12,000 ಮೌಲ್ಯದ ಚರ್ಮದ ಚಪ್ಪಲಿ ಧರಿಸುವ ಆನೆ ಇವಳು
ಚಪ್ಪಲಿ ಎಂದ ಕೂಡಲೇ ನೂರು ರೂಪಾಯಿಂದ ಹಿಡಿದು ಲಕ್ಷದವರಿಗಿನ ಚಪ್ಪಲಿಗಳು ಚಾಲ್ತಿಯಲ್ಲಿವೆ. ದುಡ್ಡಿರುವ ಶ್ರೀಮಂತರು ತಮ್ಮ ಘನತೆಗೆ ತಕ್ಕಂತೆ ಬಹಳ ದುಬಾರಿಯ ಚಪ್ಪಲ್ ಧರಿಸುತ್ತಾರೆ. ಅದರಲ್ಲೂ ಸಿನಿಮಾ ತಾರೆಯರು ಫ್ಯಾಷನ್‌ಗೆ ತಕ್ಕಂತೆ ಧರಿಸುವ ಚಪ್ಪಲ್‌ಗಳು ಬಹಳ ದುಬಾರಿ.
ತಿರುನಲ್ವೇಲಿ: ಚಪ್ಪಲಿ ಎಂದ ಕೂಡಲೇ ನೂರು ರೂಪಾಯಿಂದ ಹಿಡಿದು ಲಕ್ಷದವರಿಗಿನ ಚಪ್ಪಲಿಗಳು ಚಾಲ್ತಿಯಲ್ಲಿವೆ. ದುಡ್ಡಿರುವ ಶ್ರೀಮಂತರು ತಮ್ಮ ಘನತೆಗೆ ತಕ್ಕಂತೆ ಬಹಳ ದುಬಾರಿಯ ಚಪ್ಪಲ್ ಧರಿಸುತ್ತಾರೆ. ಅದರಲ್ಲೂ ಸಿನಿಮಾ ತಾರೆಯರು ಫ್ಯಾಷನ್‌ಗೆ ತಕ್ಕಂತೆ ಧರಿಸುವ ಚಪ್ಪಲ್‌ಗಳು ಬಹಳ ದುಬಾರಿ. ಜನ ಸಾಮಾನ್ಯರಾದ ನಾವು ನೀವು ನಮ್ಮ ಅನುಕೂಲಕ್ಕೆ ತಕ್ಕಂತೆ ಚಪ್ಪಲಿ ಧರಿಸುತ್ತೇವೆ. ಆದರೆ ಆನೆಯೊಂದು ದುಬಾರಿ ಬೆಲೆಯ ಚಪ್ಪಲಿ ಧರಿಸಿದ್ದನ್ನು ನೋಡಿದ್ದೀರಾ? ಅಚ್ಚರಿ ಆದರೂ ಇದು ಸತ್ಯ. ತಮಿಳುನಾಡಿನಲ್ಲಿ ಆನೆಯೊಂದು ಬರೋಬರಿ 12,000 ರೂಪಾಯಿ ಮೌಲ್ಯದ ಚರ್ಮದ ಚಪ್ಪಲಿಗಳನ್ನು ಧರಿಸುವ ಮೂಲಕ ಸುದ್ದಿಯಾಗುತ್ತಿದೆ.
ತಮಿಳುನಾಡಿನ (Tamil Nadu) ತಿರುನೆಲ್ವೇಲಿ (Tirunelveli) ಜಿಲ್ಲೆಯ ನೆಲ್ಲೈಯಪ್ಪರ್ (Nellaiappar) ದೇವಸ್ಥಾನದ ಆನೆ ಗಾಂಧಿಮತಿಯೇ (Gandhimathi) ಹೀಗೆ ದುಬಾರಿ ಬೆಲೆಯ ಚಪ್ಪಲಿ ಧರಿಸಿ ಸುದ್ದಿಯಾದಾಕೆ. ದುಬಾರಿ ಚರ್ಮದ ಚಪ್ಪಲಿ ಧರಿಸುವ ಆನೆ ಗಾಂಧಿಮತಿ ನಿಮ್ಮೆಲ್ಲರಿಗಿಂತ ನಾನು ಯಾವುದರಲ್ಲಿ ಕಡಿಮೆ ಹೇಳಿ ಎಂದು ಅಣಕಿಸುವಂತಿದೆ ಆಕೆಯ ಸ್ಟೈಲಿಶ್ ಚಪ್ಪಲ್. ಆನೆಗೇಕೆ ಚಪ್ಪಲಿ ಎಂದು ನಿಮಗೆ ಅಚ್ಚರಿ ಆಗಬಹುದು.
ಗುರುವಾಯೂರ್ ದೇಗುಲದ 44 ಆನೆಗಳಿಗೆ ಬಾಸ್ ಆದ ಲೆಜುಮೋಲ್
ಆನೆ ಗಾಂಧಿಮತಿಯನ್ನು ದೇವಸ್ಥಾನದ (Temple) ಆವರಣದ ಸುತ್ತ ಸುಮಾರು ಐದು ಕಿಲೋಮೀಟರ್ ದೂರದವರೆಗೆ ಪ್ರತಿದಿನ ವಾಕಿಂಗ್‌ಗೆ ಕರೆದೊಯ್ಯಲಾಗುತ್ತದೆ. ಆದಾಗ್ಯೂ, ಹಳೆಯ ಆನೆಗಳು ರಸ್ತೆಗಳಲ್ಲಿ ನಡೆಯುವಾಗ ಜಾಗರೂಕರಾಗಿರಬೇಕು, ಏಕೆಂದರೆ ಅವುಗಳು ತಮ್ಮ ಪಾದಗಳನ್ನು ಭೇದಿಸಬಹುದಾದ ಕಲ್ಲುಗಳು ಮತ್ತು ಇತರ ಚೂಪಾದ ಕಲ್ಲುಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ, ಹಿಂದೂ ವರ್ತಕರ ಸಂಘ ಮತ್ತು ಭಕ್ತರು ಗಾಂಧಿಮತಿಗೆ ಒಂದು ಜೊತೆ ಚರ್ಮದ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. 12,000 ರೂಪಾಯಿ ವೆಚ್ಚದ ಚಪ್ಪಲಿಯನ್ನು ಆನೆಗಾಗಿ ಪ್ರತ್ಯೇಕವಾಗಿ ರಚಿಸಿ ದೇವಾಲಯದ ಅಧಿಕಾರಿಗಳಿಗೆ ನೀಡಿದ್ದಾರೆ.
ಗುರುವಾಯೂರ್ ದೇಗುಲದ 44 ಆನೆಗಳಿಗೆ ಬಾಸ್ ಆದ ಲೆಜುಮೋಲ್
ಹೀಗಾಗಿ ಭಕ್ತರು ಮತ್ತು ಸಂಘದ ಸಹಕಾರದಿಂದ 12,000 ರೂಪಾಯಿ ಮೌಲ್ಯದ ಹೊಸ ಚರ್ಮದ ಚಪ್ಪಲಿ ಗಾಂಧಿಮತಿಯ ಪಾದವನ್ನು ಅಲಂಕರಿಸಿದೆ. ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಸ್ವಾಮಿ ನೆಲ್ಲೈಯಪ್ಪರ್ ದೇಗುಲದಲ್ಲಿ ಆನೆ ಗಾಂಧಿಮತಿಯನ್ನು ನೋಡಬಹುದು. 52 ವರ್ಷ ವಯಸ್ಸಿನ ಈ ಆನೆಗೆ ದೇವಾಲಯದ ಆಡಳಿತವು ವಿಶೇಷ ಸೌಕರ್ಯಗಳನ್ನು ಒದಗಿಸುತ್ತದೆ. ಆನೆಯನ್ನು ವಾರ್ಷಿಕ ಪುನರ್ವಸತಿ ಶಿಬಿರಕ್ಕೆ ಸಾಂದರ್ಭಿಕವಾಗಿ ಸಾಗಿಸಲಾಗುತ್ತದೆ. ಅಲ್ಲಿ ಆನೆಯ ದೇಹದ ತೂಕ ಮತ್ತು ಸಾಮಾನ್ಯ ಯೋಗ ಕ್ಷೇಮವನ್ನು ಹೆಚ್ಚಿಸಲು ವೈದ್ಯಕೀಯ ವೃತ್ತಿಪರರ ಸಲಹೆಯ ಮೇರೆಗೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಚರ್ಮದ ಚಪ್ಪಲಿಗೆ ಚಪ್ಪಲಿಗಳಲ್ಲೇ ಹೆಚ್ಚಿನ ಘನತೆ ಇದೆ. ಹಿಂದೆಲ್ಲಾ ಚರ್ಮದ ಚಪ್ಪಲಿ ಧರಿಸುವವರು ಶ್ರೀಮಂತರು ಎಂಬ ಭಾವನೆ ಇತ್ತು. ದೇಗುಲದ ಆಡಳಿತ ಹಾಗೂ ಭಕ್ತರ ಸಹಕಾರದಿಂದ ಈಗ ಆನೆ ಗಾಂಧಿಮತಿ ಚರ್ಮದ ಚಪ್ಪಲ್ ಧರಿಸಿ ಘನ ಗಾಂಭೀರ್ಯದಿಂದ ನಡೆಯಲು ಶುರು ಮಾಡಿದ್ದಾಳೆ.
ಆನೆ ಸಾಕುವವರು ಆನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಸದಾ ಅವುಗಳ ಕಾಳಜಿ ಮಾಡುತ್ತಾರೆ. ಆನೆ ಮರಿಗಳು ನೋಡುವುದಕ್ಕೆನೋ ದೊಡ್ಡ ಗಾತ್ರದಲ್ಲಿ ಕಾಣಿಸಬಹುದು. ಆದರೆ ಹುಟ್ಟುವಾಗ 100 ಕೆಜಿಗೂ ಹೆಚ್ಚು ತೂಗುವ ಈ ಆನೆ ಮರಿಗಳು ಇತರ ಪ್ರಾಣಿಗಳ ಮರಿಗಳಂತೆ ನೋಡಲು ತುಂಬಾ ಮುದ್ದಾಗಿರುತ್ತವೆ. ಜೊತೆಗೆ ಆಟವಾಡಲು ತುಂಬಾ ಇಷ್ಟಪಡುತ್ತವೆ. ತಮ್ಮನ್ನು ಮುದ್ದಿಸುವುದನ್ನು ಅವುಗಳು ಬಹುವಾಗಿ ಇಷ್ಟಪಡುತ್ತವೆ. ಆನೆ ಸಾಕುವವರು ಆನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಸದಾ ಅವುಗಳ ಕಾಳಜಿ ಮಾಡುತ್ತಾರೆ. ಹಾಗೆಯೇ ಇಲ್ಲೊಂದು ಆನೆ ಮರಿ ತನ್ನ ನೋಡಿಕೊಳ್ಳುವವನ ಮೇಲೆ ಬಿದ್ದು ಮುದ್ದಾಟ ಆಡುತ್ತಿದ್ದು, ಅದರ ವಿಡಿಯೋ ವೈರಲ್ ಆಗಿದೆ.