Beauty Tips : ಶಾಹೀದ್ ಪತ್ನಿ ಮೀರಾ ರಜಪೂತ್ ಇಷ್ಟು ಚೆಂದ ಕಾಣೋಕೆ ಕಾರಣ ಏನು ಗೊತ್ತಾ?
ಬಾಲಿವುಡ್ ಸ್ಟಾರ್ಸ್ ಜೊತೆ ಅವರ ಪತ್ನಿಯರು ಕೂಡ ಗಮನ ಸೆಳೆಯುತ್ತಾರೆ. ಮನೆಯಲ್ಲಿದ್ರೂ ಅವರು ತಮ್ಮ ಸೌಂದರ್ಯವನ್ನು ನಿರ್ಲಕ್ಷ್ಯ ಮಾಡೋದಿಲ್ಲ. ಅದ್ರಲ್ಲಿ ಮೀರಾ ರಜಪೂತ್ ಕೂಡ ಒಬ್ಬರು. ತಮ್ಮ ಸೌಂದರ್ಯ ಹೆಚ್ಚಿಸಲು ಮೀರಾ ಸಿಂಪಲ್ ಟಿಪ್ಸ್ ಫಾಲೋ ಮಾಡ್ತಾರೆ.
ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಯಾರಿಗೆ ತಿಳಿದಿಲ್ಲ ಹೇಳಿ?. ತನ್ನ ಸುಂದರ ನೋಟದಿಂದಲೇ ಲಕ್ಷಾಂತರ ಜನರ ಹೃದಯ ಗೆದ್ದ ಬೆಡಗಿ. ಮೀರಾ ರಜಪೂತ್ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳದೆ ಹೋದ್ರೂ ಬಾಲಿವುಡ್ ಬೆಡಗಿಯರನ್ನು ನಾಚಿಸುವ ಸೌಂದರ್ಯ ಹೊಂದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮೀರಾ, ಆಗಾಗ ಶಾಹಿದ್ ಕಪೂರ್ ಜೊತೆ ಕಾಣಿಸಿಕೊಳ್ತಿರುತ್ತಾರೆ.
ಎರಡು ಮಕ್ಕಳ ತಾಯಿಯಾಗಿರುವ ಮೀರಾ (Meera), ಬಳಕುವ ಬಳ್ಳಿ. ಫಿಟ್ನೆಸ್ ಗೆ ಮೀರಾ ಹೆಚ್ಚು ಮಹತ್ವ ನೀಡ್ತಾರೆ. ಮೀರಾ ಇಷ್ಟು ಚೆನ್ನಾಗಿರಲು ಕಾರಣವೇನು? ಅವರ ಬ್ಯೂಟಿ ಟಿಪ್ಸ್ (Beauty Tips) ಏನು ಅನ್ನೋದನ್ನು ನಾವಿಂದು ಹೇಳ್ತೇವೆ. ಸ್ಟಾರ್ಸ್ ಪತ್ನಿಯರೆಂದ್ರೆ ಬ್ಯೂಟಿಪಾರ್ಲರ್ (Beautyparlor) ಮೊರೆ ಹೋಗ್ತಾರೆ, ಒಂದಿಷ್ಟು ಮೇಕಪ್ ಮಾಡಿಕೊಳ್ತಾರೆ ಎನ್ನುವ ಕಲ್ಪನೆ ಅನೇಕರಿಗಿದೆ. ಆದ್ರೆ ಮೀರಾ, ಬ್ಯೂಟಿ ಪ್ರಾಡಕ್ಟ್ ಗಿಂತ ಮನೆ ಮದ್ದಿಗೆ ಹೆಚ್ಚು ಆದ್ಯತೆ ನೀಡ್ತಾರೆ.
ಬಾಲಿವುಡ್ ಸ್ಟಾರ್ಸ್ ಮಂಗಳಸೂತ್ರದ ಬೆಲೆ ಗೊತ್ತಾ?
ಜೇನುತುಪ್ಪ (Honey) ಮತ್ತು ಅರಿಶಿನದ ಫೇಸ್ ಪ್ಯಾಕ್ (Face Pack) : ಮೀರಾ ಜೇನುತುಪ್ಪ ಹಾಗೂ ಅರಿಶಿನ ಬೆರೆಸಿದ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಹಚ್ಚಿಕೊಳ್ತಾರೆ. ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ, ಫೇಸ್ ಪ್ಯಾಕ್ ಸಿದ್ದಪಡಿಸಲಾಗುತ್ತದೆ. ಈ ಫೇಸ್ ಫ್ಯಾಕ್ ತ್ವರಿತವಾಗಿ ಮುಖಕ್ಕೆ ಹೊಳಪು ನೀಡುತ್ತದೆ ಎಂದು ಅವರು ಹೇಳ್ತಾರೆ.
ಮೊಸರು – ಕಡಲೆ (Curd and basin) ಹಿಟ್ಟಿನ ಫೇಸ್ ಪ್ಯಾಕ್ : ಮೀರಾ ರಜಪೂತ್ ವಾರಕ್ಕೊಮ್ಮೆ ಮೊಸರು ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕನ್ನು ಮುಖಕ್ಕೆ ಹಚ್ಚಿಕೊಳ್ತಾರೆ. ಇದ್ರಿಂದ ಅವರ ಮುಖ ಹೊಳೆಯುವ ಜೊತೆಗೆ ಚರ್ಮ ಬಿಗಿಯಾಗಿ ಸುಕ್ಕನ್ನು ತಡೆಯುತ್ತದೆ.
ತುಳಸಿ ನೀರು : ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ, ಆ ನೀರಿನಿಂದ ಅವರು ಮುಖವನ್ನು ತೊಳೆಯುತ್ತಾರೆ. ಇದು ಮುಖವನ್ನು ಮೊಡವೆಗಳಿಂದ ರಕ್ಷಿಸುತ್ತದೆ.
ಯಪ್ಪಾ..ಮಹಿಳೆಯರ ಒಳ ಉಡುಪಿನ ಜಾಹೀರಾತಿಗೆ ಪುರುಷರು!
ಕೂದಲಿನ ಆರೈಕೆ (Hair Care) ಹೀಗೆ ಮಾಡ್ತಾರೆ ಮೀರಾ : ಮೀರಾ ರಜಪೂತ್ ತಮ್ಮ ತ್ವಚೆಯ ಜೊತೆಗೆ ತಮ್ಮ ಕೂದಲಿನ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಮನೆಯಲ್ಲಿಯೇ ಕೂದಲಿನ ಆರೋಗ್ಯ ಕಾಪಾಡುವ ಎಣ್ಣೆ ತಯಾರಿಸುತ್ತಾರೆ. ತೆಂಗಿನ ಎಣ್ಣೆಗೆ, ಮೆಂತ್ಯ, ಕರಿಬೇವಿನ ಸೊಪ್ಪು, ನೆಲ್ಲಿಕಾಯಿ ಪುಡಿ, ಬ್ರಾಹ್ಮಿ ಮತ್ತು ಬೇವಿನ ಪುಡಿ ಮತ್ತು ದಾಸವಾಳದ ಹೂವುಗಳನ್ನು ಹಾಕಿ ಚೆನ್ನಾಗಿ ಕುದಿಸಿ ಎಣ್ಣೆ ತಯಾರಿಸುತ್ತಾರೆ. ಅದನ್ನು ಕೂದಲಿಗೆ ಹಚ್ಚಿ, ಮಸಾಜ್ ಮಾಡಿಕೊಳ್ತಾರೆ.
ಹಸಿ ಹಾಲಿನ ಬಳಕೆ : ಮೀರಾ ರಜಪೂತ್ ಹಸಿ ಹಾಲನ್ನು ತಮ್ಮ ಚರ್ಮದ ಮೇಲೆ ಟೋನರ್ ಆಗಿ ಅನ್ವಯಿಸುತ್ತಾರೆ. ಹತ್ತಿಯನ್ನು ಹಸಿ ಹಾಲಿನಲ್ಲಿ ಅದ್ದಿ, ಅದನ್ನು ಮುಖಕ್ಕೆ ಹಚ್ಚುತ್ತಾರೆ.
ಕಿತ್ತಳೆ ಸಿಪ್ಪೆಯ ಪ್ಯಾಕ್ (Orange Peel) : ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಲು ಮೀರಾ ರಜಪೂತ್ ಆರೆಂಜ್ ಪೀಲ್ ಪ್ಯಾಕ್ ಅನ್ನು ಬಳಸುತ್ತಾರೆ.
ನಿಂಬೆ ಹಣ್ಣಿನಲ್ಲಿದೆ (Lemon) ಸೌಂದರ್ಯ : ಮೀರಾ ರಜಪೂತ್ ತಮ್ಮ ವಯಸ್ಸನ್ನು ಮರೆಮಾಚಲು ನಿಂಬೆಹಣ್ಣಿನ ಬಳಕೆ ಮಾಡ್ತಾರೆ. ನಿಂಬೆ ಹಣ್ಣಿನಲ್ಲಿ ತಮ್ಮ ಮುಖವನ್ನು ಮಸಾಜ್ ಮಾಡುತ್ತಾರೆ. ನಿಂಬೆಹಣ್ಣನ್ನು ಕತ್ತರಿಸಿ, ಅದನ್ನು ಹಗುರವಾದ ಕೈಗಳಿಂದ ಅವಳ ಮುಖದ ಮೇಲೆ ಉಜ್ಜುತ್ತಾರೆ.
ಮುಲ್ತಾನಿ ಮಿಟ್ಟಿ : ಮುಲ್ತಾನಿ ಮಿಟ್ಟಿ ಪ್ರಯೋಜನದ ಬಗ್ಗೆ ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಮೀರಾ ರಜಪೂತ್ ಸೌಂದರ್ಯದ ಗುಟ್ಟಿನಲ್ಲೂ ಮುಲ್ತಾನಿ ಮಿಟ್ಟಿ ಅಡಗಿದೆ. ಮುಖದ ಮೇಲಿನ ಎಣ್ಣೆಯನ್ನು ನಿಯಂತ್ರಿಸಲು ಅವರು ವಾರಕ್ಕೊಮ್ಮೆ ಮುಲ್ತಾನಿ ಮಿಟ್ಟಿ ಹಚ್ಚುತ್ತಾರೆ. ಪಪ್ಪಾಯಿ ಹಣ್ಣನ್ನು ಹಿಸುಕಿ ಅದಕ್ಕೆ ಹಸಿ ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚುತ್ತಾರೆ.