Asianet Suvarna News Asianet Suvarna News

Beauty Tips: ಹಳೇ ಚಪಾತಿ ಆರೋಗ್ಯಕ್ಕೂ ಒಳ್ಳೇದಂತೆ, ಸೌಂದರ್ಯವನ್ನೂ ಹೆಚ್ಚಿಸುತ್ತಂತೆ!

ಮುಖದ ಸೌಂದರ್ಯ ಹೆಚ್ಚು ಮಹತ್ವ ಪಡೆಯುತ್ತದೆ. ಹೊಳೆಯುವ ತ್ವಚೆಗಾಗಿ ಎಲ್ಲರೂ ನಾನಾ ಪ್ರಯತ್ನ ನಡೆಸ್ತಾರೆ. ಕೆಮಿಕಲ್ ಮಿಶ್ರಿತ ಬ್ಯೂಟಿ ಪ್ರಾಡಕ್ಟ್ ಬಳಸುವ ಬದಲು ಮನೆ ಮದ್ದು ಅಂದ ಹೆಚ್ಚಿಸಲು ಒಳ್ಳೆಯದು. ಮನೆಯಲ್ಲಿ ಚಪಾತಿ ಮಿಕ್ಕಿದ್ರೆ ಅದನ್ನೂ ನೀವು ಬಳಸಬಹುದು. 
 

Beauty Tips Stale Chapati Face pack For Glowing Skin
Author
First Published Mar 16, 2023, 2:35 PM IST

ಎಲ್ಲರ ಮುಂದೆ ಸುಂದರವಾಗಿ ಕಾಣ್ಬೇಕು, ಕನ್ನಡಿ ಮುಂದೆ ನಿಂತಾಗ ಮತ್ತೆ ಮತ್ತೆ ನೋಡಿಕೊಳ್ಳುವಷ್ಟು ಅಂದರವಾಗಿರಬೇಕೆಂಬುದು ಪ್ರತಿಯೊಬ್ಬ ಹುಡುಗಿ ಬಯಕೆ. ಮುಖದ ಮೇಲೆ ಸಣ್ಣ ಗುಳ್ಳೆಯಾದ್ರೂ ಟೆನ್ಷನ್ ಜಾಸ್ತಿಯಾಗುತ್ತದೆ. ಒಂದು ಕಲೆಯಾದ್ರೂ ಆಕೆ ಮನೆ ಮದ್ದಿನಿಂದ ಹಿಡಿದು ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಸೌಂದರ್ಯ ವರ್ದಕ ಬಳಸಿ ಕಲೆ ತೆಗೆಯುವ ಪ್ರಯತ್ನ ಮಾಡ್ತಾಳೆ.

ಸದಾ ಫ್ರೆಶ್ (Fresh) ಆಗಿ ಕಾಣ್ಬೇಕು, ಹೊಳೆಯುವ ಚರ್ಮ (Skin), ಕೆಂಗುಲಾಬಿ ತುಟಿ, ಕಾಮನ ಬಿಲ್ಲಿನಂತ ಹುಬ್ಬು ಹೊಂದಬೇಕು ಎಂಬುದು ಆಕೆ ಪ್ರತಿ ದಿನ ಕಾಣುವ ಕನಸು. ತ್ವಚೆಯನ್ನು ಅಂದವಾಗಿಸಲು ಮಹಿಳೆ ಕಡಲೆ ಹಿಟ್ಟಿನಿಂದ ಮುಲ್ತಾನ್ ಮಿಟ್ಟಿವರೆಗೆ ಎಲ್ಲವನ್ನೂ ಬಳಸ್ತಾಳೆ. ಈವೆಲ್ಲವನ್ನೂ ಬಳಸಿಯಾಗಿದೆ, ಇನ್ನೇನು ಹೊಸದಿದೆ ಅಂತಾ ನೀವು ಹುಡುಕ್ತಿದ್ದರೆ ಮನೆಯಲ್ಲಿ ಮಾಡಿದ ಚಪಾತಿ (Chapati) ಯಿದೆ ಎಂಬುದನ್ನು ಮರೆಯಬೇಡಿ.
ಹೌದು, ಸಾಮಾನ್ಯವಾಗಿ ನಾವು ಚಪಾತಿ ಮಿಕ್ಕಿದ್ರೆ ಅದನ್ನು ಕಸಕ್ಕೆ ಎಸೆಯುತ್ತೇವೆ. ಇಲ್ಲವೆ ಮನೆಯಲ್ಲಿರುವ ಅಥವಾ ಬೀದಿಯ ಪ್ರಾಣಿಗೆ ನೀಡ್ತೇವೆ. ಇನ್ಮುಂದೆ ಚಪಾತಿ ಹೆಚ್ಚಿದ್ರೆ ಅದನ್ನು ಎಸಿಯೋಕೆ ಹೋಗ್ಬೇಡಿ. ಅದ್ರಿಂದ ಫೇಸ್ ಪ್ಯಾಕ್ (Face Pack) ಮಾಡ್ಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ. ಆಗ್ನೇಯ ಏಷ್ಯಾದ ಅನೇಕ ಸೌಂದರ್ಯ ಬ್ಲಾಗರ್‌ಗಳು ಕೂಡ ಹಿಂದಿನ ದಿನದ ಚಪಾತಿಯನ್ನು ಫೇಸ್ ಪ್ಯಾಕ್ ಮಾಡಿದ್ರೆ ಏನು ಲಾಭ ಎಂಬುದನ್ನು ಹೇಳಿದ್ದಾರೆ.

BEAUTY TIPS : ಶಾಹೀದ್ ಪತ್ನಿ ಮೀರಾ ರಜಪೂತ್ ಇಷ್ಟು ಚೆಂದ ಕಾಣೋಕೆ ಕಾರಣ ಏನು ಗೊತ್ತಾ?

ಹಿಂದಿನ ದಿನದ ಚಪಾತಿಯಿಂದ ಸೌಂದರ್ಯ ವೃದ್ಧಿ : ಮೊಡವೆ, ಕಪ್ಪು ಕಲೆಗಳು, ಸುಕ್ಕುಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಬ್ಯೂಟಿ (Beauty) ಬ್ಲಾಗರ್‌ಗಳು ಹೇಳಿಕೊಂಡಿದ್ದಾರೆ. ರೊಟ್ಟಿ ಫೇಸ್ ಪ್ಯಾಕ್‌ಗಳ ಹಲವಾರು ಪೋಸ್ಟ್ ಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಚಪಾತಿ ಪೇಸ್ ಪ್ಯಾಕ್ ತ್ವಚೆಯನ್ನು ತೇವಗೊಳಿಸುತ್ತದೆ ಮತ್ತು ಪೋಷಿಸುತ್ತದೆ. ಹಳೆಯ ಚಪಾತಿ ಫೇಸ್ ಪ್ಯಾಕ್ ತ್ವಚೆಯನ್ನು ಬಿಸಿಲಿನಿಂದ ರಕ್ಷಿಸುತ್ತದೆ. 

ಹಳೆಯ ಚಪಾತಿ ಫೇಸ್ ಪ್ಯಾಕ್ ಮಾಡೋದು ಹೇಗೆ? :

ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಗ್ರಿಗಳು : 
ಹಳೆಯ ಚಪಾತಿ – 2 ಪೀಸ್  
ಮೊಸರು - 2 ಚಮಚ 
ಜೇನುತುಪ್ಪ - 2 ಟೀಸ್ಪೂನ್
ನಿಂಬೆ - 1 ಟೀಚಮಚ

ಯಪ್ಪಾ..ಮಹಿಳೆಯರ ಒಳ ಉಡುಪಿನ ಜಾಹೀರಾತಿಗೆ ಪುರುಷರು!

ಫೇಸ್ ಪ್ಯಾಕ್ ಮಾಡುವ ವಿಧಾನ : ಮೊದಲು ಹಳೆಯ ಚಪಾತಿಯನ್ನು ರುಬ್ಬಿ (Grind) ಪುಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಮೊಸರು, ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ನಂತರ ಮತ್ತೊಮ್ಮೆ ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ನಂತ್ರ ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ನೀವು ವಾರದಲ್ಲಿ ಎರಡು ದಿನ ಹಚ್ಚಬಹುದು. ಎರಡರಿಂದ  ಮೂರು ಬಾರಿ ಈ ಫೇಸ್ ಪ್ಯಾಕ್ ಬಳಸಿದ ನಂತರ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಇದ್ರಿಂದ ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲ.
ನಿನ್ನೆ ಮಾಡಿದ ಚಪಾತಿ ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ. ಆದ್ರೆ ಅದನ್ನು ಮುಖಕ್ಕೆ ಹಚ್ಚಿದ್ರೆ ಸೌಂದರ್ಯ ವೃದ್ಧಿಯಾಗುತ್ತದೆ. ಈ ಚಪಾತಿಯಲ್ಲಿ ಜೀವಸತ್ವಗಳು (Vitamin) ಮತ್ತು ಖನಿಜಗಳಿರುತ್ತವೆ. ಇದು ಚರ್ಮವನ್ನು ಟೋನ್ ಮಾಡಲು ಸಹಕಾರಿ. ಹಾಗೆಯೇ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದ್ರಲ್ಲಿರುವ ನೈಸರ್ಗಿಕ ಲ್ಯಾಕ್ಟಿಕ್ ಆಮ್ಲವು ನಮ್ಮ ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ.

Follow Us:
Download App:
  • android
  • ios