ನಿಶಾಂತ ಕಮ್ಮರಡಿ

ಇಂಥ ಟೈಮ್‌ನಲ್ಲಿ ಯೆಲ್ಲೋ ಯೆಲ್ಲೋ ಡರ್ಟಿ ಫೆಲೋ, ಬಫೆಲೋ ಅಂತೆಲ್ಲ ಹಳೇ ರೈಮ್ಸ್‌ ಉದುರಿಸಿ ಹುಳ್ಳ ಹುಳ್ಳನೆ ನಗೋ ಹಾಗಿಲ್ಲ. ಯೆಲ್ಲೋ ಯೆಲ್ಲೋ ಸ್ಮಾರ್ಟ್‌ ಫೆಲೋ ಅನ್ನಲೇ ಬೇಕು, ಏಕೆಂದರೆ ಅದೇ ಈ ಹೊತ್ತಿನ ಸತ್ಯ. ಸ್ಯಾಂಡಲ್‌ವುಡ್‌, ಬಾಲಿವುಡ್‌ ಬಿಂಕದ ಬೆಡಗಿಯರೆಲ್ಲ ಯೆಲ್ಲೋಗೆ ಹೆಲೋ ಅಂತಿದ್ದಾರೆ.

ಫ್ಯಾಶನ್‌ ಅಂದ್ರೆ ಆರ್ಟಿಫಿಷಿಯಲ್‌ ಅಂತ ತಪ್ಪು ತಿಳಿದುಕೊಂಡಿದ್ದಾರೆ ಬಹಳ ಜನ. ಸಹಜತೆಗೆ ಹತ್ರ ಇದ್ದಷ್ಟುಆಪ್ತವಾಗುತ್ತೆ ನಮ್ಮ ಉಡುಗೆ. ಈ ಗುಟ್ಟು ಫ್ಯಾಶನ್‌ ಪಂಟರಿಗೂ ತಿಳಿಯದ್ದೇನಲ್ಲ. ನಮಗೆ ಆಪ್ತವೆನಿಸೋದನ್ನೇ ಹೊಸ ಬಗೆಯಲ್ಲಿ ನಮಗವರು ಕೊಡುತ್ತಾರೆ. ಸದ್ಯಕ್ಕೀಗ ಫ್ಯಾಶನ್‌ ಲೋಕ ಹಳದಿಯ ಚುಂಗು ಹಿಡಿದು ಹೊರಟಿದೆ.

ಹೆಂಗಳೆಯರ ಮನ ಸೆಳೆಯುತ್ತಿದೆ ಟ್ರೆಂಡಿ ಟ್ರೆಂಡಿ ಕುರ್ತಾಗಳು!

ಸನೂನ್‌ ಎಂಬ ಹಳದಿ ಚಿಟ್ಟೆ

ಸದ್ಯಕ್ಕೀಗ ‘ಮಿಮಿ’ ಸಿನಿಮಾದಲ್ಲಿ ಬ್ಯುಸಿ ಕೃತಿ ಸನೂನ್‌. ಅದರ ನಡುವೆಯೂ ಒಂಚೂರು ಬಿಡುವು ಮಾಡಿಕೊಂಡು ಹಳದಿ ಚಿಟ್ಟೆಯಾಗಿ ಹಾರಿ ಬಂದು ಅಭಿಮಾನಿಗಳಿಗೆ ಕಚಗುಳಿ ಇಟ್ಟಿದ್ದಾಳೆ. ವಾರದ ಮಧ್ಯೆ ಕೆಲಸಗಳಲ್ಲಿ ಹೈರಾಣಾಗಿ ಈ ವೀಕೆಂಡ್‌ ಯಾವಾಗಾದ್ರೂ ಬರುತ್ತೋ ಅಂತ ಒಂದು ಜಗತ್ತು ಗೊಣಗುಟ್ಟುತ್ತಿದ್ದ ಹೊತ್ತಿಗೇ ಬಟರ್‌ಫ್ಲೈ ಸೀರೆಯಲ್ಲಿ ಮಿಣ್ಣಗೆ ನಡೆದುಬಂದಳು ಈ ಸುಂದರಿ. ಅವಳುಟ್ಟದ್ದು ಸಂಪೂರ್ಣ ಹಳದಿ ಸೀರೆ. ಅಂಚಿಗೆ ಪುಟ್ಟಪುಟ್ಟಗೊಂಡೆಯಂಥಾ ಡಿಸೈನ್‌. ಇಡೀ ಸೀರೆಯನ್ನು, ಅವಳ ನಿಲುವನ್ನು ಚಿಟ್ಟೆಯಾಗಿಸಿದ್ದು ಆ ಬ್ಲೌಸ್‌. ಕೋಲ್ಡ್‌ ಶೋಲ್ಡರ್‌ ಬ್ಲೌಸ್‌ ಅದು. ಹಿಂದೆ ರಾಜಕುಮಾರಿಯರು ತೊಡುತ್ತಿದ್ದ ಮಾದರಿಯ ಕಂಚುಕಕ್ಕೆ ತೋಳನ್ನು ಸಪರೇಟ್‌ ಆಗಿ ಜೋಡಿಸಿದಂಥಾ ಬಟರ್‌ಫ್ಲೈ ವಿನ್ಯಾಸ. ಸಖತ್‌ ಬೋಲ್ಡ್‌ನೆಸ್‌ ತಂದು ಕೊಡುವ ಸ್ಟೈಲ್‌. ಡಿಸೈನರ್‌ ಮನೀಷ್‌ ಮಲ್ಹೋತ್ರಾ ಆಸ್ಥೆಯಿಂದ ಮಾಡಿರೋ ಡಿಸೈನ್‌. ನಡುವೆ ಒಂದು ಎಂಬ್ರಾಯಿಡರಿ ಇರುವ ಬೆಲ್ಟ್‌ ಇದೆ. ಹಸಿರು- ಗೋಲ್ಡನ್‌ ಕಲರ್‌ ಚೋಕರ್‌ ಚೆಲುವೆಯ ಕೊರಳಿಗೆ ‘ಮಣಿ’ದಿದೆ.

ದೀಪಿಕಾ ತೊಟ್ಟಯೆಲ್ಲೋ ಸಾರಿ

ಮೊನ್ನೆ ‘ಚಪಕ್‌’ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು ದೀಪಿಕಾ. ಎಷ್ಟೋ ದಿನ ಆ ಪಾತ್ರದೊಳಗೇ ಜೀವಿಸಿದ್ದಕ್ಕೋ ಏನೋ ಆಕೆಯ ಕಣ್ತುಂಬಿ ಬಂದಿತ್ತು. ಇಂಥಾ ಎಮೋಶನಲ್‌ ಹುಡುಗಿಗೆ ಒಂದು ಬೋಲ್ಡ್‌ ಲುಕ್ಕೂ ಇದೆ. ತುಂಡು ಲಂಗವೋ, ತೇಪೆ ಜೀನ್ಸೋ ಧರಿಸಿ ಬೋಲ್ಡ್‌ ಆಗಿದ್ದಲ್ಲ. ಸಾಂಪ್ರದಾಯಿಕ ಅನಿಸುವ ಸೀರೆಯಿಂದ ಬಂದ ಲುಕ್‌ ಅದು. ಈ ಡ್ಯಾಶಿಂಗ್‌ ಸ್ಟೈಲ್‌ನಲ್ಲಿ ಹಳದಿಯದು ಪ್ರಧಾನ ಪಾತ್ರ. ಔಟ್‌ ಆ್ಯಂಡ್‌ ಔಟ್‌ ಯೆಲ್ಲೋ ಸೀರೆಯಲ್ಲೊಂದು ಚಿಟ್ಟೆ. ಈ ಚಿಟ್ಟೆಕೊರಳನ್ನು ಆತು ಕುಳಿತು ಇಳಿಬಿದ್ದಂತಿದೆ. ದೀಪಿಕಾ ಉಟ್ಟಿರೋದು ಟ್ರೆಂಡಿ ರಫೆಲ್‌ ಸೀರೆ. ಅಂಚಿನಲ್ಲಿ ಸಿದ್ಧ ನೆರಿಗೆ ಇದೆ. ಈ ಸೀರೆಗೆ ಹೇಳಿ ಮಾಡಿಸಿದಂಥಾ ಗೋಲ್ಡನ್‌ ಬೆಲ್ಟ್‌ ಆಕೆಯ ನಡುವನ್ನು ಬಂಧಿಸಿದೆ. ಸೀರೆಯ ಅಂದ ಹೆಚ್ಚಿಸಿದ್ದು ಬ್ಲೌಸ್‌. ಅದೂ ಚಿಟ್ಟೆಯ ರೆಕ್ಕೆಯಂತೆ ಅಗಲವಾಗಿ ಹರಡಿಕೊಂಡಿರೋದು ವಿಶೇಷ. ಬಟರ್‌ಫ್ಲೈ ಫುಲ್‌ ಸ್ಲೀವ್‌್ಸ ಬ್ಲೌಸ್‌ ಇದು. ದೀಪಿಕಾ ತೊಟ್ಟಯಿಯರ್‌ ರಿಂಗ್‌ ಮಜಬೂತು. ಈ ಗೋಲ್ಡನ್‌ ಕಲರ್‌ ಹೆವ್ವಿ ಯಿಯರ್‌ರಿಂಗ್‌ನಲ್ಲಿ ಬುಡಕಟ್ಟು ಜನರ ಜನಪದೀಯ ಡಿಸೈನ್‌ ಇದೆ.

ಹೀಗೆಲ್ಲಾ ಮಾಡಿದ್ರೆ ವಯಸ್ಸಾದಂತೆ ಕಾಣ್ತೀರಿ #BeCareful

 

 
 
 
 
 
 
 
 
 
 
 
 
 

keep your face to the sun and you will never see the shadows...💫

A post shared by Deepika Padukone (@deepikapadukone) on May 26, 2019 at 4:23am PDT

ರಚಿತಾ ರಾಮ್‌ ಹಳದಿ ಮಿಂಚು

ಸ್ಯಾಂಡಲ್‌ವುಡ್‌ನ ಅನಭಿಷಿಕ್ತ ರಾಣಿಯಂತಿರುವ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ತೆಲುಗಿಗೂ ಹಾಯ್‌ ಅಂತಿದ್ದಾರೆ. ಇಂಥಾ ಟೈಮ್‌ನಲ್ಲಿ ರಚಿತಾ ಹಳದಿ ಔಟ್‌ಫಿಟ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಇದು ಸೀರೆಯಿಂದ ಪ್ರಭಾವಿತವಾಗಿ ಹುಟ್ಟಿಕೊಂಡಿರುವ ಗೌನ್‌. ಕಡು ಹಳದಿ ಸಂಪಿಗೆ ಬಣ್ಣದ ಈ ಗೌನ್‌ನ ಒಂದು ಬದಿಯಲ್ಲಿ ಸೀರೆಯಲ್ಲಿ ಬರುವ ರೀತಿಯ ನೆರಿಗೆಗಳು ಸೆರಗಿನ ವಿನ್ಯಾಸ ಇದೆ. ಕಂಪ್ಲೀಟ್‌ ಹಳದಿ ಬಣ್ಣದಲ್ಲಿರುವ ಈ ಉಡುಗೆಯಲ್ಲಿ ಉದ್ದ ತೋಳಿನ ಡಿಸೈನ್‌. ತುದಿಯಲ್ಲಿ ಸಿಂಪಲ್‌ ವರ್ಕ್. ಅಷ್ಟೇ, ಮತ್ಯಾವ ಇತರ ಡಿಸೈನ್‌ಗಳೂ ಇಲ್ಲ. ಆದರೆ ಇಷ್ಟರಲ್ಲೇ ಎಲಿಗೆಂಟ್‌ ಲುಕ್‌ ಬಂದಿದೆ ಈ ಡ್ರೆಸ್‌ಗೆ.

 

ಚಳಿಗಾಲದಲ್ಲಿ ಹಳದಿಗೆ ಜೈ

- ಹಳದಿ ಸದ್ಯಕ್ಕೆ ಸೀಸನಲ್‌ ಟ್ರೆಂಡ್‌. ಇದರಲ್ಲಿ ಅನೇಕ ಶೇಡ್‌ಗಳಿವೆ. ನಿಮ್ಮ ಬಣ್ಣ, ನಿಲುವನ್ನು ನೋಡಿ ಡ್ರೆಸ್‌ ಸೆಲೆಕ್ಟ್ ಮಾಡಿ. ಕಪ್ಪು, ಎಣ್ಣೆಗಪ್ಪು, ಕಂದು ಬಣ್ಣದ ಚರ್ಮದವರಿಗೆ ಈ ಬಣ್ಣ ಸಖತ್‌ ಬೋಲ್ಡ್‌ನೆಸ್‌ ತಂದುಕೊಡುತ್ತೆ.

ಮದುಮಗಳ ಅಂದ ಹೆಚ್ಚಿಸುವ ಚಂದದ ಉಡುಗೆಗಳಿವು! .

- ಹೆವ್ವಿ ಯಿಯರ್‌ರಿಂಗ್‌ ಚೆಂದ.

- ಕಿವಿಯೋಲೆ ಹಾಕಲ್ಲ ಅಂತಿರೋರು ಭರ್ಜರಿ ಚೋಕರ್‌ ಟ್ರೈ ಮಾಡಿ.

- ಪ್ಲೇನ್‌ ಹಳದಿ ಸೀರೆಯಾದರೆ ಅದಕ್ಕೊಂದು ಬೆಲ್ಟ್‌ ಹಾಕೋದು ಮರೀಬೇಡಿ.