂದಲ ಉದುರುವಿಕೆಯನ್ನು ನಿರ್ಲಕ್ಷಿಸಬೇಡಿ ಎಂದು ಹಬೀಬ್ ಹೇಳಿದ್ದಾರೆ. 

Health Tips: ಒಮೆಗಾ 3 ಫ್ಯಾಟಿ ಆಸಿಡ್ ಹೆಚ್ಚಾದ್ರೆ ಅಡ್ಡ ಪರಿಣಾಮ ಇರೋದೆ

ಕೂದಲಿಗೆ ಹೊಳಪು ಬರಲು ಹೀಗೆ ಮಾಡಿ : ಕೂದಲಿಗೆ ಮತ್ತೆ ಮತ್ತೆ ಕೆಮಿಕಲ್ ಟ್ರೀಟ್ ಮೆಂಟ್, ಹೀಟ್ ಸ್ಟೈಲಿಂಗ್ ಟೂಲ್ಸ್ ಬಳಕೆ ಮಾಡುವುದರಿಂದ ಕೂದಲು ಹೊಳಪು ಕಳೆದುಕೊಳ್ಳುತ್ತೆ ಮತ್ತು ನಿರ್ಜೀವವಾಗುತ್ತದೆ. ಕೂದಲಿಗೆ ಮರುಜೀವ ಕೊಡಲು ನೀವು ಫ್ರೀಕಂಡೀಶನಿಂಗ್ ಮಾಡಿಕೊಳ್ಳಬೇಕು. ಪ್ರತಿ ಬಾರಿಯೂ ತಲೆಸ್ನಾನ ಮಾಡುವ ಮೊದಲು ಕೂದಲಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಹಾಗೂ ತಿಂಗಳಲ್ಲಿ ಒಮ್ಮೆಯಾದರೂ ಹೇರ್ ಸ್ಪಾ ಟ್ರೀಟ್ ಮೆಂಟ್ ತೆಗೆದುಕೊಳ್ಳಬೇಕು ಎನ್ನುವುದು ಹಬೀಬ್ ಅವರ ಸಲಹೆಯಾಗಿದೆ.

ಹೊಟ್ಟಿನ ಸಮಸ್ಯೆ ನಿವಾರಿಸೋದು ಹೇಗೆ? : ಹೊಟ್ಟಿನಲ್ಲಿ ಆಯ್ಲಿ ತಲೆಹೊಟ್ಟು ಮತ್ತು ಡ್ರೈ ತಲೆ ಹೊಟ್ಟು ಎಂಬ ಎರಡು ವಿಧಗಳಿವೆ. ಆಯ್ಲಿ ಹೊಟ್ಟಿನ ಸಮಸ್ಯೆಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಡ್ರೈ ಹೊಟ್ಟಿನ ಸಮಸ್ಯೆ ಇರುವವರು ವಾರಕ್ಕೊಮ್ಮೆ ನಿಮ್ಮ ಶ್ಯಾಂಪೂ ಜೊತೆಗೆ ಆ್ಯಪಲ್ ಸೈಡರ್ ವಿನೆಗರ್ ಅನ್ನು ಬಳಸಿ ಹಾಗೂ ನಿಮ್ಮ ಕೂದಲನ್ನು ಹೆಚ್ಚು ಸ್ವಚ್ಛವಾಗಿಡಿ.

ಬಿಳಿ ಕೂದಲಿನ ಸಮಸ್ಯೆ : ಇತ್ತೀಚೆಗೆ ಹದಿಹರೆಯದ ಯುವಕರೂ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತವರು ಕೆಮಿಕಲ್ ಟ್ರೀಟ್ ಮೆಂಟ್ ಗಳಿಂದ ದೂರವಿರಬೇಕು. ಕೆಮಿಕಲ್ ಬಳಕೆಯ ಬದಲು ನ್ಯಾಚುರಲ್ ಕಲರ್ ಗಳನ್ನು ಬಳಸಿ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು.

Latest Videos
Follow Us:
Download App:
  • android
  • ios