ವಿದೇಶದಲ್ಲಿ ಸ್ವಂತ ದ್ವೀಪ ಖರೀದಿಸಿ ಪ್ರವಾಸಿಗರ ಫೇವರೆಟ್ ತಾಣವನ್ನಾಗಿಸಿದ ಭಾರತೀಯ ಉದ್ಯಮಿ, ನೀವು ಹೋಗಬೇಕಾ?
ಭಾರತೀಯ ಮೂಲದ ಉದ್ಯಮಿ ಸುನೀಲ್ ಷಾ ಆಫ್ರಿಕಾದ ದ್ವೀಪ ರಾಷ್ಟ್ರ ಸೀಶೆಲ್ಸ್ ನಲ್ಲಿ ತನ್ನದೇ ಸ್ವಂತ ದ್ವೀಪವೊಂದನ್ನು ಖರೀದಿ ಮಾಡಿದ್ದು, ಇಂದು ಪ್ರವಾಸಿಗರ ಹಾಟ್ ಪೇವರೆಟ್ ತಾಣವನ್ನಾಗಿ ಬೆಳೆಸಿದ್ದಾರೆ.

1864 ರಲ್ಲಿ ಗುಜರಾತ್‌ನ ಕಚ್ ಪ್ರದೇಶದ ಮಾಂಡವಿಯಿಂದ ಒಂದು ಶತಮಾನದ ಹಿಂದೆ ಒಂದು ಕುಟುಂಬವು ಹಿಂದೂ ಮಹಾಸಾಗರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರ ಸೀಶೆಲ್ಸ್‌ಗೆ ಸ್ಥಳಾಂತರಗೊಂಡಿತು. ಆ ದ್ವೀಪ ರಾಷ್ಟ್ರವನ್ನು ಕುಟುಂಬ ಪ್ರಮುಖ ಉದ್ಯಮ ಹಬ್ ಆಗಿ ಬೆಳೆಸಿತು. ನಂತರ ಸುಮಾರು ಒಂದು ದಶಕದ ಹಿಂದೆ ಈ ಸೀಶೆಲ್ಸ್ ದ್ವೀಪದಲ್ಲಿ ಒಂದನ್ನು ಅವರ ಮೂರನೇ ತಲೆಮಾರಾದ ಉದ್ಯಮಿ ಸುನೀಲ್ ಷಾ ತಮ್ಮ ತಂದೆ ಅನಂತ್-ಜೀವನ್‌ನೊಂದಿಗೆ ಸೇರಿ ತೆಕ್ಕೆಗೆ ಪಡೆದು ಉತ್ಸಾಹದಿಂದ ಐಷಾರಾಮಿ ರೆಸಾರ್ಟ್ ಆಗಿ ಪರಿವರ್ತಿಸಿದ್ದರಿಂದ ತಮ್ಮ ಮೂರನೇ ತಲೆಮಾರಿನೊಂದಿಗೆ ಹೊಸ ಉದ್ಯಮಕ್ಕೆ ನಾಂದಿ ಹಾಡಿದರು. ಈ ದ್ವೀಪವು ಆಫ್ರಿಕಾದಲ್ಲಿದೆ.
ಶ್ರೀಮಂತಿಕೆಯಲ್ಲಿ ಸುಂದರ್ ಪಿಚೈ, ಸತ್ಯ ನಾಡೆಲ್ಲಾರನ್ನು ಹಿಂದಿಕ್ಕಿದ ಭಾರತೀಯ ಮೂಲದ ಮಹಿಳಾ ಉದ್ಯಮಿ!
ಸೀಶೆಲ್ಸ್ ದ್ವೀಪ ಸುಮಾರು 100,000 ಜನಸಂಖ್ಯೆಯೊಂದಿಗೆ ಇರುವ ಆಫ್ರಿಕಾದ ಅತ್ಯಂತ ಚಿಕ್ಕ ರಾಷ್ಟ್ರವಾಗಿರಬಹುದು ಮತ್ತು ಪ್ರಾಯಶಃ ವಿಶ್ವದ ಅತ್ಯಂತ ಚಿಕ್ಕ ರಾಜಧಾನಿಯಾಗಿದೆ. ಸುನೀಲ್ ಷಾ ವಿಕ್ಟೋರಿಯಾ ಮೂಲದ AJ ಷಾ & ಅಸೋಸಿಯೇಟ್ಸ್‌ನ ಮುಖ್ಯಸ್ಥರಾಗಿದ್ದಾರೆ, ಇದು ದೇಶದ ಪ್ರಮುಖ ಲೆಕ್ಕಪತ್ರ ಕಂಪನಿಯಾಗಿದೆ. ಅವರು ತಮ್ಮ ದಿವಂಗತ ತಂದೆ ಅನಂತ್-ಜೀವನ್ ಷಾ ಜೊತೆ ಸೇರಿ ಹೊಸ ಯೋಜನೆಯನ್ನು ಪ್ರಾರಂಭಿಸಿದರು. 150 ದ್ವೀಪ ಸಮೂಹದಲ್ಲಿ ಒಂದು ದ್ವೀಪವನ್ನು ಖರೀದಿ ಮಾಡಿ ಬೆಳೆಸಿದರು. ಇಂದು ಇದು ಪ್ರವಾಸಿಗರ ಪೇವ್‌ರೆಟ್ ತಾಣವಾಗಿದೆ. ವಿಶ್ವದ ಅತ್ಯಂತ ಜನಪ್ರಿಯ ಬೀಚ್ ತಾಣಗಳಲ್ಲಿ ಒಂದಾಗಿದೆ.
ಸುನೀಲ್ ಷಾ ಸೀಶೆಲ್ಸ್ ದ್ವೀಪದಲ್ಲಿ ದುಂಡಗಿರುವ ಐಲ್ಯಾಂಡ್ ಒಂದನ್ನು ಖರೀದಿಸಿದರು, ಇದು 0.018 ಚದರ ಕಿಲೋಮೀಟರ್ಗಳಷ್ಟು (4.4 ಎಕರೆ) ಪ್ರದೇಶದಲ್ಲಿ ಹರಡಿದೆ. ಮೊದಲು ಜನವಸತಿಯಿಲ್ಲದ ಮತ್ತು ಸಣ್ಣ ರೆಸ್ಟೋರೆಂಟ್ ಅನ್ನು ಮಾತ್ರ ಹೊಂದಿದ್ದ ದ್ವೀಪವು ಈಗ ಐಷಾರಾಮಿ ಎನ್ಚ್ಯಾಂಟೆಡ್ ಐಲ್ಯಾಂಡ್ ರೆಸಾರ್ಟ್ (enchanted island resort) ಆಗಿದೆ. ಇದು ದೇಶದ ಸೇಂಟ್ ಅನ್ನೆ ಮರೈನ್ ರಾಷ್ಟ್ರೀಯ ಉದ್ಯಾನವನದಲ್ಲಿದೆ ಮತ್ತು ಮಾಹೆ ಪಟ್ಟಣದಿಂದ ಕೇವಲ 10 ನಿಮಿಷಗಳಲ್ಲಿ ದೋಣಿ ಮೂಲಕ ತಲುಪಬಹುದಾಗಿದೆ.
ಅಂತರಾಷ್ಟ್ರೀಯ ಫ್ಯಾಷನ್ ಲೋಕದಲ್ಲಿ ಗುರುತಿಸಿಕೊಂಡ ಭಾರತದ ಶ್ರೀಮಂತ ಮಹಿಳಾ ಉದ್ಯಮಿ
ಸುಮಾರು 9 ಮಿಲಿಯನ್ ಡಾಲರ್ ಈ ದ್ವೀಪಕ್ಕಾಗಿ ಖರ್ಚು ಮಾಡಿದ ಸುನೀಲ್ ಷಾ. ಇಲ್ಲಿ ಐಷಾರಾಮಿ ರೆಸಾರ್ಟ್ ಅನ್ನು ಐದು ವರ್ಷಗಳಲ್ಲಿ ನಿರ್ಮಿಸಿದರು. ಇದು 8 ವಿಲ್ಲಾಗಳನ್ನು ಹೊಂದಿದ್ದು, ದುಬೈ ಮೂಲದ ಹೋಟೆಲ್ ನಿರ್ವಾಹಕರಿಂದ ನಡೆಸಲ್ಪಡುತ್ತದೆ. 24 ಮಂದಿಗೆ ಖಾಸಗಿ ದ್ವೀಪ ವಿಹಾರಕ್ಕೆ ಪ್ರವಾಸಿಗರು ಒಂದು ರಾತ್ರಿಗೆ ಸುಮಾರು 8.5 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ ಎಂದು ವರದಿಯಾಗಿದೆ. ವಿಲ್ಲಾಗಳ ಬೆಲೆಗಳು ಪ್ರತಿ ವ್ಯಕ್ತಿಗೆ 45,000 ರಿಂದ 1.5 ಲಕ್ಷ ರೂ. ಎಂದು ತಿಳಿದುಬಂದಿದೆ.
ಸುನೀಲ್ ಷಾ ಅವರಿಗೆ ಪುರಾತನ ವಸ್ತುಗಳನ್ನು ಸಂಗ್ರಹಿಸುವುದೆಂದರೆ ಬಹಳ ಆಸಕ್ತಿ, ಅವರು ಸ್ಪೇನ್ ಮತ್ತು ಫ್ರಾನ್ಸ್‌ನಲ್ಲಿ ಹರಾಜಿನಿಂದ ಅನೇಕ ಬೆಲೆಬಾಳುವ ಪೋಸ್ಟರ್‌ಗಳನ್ನು ಪಡೆದಿದ್ದಾರೆ. ತಮ್ಮ ದ್ವೀಪದ ರೆಸಾರ್ಟ್ ಅನ್ನು ಅಲಂಕರಿಸಲು ತಮ್ಮ ಖಾಸಗಿ ಸಂಗ್ರಹಣೆಯಿಂದ ಹಲವಾರು ಬೆಲೆಬಾಳುವ ವಸ್ತುಗಳನ್ನು ಬಳಸಿಕೊಂಡಿದ್ದಾರೆ. ಈ ಐಶಾರಾಮಿ ದ್ವೀಪಕ್ಕೆ ಭೇಟಿ ನೀಡುವ ಅತಿಥಿಗಳು ಯುರೋಪ್, ರಷ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಪ್ರಪಂಚದಾದ್ಯಂತದ ಹೆಚ್ಚಿನ ಆಗರ್ಭ ಶ್ರೀಮಂತರೇ ಆಗಿದ್ದಾರೆ. ಜೊತೆಗೆ ಪ್ರಸಿದ್ಧ ವ್ಯಕ್ತಿಗಳೇ ಆಗಿದ್ದಾರೆ.