ಶೂ ಒಳಗೆ ಹಾವು ಕಂಡಿದ್ದೀರಿ, ಹಾವಿನ ಶೂ ನೋಡಿದ್ದೀರಾ?
ಇತ್ತೀಚಿಗೆ ವೀಡಿಯೋವೊಂದು ವೈರಲ್ ಆಗಿದ್ದು, ಒಬ್ಬ ವ್ಯಕ್ತಿಯು ನಾಗರ ಹಾವು ಹಡೆ ಎತ್ತಿ ನಿಂತಿರುವ ರೀತಿಯಲ್ಲಿ ಜೋಡಿ ಬೂಟುಗಳನ್ನು ಧರಿಸುತ್ತಿರುವುದು ಕಂಡಿದೆ.

ನಿರಂತರವಾಗಿ ಅಭಿವೃದ್ಧಿಯಾಗುತ್ತಿರುವ ಫ್ಯಾಷನ್ ಜಗತ್ತಿನಲ್ಲಿ, ಹೊಸತನ ಯಾವಾಗಲೂ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತದೆ. ಇಂಟರ್ನೆಟ್‌ನಲ್ಲಿ ಇಂತಹ ಅನೇಕ ಹೊಸತನದ, ಸಾಂಪ್ರದಾಯಿಕ ಅಭಿರುಚಿಗಳ ಅನೇಕ ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ತ್ವರಿತವಾಗಿ ವೈರಲ್ ಆಗುತ್ತದೆ.
ಇದೇ ರೀತಿ ಇತ್ತೀಚಿಗೆ ವೀಡಿಯೋವೊಂದು ವೈರಲ್ ಆಗಿದ್ದು, ಒಬ್ಬ ವ್ಯಕ್ತಿಯು ನಾಗರ ಹಾವು ಹಡೆ ಎತ್ತಿ ನಿಂತಿರುವ ರೀತಿಯಲ್ಲಿ ಜೋಡಿ ಬೂಟುಗಳನ್ನು ಧರಿಸುತ್ತಿರುವುದು ಕಂಡಿದೆ. Instagram ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಕ್ಲಿಪ್ ವಿಚಿತ್ರವಾದ ಶೂಗಳತ್ತ ದೃಷ್ಟಿ ಒಯ್ಯುತ್ತದೆ. ನಿಜವಾದ ಹಾವುಗಳ ರೀತಿಯೇ ಇದು ಕಾಣಿಸುತ್ತದೆ.
ಡಿಜಿಟಲ್ ವೆಬ್‌ಸೈಟ್ ಸ್ಥಾಪಿಸಿ ಫೋರ್ಬ್ಸ್ ಗುರುತಿಸಿದ ಭಾರತದ ಮಹಿಳಾ ಉದ್ಯಮಿ ಆಸ್ತಿ ಮೌಲ್ಯ 24,980 ಕೋಟಿ ರೂ!
ವೀಡಿಯೊ ಈಗಾಗಲೇ 150,000 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ತರಹೇವಾರಿ ಕಂಮೆಂಟ್ಗಳು ಬಂದಿದೆ. ಈ ಅಸಾಂಪ್ರದಾಯಿಕ ಬೂಟುಗಳಿಂದ ಸಹಜವಾಗೇ ವೀಕ್ಷಕರು ಗೊಂದಲಕ್ಕೊಳಗಾಗಿದ್ದಾರೆ. ವಿಡಿಯೋವನ್ನು ಮೊದಲು ನೋಡುವಾಗ ಸಹಜವಾಗಿ ಗಾಬರಿಯಾಗುತ್ತದೆ. ಬಳಿಕ ಸರಿಯಾಗಿ ಗಮನಿಸಿ ನೋಡಿದಾಗ ಬೂಟು ಎಂದು ಮನಸ್ಸಿಗೆ ದೃಡವಾಗುತ್ತದೆ.
Instagram ಬಳಕೆದಾರ ಓಬ್ಬ ಕಮೆಂಟ್ ಮಾಡಿ, ನಾನು ಅವುಗಳನ್ನು ಪ್ರಯತ್ನಿಸಲು ಎಂದಿಗೂ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು ಆ ಬೂಟುಗಳು ನಿರ್ವಿವಾದವಾಗಿ ಅನನ್ಯವಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.
ವಿದೇಶದಲ್ಲಿ ಸ್ವಂತ ದ್ವೀಪ ಖರೀದಿಸಿ ಪ್ರವಾಸಿಗರ ಫೇವರೆಟ್ ತಾಣವನ್ನಾಗಿಸಿದ ಭಾರತೀಯ ಉದ್ಯಮಿ, ನೀವು ಹೋಗಬೇಕಾ?
ಹಾವು ಅತ್ಯಂತ ಅಪಾಯಕಾರಿ ಸರಿಸೃಪಗಳಲ್ಲಿ ಒಂದಾಗಿದೆ. ಹಾವಿನ ಒಂದು ಕಡಿತ ಒಬ್ಬ ವ್ಯಕ್ತಿಗೆ ಪಾರ್ಶ್ವವಾಯು ಉಂಟು ಮಾಡಬಹುದು. ಕೆಲವು ಹಾವುಗಳ ವಿಷವು ಮನುಷ್ಯರೂ ಸಹ ಸಾಯುವಷ್ಟು ವಿಷಕಾರಿಯಾಗಿದೆ. ಇನ್ನು ಈ ಹಾವುಗಳಿಂದಾಗಿ ವಿಶ್ವದಾದ್ಯಂತ ಪ್ರತಿ ವರ್ಷ ಸರಾಸರಿ 1,38,000 ಜನರು ಸಾಯುತ್ತಾರೆ. ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಇನ್‌ಲ್ಯಾಂಡ್ ತೈಪಾನ್, ಬ್ಲ್ಯಾಕ್ ಮಾಂಬಾ, ರಸ್ಸೆಲ್ ವೈಪರ್, ಕಿಂಗ್ ಕೋಬ್ರಾ, ಈಸ್ಟರ್ನ್ ಬ್ರೌನ್ ಸ್ನೇಕ್ ಸೇರಿದಂತೆ ಹಲವು ಹಾವುಗಳಿವೆ.
ಹಾವುಗಳ ವಯಸ್ಸು ಕೂಡ ವಿವಿಧ ತಳಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಕಾಡಿನಲ್ಲಿ ಮುಕ್ತವಾಗಿ ವಾಸಿಸುವ ಹಾವುಗಳಿಗೆ ಕಡಿಮೆ (ಸರಾಸರಿ ಜೀವಿತಾವಧಿ ಕೇವಲ 10 ರಿಂದ 15 ವರ್ಷ) ಆಯುಷ್ಯವಿದೆ. ಸಂಗ್ರಹಾಲಯದಲ್ಲಿ ಇರುವ ಹಾವುಗಳು ದೀರ್ಘಾವಧಿಯ ಜೀವಿತಾವಧಿಯನ್ನು (ಸರಾಸರಿ ಜೀವಿತಾವಧಿ 13 ರಿಂದ 18 ವರ್ಷ) ಹೊಂದಿರುತ್ತವೆ . ಇದು ಆಶ್ಚರ್ಯವಾದ್ರೂ ಸತ್ಯ.