Asianet Suvarna News Asianet Suvarna News

ತಿನ್ನೋದೊಂದೆ ಅಲ್ಲ ಮುಖಕ್ಕೂ ಹಚ್ಕೊಂಡ್ ನೋಡಿ ಚಾಕೊಲೇಟ್

ಊಟವಾದ್ಮೇಲೆ ಒಂದು ಚಾಕೊಲೇಟ್ ಬಾಯಿಗೆ ಹೋದ್ರೆ ಅದೇನೋ ಖುಷಿ. ಇನ್ಮುಂದೆ ಒಂದು ಚಾಕೋಲೇಟ್ ಬಾಯಿಗೆ ಹಾಕಿ ಇನ್ನೊಂದನ್ನು ಮುಖಕ್ಕೆ ಹಚ್ಕೊಳ್ಳಿ.  ಮನಸ್ಸು ಫ್ರೆಶ್ ಆಗುತ್ತೆ, ಚರ್ಮ ಹೊಳೆಯುತ್ತೆ.  
 

Beauty Tips Chocolate Enhances glowing skin roo
Author
First Published Jan 19, 2024, 3:57 PM IST | Last Updated Jan 19, 2024, 3:57 PM IST

ಎಲ್ಲರಿಗೂ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಇರುತ್ತೆ. ಫಿಟ್ ನೆಸ್ ಕಾಪಾಡಿಕೊಳ್ಳಲು ಹಾಗೂ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೀಮ್, ಲೋಶನ್, ಫೇಸ್ ಪ್ಯಾಕ್, ಫೇಶಿಯಲ್ ಮುಂತಾದ ಅನೇಕ ಮಾರ್ಗಗಳನ್ನು ಜನರು ಕಂಡುಕೊಂಡಿದ್ದಾರೆ. ಇನ್ಕೆಲವರು ಮನೆಯಲ್ಲೇ ಇರುವ ಸೌಂದರ್ಯವರ್ಧಕಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ.

ನಮ್ಮ ಸುತ್ತಲೇ ಇರುವ ನಾವು ಪ್ರತಿದಿನ ಉಪಯೋಗಿಸುವ ಆಹಾರಗಳೇ ಸೌಂದರ್ಯ (Beauty) ವರ್ಧಕಗಳಾಗಿರುತ್ತವೆ. ಆದರೆ ಅವುಗಳ ಬಗ್ಗೆ ನಮಗೆ ಸರಿಯಾದ ಅರಿವು ಇರೋದಿಲ್ಲ. ಅಂತಹ ಸೌಂದರ್ಯವರ್ಧಕಗಳ ಪೈಕಿ ಚಾಕೊಲೇಟ್ (Chocolate) ಕೂಡ ಒಂದು. ಮಕ್ಕಳಷ್ಟೇ ಅಲ್ಲದೇ ದೊಡ್ಡವರೂ ಚಾಕೊಲೇಟ್ ಇಷ್ಟಪಡ್ತಾರೆ. ಈಗ ನಾನಾ ಬಗೆಯ ಚಾಕೊಲೇಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ.  

ಸೌಂದರ್ಯಕ್ಕಾಗಿ ಈ ವೀರ್ಯ ಬಳಸ್ತಿದ್ದಾರೆ ಮಹಿಳೆಯರು!

ಚಾಕೊಲೇಟ್ ಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಜಿಂಕ್, ಪೊಟಾಸಿಯಂ ಸೇರಿದಂತೆ ಅನೇಕ ಆರೋಗ್ಯಕರ ಅಂಶಗಳಿರುತ್ತವೆ. ಚಾಕೊಲೇಟ್ ನಲ್ಲು ಮಿತವಾಗಿ ತಿಂದ್ರೆ ಅದು ಆರೋಗ್ಯ ವೃದ್ಧಿಸುವ ಕೆಲಸ ಮಾಡುತ್ತದೆ.

ಕೆಲವರು ಮೂಡ್ (Mood) ಫ್ರೆಶ್ ಆಗಲು ಚಾಕೊಲೇಟ್ ತಿಂತಾರೆ. ಗರ್ಭಿಣಿಯರು ಚಾಕೊಲೇಟ್ ತಿನ್ನೋದ್ರಿಂದ ಮಗುವಿನ ಆರೋಗ್ಯ ಚೆನ್ನಾಗಿರುತ್ತೆ ಎನ್ನಲಾಗುತ್ತದೆ. ಹೀಗೆ ಆರೋಗ್ಯವನ್ನು ವೃದ್ಧಿಪಡಿಸುವ ಚಾಕೊಲೇಟ್ ಗಳಲ್ಲಿ ಡಾರ್ಕ್ ಚಾಕೊಲೇಟ್ ಮೊದಲ ಸ್ಥಾನದಲ್ಲಿದೆ. ನೀವು ಇನ್ಮುಂದೆ ಬರಿ ಚಾಕೋಲೇಟ್ ತಿನ್ಬೇಡಿ. ಅದನ್ನು ಮುಖಕ್ಕೂ ಅನ್ವಯಿಸಿಕೊಳ್ಳಿ. ಡಾರ್ಕ್ ಚಾಕೊಲೇಟ್ ಆರೋಗ್ಯದ ಜೊತೆಗೆ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಚರ್ಮದ ಹೊಳಪನ್ನು ಹೆಚ್ಚಿಸುತ್ತೆ ಡಾರ್ಕ್ ಚಾಕೊಲೇಟ್ :  ಡಾರ್ಕ್ ಚಾಕೊಲೇಟಿನಲ್ಲಿ ಎಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಕಂಡುಬರುತ್ತವೆ. ಇವು ಫ್ರೀ ರೆಡಿಕಲ್ಸ್ ವಿರುದ್ಧ ಹೋರಾಡಿ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಚರ್ಮಕ್ಕೆ ವಿಶೇಷ ಹೊಳಪನ್ನು ನೀಡುತ್ತದೆ. ಎಂಟಿ ಆಕ್ಸಿಡೆಂಟ್ ಗಳು ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿ, ಚರ್ಮದ ಕೋಶಗಳನ್ನು ರಕ್ಷಿಸುತ್ತವೆ. ಈ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಡಾರ್ಕ್ ಚಾಕಲೇಟಿನಲ್ಲಿ ಕೆಫೀನ್ ಮತ್ತು ಥಿಯೋಬ್ರೋಮಿನ್ ಎಂಬ ಸಂಯುಕ್ತಗಳು ಕಂಡುಬರುತ್ತವೆ. ಇದರಿಂದ ಚರ್ಮದ ಸುಕ್ಕುಗಳು ಕಡಿಮೆಯಾಗುತ್ತವೆ.

ಡ್ರೈ ಸ್ಕಿನ್ ಗೆ ಬೆಸ್ಟ್ ಡಾರ್ಕ್ ಚಾಕೊಲೇಟ್ : ಕೆಲವು ಮಂದಿ ಡ್ರೈ ಸ್ಕಿನ್ ಸಮಸ್ಯೆಯನ್ನು ಹೊಂದಿರುತ್ತಾರೆ. ಒಣತ್ವಚೆಯ ಸಮಸ್ಯೆಯನ್ನು ಹೊಂದಿರುವವರು ಚರ್ಮ ಹೆಚ್ಚು ನಾಜೂಕಾಗಿರುತ್ತದೆ. ಇಂತವರಿಗೆ ಹೆಚ್ಚು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಲಾಗುವುದಿಲ್ಲ. ಅಂತವರು ಚಾಕೊಲೇಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಡ್ರೈ ಸ್ಕಿನ್ ಸಮಸ್ಯೆಯನ್ನು ನಿವಾರಣೆಯಾಗುತ್ತದೆ ಇದರಿಂದ ಚರ್ಮ ಒಣಗದೆ ತೇವವಾಗಿರುತ್ತದೆ. ಚಾಕೊಲೇಟ್ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಚಾಕೊಲೇಟ್ ನಲ್ಲಿರುವ ಕೆಫೀನ್ ಅಂಶ ಚರ್ಮವನ್ನು ಬಿಗಿಯಾಗಿಸುತ್ತದೆ ಹಾಗೂ ಮೃದುವಾಗಿಸುತ್ತದೆ.

ಮೊಡವೆ ಸಮಸ್ಯೆಗೂ ಡಾರ್ಕ್ ಚಾಕೊಲೇಟ್ ಬಳಸಿ : ಕಲುಷಿತ ವಾತಾವರಣ  ಹಾಗೂ ಕೆಲವು ಬ್ಯೂಟಿ ಪ್ರೊಡಕ್ಟ್ ಗಳ ಬಳಕೆಯಿಂದ ಇಂದು ಅನೇಕ ಮಂದಿ ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಈಗಿನ ಯುವತಿಯರಲ್ಲಿ ಮೊಡವೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಮೊಡವೆ ಸಮಸ್ಯೆಯನ್ನು ಹೊಂದಿರುವವರಿಗೆ ಡಾರ್ಕ್ ಚಾಕೊಲೇಟ್ ವರದಾನವಾಗಿದೆ. ಇದರಲ್ಲಿರುವ ಎಂಟಿ ಆಕ್ಸಿಂಡೆಂಟ್ ಮತ್ತು ಫ್ಲೇವನೈಡ್ ಗಳು ಚರ್ಮದ ಕೋಶಗಳು ಹಾನಿಗೊಳಗಾಗುವುದನ್ನು ತಪ್ಪಿಸುತ್ತವೆ ಮತ್ತು ಮೊಡವೆಗಳನ್ನು ಹೋಗಲಾಡಿಸುತ್ತವೆ. ಡಾರ್ಕ್ ಚಾಕೊಲೇಟಿನಲ್ಲಿರುವ ಕೆಫೀನ್ ಮತ್ತು ಥಿಯೋಬ್ರೋಮಿನ್ ನಂತಹ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಆಗಿರಿಸುತ್ತವೆ. 

ತೂಕ ಇಳಿಕೆ ಸರ್ಜರಿ ನಂತ್ರ ಇನ್ಸ್ಟಾ ಪ್ರಭಾವಿತೆಗೆ ಹೃದಯಾಘಾತ! ಸಾವಿಗೆ ಕಾರಣವಾಯ್ತಾ ಸೋರಿಯಾಸಿಸ್ ?

ನೀವು ಇಷ್ಟಪಟ್ಟು ತಿನ್ನುವ, ಸ್ವಲ್ಪ ಕಹಿಯಾಗಿರುವ ಡಾರ್ಕ್ ಚಾಕೊಲೇಟ್ ಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಕೂಡ ಬಹಳ ಸುಲಭವಾದ್ದರಿಂದ ಇದನ್ನು ಸೌಂದರ್ಯವರ್ಧಕವಾಗಿ ಬಳಸಬಹುದು.

Latest Videos
Follow Us:
Download App:
  • android
  • ios