Beauty Tips : ತಿನ್ನೋಕೆ ಮಾತ್ರವಲ್ಲ ಚರ್ಮಕ್ಕೂ ದಿ ಬೆಸ್ಟ್ ದ್ರಾಕ್ಷಿ

ಮುಖದ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತದೆ. ಇದೇ ಕಾರಣಕ್ಕೆ ಜನರು ಮುಖದ ಸೌಂದರ್ಯ ಕಾಪಾಡಿಕೊಳ್ಳಲು ನಾನಾ ಸಾಹಸ ಮಾಡ್ತಾರೆ. ಚರ್ಮದ ಕಲೆ, ಸುಕ್ಕು, ಶುಷ್ಕತೆಗೆ ನೀವು ದ್ರಾಕ್ಷಿ ಬಳಸಿ ನೋಡಿ. 
 

Benefits Of Grape Facepack For Skin

ಜನರು ಇಷ್ಟಪಟ್ಟು ತಿನ್ನುವ ಹಣ್ಣುಗಳಲ್ಲಿ ದ್ರಾಕ್ಷಿ  ಕೂಡ ಒಂದು. ಮಾರುಕಟ್ಟೆಯಲ್ಲಿ ಹಸಿರು, ಕಪ್ಪು ಮತ್ತು ಕೆಂಪು ದ್ರಾಕ್ಷಿ ಹಣ್ಣನ್ನು ನೀವು ಕಾಣ್ತೀರಾ. ಈ ಎಲ್ಲ ಬಣ್ಣದ ಹಣ್ಣುಗಳು ಕೂಡ ರುಚಿಯಾಗಿರುತ್ತದೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಋತುವಿನಲ್ಲಿ ದ್ರಾಕ್ಷಿ ಹಣ್ಣಿನ ಸೇವನೆಯಿಂದ ಅನೇಕ ಪ್ರಯೋಜನವಿದೆ.  

ಪೊಟ್ಯಾಸಿಯಮ್, ಸಿಟ್ರಿಕ್ ಆಮ್ಲ, ಫ್ಲೋರೈಡ್, ಪೊಟ್ಯಾಸಿಯಮ್, ಸಲ್ಫೇಟ್, ಮೆಗ್ನೀಸಿಯಮ್, ಕಬ್ಬಿಣದ ಪ್ರಮಾಣ ದ್ರಾಕ್ಷಿಯಲ್ಲಿ ಕಂಡು ಬರುತ್ತದೆ. ಆರೋಗ್ಯ ವೃದ್ಧಿ ಮಾತ್ರವಲ್ಲ ಚರ್ಮ (Skin) ದ ಆರೋಗ್ಯ (Health) ಕ್ಕೂ ದ್ರಾಕ್ಷಿ ಒಳ್ಳೆಯದು. ಸನ್ ಬರ್ನ್, ಕಲೆ ಕಡಿಮೆ ಮಾಡುವ ಜೊತೆಗೆ ವಯಸ್ಸನ್ನು ಮರೆಮಾಚುವ ಗುಣವನ್ನು ದ್ರಾಕ್ಷಿ ಹೊಂದಿದೆ. ನಾವಿಂದು ದ್ರಾಕ್ಷಿ (Grapes) ಫೇಸ್ ತಯಾರಿ, ಪ್ರಯೋಜನವನ್ನು ಹೇಳ್ತೇವೆ.

ಗಿಡಮೂಲಿಕೆ ತುಂಬಿದ ಸ್ಲೀಪ್‌ವೇರ್‌, ಇದನ್ನು ಧರಿಸಿ ಮಲಗಿದ್ರೆ ಹಾಯಾಗಿ ನಿದ್ದೆ ಬರುತ್ತಂತೆ! 

ಬೇಸಿಗೆಯಲ್ಲಿ ಬಳಸಿ ಈ ಫೇಸ್ ಪ್ಯಾಕ್ (Face Pack) : ಬೇಸಿಗೆ ಬಂತು ಅಂದ್ರೆ ಚರ್ಮದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಂಪು ಗುಳ್ಳೆಗಳು ಏಳುತ್ತವೆ. ಸರ್ನ್ ಬರ್ನ್ ನಿಂದ ಚರ್ಮದ ಬಣ್ಣ ಬದಲಾಗುತ್ತದೆ. ಕೆಲ ಜಾಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ನೀವು ಕೆಂಪು ದ್ರಾಕ್ಷಿ ಫೇಸ್ ಪ್ಯಾಕ್ ಬಳಸಬಹುದು.

ಇದಕ್ಕೆ ಬೇಕಾಗುವ ವಸ್ತುಗಳು : ಕೆಂಪು ದ್ರಾಕ್ಷಿ  4-5, ಪುದೀನ ಎಲೆಗಳು 2-3.

ಫೇಸ್ ಪ್ಯಾಕ್ ಬಳಸುವ ವಿಧಾನ :  ಮೊದಲು ಕೆಂಪು ದ್ರಾಕ್ಷಿ ಮತ್ತು ಪುದೀನಾ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟನ್ನು ಮುಖದ ಮೇಲೆ ಹಚ್ಚಿ ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಿ.  ಫೇಸ್ ಪ್ಯಾಕ್ ಹಚ್ಚಿದ ಹತ್ತರಿಂದ 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ನೀವು ರೋಸ್ ವಾಟರ್ ಬಳಸಿ ಐಸ್ ಕ್ಯೂಬ್ ತಯಾರಿಸಿಕೊಂಡು, ಅದ್ರಲ್ಲೂ ನಿಮ್ಮ ಮುಖವನ್ನು ಮಸಾಜ್ ಮಾಡಬಹುದು. 
ನಿಮ್ಮ ವಯಸ್ಸು (Age) ಮುಚ್ಚಿಡುತ್ತೆ ಈ ಫೇಸ್ ಪ್ಯಾಕ್ : ದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೋಲ್ ವಯಸ್ಸನ್ನು ಮುಚ್ಚಿಡುವ ಜೊತೆಗೆ ಸದಾ ನೀವು ಯುವಕರಂತೆ ಕಾಣಲು ನೆರವಾಗುತ್ತದೆ. ರೆಸ್ವೆರಾಟ್ರೋಲ್ ಒಂದು ರೀತಿಯ ಉತ್ಕರ್ಷಣ ನಿರೋಧಕವಾಗಿದ್ದು, ಚರ್ಮದ ಆರೋಗ್ಯಕ್ಕೆ ಇದು ಒಳ್ಳೆಯದು.  

Beauty Tips: ಹಳೇ ಚಪಾತಿ ಆರೋಗ್ಯಕ್ಕೂ ಒಳ್ಳೇದಂತೆ, ಸೌಂದರ್ಯವನ್ನೂ ಹೆಚ್ಚಿಸುತ್ತಂತೆ!

ಈ ಫೇಸ್ ಪ್ಯಾಕ್ ಮಾಡಲು ಬೇಕಾಗುವ ವಸ್ತು : ಮುಲ್ತಾನಿ ಮಿಟ್ಟಿ - 3  ಟೀಸ್ಪೂನ್, ರೋಸ್ ವಾಟರ್ (Rosewater) ಒಂದು ಚಮಚ,ಕಪ್ಪು ದ್ರಾಕ್ಷಿ  10ರಿಂದ 12

ಫೇಸ್ ಪ್ಯಾಕ್ ಬಳಸುವ ವಿಧಾನ : ಮೊದಲನೆಯದಾಗಿ  ದ್ರಾಕ್ಷಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ರೋಸ್ ವಾಟರ್ ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ, 15 ನಿಮಿಷ ಬಿಟ್ಟು ತಣ್ಣನೆ ನೀರಿನಲ್ಲಿ ಮುಖ ತೊಳೆಯಿರಿ. 

ಮುಖದ ಚರ್ಮ ಮೃದುವಾಗಲು ಹೀಗೆ ಮಾಡಿ : ಋತು ಬದಲಾದ ಸಂದರ್ಭದಲ್ಲಿ ಚರ್ಮ ಶುಷ್ಕವಾಗುತ್ತದೆ. ಇದ್ರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹಾಗೆಯೇ ಮುಖದ ಸೌಂದರ್ಯ ಹಾಳಾಗುತ್ತದೆ. ನೀವು ದ್ರಾಕ್ಷಿ ಫೇಸ್ ಪ್ಯಾಕ್ ಬಳಸಿ ಚರ್ಮವನ್ನು ಮೃದುಗೊಳಿಸಬಹುದು.  

ಇದಕ್ಕೆ ಬೇಕಾಗುವ ವಸ್ತು :  ಇದಕ್ಕೆ ನೀವು ಕೇವಲ ದ್ರಾಕ್ಷಿ ಹಣ್ಣನ್ನು ಹೊಂದಿದ್ದರೆ ಸಾಕು. ಈ ಪೇಸ್ ಪ್ಯಾಕ್ ಬಳಸುವ ವಿಧಾನ : ಮೊದಲು  ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ರುಬ್ಬಿಕೊಳ್ಳಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು.  10 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ದಿನ ನೀವು ಈ ಫೇಸ್ ಪ್ಯಾಕ್ ಬಳಸಿದ್ರೆ ಒಳ್ಳೆಯದು.  

Latest Videos
Follow Us:
Download App:
  • android
  • ios