Asianet Suvarna News Asianet Suvarna News

ಹಾಕಿದ್ದೇ ಬಟ್ಟೆ ಎಷ್ಟು ಸಾರಿ ಹಾಕ್ತೀರಿ..! ಹೊಸ ಬಟ್ಟೆ ಹಾಕದೆ ಮದುವೆಗೆ ಬರ್ಬೇಡಿ ಅಂದ್ರು..!

ಪ್ರತಿ ಸಾರಿ ಫಂಕ್ಷನ್‌ಗೂ ಹೊಸ ಬಟ್ಟೆ (Cloth)ಖರೀದಿಸೋದು ಅಂದ್ರೆ ಏನು ಸುಮ್ನೇನಾ. ಮದುವೆ (Marriage)ಗೆ ಹಾಕ್ಕೊಳ್ಳೋ ಬಟ್ಟೆ ಅಂದ್ರೆ ಏನಿಲ್ಲಾಂದ್ರೂ ಸಾವಿರ ಸಾವಿರ ವ್ಯಯಿಸಬೇಕಾಗುತ್ತೆ. ಅಷ್ಟು ದುಡ್ಡು ಕೊಟ್ಟ ಬಟ್ಟೆಯನ್ನು ಕೇವಲ ಒಂದೆರಡು ಸಾರಿ ಹಾಕ್ಕೊಳ್ಳೋದು ಅಂದ್ರೆ ಬಟ್ಟೆಗೆ ಕೊಟ್ಟಿರೋ ದುಡ್ಡು (Money) ಕೂಡಾ ವೇಸ್ಟ್ ಅಲ್ವಾ. ಎಲ್ರಿಗೂ ಅನಿಸಿರೋ ಹಾಗೆಯೇ ಆ ಹುಡುಗಿಗೂ ಹಾಗೇ ಅನಿಸಿತ್ತು. ಅದಕ್ಕೇ ಆಕೆ ಒಂದು ಸಾರಿ ಮದುವೆಗೆ ಹಾಕಿದ ಬಟ್ಟೆಯನ್ನೇ ಇನ್ನೊಂದು ಸಾರಿ ಧರಿಸಿ ಹೋದ್ಲು. ಅಷ್ಟಕ್ಕೇ ಏನಾಯ್ತು ನೋಡಿ.

Woman Teased After She Wears Same Outfit To Weddings Of All Friends Vin
Author
Bengaluru, First Published Mar 31, 2022, 10:31 AM IST

ಹೆಣ್ಮಕ್ಳು (Girls) ಪ್ರತಿ ಬಾರಿ ರೆಡಿಯಾಗಿ ಎಲ್ಲಾದ್ರೂ ಹೊರಟಾಗಲೂ ಒಂದೇ ಸಮಸ್ಯೆ. ವಾರ್ಡ್ ರೋಬ್ (Wardrobe) ತುಂಬಾ ಬಟ್ಟೆಯಿದ್ರೂ ಹಾಕ್ಕೊಳ್ಳೋಕೆ ಬಟ್ಟೇನೆ ಇಲ್ಲ ಅನ್ನೋ ಗೋಳು. ಆದ್ರೆ ಗಂಡಸರು ವಾರ್ಡ್‌ರೋಬ್‌ನಲ್ಲಿ ನಾಲ್ಕೇ ನಾಲ್ಕು ಜತೆ ಬಟ್ಟೆಯಿದ್ರೂ ಅದರಲ್ಲೇ ಒಂದನ್ನು ಹಾಕ್ಕೊಂಡು ಹೋಗಿ ಬಿಡ್ತಾರೆ. ಹೆಣ್ಮಕ್ಕಳಿಗೆ ಈ ರೀತಿ ಬಟ್ಟೆಯಿಲ್ಲ ಅನ್ನೋ ಸಮಸ್ಯೆ ಕಾಡೋದು ಯಾಕೆ ಅಂದ್ರೆ ಅವ್ರು ಯಾವಾಗ್ಲೂ ಚೆನ್ನಾಗಿ ಡ್ರೆಸ್ ಮಾಡಿಕೊಳ್ಬೇಕು ಅಂತಾನೇ ಬಯಸ್ತಾರೆ. ಹೀಗಾಗಿ ಔಟ್ ಆಫ್ ಫ್ಯಾಷನ್ (Fashion), ಟ್ರೆಂಡೀಯಲ್ಲದ ಬಟ್ಟೆಗಳನ್ನು ಧರಿಸಲು ಅವರು ಇಷ್ಟಪಡುವುದಿಲ್ಲ. ಹೀಗಾಗಿಯೇ ಪ್ರತಿ ಸಾರಿ ವಾರ್ಡ್ ರೋಬ್ ತುಂಬಾ ಬಟ್ಟೆಯಿದ್ರೂ ಬಟ್ಟೆಯಿಲ್ಲ ಅಂತಾನೆ ಅನಿಸತೊಡಗುತ್ತೆ.

ಮದುವೆ (Marriage) ಸೀಸನ್‌ನಲ್ಲಂತೂ ಹೇಳೋದೆ ಬೇಡ.  ಈ ಸೀರೆ ಮೊನ್ನೆ ಉಟ್ಟಿದ್ದೆ, ಈ ಲೆಹಂಗಾ ಲಾಸ್ಟ್ ವಾರದ ಮದುವೆಯಲ್ಲಿ ಹಾಕಿದ್ದೆ. ಈ ಡ್ರೆಸ್‌ನ್ನು ಎಲ್ರೂ ನೋಡಿದ್ದಾರೆ ಅಂದ್ಕೊಂಡೇ ಹಾಕೋಕೆ ಡ್ರೆಸ್ ಇಲ್ಲ ಅಂತ್ಹೇಳಿ ಹೊಸ ಡ್ರೆಸ್ ಖರೀದಿ ಭರಾಟೆ ಶುರುವಾಗುತ್ತೆ. ಹೆಣ್ಮಕ್ಕಳ ಪಾಲಿಗೆ ಮದುವೆಗೆ ಹೊಸ ಬಟ್ಟೆನೇ ಆಗ್ಬೇಕು ಅನ್ನೋದು ಅಲಿಖಿತ ನಿಯಮ. ಮದುವೆ ಸಮಾರಂಭಗಳಿಗೆ ಬಟ್ಟೆ ಖರೀದಿಸಲು ಹೋಗುವುದು ಜೇಬು ಖಾಲಿ ಮಾಡುವುದು ಎಂದೇ ಅರ್ಥ. ಆದರೂ ಪ್ರತಿ ಸಮಾರಂಭದಲ್ಲಿ ನೀವು ವಿಭಿನ್ನ ಬಟ್ಟೆಗಳನ್ನು ಧರಿಸಬೇಕು ಎಂದು ಜನರು ಎಕ್ಸ್‌ಪೆಕ್ಟ್ ಮಾಡುತ್ತಾರೆ. ಇಲ್ಲದಿದ್ದರೆ ನೀವು ಧರಿಸಿದ ಬಟ್ಟೆಯನ್ನೇ ಧರಿಸುತ್ತಿದ್ದೀರಿ ಎಂದು ಜನರು ಟೀಕಿಸುತ್ತಾರೆ. ಇಲ್ಲಾಗಿದ್ದು ಇದೇ.

ದಪ್ಪಗಿದ್ದೇವೆಂಬ ಚಿಂತೆ ಬಿಡಿ, ಆರಾಮಾಗಿ ಈ ರೀತಿ stylish dress ಧರಿಸಿ

ಎಲ್ಲಾ ಸ್ನೇಹಿತರ ಮದುವೆಗೆ ಒಂದೇ ಉಡುಪನ್ನು (Repeated Dress) ಧರಿಸಿದ ಮಹಿಳೆಯನ್ನು ಸ್ನೇಹಿತರೆಲ್ಲಾ ಟೀಕಿಸಿದ್ದಾರೆ. ಅಷ್ಟೇ ಅಲ್ಲ ಇತ್ತೀಚಿಗೆ ಮತ್ತೊಮ್ಮೆ ಆಕೆಯನ್ನು ಮದುವೆಗೆ ಆಹ್ವಾನಿಸಿದಾಗ ಮತ್ತೆ ಅದೇ ಡ್ರೆಸ್‌ ಧರಿಸಲು ಧೈರ್ಯ ಮಾಡಬೇಡಿ ಎಂದು ಟೀಕಿಸಿದ್ದಾರೆ. ಮದುವೆಗೆ ನೀವು ಅದೇ ನೀಲಿ ಬಟ್ಟೆಯನ್ನು ದರಿಸಿ ಬರಬಾರದು ಎಂದಿದ್ದಾರೆ.

ಒಬ್ಬ ಮಹಿಳೆ ತನ್ನ ಸ್ನೇಹಿತರ ವಿವಾಹಗಳಿಗೆ ಹೊಸ ಉಡುಪನ್ನು ಖರೀದಿಸಲು ಪ್ರಲೋಭನೆಗೆ ಒಳಗಾಗದಿರಲು ನಿರ್ಧರಿಸಿದಳು. ಹೀಗಾಗಿ ತನ್ನಲ್ಲಿ ಈಗಾಗಲೇ ಇರುವ ಬಟ್ಟೆಯನ್ನು ಪುನರಾವರ್ತಿಸಲು ನಿರ್ಧರಿಸಿದಳು. ನಾನು ಈಗ ನನ್ನ ಪತಿಯೊಂದಿಗೆ ಕೆನಡಾದಲ್ಲಿ ವಾಸಿಸುತ್ತಿದ್ದೇನೆ, ಆದರೆ ನಾನು ಯುಎಸ್‌ನಲ್ಲಿ ಶಾಲೆಗೆ ಹೋಗಿದ್ದೇನೆ. ನನ್ನ ಎಲ್ಲಾ ಬಟ್ಟೆಗಳು ಶೀತ ಹವಾಮಾನಕ್ಕಾಗಿ ಮತ್ತು ನನ್ನ ಬಳಿ ಕಡಿಮೆ ಸಂಖ್ಯೆಯ ಉಡುಪುಗಳು, ಸ್ಕರ್ಟ್‌ಗಳು ಮತ್ತು ಬೆಚ್ಚಗಿನ ಹವಾಮಾನದ ಉಡುಪುಗಳಿವೆ ಎಂದು ಅವರು ರೆಡ್ಡಿಟ್‌ನಲ್ಲಿ ಬರೆದಿದ್ದಾರೆ. ನನ್ನ ಹೆಚ್ಚಿನ ಸ್ನೇಹಿತರು ಕ್ಯಾಲಿಫೋರ್ನಿಯಾದಲ್ಲಿದ್ದಾರೆ ಮತ್ತು ನಾನು ಅಲ್ಲಿದ್ದಾಗ ನಾನು ಮೂರು ಉಡುಪುಗಳನ್ನು ಮಾತ್ರ ಉಪಯೋಗಿಸುತ್ತೇನೆ ಎಂದಿದ್ದಾರೆ.

ಆ್ಯಂಕರ್ ಅನುಶ್ರೀಗೆ ಡ್ರೆಸ್‌ ಡಿಸೈನ್ ಮಾಡ್ತಾರೆ ಅಂಜಲಿ ರಾಜ್‌!

ನಾನು ನನ್ನ ಎಲ್ಲಾ ಸ್ನೇಹಿತರ ಮದುವೆಗಳಿಗೆ ಒಂದೇ ನೀಲಿ ಉಡುಪನ್ನು ಧರಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಸ್ನೇಹಿತನ ಮದುವೆಗೆ ಆಹ್ವಾನ ಬಂತು. ಆದರೆ ನೀವು ಅದೇ ನೀಲಿ ಉಡುಪನ್ನು ಧರಿಸಲು ಧೈರ್ಯ ಮಾಡಬೇಡಿ ಎಂಬ ಸಂದೇಶದೊಂದಿಗೆ ನನಗೆ ಆಹ್ವಾನ ಬಂದಿತು. ನಾನು ಈಗಾಗಲೇ ಧರಿಸಿದ ಬಟ್ಟೆಯನ್ನು ಧರಿಸಿದ್ದಕ್ಕಾಗಿ ನನ್ನ ಸ್ನೇಹಿತರಿಂದ ಕೀಟಲೆಗೆ ಒಳಗಾಗಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಮಹಿಳೆ ತನ್ನ ಬಳಿ ಸಣ್ಣ ವಾರ್ಡ್ರೋಬ್ ಹೊಂದಿದ್ದಾಳೆ ಮತ್ತು ತನ್ನ ಹೆಚ್ಚಿನ ಬಟ್ಟೆಗಳು ಪಾರ್ಟಿಗಳಿಗೆ ಬದಲಾಗಿ ಕೆಲಸಕ್ಕೆ ಮಾತ್ರ ಎಂದು ಅವರು ಹೇಳಿದರು, ಏಕೆಂದರೆ ಅವಳು ವರ್ಷಕ್ಕೆ ಕೆಲವು ಬಾರಿ ಮಾತ್ರ ಹೊರಗೆ ಹೋಗುತ್ತಾರೆ. ಹೀಗಾಗಿ ಕೆಲವೇ ಕೆಲವು ಸಾರಿ ಧರಿಸುವ ಮದುವೆ ಬಟ್ಟೆಯನ್ನು ದುಬಾರಿ ಹಣ ಕೊಟ್ಟು ಖರೀದಿಸುವುದಿಲ್ಲ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಒಂದು ಸಾರಿ ಧರಿಸಿದ ಬಟ್ಟೆಯನ್ನು ಮದುವೆಗೆ ಮತ್ತೆ ಧರಿಸುವುದು ತಪ್ಪೇ ಎಂದು ಕೇಳಿದರು. ಇದಕ್ಕೆ ಜನರಿಂದ ಹಲವು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ನಿಮಗೆ ಬೇಕಾದುದನ್ನು ಧರಿಸಿ ಎಂದು ಕೆಲವರು ಹೇಳಿದರೆ,  ಇನ್ನು ಕೆಲವರು ಮದುವೆಯಲ್ಲಿ ಭಾಗವಹಿಸಲೆಂದೇ ಖಂಡಿತವಾಗಿಯೂ ಹೊಸ ಉಡುಪನ್ನು ಪಡೆಯಬೇಕಾಗಿಲ್ಲ ಎಂದರು. ಇನ್ನೊಬ್ಬರು ಹೀಗೆ ಬರೆದಿದ್ದಾರೆ, ಫಾಸ್ಟ್ ಫ್ಯಾಶನ್ ಪರಿಸರದ ಮೇಲೆ ಒಂದು ಪ್ಲೇಗ್ ಆಗಿದೆ. ಅದೇ ಸುಂದರವಾದ ಉಡುಪನ್ನು ಹಲವಾರು ಬಾರಿ ಧರಿಸುವುದು ಮಿತವ್ಯಯ, ಪರಿಸರಕ್ಕೆ ಒಳ್ಳೆಯದು ಮತ್ತು ಸಂಪೂರ್ಣವಾಗಿ ವೈಯಕ್ತಿಕ ಆಯ್ಕೆಯಾಗಿದೆ ಎಂದಿದ್ದಾರೆ.

Follow Us:
Download App:
  • android
  • ios