ಗಿಡಮೂಲಿಕೆ ತುಂಬಿದ ಸ್ಲೀಪ್‌ವೇರ್‌, ಇದನ್ನು ಧರಿಸಿ ಮಲಗಿದ್ರೆ ಹಾಯಾಗಿ ನಿದ್ದೆ ಬರುತ್ತಂತೆ!

ಫ್ಯಾಷನ್‌ ಇಲ್ಲದೆ ಮನುಷ್ಯನ ಜೀವನವಿಲ್ಲ. ಹೊಸ ಹೊಸ ಟ್ರೆಂಡ್‌ನ ದಿರಿಸು ಧರಿಸ್ತಾ ಇದ್ರೇನೆ ಮನುಷ್ಯನ ಲೈಫ್ ಫುಲ್ ಕಲರ್‌ಫುಲ್ ಆಗಿರುತ್ತೆ. ಹೀಗಿರುವಾಗ ಇಲ್ಲೊಂದೆಡೆ ಗಿಡಮೂಲಿಕೆಗಳ ಸ್ಲೀಪ್‌ವೇರ್‌ ಸಿದ್ಧಪಡಿಸಲಾಗಿದೆ. ಇದನ್ನು ಧರಿಸಿ ಮಲಗಿದ್ರೆ ಹಾಯಾಗಿ ನಿದ್ದೆ ಬರುತ್ತಂತೆ.

Herb infused Clothing, This New Relaxing Sleepwear is Keeping Desi Twitter Up at Night Vin

ನಿದ್ದೆ ಆರೋಗ್ಯಕ್ಕೆ ತುಂಬಾ ಮುಖ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಹೆಚ್ಚಿನವರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಬೆಳಗ್ಗೆಯಿಂದ ಸಂಜೆಯತನಕ ಬಿಡುವಿಲ್ಲದ ಕೆಲಸ, ಒತ್ತಡ, ಟೆನ್ಶನ್ ಗಳ ಮಧ್ಯೆ ನಿದ್ರೆ (Sleep) ಸರಿಯಾಗಿ ಬರುವುದಿಲ್ಲ. ದಿನವಿಡೀ ಕೆಲಸ ಮಾಡಿ ಶರೀರ ದಣಿದಿದ್ದರೂ ಕೂಡ ರಾತ್ರಿ ಚೆನ್ನಾಗಿ ನಿದ್ದೆ ಮಾಡದೇ ಇರುವವರು ಎಷ್ಟೋ ಮಂದಿಯಿದ್ದಾರೆ. ಶರೀರ ದಣಿದಿದ್ದರೂ ಮನಸ್ಸು, ಮೆದುಳು (Brain) ತಮ್ಮ ಕೆಲಸವನ್ನು ನಿರ್ವಹಿಸುತ್ತಿರುತ್ತದೆ. ಕಣ್ಮುಚ್ಚಿ ಮಲಗಿದರೂ ಯಾವುದೋ ಕೆಟ್ಟ ವಿಚಾರಗಳು ನೆಮ್ಮದಿಯ ನಿದ್ದೆಗೆ ಅವಕಾಶ ಕೊಡುವುದಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ಸ್ಲೀಪ್ ಟ್ಯಾಬ್ಲೆಟ್ ತೆಗೆದುಕೊಂಡು ನಿದ್ದೆ ಮಾಡಲು ಯತ್ನಿಸುತ್ತಾರೆ. ಆದ್ರೂ ನಿದ್ದೆ ಮಾಡಲಾಗದೆ ಒದ್ದಾಡಬೇಕಾಗುತ್ತದೆ. ಇಂಥವರಿಗೆ ಫ್ಯಾಷನ್ ಎಕ್ಸ್‌ಪರ್ಟ್ಸ್‌ ಹೊಸ ಸೊಲ್ಯೂಷನ್ ಕಂಡು ಹಿಡಿದಿದ್ದಾರೆ.

ಗಿಡಮೂಲಿಕೆಗಳಿಂದ ತಯಾರಿಸಿದ ಸ್ಲೀಪ್‌ವೇರ್‌
ಫ್ಯಾಷನ್ ಎಕ್ಸ್‌ಪರ್ಟ್ಸ್‌, ಗಿಡಮೂಲಿಕೆಗಳಿಂದ (Herbals) ತುಂಬಿದ ಸ್ಲೀಪ್‌ವೇರ್‌ನ್ನು ಸಿದ್ಧಪಡಿಸಿದ್ದಾರೆ. ಇದನ್ನು ಸ್ಮಾರ್ಟ್‌ ಉಡುಪು ಎಂದು ಸಹ ಕರೆಯುತ್ತಾರೆ. ಈ ಡ್ರೆಸ್‌ ಸ್ವಯಂ ಆರೈಕೆಯ ಪ್ರಯೋಜನಗಳನ್ನು ಹೊಂದಿದೆ ಎಂದು ತಯಾರಕರು ತಿಳಿಸಿದ್ದಾರೆ. ಮಾತ್ರವಲ್ಲ ದೇಹದ, ಮನಸ್ಸಿನ ಒತ್ತಡವನ್ನು (Pressure) ಕಡಿಮೆ ಮಾಡಿ ಹಾಯಾಗಿರಲು ಸಹಾಯ ಮಾಡುತ್ತದೆ. ಇದರಿಂದಾಗಿ ಉತ್ತಮ ನಿದ್ದೆಯನ್ನು ಸಹ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ, ಭಾರತೀಯ ಟ್ವಿಟರ್ ಬಳಕೆದಾರರು ಹರ್ಬಲ್ ಸ್ಲೀಪ್‌ವೇರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ. ಕೆಲವರು ಇದೆಂಥಾ ವಿಚಿತ್ರ ಸ್ಲೀಪ್‌ವೇರ್ ಎಂದರೆ ಇನ್ನು ಕೆಲವರು ಇಂಥಾ ಡ್ರೆಸ್ ತಯಾರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವಳಲ್ಲ.. ಅವನು! ಸ್ಕರ್ಟ್‌ ಧರಿಸಿ ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಕ್ಯಾಟ್‌ವಾಕ್‌ ಮಾಡಿದ ಫ್ಯಾಶನ್ ಬ್ಲಾಗರ್ 

ಹರ್ಬಲ್ ಸ್ಲೀಪ್‌ವೇರ್ ಸಿದ್ಧಪಡಿಸುವುದು ಹೇಗೆ?
ಟಿ.ಎಂ ಕೃಷ್ಣ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಇತ್ತೀಚೆಗೆ Byogi ಎಂಬ ಬ್ರ್ಯಾಂಡ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಹೊಸದಾಗಿ ತಯಾರಿಸಲಾದ ಗಿಡಮೂಲಿಕೆಯ ಡ್ರೆಸ್‌ ಒತ್ತಡದ ಜೀವನಶೈಲಿಗೆ ಅಗತ್ಯವಾಗಿದೆ. ಇದನ್ನು ಟೆನ್ಶನ್‌ ಹೋಗಲಾಡಿಸಿ ಆರಾಮವಾಗಿ ಮಲಗಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಕೆಲವರು ಬಟ್ಟೆಗೆ ಗಿಡಮೂಲಿಕೆ ತುಂಬುವುದು ಹೇಗಪ್ಪಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ಕುರ್ತಾ, ಪೈಜಾಮದ ಮೇಲೆ ಸ್ಪಲ್ಪ ಪರಿಮಳವನ್ನು (Smell) ಹಾಕುವುಉ ಹೆಚ್ಚು ವೆಚ್ಚವಾಗದು. ಇದು ಫ್ಯಾಷನ್ ಹೆಸರಲ್ಲಿ ಜನರನ್ನು ಲೂಟಿ ಮಾಡುವ ಪ್ರಯತ್ನ' ಎಂದು ಟೀಕಿಸಿದ್ದಾರೆ. 

ಇನ್ನು ಕೆಲವರು ಈ ಬಟ್ಟೆಯನ್ನು ಹೇಗೆ ಸಿದ್ಧಪಡಿಸಬಹುದು ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಬಟ್ಟೆಯನ್ನು ಕೆಲವು ಮಿಶ್ರಣದಲ್ಲಿ ನೆನೆಸಲಾಗುತ್ತದೆಯೇ ಅಥವಾ ಬಟ್ಟೆಯ ಮೇಲೆ ಅದನ್ನು ಸಿಂಪಡಿಸಲಾಗುತ್ತದೆಯೇ, ಈ ಬಟ್ಟೆಯನ್ನು ತೊಳೆಯಬಹುದಾ? ವಾಶ್ ಮಾಡಿದರೆ ಹರ್ಬಲ್ಸ್ ಹೋಗುವುದಿಲ್ಲವಾ' ಮೊದಲಾದ ಸಂಶಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಬಟ್ಟೆಯ ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, 'ಇದು ನಿಜವಾಗಿಯೂ ಕೆಲವು ಗಿಡಮೂಲಿಕೆಗಳಿಂದ ತುಂಬಿದ್ದರೆ, ಶಾಂತವಾದ ನಿದ್ರೆಯ ನಂತರ ದದ್ದುಗಳೊಂದಿಗೆ ಎಚ್ಚರಗೊಳ್ಳಬಹುದು' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಗಿಡಮೂಲಿಕೆಗಳಿಂದ ತುಂಬಿದ ಬಟ್ಟೆಯ ಸಂಭಾವ್ಯ ಪ್ರಯೋಜನಗಳ ಹೊರತಾಗಿಯೂ, ಪ್ರತಿಯೊಬ್ಬರೂ ಕಲ್ಪನೆಯ ಮೇಲೆ ಮಾರಾಟವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಯಪ್ಪಾ..ಮಹಿಳೆಯರ ಒಳ ಉಡುಪಿನ ಜಾಹೀರಾತಿಗೆ ಪುರುಷರು!

ವಾಸ್ತವಾಗಿ, ಹರ್ಬಲ್ ಬಟ್ಟೆಗಳನ್ನು, ಬಟ್ಟೆಗೆ ಔಷಧೀಯ ಮೌಲ್ಯ ಮತ್ತು ಪರಿಮಳವನ್ನು ಒದಗಿಸಲು ಜವಳಿಗಳಲ್ಲಿ ಸಾರಭೂತ ತೈಲಗಳು ಮತ್ತು ಗಿಡಮೂಲಿಕೆಗಳ ಸಾರಗಳನ್ನು ಸೇರಿಸುವ ಮೂಲಕ ತಯಾರಿಸಲಾಗುತ್ತದೆ. ಮೈಕ್ರೋಎನ್‌ಕ್ಯಾಪ್ಸುಲೇಷನ್, ಸಂವೇದನಾ ಗ್ರಹಿಕೆ ತಂತ್ರಜ್ಞಾನ, ಲಿಪೊಸೋಮ್‌ಗಳು, ಡೈಗಳು ಮತ್ತು ಲೇಪಿತ ಜವಳಿ ತಂತ್ರಜ್ಞಾನದಂತಹ ವಿವಿಧ ತಂತ್ರಜ್ಞಾನಗಳ ಮೂಲಕ ಇದನ್ನು ಸಿದ್ಧಪಡಿಸಲಾಗುತ್ತದೆ. 

Latest Videos
Follow Us:
Download App:
  • android
  • ios