ಕಾರ್ಲಾ ಬುಕ್‌ಮ್ಯಾನ್ ಅವರು ಭಾರತೀಯ ಬಿಲಿಯನೇರ್ ಉದ್ಯಮಿ ಆದಿ ಗೋದ್ರೇಜ್ ಅವರ ಸೊಸೆಯಾಗಿದ್ದಾರೆ, ಅವರು ಫೋರ್ಬ್ಸ್ ಪ್ರಕಾರ ಅಕ್ಟೋಬರ್ 15 ರ ಹೊತ್ತಿಗೆ 24,980 ಕೋಟಿ ರೂ.ಗಳ ನಿವ್ವಳ  ಮೌಲ್ಯವನ್ನು ಹೊಂದಿದ್ದಾರೆ.

ಕಾರ್ಲಾ ಬುಕ್‌ಮ್ಯಾನ್ ಎಂಬ ಮಹಿಳೆ ಒಬ್ಬ ಮಹಿಳಾ ವಾಣಿಜ್ಯೋದ್ಯಮಿ ಮತ್ತು ಮುಂಬೈ ಮೂಲದ ಡಿಜಿಟಲ್ ವೆಬ್‌ಸೈಟ್ ದಿ ಸ್ವಾಡ್ಲ್‌ನ ಸಂಸ್ಥಾಪಕರಾಗಿದ್ದಾರೆ. ಇದು ತಾಯಿಯ, ಲೈಂಗಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸುತ್ತದೆ. ಕಾರ್ಲಾ ಬುಕ್‌ಮ್ಯಾನ್ ಅವರು ಭಾರತೀಯ ಬಿಲಿಯನೇರ್ ಉದ್ಯಮಿ ಆದಿ ಗೋದ್ರೇಜ್ ಅವರ ಸೊಸೆಯಾಗಿದ್ದಾರೆ, ಅವರು ಫೋರ್ಬ್ಸ್ ಪ್ರಕಾರ ಅಕ್ಟೋಬರ್ 15 ರ ಹೊತ್ತಿಗೆ 24,980 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಕಾರ್ಲಾ ಬುಕ್‌ಮ್ಯಾನ್ ನ್ಯೂಯಾರ್ಕ್‌ಗೆ ಸೇರಿದ ಅಮೇರಿಕನ್ ಪ್ರಜೆಯಾಗಿದ್ದಾರೆ. ಅವರು ಗೋದ್ರೇಜ್ ಪ್ರಾಪರ್ಟೀಸ್‌ನ ಕಾರ್ಯಕಾರಿ ಅಧ್ಯಕ್ಷರಾದ ಪಿರೋಜ್ಶಾ ಗೋದ್ರೇಜ್ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯ ನಂತರ ಕಾರ್ಲಾ ಬುಕ್‌ಮ್ಯಾನ್ ಅಮೆರಿಕಲ್ಲೇ ಇದ್ದು, ಒಂದು ದಶಕದ ಬಳಿಕ ಭಾರತಕ್ಕೆ ಬಂದರು. ಅವರು ಕ್ಷೇತ್ರದಲ್ಲಿ ಎಂಟು ವರ್ಷಗಳ ನ್ಯಾಯಾಲಯಕ್ಕೆ ಸಂಬಂಧಿಸಿದ ವೃತ್ತಿಜೀವನ ಮಾಡಿದ್ದಾರೆ.

ವಿದೇಶದಲ್ಲಿ ಸ್ವಂತ ದ್ವೀಪ ಖರೀದಿಸಿ ಪ್ರವಾಸಿಗರ ಫೇವರೆಟ್‌ ತಾಣವನ್ನಾಗಿಸಿದ ಭಾರತೀಯ ಉದ್ಯಮಿ, ನೀವು ಹೋಗಬೇಕಾ?

ಬುಕ್‌ಮ್ಯಾನ್ ಆಕೆಯ ಮೊದಲ ಮಗಳು ಜನಿಸಿದ ನಂತರ ದಿ ಸ್ವಾಡಲ್ (The Swaddle) ಅನ್ನು ಪ್ರಾರಂಭಿಸಿದರು. ಇದು ಆರಂಭದಲ್ಲಿ ಮಹಿಳೆಯರ ಡೆಲಿವರಿ ಪೂರ್ವ ಮತ್ತು ನಂತರದ ಆರೋಗ್ಯದ ಮೇಲೆ ಕೇಂದ್ರೀಕರಿಸಿದೆ. ತರುವಾಯ, ವೆಬ್‌ಸೈಟ್ ಮಹಿಳೆಯರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ತನ್ನ ಮ್ಯಾಗಸೀನ್‌ನಲ್ಲಿ ಅಳವಡಿಸಿಕೊಂಡಿತು. ಬುಕ್‌ಮ್ಯಾನ್ ಅವರು ದಿ ಸ್ವಾಡಲ್‌ನ ಮುಖ್ಯ ಸಂಪಾದಕರಾಗಿದ್ದಾರೆ ಮತ್ತು ಇದು ಮಹಿಳೆಯರ ಆರೋಗ್ಯಕ್ಕೆ ಸ್ಥಿರ ಡಿಜಿಟಲ್ ಸಂಪನ್ಮೂಲವಾಗಬೇಕೆಂದು ಬಯಸುತ್ತಾರೆ. ಇದು ಪೋಷಕರ ಮಾರ್ಗದರ್ಶಿಗಳ ಬಗ್ಗೆ ಮಾತನಾಡುತ್ತದೆ ಮತ್ತು ಶಾಲೆಗಳಲ್ಲಿ ಪಾಲನೆ ಮತ್ತು ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಂವಾದ ಮತ್ತು ಈವೆಂಟ್‌ಗಳನ್ನು ಆಯೋಜಿಸುತ್ತದೆ.

ಶ್ರೀಮಂತಿಕೆಯಲ್ಲಿ ಸುಂದರ್‌ ಪಿಚೈ, ಸತ್ಯ ನಾಡೆಲ್ಲಾರನ್ನು ಹಿಂದಿಕ್ಕಿದ ಭಾರತೀಯ ಮೂಲದ ಮಹಿಳಾ ಉದ್ಯಮಿ!

ಬುಕ್‌ಮ್ಯಾನ್‌ನ ಪತಿ, ಪಿರೋಜ್ಷಾ ಅವರು ಗೋದ್ರೇಜ್ ಪ್ರಾಪರ್ಟೀಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ, ಗೋದ್ರೇಜ್ ಅಕ್ಟೋಬರ್ 13 ರ ಹೊತ್ತಿಗೆ ರೂ 46,939 ಕೋಟಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಪಿರೋಜ್ಶಾ ಅವರು 2004 ರಲ್ಲಿ ಕುಟುಂಬದ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಮತ್ತು 2008 ರಲ್ಲಿ ಇವರು ಗೋದ್ರೇಜ್ ಪ್ರಾಪರ್ಟೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದರು. 

2012 ರಲ್ಲಿ, ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಅಧಿಕಾರ ವಹಿಸಿಕೊಂಡರು. ಅವರು ತ್ವರಿತ ಬೆಳವಣಿಗೆಯ ಹಂತದ ಮೂಲಕ ಕಂಪನಿಯನ್ನು ಮುನ್ನಡೆಸಿದರು. ಗೋದ್ರೇಜ್ ಕುಟುಂಬವು USD 5.7 ಬಿಲಿಯನ್ (ಆದಾಯ) ಗೋದ್ರೇಜ್ ಗ್ರೂಪ್ ಅನ್ನು ನಿಯಂತ್ರಿಸುತ್ತದೆ. ಕಂಪೆನಿ ಇಂದು ಸುಮಾರು 47,460 ಕೋಟಿ ರೂ. ನಿವ್ವ: ಮೌಲ್ಯ ಹೊಂದಿದೆ.