ಚಂದದ ತುಟಿಗಳಿಗೆ ಬೀಟ್ರೂಟ್‌ನಿಂದ ಮನೆಮದ್ದು ತಯಾರಿಸುವ ವಿಧಾನ ಮತ್ತು ತುಟಿಗಳ ಆರೈಕೆಗೆ ಸಲಹೆಗಳು. ಜೊತೆಗೆ ಚಳಿ, ಮಳೆಗಾಲಗಳಲ್ಲಿ ತುಟಿಗಳ ಆರೋಗ್ಯ ಕಾಪಾಡಿಕೊಳ್ಳುವ ಕ್ರಮಗಳನ್ನು ತಿಳಿಸಲಾಗಿದೆ.

ಅಂದದ ಮುಖದ ಕಳೆ ಹೆಚ್ಚಿಸುವಲ್ಲಿ ಚಂದ ತುಟಿ(Lip)ಗಳು ಮಹತ್ವದ ಪಾತ್ರ ವಹಿಸುತ್ತವೆ. ಅಂದ ತುಟಿಗಳನ್ನ ಹೊಂದುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ,ಎಲ್ಲರಿಗೂ ತಮ್ಮ ತುಟಿಗಳುಮೋಹಕವಾಗಿ ಕಾಣಬೇಕು ಎಂಬುದು ಇದ್ದೇ ಇರುತ್ತದೆ. ತುಟಿಗಳ ಮೋಹಕವಾದ ವರ್ಣನೆ ಚಿತ್ತಾಕರ್ಷವಾಗಿರುತ್ತದೆ. ದೇಹದ ಎಲ್ಲಾ ಅಂಗಗಳಿಗಿಂತ ತುಟಿಗಳ ಸ್ಥಿತಿ ವಿಭಿನ್ನವಾದದ್ದು ಅದರ ಮೇಲಿರುವ ತ್ವಚೆ ತೆಳುವಾಗಿದ್ದು ಮೃದುವಾಗಿರುತ್ತದೆ. ತುಟಿ(Lip)ಕೋಮಲವಾಗಿರಲು ಕಾರಣ ಈ ಮೃದುತ್ವದಿಂದಾಗಿ ಅದಕ್ಕೆ ಚಳಿ, ಶೀತ ಗಾಳಿ ಬಿಸಿಲುಗಳು ಸ್ವೀಕರಿಸುವ ಸಾಮರ್ಥ್ಯವಿಲ್ಲ.ಹವಾಮಾನಕ್ಕೆ ತಕ್ಕಂತೆ ಅವುಗಳಲ್ಲಿ ಬದಲಾವಣೆಯಾಗುತ್ತದೆ.ಉದಾಹರಣೆ ಚಳಿಗಾಲದಲ್ಲಿ ತುಟಿಗಳು ಹೆಚ್ಚು ಒಡೆಯುತ್ತವೆ ಮತ್ತು ಮಳೆಗಾಲದಲ್ಲಿ ಒಣಗುತ್ತವೆ.ಹೀಗೆ ಆದಾಗ ಅವುಗಳ ಆರೋಗ್ಯವನ್ನ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಚಂದವಿರುವ ತುಟಿಗಳ ಹಾಳಾಗದಂತೆ ಕಾಪಾಡಲು ಬಹಳ ಕಾಳಜಿ ವಹಿಸಬೇಕಾಗುತ್ತದೆ.

ಜೊತೆಗೆ ಕಡಿಮೆ ಪ್ರಮಾಣದ ತೈಲ ಗ್ರಂಥಿಗಳಿರುವ ತುಟಿಗಳಲ್ಲಿ ಸೂರ್ಯನ ಕಿರಣಗಳಿಂದ ಬಣ್ಣಗಳನ್ನು ಸ್ವೀಕರಿಸುವ ಮೆಲನಿನ್(Melanin)ಇರುವುದಿಲ್ಲ. ಹೀಗಾಗಿ ಅದಕ್ಕೆ ಬೇಕಾದ ಬಣ್ಣ ಬರುವಂತೆ ಕೆಲವು ಕ್ರಮಗಳನ್ನ ಪಾಲಿಸಬೇಕಾಗುತ್ತದೆ. ತುಟಿಗಳನ್ನ ಮೃದುವಾಗಿ, ಕೆಂಪಗೆ ಇಟ್ಟುಕೊಳ್ಳಬೇಕಾದರೆ ವಿವಿಧ ರೀತಿಯ ದುಬಾರಿ ಪರಿಕರಗಳನ್ನ ಬಳಸಬೇಕಂತಿಲ್ಲ ಮನೆಯಲ್ಲಿಯೇ ಸಿಗುವಂತಹ ತರಕಾರಿಯಿಂದ ತುಟಿಯನ್ನ ಸುಂದರವಾಗಿ ಇಟ್ಟುಕೊಳ್ಳಬಹುದು. ಹಾಗೇ ಹೆಚ್ಚು ಖರ್ಚು ಸಹ ಇರುವುದಿಲ್ಲ.

ಬೀಟ್ರೂಟ್( Beetroot)ಬರಿ ತರಕಾರಿ ಮಾತ್ರವಲ್ಲ ಆಹಾರ ಆರೋಗ್ಯವನ್ನು ಕಾಪಾಡುವ ಸಂಜೀವಿನಿ ಜೊತೆಗೆ ಇದೊಂದು ಉತ್ತಮ ಸೌಂದರ್ಯ ವರ್ಧಕ. ಬೀಟ್ರೂಟ್ ಬಳಸಿ ಲಿಪ್ಸ್ಟಿಕ್ ತಯಾರಿಸಬಹುದು ಇದನ್ನ ಹಚ್ಚಿಕೊಂಡರೆ ತುಟಿಗಳು ಕೋಮಲವಾಗುವುದರ ಜೊತೆಗೆ ತಾಜಾತನವು ಹಾಗೆ ಉಳಿಯುತ್ತದೆ.

ಬೀಟ್ರೂಟ್ ಲಿಪ್ಸ್ಟಿಕ್ ತಯಾರಿಕೆ ಹೇಗೆ? ಉತ್ತಮ ಗುಣಮಟ್ಟದ ಬೀಟ್ರೂಟನ್ನ( Beetroot) ಚೆನ್ನಾಗಿ ತೊಳೆದು ಶುದ್ಧಗೊಳಿಸಿ ದಪ್ಪವಾಗಿ ಸಿಪ್ಪೆಯನ್ನು ತೆಗೆದ ಬಳಿಕ ಸಣ್ಣದಾಗಿ ಹೆಚ್ಚಿ ಗ್ರೈಂಡ್ ಮಾಡಬೇಕು ಅದರಿಂದ ರಸವನ್ನ ಸೋಸಿಕೊಳ್ಳಬೇಕು ಈ ರಸದ ಸಮ ಪ್ರಮಾಣ ತೆಂಗಿನ ಎಣ್ಣೆ ಬೆರೆಸಬೇಕು ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ಮಿಶ್ರಣಗೊಳಿಸಿದ ಬಳಿಕ ಶುದ್ಧವಾದ ಜೇನು ಮೇಣವನ್ನು ಕುದಿಯುವ ನೀರಿಗೆ ಹಾಕಿದಾಗ ಅದು ಕರಗಿಸಿ ಸಿಗುವ ಪೇಸ್ಟ್ ನಂತಿರುವ ಅಂಶವನ್ನು ಸೇರಿಸಬೇಕು. ಇದನ್ನ ಫ್ರಿಜ್ಜಿನಲ್ಲಿ ಇರಿಸಿ ಗಟ್ಟಿಯಾದ ಬಳಿಕ ತುಟಿಗಳಿಗೆ ಲೆಪಿಸಿಕೊಂಡರೆ ಬಣ್ಣವು ಆಕರ್ಷಕವಾಗುತ್ತದೆ. ತುಟಿಗಳ ಆರೋಗ್ಯ ಕಾಪಾಡುವಲ್ಲಿ ಉತ್ತಮ ಸಾಧಕವೂ ಆಗುತ್ತದೆ.

ತುಟಿಗಳು(Lip) ಒಣಗಿದ ಅನುಭವ ಆದಾಗ ಅದರ ಮೇಲೆ ನಾಲಿಗೆಯನ್ನು ಓಡಾಡಿಸುವುದು ಹಗುರವಾಗಿ ಚೀಪುವುದು, ಬೆರಳಿನಿಂದ ಸ್ಪರ್ಶಿಸುವುದು ಅನೇಕರು ಅನುಸರಿಸುವ ಕ್ರಮ ಆದರೆ ನಮ್ಮ ಲಾಲ ರಸದಲ್ಲಿರುವ ಕಿಣ್ವಗಳು ತುಟಿಗಳ ಸಮಸ್ಯೆಯನ್ನು ಪರಿಹರಿಸಲು ಪರಿಹರಿಸುವ ಬದಲು ಇನ್ನಷ್ಟು ಕಠಿಣ ಗೊಳಿಸುತ್ತವೆ. ಆದ್ದರಿಂದ ಒಣತುಟಿಗಳಿಗೆ ನಾಲಿಗೆಯಿಂದ ಪರಿಹಾರವಲ್ಲ ಹೆಚ್ಚು ನೀರು ಕುಡಿಯುವುದರಿಂದ ತುಟಿಗಳನ್ನ ತೇವಾಂಶಭರಿತವಾಗಿ ಇಟ್ಟುಕೊಳ್ಳಬಹುದು.ತುಪ್ಪ(Ghee) ಅಥವಾ ಬೆಣ್ಣೆ(Butter)ಯನ್ನ ಸವರುವುದರಿಂದ ಚಳಿಗಾಲದಲ್ಲಿ ತುಟಿಗಳು ಒಣಗುವ ಸಮಸ್ಯೆಯಿಂದ ಸುರಕ್ಷಿತವಾಗಬಹುದು. ಹಾಗೇ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನ ತುಟಿಗಳಿಗೆ ಹಚ್ಚಿಕೊಂಡು ಮಲಗುವುದರಿಂದ ದಿನಪೂರ್ತಿ ತುಟಿಗಳು ತೇವಾಂಶವಾಗಿರುತ್ತವೆ.

ಆರೋಗ್ಯಕರವಾದ ಆಹಾರ ಕ್ರಮವೇ ತುಟಿಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಾಮಿನ್‌ ಎ ಮತ್ತು ವಿಟಾಮಿನ್‌ ಸಿ ಹಾಗೂ ಇ ಜೀವ ಸತ್ವವಿರುವ ಆಹಾರವನ್ನು(Vitamins )ಚಳಿಗಾಲ ಮತ್ತು ಮಳೆಗಾದಲ್ಲಿ ಹೆಚ್ಚು ಸೇವಿಸುವುದರಿಂದ ತುಟಿಗಳು ಒಣಗುವುದಿಲ್ಲ. ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ, ನಿಂಬೆ ಮುಂತಾದ ಹಣ್ಣು ತರಕಾರಿಗಳ ರಸವನ್ನ ಹೆಚ್ಚು ಸೇವಿಸುವುದರಿಂದ ತುಟಿಗಳ ನಿರ್ಜಲೀಕರಣ ತೊಂದರೆಯಿಂದ ದೂರ ಉಳಿಯಬಹುದು. ಹಾಗೆ ತುಟಿಗಳು ಯಾವಾಗಲು ಮೃದುವಾಗಿ,ಕಾಂತಿಯುತವಾಗಿ ಇರುತ್ತವೆ.