Asianet Suvarna News Asianet Suvarna News

ಬೀಟ್ರೂಟ್‌ನಿಂದ ಕೂದಲನ್ನು ಕಲರ್ ಮಾಡಿಕೊಳ್ಳುವುದು ಹೀಗೆ!

ರಾಸಾಯನಿಕ ಹೇರ್‌ಡೈಗಳಲ್ಲಿ ಕ್ಯಾನ್ಸರ್ ಸೇರಿದಂತೆ ಚರ್ಮದ ಸಮಸ್ಯೆಗಳ ಅಪಾಯವಿರುತ್ತದೆ. ಆದರೆ, ಮನೆಯ ಸುತ್ತಮುತ್ತಲೇ ಸಿಗುವ ವಸ್ತುಗಳನ್ನು ಬಳಸಿ ಕೂದಲಿಗೆ ಬಣ್ಣ ಹಾಕಿಕೊಂಡರೆ ಬಣ್ಣದ ಜೊತೆಗೆ ಕೂದಲ ಆರೈಕೆಯೂ ಆಗುತ್ತದೆ. 

how to colour your hair at home using beetroot Mehndi coffee
Author
Bangalore, First Published Nov 9, 2019, 1:05 PM IST

ಕೂದಲಿಗೆ ಬಣ್ಣ ಹಾಕಲು ಹಲವು ವಿಧಗಳಿವೆ. ಸಲೂನ್‌ನಲ್ಲಿ ಕಲರ್ ಹಾಕಿಸಿಕೊಳ್ಳಬಹುದು. ಮನೆಯಲ್ಲಿ ನೀವೇ ಸ್ವತಃ ಹಾಕಿಕೊಳ್ಳಬಹುದು. ಡೈ ಮಾಡುವುದು, ಶಾಂಪೂವಿನಂತೆ ಹಚ್ಚಿಕೊಳ್ಳುವುದು ಸೇರಿದಂತೆ ಹೇರ್ ಡೈ ವಿವಿಧ ರೀತಿಯಲ್ಲಿ ದೊರೆಯುತ್ತವೆ. ಅದು 10 ರೂಪಾಯಿಯ ಪ್ಯಾಕೆಟ್ ಇರಲಿ, 500 ರುಪಾಯಿಯದೇ ಇರಲಿ- ಅದರಲ್ಲಿರುವುದು ಕೆಮಿಕಲ್ ಹೊರತಾಗಿ ಮತ್ತೇನೂ ಅಲ್ಲ ಎಂಬುದು ತಿಳಿದಿರುವ ವಿಷಯವೇ.

ನಿಮ್ಮ ಮನೆಯಲ್ಲೊಂದು ಬೋಳುಗುಂಡ ಇದ್ಯಾ? ಕೂದಲು ಉದುರುವುದಕ್ಕೆ ಕಾರಣಗಳಿವು

ಈ ರಾಸಾಯನಿಕಗಳು ಸೌಂದರ್ಯ ಹೆಚ್ಚಿಸಬಹುದು, ಆದರೆ ಅದಕ್ಕೆ ಆರೋಗ್ಯವನ್ನು ಬೆಲೆ ತೆರಬೇಕಾಗುತ್ತದೆ. ಅಮೋನಿಯಾ ಅಥವಾ ಪ್ಯಾರಾಬೆನ್‌ನಂಥ ಕೆಮಿಕಲ್‌ಗಳು ಹಾನಿಕಾರಕವಾಗಿರುತ್ತವೆ. ಇದಕ್ಕಾಗಿ ಬದಲಿ ಮಾರ್ಗಗಳನ್ನು ಹುಡುಕಿದರೆ ಒಂದಿಷ್ಟು ನ್ಯಾಚುರಲ್ ಹೇರ್‌ಡೈ‌ಗಳನ್ನು ಟ್ರೈ ಮಾಡಬಹುದು. ಕೆಮಿಕಲ್ ಡೈಯಷ್ಟು ಪರಿಣಾಮಕಾರಿಯಲ್ಲದಿದ್ದರೂ ಬಿಳಿ ಕೂದಲನ್ನು ನಿಭಾಯಿಸುವಷ್ಟು, ಕೂದಲಿಗೆ ಕೆಂಪು ಶೇಡ್ ಕೊಡುವಷ್ಟಂತೂ ಈ ಪ್ರಾಕೃತಿಕ ಬಣ್ಣಗಳು ಕೆಲಸ ಮಾಡುತ್ತವೆ. ಪರಿಣಾಮಕಾರಿಯೆಂದು ವಿಷವಸ್ತುಗಳನ್ನು ಬಳಸುವುದಕ್ಕಿಂತ ಇದು ಉತ್ತಮವಲ್ಲವೇ? 

ಯಾವೆಲ್ಲ ವಸ್ತುಗಳನ್ನು ಕೂದಲ ಬಣ್ಣವಾಗಿ ಬಳಸಬಹುದು ನೋಡೋಣ.

ಬೀಟ್ರೂಟ್

ಕೂದಲ ಬಣ್ಣಗಳಿಗೆ ಹೆಚ್ಚು ನೈಸರ್ಗಿಕ ಪರ್ಯಾಯವೆಂದರೆ ಬೀಟ್ರೂಟ್ ರಸ. ಬೀಟ್ರೂಟ್ ಹೆಚ್ಚಿದಾಗ ನಿಮ್ಮ ಬೆರಳ ಮೇಲೆ ಕೆಂಪು ಬಣ್ಣ ಉಳಿಸಿ ಹೋಗುವುದನ್ನು ನೀವು ಗಮನಿಸಿರಬಹುದು. ಅಂತೆಯೇ ಕೂದಲಿಗೆ ಹಚ್ಚಿದಾಗ, ಬೀಟ್ರೂಟ್ ಕೂದಲಿಗೆ ಕೆಂಪು ಬಣ್ಣ ನೀಡುವುದಷ್ಟೇ ಅಲ್ಲ, ಅವುಗಳ ಆರೋಗ್ಯವನ್ನೂ ಹೆಚ್ಚಿಸಿ, ಬುಡದಿಂದ ಬಲಗೊಳಿಸುತ್ತದೆ. 

ಕೂದಲು ಬಿಳಿಯಾಗುವುದಿಲ್ಲ, ಬಿಳಿಯಾಗಿ ಹುಟ್ಟುತ್ತದೆ

ಬಳಸುವ ವಿಧಾನ:

- 2 ಬೀಟ್ರೂಟ್‌ಗಳನ್ನು ತೊಳೆದು ಸಣ್ಣ ಹೋಳುಗಳಾಗಿಸಿಕೊಳ್ಳಿ. ಬಳಿಕ ದಪ್ಪ, ಕೆಂಪು ರಸವನ್ನು ಹೊರತೆಗೆಯಲು ಅವನ್ನು ಮಿಕ್ಸರ್‌ನಲ್ಲಿ ಬ್ಲೆಂಡ್ ಮಾಡಿ. 

- ಸೋಸುವ ಜಾಲರಿ ಬಳಸಿ ಚರಟ ತೆಗೆದು ರಸ ಸಂಗ್ರಹಿಸಿ. 

- ರಸಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಸೇರಿಸಿ ಎಣ್ಣೆ ಇಲ್ಲದ ತಲೆಕೂದಲಿಗೆ ಹಚ್ಚಿ. ಪ್ರತಿ ಕೂದಲಿಗೂ ಬಣ್ಣ ತಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. 

- ನಾಲ್ಕು ಗಂಟೆಯ ಬಳಿಕ ಅಥವಾ ರಾತ್ರಿಯಿಡೀ ಈ ಮಿಶ್ರಣ ತಲೆಯಲ್ಲಿರಲು ಬಿಟ್ಟು ಮರುದಿನ ಮೈಲ್ಡ್ ಶಾಂಪೂ ಬಳಸಿ ತಲೆಕೂದಲನ್ನು ತೊಳೆಯಿರಿ. ಅಂಟ್ವಾಳ ಅಥವಾ ಮತ್ತಿಸೊಪ್ಪು ಬಳಸಿ ಕೂದಲನ್ನು ತೊಳೆದರೆ ಇನ್ನೂ ಉತ್ತಮ. ಈಗ ಬೆಳಕಿನಲ್ಲಿ ನಿಮ್ಮ ಕೂದಲು ಕೆಂಪಗೆ ಹೊಳೆಯುವುದನ್ನು ಕಾಣಬಹುದು. ಈ ಬಣ್ಣ ಒಂದೆರಡು ವಾರದ ಕಾಲ ಕೂದಲಿನಲ್ಲಿ ನಿಲ್ಲುತ್ತದೆ. 

ಬ್ಯೂಟಿಯ ಸಮಸ್ಯೆಗಳು ಮತ್ತು ಸ್ವೀಟಿಯ ಪರಿಹಾರ!

ಮದರಂಗಿ

ಹೆನ್ನಾ ಪೌಡರ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ, ಅದು ಕೂಡಾ ಎಷ್ಟು ಕೆಮಿಕಲ್ ರಹಿತ ಎಂಬುದು ನಮಗೆ ತಿಳಿಯುವುದಿಲ್ಲ. ಹೀಗಾಗಿ, ಮನೆಯಲ್ಲೇ ಮದರಂಗಿ ಗಿಡವೊಂದನ್ನು ಬೆಳೆಸಿಕೊಂಡರೆ, ಬೇಕೆಂದಾಗೆಲ್ಲ ಅದರ ಸೊಪ್ಪುಗಳನ್ನು ತೆಗೆದು ತೊಳೆದು, ಮಿಕ್ಸಿಯಲ್ಲಿ ಅರೆದು ಬಳಸಬಹುದು. 

- ಹೀಗೆ ಮಿಕ್ಸಿ ಮಾಡಿದ ಮದರಂಗಿ ಪೇಸ್ಟ್‌ಗೆ ಸ್ವಲ್ಪ ನಿಂಬೆರಸ ಸೇರಿಸಿ. ಬಳಸಿ ಉಳಿದ ಟೀ ಪುಡಿಯನ್ನು ಕೂಡಾ ಸೇರಿಸಬಹುದು. 

- ಈ ಮಿಶ್ರಣವನ್ನು ಡೈನಂತೆ ಎಲ್ಲ ಕೂದಲಿಗೂ ತಾಕುವಂತೆ ಹಚ್ಚಿ. ಈ ಸಂದರ್ಭದಲ್ಲಿ ಮುಖಕ್ಕೆ ಎಣ್ಣೆ ಹಚ್ಚಿಕೊಂಡರೆ ಮದರಂಗಿಯ ಬಣ್ಣ ಅಪ್ಪಿತಪ್ಪಿಯೂ ಮುಖಕ್ಕೆ ತಾಕದು. 

- 12 ಗಂಟೆಗಳ ಬಳಿಕ ಕಂಡಿಶನರ್ ಬಳಸದೆ ಕೂದಲನ್ನು ತೊಳೆಯಿರಿ. 

ಕಾಫಿ

ಕಾಫಿ ನಿಮ್ಮ ಮನಸ್ಸಿಗೆ ಉಲ್ಲಾಸ ನೀಡುವ ಜೊತೆಗೆ  ತಲೆಕೂದಲಿಗೆ ಬಣ್ಣವನ್ನೂ ನೀಡಬಲ್ಲದು. ಕೂದಲು ಹೆಚ್ಚು ಡಾರ್ಕ್ ಆಗುವಂತೆ ಮಾಡುವ ಕಾಫಿಗೆ ಬಿಳಿಕೂದಲನ್ನು ಕೂಡಾ ಒಂದು ಮಟ್ಟಿಗೆ ಕವರ್ ಮಾಡುವ ಸಾಮರ್ಥ್ಯ ಇದೆ. 

ಸೌಂದರ್ಯಕ್ಕೆ ಅಂಟುವಾಳ ಕಾಯಿ ಎಂಬ ನೈಸರ್ಗಿಕ ಶ್ಯಾಂಪೂ

- ಸ್ಟ್ರಾಂಗ್ ಆದ ಹಾಲಿಲ್ಲದ ಕಾಫಿ ಡಿಕಾಕ್ಷನ್ ತೆಗೆದುಕೊಳ್ಳಿ. 

- ಇದನ್ನು ಕೂದಲ ಎಳೆಗಳಿಗೆ ದಪ್ಪನಾಗಿ ಹಚ್ಚಿ ಎರಡು ಗಂಟೆಗಳ ಕಾಲ ಬಿಡಿ. 

- ನಂತರ ಕೂದಲನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ. ಕಾಫಿಯು ಬಹಳಷ್ಟು ಬಣ್ಣ ಕೊಡದಿದ್ದರೂ, ಕೂದಲ ಶೇಡನ್ನು ತಾತ್ಕಾಲಿಕವಾಗಿ ಬದಲಾಯಿಸಬಲ್ಲದು. 

Follow Us:
Download App:
  • android
  • ios