ಉಲ್ಕೆ ಪರ್ಸ್ ಬೆಲೆಗೆ ಸಿಂಗಲ್ ಬೆಡ್ ರೂಂ ಫ್ಲ್ಯಾಟ್ ಕೊಳ್ಳಬಹುದು!
ಜನರನ್ನು ಆಕರ್ಷಿಸಲು ಕಂಪನಿಗಳು ಹೊಸ ಹೊಸ ಪ್ರಯೋಗ ಮಾಡ್ತಿರುತ್ತವೆ. ಕಲ್ಪಿಸಿಕೊಳ್ಳಲು ಸಾಧ್ಯವಾಗದ ವಸ್ತುಗಳಿಂದ ಹೊಸ ಉತ್ಪನ್ನ ಸಿದ್ಧವಾಗಿರುತ್ತದೆ. ನೀವು ಎದೆ ಹಾಲಿನಿಂದ, ಮುರಿದ ಹಲ್ಲಿನಿಂದ ಉತ್ಪನ್ನ ಸಿದ್ಧವಾಗಿದ್ದರ ಬಗ್ಗೆ ಕೇಳಿರ್ತೀರಿ. ಈಗ ಆಕಾಶದಿಂದ ಬೀಳುವ ಉಲ್ಕೆಯಿಂದ ಪರ್ಸ್ ಸಿದ್ಧವಾಗಿದೆ.
ಲಕ್ಷಾಂತರ ವರ್ಷಗಳ ಹಿಂದೆ ನಿರಂತರವಾಗಿ ಉಲ್ಕಾಶಿಲೆಗಳು ಉತ್ಪತ್ತಿಯಾದ ನಂತ್ರ ಈ ಭೂಮಿಗೆ ನೀರು ಬಂದಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.ಉಲ್ಕಾಶಿಲೆಯಂತಹ ದೊಡ್ಡ ಬೆಂಕಿಯ ಚೆಂಡು ಆಕಾಶದಲ್ಲಿ ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಹೇಳೋದನ್ನು ನೀವು ಅನೇಕ ಬಾರಿ ಕೇಳಿರಬಹುದು. ಅದರ ಸ್ಫೋಟದಿಂದಾಗಿ ಅದರ ಸಣ್ಣ ತುಂಡುಗಳು ಭೂಮಿಯ ಮೇಲೆ ಬೀಳುತ್ತವೆ. ಈ ಕಲ್ಲುಗಳು ಬಹಳಷ್ಟು ವಿಶೇಷವಾಗಿರುತ್ತದೆ. ಹಾಗಾಗಿಯೇ ಕೆಲವರು ಉಲ್ಕಾಶಿಲೆಯ ಸಣ್ಣ ತುಂಡು ಸಿಕ್ಕಿದ್ರೂ ಅದನ್ನು ಸಂರಕ್ಷಿಸಲು ಬಯಸುತ್ತಾರೆ.
ಅಮೂಲ್ಯವಾದ ವಸ್ತು ಸಿಕ್ಕಿದಾಗ ಅದನ್ನು ಕಪಾಟಿನಲ್ಲಿಡೋದು ನಮ್ಮ ಹವ್ಯಾಸ. ಆದ್ರೆ ಕೋಪರ್ನಿ (Coperny) ಎಂಬ ಫ್ರೆಂಚ್ (French) ಫ್ಯಾಶನ್ ಬ್ರಾಂಡ್ ಕಂಪನಿ ಹೊಸ ಸಾಹಸಕ್ಕೆ ಕೈ ಹಾಕಿದೆ. ನಿಜವಾದ ಉಲ್ಕೆ (Meteorites ) ಗಳನ್ನು ಬಳಸಿ ವಿಶಿಷ್ಟವಾದ ಪರ್ಸ್ ಅನ್ನು ತಯಾರಿಸಿದೆ. ಉಲ್ಕೆಗಳಿಂದ ತಯಾರಾದ ಪರ್ಸ್ (Purse) ವಿಶೇಷತೆ ಏನು ಹಾಗೆ ಅದರ ಬೆಲೆ ಎಷ್ಟು ಎನ್ನುವ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡ್ತೇವೆ.
INTERESTING FACTS: ಡ್ರೆಸ್ ಗೆ ಅನಿವಾರ್ಯವಾಗಿರುವ ಬಟನ್ ಕಂಡು ಹಿಡಿದಿದ್ದು ಯಾರು ಗೊತ್ತಾ?
ಉಲ್ಕೆಯಿಂದ ತಯಾರಾದ ಪರ್ಸ್ ವಿಶೇಷವೇನು? : ವರದಿಗಳ ಪ್ರಕಾರ, ಫಾಲ್ ವಿಂಟರ್ 23 ಸಂಗ್ರಹದ ಅಡಿಯಲ್ಲಿ, ಕೋಪರ್ನಿ ಕಂಪನಿಯು ವಿಶೇಷ ರೀತಿಯ ಪರ್ಸ್ ಅನ್ನು ತಯಾರಿಸಿದೆ. ಈ ಪರ್ಸ್‌ನ ವಿಶೇಷತೆ ಎಂದರೆ ಇದು ಬಾಹ್ಯಾಕಾಶದಿಂದ ಬೀಳುವ ಕಲ್ಲಿನಿಂದ ಅಂದರೆ ಉಲ್ಕಾಶಿಲೆಯಿಂದ ಮಾಡಲ್ಪಟ್ಟಿದೆ. ಈ ಪರ್ಸ್ ನೋಡಲು ಉಲ್ಕಾಶಿಲೆಯಂತೆ ಕಾಣುತ್ತದೆ. ಕಂಪನಿಯು ಮಿನಿ ಮೆಟಿಯೊರೈಟ್ ಸ್ವೈಪ್ ಬ್ಯಾಗ್ ಅನ್ನು ಇತರ ಸ್ವೈಪ್ ಬ್ಯಾಗ್‌ಗಳಂತೆಯೇ ತಯಾರಿಸಿದೆ. ಆದರೆ ಉಲ್ಕೆಯಿಂದ ತಯಾರಿಸಿದ ಕಾರಣ, ಪರ್ಸ್ ಫಿನಿಶಿಂಗ್ ಒರಟಾಗಿದೆ.
ಸಾವಿರಾರು ವರ್ಷಗಳ ಹಿಂದೆ ಬಿದ್ದ ಉಲ್ಕಾಶಿಲೆಯಿಂದ ತಯಾರಾಗಿದೆ ಪರ್ಸ್ : ಕಂಪನಿಯು ಮೊದಲು ಆನ್‌ಲೈನ್ ಸ್ಟೋರ್‌ನಲ್ಲಿ ವಿಶಿಷ್ಟವಾದ ಪರ್ಸ್ ಅನ್ನು ಪ್ರದರ್ಶಿಸಿದೆ. ಸುಮಾರು 55,000 ವರ್ಷಗಳ ಹಿಂದೆ ಭೂಮಿಯ ಮೇಲೆ ಬಿದ್ದ ಉಲ್ಕೆಗಳಿಂದ ಪರ್ಸ್ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಪ್ರತಿಯೊಂದು ಪರ್ಸ್ ವಿಭಿನ್ನ ಉಲ್ಕೆಗಳಿಂದ ಕೂಡಿದೆ.
Beauty Tips : ತಿನ್ನೋಕೆ ಮಾತ್ರವಲ್ಲ ಚರ್ಮಕ್ಕೂ ದಿ ಬೆಸ್ಟ್ ದ್ರಾಕ್ಷಿ
ಅನನ್ಯ ಪರ್ಸ್‌ನ ಬೆಲೆ ಎಷ್ಟು? : ಈ ಪರ್ಸ್ ಖರೀದಿಸೋದು ಸಾಮಾನ್ಯರಿಗೆ ಕಷ್ಟದ ಕೆಲಸ. ಯಾಕೆಂದ್ರೆ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಈ ಪರ್ಸ್ ಲಭ್ಯವಿಲ್ಲ. ವರದಿಗಳ ಪ್ರಕಾರ, ಈ ವಿಶಿಷ್ಟ ಪರ್ಸ್‌ನ ಬೆಲೆ 35 ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ನೀವು ಆನ್ಲೈನ್ ನಲ್ಲಿ ಇದನ್ನು ಆರ್ಡರ್ ಮಾಡಬೇಕು. ನೀವು ಆರ್ಡರ್ ಮಾಡಿದ ಆರು ವಾರಗಳ ನಂತ್ರ ನಿಮಗೆ ಪರ್ಸ್ ಸಿಗುತ್ತದೆ. ಆದ್ರೆ ನೀವು ಒಮ್ಮೆ ಆರ್ಡರ್ ಮಾಡಿದ್ರೆ ಮತ್ತೆ ಹಣ ರಿಟರ್ನ್ ಆಗೋದಿಲ್ಲವೆಂದು ಕಂಪನಿ ಹೇಳಿದೆ. ಪರ್ಸ್ ಜೊತೆ ದೃಢೀಕರಣದ ಪ್ರಮಾಣಪತ್ರವನ್ನು ಕಂಪನಿ ನಿಮಗೆ ನೀಡುತ್ತದೆ. ಕಂಪನಿ, ಭೂಮಿ ಮೇಲೆ ಬಿದ್ದ ಉಲ್ಕಾಶಿಲೆಯನ್ನು ಸಂಗ್ರಹಿಸುತ್ತದೆ. ವಿಶ್ವದ ಯಾವುದೇ ಪ್ರದೇಶದಲ್ಲಿದ್ದರೂ ಆ ಉಲ್ಕೆಯನ್ನು ಬಳಸುತ್ತೇವೆ ಎಂದು ಕಂಪನಿ ಹೇಳಿದೆ.
ಪರ್ಸ್ ವೈಶಿಷ್ಟ್ಯತೆ ಏನು? : ಉಲ್ಕೆ ಪರ್ಸ್ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಇದರ ತೂಕ ಹೆಚ್ಚಿದೆ. ಉಲ್ಕೆ ಪರ್ಸ್ ಗಾತ್ರದ 9x12x23 ಸೆಂಟಿ ಮೀಟರ್ ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಖಾಲಿ ಪರ್ಸ್‌ನ ತೂಕ 2 ಕೆಜಿಯಷ್ಟಿದೆ ಎಂದು ಕಂಪನಿ ಹೇಳಿದೆ. ಬ್ಯಾಗ್ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್, ಇನ್ಸ್ಟಾ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಲಾಗ್ತಿದೆ. ಅನೇಕ ಜನರು ಇದನ್ನು ಕಲೆಗಳ ತುಣುಕು ಎಂದು ಕರೆದಿದ್ದಾರೆ.