ಇಂದೋರ್‌ನಲ್ಲಿರುವ ಒಂದು ಅದ್ಭುತ ಮನೆಯು 24 ಕ್ಯಾರೆಟ್ ಚಿನ್ನದ ಲೇಪಿತ ವಿದ್ಯುತ್ ಸಾಕೆಟ್‌ಗಳು ಮತ್ತು ಪೀಠೋಪಕರಣಗಳನ್ನು ಹೊಂದಿದೆ. ಈ ಮನೆಯ ಮಾಲೀಕರು ತಮ್ಮ ಐಷಾರಾಮಿ ಬದುಕಿನ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅನೇಕ ಚರ್ಚೆಗಳಿಗೆ ಕಾರಣವಾಗಿದೆ.

ಇಂದೋರ್‌ನ ಶ್ರೀಮಂತ ಮಹಲಿನ ಮನೆಯೊಂದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಚಿನ್ನದಿಂದ ಅದ್ದೂರಿಯಾಗಿ ಅಲಂಕರಿಸಲಾದ ಈ ಮನೆಯಲ್ಲಿ ಚಿನ್ನದ ಲೇಪಿತ ಪೀಠೋಪಕರಣಗಳು ಮತ್ತು 24 ಕ್ಯಾರೆಟ್ ಚಿನ್ನದ ಲೇಪಿತ ವಿದ್ಯುತ್ ಸಾಕೆಟ್‌ಗಳಿವೆ (ಸ್ವಿಚ್‌ ಬೋರ್ಡ್‌ಗಳಿವೆ). ಇನ್‌ಸ್ಟಾಗ್ರಾಂನಲ್ಲಿ ಪ್ರಭಾವಿಯಾಗಿರುವ ಪ್ರಿಯಮ್ ಸಾರಸ್ವತ್ ಹಂಚಿಕೊಂಡಿರುವ ಈ ವೀಡಿಯೊವನ್ನು ಈಗಾಗಲೇ 1 ಕೋಟಿಗೂ ಹೆಚ್ಚು ಮಂದಿ ವೀಕ್ಷಣೆಗಳು ಮಾಡಿದ್ದು, ದಿನದಿಂದ ದಿನಕ್ಕೆ ವೀಕ್ಷಕರನ್ನು ಆಕರ್ಷಿಸುತ್ತಿದೆ ಮತ್ತು ಥ್ರಿಲ್ ಆಗಿಸಿದೆ.

ಐಷಾರಾಮಿ ಕಾರು ಸಂಗ್ರಹ

ಐಷಾರಾಮಿ ಮನೆಗಳನ್ನು ಪರಿಚಯಿಸುವುದರಲ್ಲಿ ಪ್ರಸಿದ್ಧನಾಗಿರುವ ಸಾರಸ್ವತ್, ಮನೆಮಾಲೀಕರ ಅನುಮತಿ ಪಡೆದು ಹೋಂ ಟೂರ್‌ ಆರಂಭಿಸುತ್ತಾನೆ. ಆ ದಂಪತಿಗಳ ಶಾಂತ ಸ್ವಭಾವ, ಅವರ ನಿವಾಸದ ಐಷಾರಾಮಿ ಬದುಕಿಗೆ ವಿರುದ್ಧವಾಗಿದೆ. ಮನೆಯೊಳಗೆ ಹೋಗುವುದಕ್ಕೂ ಮುನ್ನ ಅವರು ತಮ್ಮ ಗೋಶಾಲೆಯನ್ನು ತೋರಿಸಿದ್ದಾರೆ. ನಂತರ ಅವರ ಗ್ಯಾರೇಜ್‌ನಲ್ಲಿ 1936ರ ವಿಂಟೇಜ್ ಮರ್ಸಿಡಿಸ್ ಸೇರಿ . ರೇಂಜ್ ರೋವರ್, ಬಿಎಂಡ್ಬ್ಯೂ ಸೇರಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ ಇದನ್ನು ಮನೆಮಾಲೀಕರು “ನಿಜವಾದ ಚಿನ್ನ” ಎಂದು ವಿವರಿಸುತ್ತಾರೆ. ಇಂದೋರ್‌ ನಲ್ಲಿ ಹೊಸ ಐಷಾರಾಮಿ ಕಾರು ಬಂದರೆ ಮೊದಲ ಕಾರನ್ನು ಖರೀದಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಆಧ್ಯಾತ್ಮಿಕ ಜೀವನ

ಮನೆ ಪ್ರವೇಶಿಸುತ್ತಿದ್ದಂತೆಯೇ ಸರಸ್ವತಿಯ ಮೂರ್ತಿಯನ್ನು ಇಡಲಾಗಿದೆ. ಇದರ ಜೊತೆಗೆ ದಂಪತಿಗಳು ಬಹಳ ಆಧ್ಯಾತ್ಮಿಕವಾಗಿದ್ದಾರೆ. ನಾವು ಮೂಲಕ ನಂಬಿಕೆಯನ್ನು ಬಿಟ್ಟಿಲ್ಲ. ಪ್ರತಿಬಾರಿ ಮನೆಯಿಂದ ಹೋಗುವಾಗ ದೇವರನ್ನು ಪೂಜಿಸಿಯೇ ಹೋಗುತ್ತೇವೆ ಎಂದಿದ್ದಾರೆ. ಇದರ ಜೊತೆಗೆ ಡ್ರಾಯಿಂಗ್ ರೂಂ ಇದ್ದು ಅಧ್ಭುತ ಕಲಾಕೃತಿಯನ್ನು ಗೋಡೆಯಲ್ಲಿ ಬಿಡಿಸಲಾಗಿದೆ ಮತ್ತು ಚಿನ್ನದ ಲೇಪನಗಳನ್ನು ನೀಡಲಾಗಿದೆ. ಕೈತೊಳೆಯುವ ವಾಶ್ ಬೇಸಿನ್ ಕೂಡ ಚಿನ್ನದ ಲೇಪಿತವಾಗಿದೆ.

ಅಪ್ಪಟ ಚಿನ್ನ ಸ್ವಿಚ್ ಬೋರ್ಡ್

ಐಶಾರಾಮಿ ನಿವಾಸದೊಳಗಿನ ವೈಭವ ಹೇಗಿದೆ ಎಂದರೆ ಅದನ್ನು ವಿವರಿಸುವುದು ಕೂಡ ಕಷ್ಟ, ಅಪ್ಪಟ ಚಿನ್ನದ ಗೊಂಚಲು ದೀಪಗಳು, ಗೋಡೆಗಳಲ್ಲಿ ಅತ್ಯುತ್ತನ್ನತ ಕಲಾಕೃತಿಗಳು ಮತ್ತು 24 ಕ್ಯಾರೆಟ್ ಚಿನ್ನದ ಸ್ವಿಚ್‌ಬೋರ್ಡ್‌ಗಳೊಂದಿಗೆ ಮುಂದುವರಿಯುತ್ತದೆ. “ನಾನು ಇಷ್ಟು ಚಿನ್ನವನ್ನು ಇತ್ತೀಚೆಗೆ ನೋಡಿಲ್ಲ” ಎಂದು ಸಾರಸ್ವತ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಆಗ ಮನೆಮಾಲೀಕರು ದೃಢವಾಗಿ ಹೇಳುತ್ತಾರೆ, ಇವೆಲ್ಲವೂ ನಿಜ. 24 ಕ್ಯಾರೆಟ್ ನಿಂದ ಮಾಡಲಾಗಿದೆ. ನಾವು ಅದನ್ನು ಅಲಂಕಾರದಿಂದ ಹಿಡಿದು ಸಾಕೆಟ್‌ಗಳವರೆಗೆ ಪ್ರತಿಯೊಂದು ಮೂಲೆಯಲ್ಲಿ ಬಳಸಿದ್ದೇವೆ ಎಂದು ದೃಢಪಡಿಸಿದ್ದಾರೆ.

10 ಮಲಗುವ ಕೋಣೆ

ಇದು ಆಧುನಿಕ ಅರಮನೆಯಂತಿದ್ದು, ಈ ನಿವಾಸದಲ್ಲಿ 10 ಮಲಗುವ ಕೋಣೆಗಳು, ಖಾಸಗಿ ದನದ ಕೊಟ್ಟಿಗೆ ಮತ್ತು ಬಹಳ ಜಾಗೂರಕತೆಯಿಂದ ನಿರ್ವಹಿಸಲ್ಪಟ್ಟ ಹುಲ್ಲುಹಾಸಿನ ಗಾರ್ಡನ್‌ಗಳು ಹೊಂದಿದೆ ಎಂದು ದಂಪತಿಗಳು ವಿವರಣೆ ನೀಡಿದ್ದಾರೆ. ತಮ್ಮ ಬದುಕಿನ ಪಯಣದ ಕುರಿತು ಅವರು ಹಂಚಿಕೊಳ್ಳುತ್ತಾ, ಕಷ್ಟದಿಂದ ಮೇಲೆ ಬಂದು ಈ ಸ್ಥಿತಿಗೆ ತಲುಪಿದೆವು ಎಂದು ತಮ್ಮ ಕಥೆಯನ್ನು ವಿವರಿಸುತ್ತಾರೆ.

ಪೆಟ್ರೋಲ್‌ ಪಂಪ್‌ ಜೀವನ

“ನಾವು ಒಂದು ಪೆಟ್ರೋಲ್ ಪಂಪ್‌ನಿಂದ 25 ಜನ ವಾಸಿಸುತ್ತಿದ್ದೆವು,” ಆ ಬಳಿಕ ಬದುಕುವುದು ಕಷ್ಟ ಎಂದು ಅರಿವಾಯ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು, ಉತ್ತಮವಾಗಿ ಬದುಕಬೇಕೆಂದು ಅವರು ಸರ್ಕಾರಿ ಗುತ್ತಿಗೆ ವ್ಯವಹಾರ ಆರಂಭಿಸಿದರು. ಅಲ್ಲಿಂದ ಬದುಕಿನಲ್ಲಿ ಏಳಿಗೆಯನ್ನು ಕಂಡರು. ಇಂದು ಅವರು ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳನ್ನು ನಿರ್ಮಿಸುವ ಕೆಲಸವನ್ನು ಗುತ್ತಿಗೆ ಪಡೆಯುತ್ತಾರೆ. ನಾವು 300 ಕೋಣೆಗಳ ಹೋಟೆಲ್‌ನಲ್ಲಿಯೂ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಈ ಅದ್ದೂರಿ ಮನೆಯ ವೀಡಿಯೊ ಅಚ್ಚರಿ ಮತ್ತು ವ್ಯಾಪಕ ಆನ್‌ಲೈನ್ ಚರ್ಚೆಗೆ ಕಾರಣವಾಗಿದೆ. ಒಬ್ಬ ವೀಕ್ಷಕ ಹಾಸ್ಯಮಯವಾಗಿ, ಸ್ವಿಚ್‌ಬೋರ್ಡ್‌ಗಳು ಕೂಡ ಚಿನ್ನವಾಗಿರುವ ಮನೆಯಲ್ಲಿ ವಾಸಿಸುವುದನ್ನು ಕಲ್ಪಿಸಿಕೊಳ್ಳಿ ಎಂದಿದ್ದಾರೆ. ಮತ್ತೊಬ್ಬರು, “ಇದು ಚಲನಚಿತ್ರ ಸೆಟ್‌ನಿಂದ ನೇರವಾಗಿ ಬಂದಂತೆ ಕಾಣುತ್ತದೆ,” ಎಂದು ವ್ಯಂಗ್ಯವಾಡಿದ್ದಾರೆ. “ರಾಜಗಾತ್ರದ ಜೀವನವು ಜೀವಂತವಾಗಿ ಬಂದಿದೆ,” ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ. “ಅವರ ಉತ್ಸಾಹಕ್ಕೆ ಗೌರವ,” ಎಂದು ನಾಲ್ಕನೇ ಬಳಕೆದಾರರು ಟೀಕಿಸಿದರೆ, ಮತ್ತೊಬ್ಬರು “ನನ್ನ ಕನಸುಗಳು ಕೂಡ ಇಷ್ಟು ಸುಂದರವಾಗಿಲ್ಲ,” ಎಂದು ತಮಾಷೆ ಮಾಡಿದ್ದಾರೆ. ಆದರೂ, ಕೆಲವರು ಮನೆಯ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಯಾಕೆಂದರೆ ಈಗ ಚಿನ್ನಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಇಂತಹ ಸ್ಥಿತಿಯಲ್ಲಿ ಮನೆಯಲ್ಲಿ ಕಳ್ಳತನ ಅಥವಾ ಮನೆಯವರಿಗೆ ಏನಾದರೂ ಮಾಡಬಹುದು. ಮತ್ತೊಂದು ಕಡೆ ಈ ಮನೆಯನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟವಿದೆ. ಯಾವಾಗ ಚಿನ್ನದ ಬಗ್ಗೆ ತರಹೇವಾರಿ ಕಮೆಂಟ್‌ಗಳು ಮತ್ತು ಚರ್ಚೆಗಳು ಆರಂಭವಾಯ್ತೋ ಕಾಮೆಂಟ್‌ ಬಾಕ್ಸ್‌ನಲ್ಲಿ ಪ್ರಿಯಂ ಸಾರಸ್ವತ್ ಮನೆಯಲ್ಲಿ ತೋರಿಸಿರುವ ಚಿನ್ನದ ಅಂಶಗಳು ವಾಸ್ತವವಾಗಿ 24 ಕ್ಯಾರೆಟ್ ಚಿನ್ನದ ಹಾಳೆಗಳಾಗಿವೆ ಮತ್ತು ನಿಜವಾದ ಚಿನ್ನವಲ್ಲ! ಮನೆಯಲ್ಲಿರುವ ಚಿನ್ನದ ಅಂಶವಿರುವ ಸಾಕೆಟ್‌ಗಳು ಮತ್ತು ಪ್ರತಿಮೆಗಳು ಕೂಡ ವಾಸ್ತವವಾಗಿ 24 ಕ್ಯಾರೆಟ್ ಚಿನ್ನದ ಹಾಳೆಗಳಾಗಿವೆ ಮತ್ತು ನಿಜವಾದ ಚಿನ್ನವಲ್ಲ! ಎಂದು ಬರೆದುಕೊಂಡಿದ್ದಾರೆ.

View post on Instagram