Asianet Suvarna News Asianet Suvarna News

ಹುಡುಗಿಯರಿಗೆ ಮಾತ್ರವಲ್ಲ..ಹುಡುಗರಿಗೂ ಬೇಕಂತೆ ಕಿವಿಯೋಲೆ..!

ಹೆಣ್ಮಕ್ಳಿಗೆ ಕಿವಿಯೋಲೆಯಂದ್ರೆ ಎಷ್ಟೊಂದು ಕ್ರೇಜ್‌ ಎಂಬುದು ಎಲ್ಲರಿಗೂ ಗೊತ್ತು. ಸ್ಟಡ್‌, ರಿಂಗ್ಸ್, ಜುಮ್ಕಾ, ಹೂಪ್ಸ್‌ ಹೀಗೆ ವಿವಿಧ ರೀತಿಯ ಕಿವಿಯೋಲೆಗಳನ್ನು ಧರಿಸಿ ಖುಷಿಪಡುತ್ತಾರೆ. ಆದ್ರೆ ಫ್ಯಾಷನ್ ದುನಿಯಾದಲ್ಲಿ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ಇತ್ತೀಚಿಗೆ ಹುಡುಗರಿಗೂ ಕಿವಿಯ ಆಭರಣಗಳು (Earrings) ಪ್ರಿಯವಾಗುತ್ತಿವೆ.

Growing Number Of Young Indian Men Are Embracing Jewellery Vin
Author
Bengaluru, First Published Apr 1, 2022, 3:32 PM IST

ಫ್ಯಾಷನ್‌ (Fashion), ಟ್ರೆಂಡ್ ಎಂದು ಬಂದಾಗ ತಕ್ಷಣಕ್ಕೆ ನೆನಪಾಗೋದೆ ಹುಡುಗೀಯರು. ಹುಡುಗಿಯರ ಡ್ರೆಸ್, ಹೇರ್‌ಸ್ಟೈಲ್‌. ಜ್ಯುವೆಲ್ಸ್‌ ಹೀಗೆ ಎಲ್ಲದರಲ್ಲೂ ಏನಾದರೊಂದು ಟ್ರೆಂಡ್ (Trend) ಬರುತ್ತಲೇ ಇರುತ್ತದೆ. ಅದೇ ರೀತಿ ಹುಡುಗರ ಫ್ಯಾಷನ್ಸ್ ಕೂಡಾ ಅಪ್‌ಡೇಟ್ ಆಗುತ್ತದೆ. ಅದರೆ ಅದು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ ಅಷ್ಟೆ. ಹುಡುಗರ ಶರ್ಟ್ಸ್‌, ವಾಚ್‌, ಹೇರ್‌ಸ್ಟೈಲ್‌ಗಳು ಆಗಿಂದಾಗೆ ಬದಲಾಗ್ತಿರ್ತವೆ. ಅದ್ರೆ ನಾವಿಲ್ಲಿ ಮಾತನಾಡ್ತಿರೋದು ಹುಡುಗರ ಫ್ಯಾಷನ್ ಅಥವಾ ಹುಡುಗೀಯರ ಫ್ಯಾಷನ್ ಬಗ್ಗೆ ಅಲ್ಲ. ಹುಡುಗೀರ ಫ್ಯಾಷನ್ ಅಳವಡಿಸಿಕೊಳ್ತಿರೋ ಹುಡುಗರ ಬಗ್ಗೆ.

ಹೆಣ್ಮಕ್ಳಿಗೆ ಕಿವಿಯೋಲೆಯಂದ್ರೆ ಎಷ್ಟೊಂದು ಕ್ರೇಜ್‌ ಎಂಬುದು ಎಲ್ಲರಿಗೂ ಗೊತ್ತು. ಸ್ಟಡ್‌, ರಿಂಗ್ಸ್, ಜುಮ್ಕಾ, ಹೂಪ್ಸ್‌ ಹೀಗೆ ವಿವಿಧ ರೀತಿಯ ಕಿವಿಯೋಲೆಗಳನ್ನು ಧರಿಸಿ ಖುಷಿಪಡುತ್ತಾರೆ. ಸುಂದರವಾದ ಕಿವಿಯ ಆಭರಣಗಳು ಮುಖದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದ್ರೆ ಫ್ಯಾಷನ್ ದುನಿಯಾದಲ್ಲಿ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ಇತ್ತೀಚಿಗೆ ಹುಡುಗರಿಗೂ ಕಿವಿಯ ಆಭರಣಗಳು (Earrings) ಪ್ರಿಯವಾಗುತ್ತಿವೆ.

ಹಾಕಿದ್ದೇ ಬಟ್ಟೆ ಎಷ್ಟು ಸಾರಿ ಹಾಕ್ತೀರಿ..! ಹೊಸ ಬಟ್ಟೆ ಹಾಕದೆ ಮದುವೆಗೆ ಬರ್ಬೇಡಿ ಅಂದ್ರು..!

ಗಂಡ್ಮಕ್ಳು (Men) ಕಿವಿ ಚುಚ್ಚಿಕೊಳ್ಳೋದೇನು ಹೊಸ ವಿಚಾರವಲ್ಲ. ಹಿಂದೆಲ್ಲಾ ಚಿಕ್ಕಮಕ್ಕಳಿದ್ದಾಗಲೇ ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರಿಗೂ ಕಿವಿ ಚುಚ್ಚಿಸಿಕೊಳ್ಳಲಾಗ್ತಿತ್ತು. ಕಿವಿಗೆ ಬೆಂಡು, ಸ್ಟಡ್‌ಗಳನ್ನು ಸಹ ಹುಡುಗರು ಹಾಕಿಕೊಳ್ಳುತ್ತಿದ್ದರು. ಕಾಲಕ್ರಮೇಣ ಅದು ನಾಚಿಕೆಯ ವಿಷಯವಾಯಿತು. ಆದ್ರೆ ಸದ್ಯ ಹುಡುಗರು ಆಭರಣ ಧರಿಸುವುದು ಸಹ ಟ್ರೆಂಡ್ ಆಗಿದೆ. ಹುಡುಗರು ಕಿವಿಗೆ ಸ್ಟಡ್ ಹಾಕಿಕೊಂಡು ಸ್ಟೈಲಿಶ್ ಲುಕ್ ಕೊಡ್ತಿದ್ದಾರೆ. ಕಿವಿಯ ತೂತಿಲ್ಲದೆ ಹಾಗೇ ಸಿಕ್ಕಿಸಿಕೊಳ್ಳುವ ಸ್ಟಡ್‌ಗಳು ಸಹ ಲಭ್ಯವಿದೆ.

ಕಿವಿಯೋಲೆಗಳು ಮತ್ತು ಬಳೆಗಳಿಂದ ಹಿಡಿದು ಚೈನ್‌ಗಳವರೆಗೆ, ಹೆಚ್ಚುತ್ತಿರುವ ಭಾರತೀಯ ಯುವಕರು ಆಭರಣಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನೋಯ್ಡಾ ಮೂಲದ ಮಯಾಂಕ್ ಚೌಧರಿ ಅವರು ಚಿಕ್ಕಂದಿನಿಂದಲೂ ಆಭರಣಗಳ ಬಗ್ಗೆ ಆಕರ್ಷಿತರಾಗಿದ್ದರು, ಆದರೆ ಅವರು ಕೆಲಸ ಮಾಡಲು ಪ್ರಾರಂಭಿಸಿದ ನಂತರ ಅದನ್ನು ನಿಯಮಿತವಾಗಿ ಖರೀದಿಸಲು ಪ್ರಾರಂಭಿಸಿದರು. ಇಂದು ಅವರು ಆಭರಣಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ. 

ರಿಮೂವರ್ ಇಲ್ಲದೆ Nail Polish ತೆಗೆಯೋದು ಹೇಗೆ ಗೊತ್ತಾ?

ದಕ್ಷಿಣ ಭಾರತದ ದೇವಾಲಯದ ಆಭರಣಗಳು ಮತ್ತು ವಿಂಟೇಜ್ ಉಂಗುರಗಳಿಂದ ಕನಿಷ್ಠ ಬೆಳ್ಳಿ ಸರಪಳಿಗಳವರೆಗೆ ಇರುತ್ತದೆ. ನೀವು ಯಾವಾಗಲೂ ನನ್ನ ದೇಹದ ಮೇಲೆ ಆಭರಣಗಳನ್ನು ಕಾಣುತ್ತೀರಿ. ಇದು ನನ್ನ ಒಟ್ಟಾರೆ ಅಲಂಕಾರವನ್ನು ಪೂರ್ಣಗೊಳಿಸುತ್ತದೆ. ಕಿವಿಯೋಲೆ, ಉಂಗುರ ಅಥವಾ ಬಳೆಯನ್ನು ಹಾಕಿಕೊಳ್ಳಲು ಖುಷಿಯಾಗುತ್ತದೆ ಎಂದು ಚೌಧರಿ ಹೇಳುತ್ತಾರೆ. ನಾನು ಆಗಾಗ್ಗೆ ಸ್ನೇಹಿತರು ಮತ್ತು ಕುಟುಂಬದಿಂದ ಉಡುಗೊರೆಯಾಗಿ ಅವುಗಳನ್ನು ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

ಮುಂಬೈ ಮೂಲದ ಬ್ರಾಂಡ್ ಲೂನ್ 2020ರಲ್ಲಿ ಆಭರಣಗಳಿಗಾಗಿ ಪುರುಷರ ವಿಭಾಗವನ್ನು ಪ್ರಾರಂಭಿಸಿತು, ಸಂಸ್ಥಾಪಕ ಶ್ರೀಶಾ ಶೆಟ್ಟಿ ಇದನ್ನು ಆರಂಭಿಸಿದರು. ಸಾಮಾನ್ಯವಾಗಿ ಪುರುಷರು ತಮ್ಮ ಗೆಳತಿಯರಿಂದ ಅಥವಾ ಸಹೋದರಿಯರಿಂದ ಪಡೆದ ಆಭರಣಗಳನ್ನು ಧರಿಸುವುದನ್ನು ನಾವು ಕಾಣುತ್ತೇವೆ. ಹೀಗಾಗಿ ಪುರುಷರಿಗಾಗಿ ಆಭರಣದ ಸೆಕ್ಷನ್ ತೆರೆಯಲು ತೀರ್ಮಾನಿಸಿದೆ ಎಂದು ಶೆಟ್ಟಿ ಹೇಳುತ್ತಾರೆ. ಆಭರಣಗಳನ್ನು 18-ಕ್ಯಾರೆಟ್ ಚಿನ್ನ, ಸ್ಟರ್ಲಿಂಗ್ ಬೆಳ್ಳಿ, ಹಿತ್ತಾಳೆ, ಲ್ಯಾಪಿಸ್ ಲಾಜುಲಿ ಮತ್ತು ಮದರ್-ಆಫ್-ಪರ್ಲ್ ಅನ್ನು ಬಹುಮುಖ ಮತ್ತು ಶ್ರೇಷ್ಠ ವಿನ್ಯಾಸಗಳಲ್ಲಿ ತಯಾರಿಸಲಾಗುತ್ತದೆ. ಅತ್ಯಂತ ಜನಪ್ರಿಯ ತುಣುಕುಗಳಲ್ಲಿ ಚೈನ್‌ಗಳು, ಯಿನ್-ಯಾಂಗ್ ನೆಕ್ಲೇಸ್‌ಗಳು, ಕಫ್‌ಗಳು, ಮೂನ್ ಮೆಡಾಲಿಯನ್, ಸಣ್ಣ ಹೂಪ್‌ಗಳು ಮತ್ತು ಮೂಗು ಪಿನ್‌ಗಳು ಸೇರಿವೆ.

ಇನ್ನು ಕಾಲೇಜು ಹುಡುಗರು ಸ್ಟಡ್‌ಗಳನ್ನು ಕಿವಿಗೆ ಮಾತ್ರವಲ್ಲ ಹುಬ್ಬಿಗೂ ಸಿಕ್ಕಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಹುಡುಗರಿಗಾಗಿಯೇ ವೆರೈಟಿ ಸ್ಟಡ್‌ಗಳು ಸಿಗ್ತಿವೆ. ಚುಚ್ಚಿಕೊಳ್ಳುವ ಸ್ಟಡ್‌ಗಳು, ಕ್ಲಿಪ್ ಮಾದರಿಯ ಸ್ಟಡ್‌, ಮ್ಯಾಗ್ನೆಟಿಕ್ ಸ್ಟಡ್,ರೇಡಿಯಂ ಸ್ಟಡ್ ಹೀಗೆ ಹಲವಾರು ರಿತಿಯ ಪುರುಷರ ಕಿವಿಯೋಲೆಗಳು ಲಭ್ಯವಿದೆ.

Follow Us:
Download App:
  • android
  • ios