ಸೌಂದರ್ಯ ಸ್ಪರ್ಧೆಗಳಲ್ಲಿ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಸ್ಪರ್ಧೆಯ ವಿಜೇತರು ಪೂರ್ವ ನಿರ್ಧಾರಿತವಾಗಿರಬಹುದು. ಸ್ಪರ್ಧೆಯಲ್ಲಿ ಹಲವು ಸುತ್ತುಗಳಿದ್ದು, ಉಡುಗೆಗಳಿಂದ ಬಿಕಿನಿಯವರೆಗೆ ಧರಿಸಲಾಗುತ್ತದೆ. ಸ್ಪರ್ಧಿಗಳ ಜಾಣ್ಮೆಗಿಂತ ದೇಹದ ಆಕಾರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇತ್ತೀಚೆಗೆ, ಸ್ಪರ್ಧಿಯೊಬ್ಬಳು ತನ್ನ ಉಡುಪಿನ ಬಗ್ಗೆ ಮುಜುಗರವಿಲ್ಲದೆ ಉತ್ತರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಕೆಯ ಧೈರ್ಯವನ್ನು ಕೆಲವರು ಮೆಚ್ಚಿದ್ದಾರೆ, ಮತ್ತೆ ಕೆಲವರು ಪ್ರಶ್ನಿಸಿದ್ದಾರೆ.

ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶಗಳು ಎಲ್ಲ ರೂಪದರ್ಶಿಯರಿಗೂ ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಲಾಗುತ್ತದೆ. ಹಲವು ರಿಯಾಲಿಟಿ ಷೋಗಳ ರೀತಿಯಲ್ಲಿಯೇ ಈ ಸೌಂದರ್ಯ ಸ್ಪರ್ಧೆಯ ವಿನ್ನರ್​ ಕೂಡ ಪೂರ್ವ ನಿಗದಿಯಾಗಿಯೇ ಇರುತ್ತದೆ ಎನ್ನುವುದು ಈಗೇನು ಗುಟ್ಟಾಗಿ ಉಳಿದಿಲ್ಲ. ಇದರ ಹೊರತಾಗಿಯೂ ಹಲವಾರು ರೌಂಡ್ಸ್​ಗಳಲ್ಲಿ ಸ್ಪರ್ಧೆ ಏರ್ಪಡುತ್ತದೆ. ಫುಲ್​ ಡ್ರೆಸ್​ನಿಂದ ಹಿಡಿದು, ಬಿಕಿನಿವರೆಗೂ ಅವರಿಗೆ ತೊಡಿಸಲಾಗುತ್ತದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಅವರ ಬಾಡಿ ಅಷ್ಟೇ ಅಲ್ಲದೇ ಅವರ ಜಾಣ್ಮೆಯನ್ನೂ ನೋಡಲಾಗುತ್ತದೆ ಎಂದು ಹೇಳಲಾಗುತ್ತದೆಯಾದರೂ, ಅವರ ಬಾಡಿ ಷೇಪ್​ ನೋಡುವುದಕ್ಕಾಗಿ ಬಿಕಿನಿ ಕಡ್ಡಾಯವಾಗಿ ಹಾಕಿಸಲಾಗುತ್ತದೆ.

ಹೀಗೆ ಹಲವಾರು ಸುತ್ತುಗಳು ನಡೆದು ಕೊನೆಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಪ್ರಶ್ನೆಗಳಿಗೆ ಸುಂದರಿಯರು ಹೇಗೆ ಉತ್ತರ ಕೊಡುತ್ತಾರೆ, ಅವರು ಎಷ್ಟು ಕಾನ್​ಫಿಡೆಂಟ್​ ಆಗಿರುತ್ತಾರೆ ಎನ್ನುವುದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತೀರ್ಪುಗಾರರು ಹೇಳಿರುತ್ತಾರೆ. ಅದೇ ರೀತಿ ಒಂದು ಬ್ಯೂಟಿ ಸ್ಪರ್ಧೆಯ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ತೀರ್ಪುಗಾರರು, ನಿಮ್ಮ ಈ ದಿನದ ಒಂದು ಸೀಕ್ರೇಟ್​ ಹೇಳಿ ಎಂದು ಪ್ರಶ್ನಿಸಿದ್ದಾರೆ. ಅದು ನಿಮಗೆ ಮುಜುಗರ ಆಗಿದ್ದರೆ ಹೇಳಬಹುದು ಎಂದಿದ್ದಾರೆ.

ಬ್ರೆಡ್​-ಮೊಟ್ಟೆ ತಿಂದು ₹ 83 ಲಕ್ಷ ಉಳಿಸಿದ್ಲಂತೆ, ₹ 11 ಕೋಟಿ ಗುರಿ! ಈಕೆ ದಿನಚರಿ ಕೇಳಿ ಸುಸ್ತಾದ ನೆಟ್ಟಿಗರು

ಅದಕ್ಕೆ ಇಲ್ಲಿರುವ ಸುಂದ್ರಿ, ನನಗೇನೂ ಮುಜುಗರ ಆಗುವುದಿಲ್ಲ. ಆದರೆ ಇಲ್ಲಿರುವ ನನ್ನ ಅಪ್ಪ-ಅಮ್ಮನಿಗೆ ಮುಜುಗರ ಆದರೂ ಆಗಬಹುದು ಎನ್ನುತ್ತಲೇ, ಈ ನನ್ನ ಸುಂದರ ಕಾಸ್ಟ್ಯೂಮ್​ ಎಲ್ಲಿಯದ್ದು ಎಂದು ಹೇಳುತ್ತಲೇ ಈ ಕಾಸ್ಟ್ಯೂಮ್​ ಒಳಗೆ ಮಾತ್ರ ನಾನು ಅಂಡರ್​ವೇರ್​ ಹಾಕಿಲ್ಲ ಎಂದಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಅಲ್ಲಿ ನೆರೆದವರು ಜೋರಾಗಿ ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ. ಹಿಂದೆ ನಿಂತ ಉಳಿದ ಸುಂದರಿಯರು ಮತ್ತು ತೀರ್ಪುಗಾರರು ಸುಸ್ತಾಗಿದ್ದಾರೆ.

ಒಟ್ಟಿನಲ್ಲಿ ಈ ವಿಡಿಯೋಗೆ ಇದೀಗ ಸಹಸ್ರಾರು ಕಮೆಂಟ್ಸ್​ ಸುರಿಮಳೆಯಾಗಿದೆ. ಅದೇ ರೂಪದರ್ಶಿಗೆ ಇದೇ ಪ್ರಶ್ನೆ ಕೇಳಿದ್ದ ಉದ್ದೇಶವೇನು, ಅಂದರೆ ಮೊದಲೇ ತೀರ್ಪುಗಾರರಿಗೆ ಇದು ಗೊತ್ತಿತ್ತಾ ಎಂದೆಲ್ಲಾ ಕೆಲವರು ಪ್ರಶ್ನೆ ಮಾಡಿದ್ದರೆ, ಮತ್ತೆ ಕೆಲವರು ಅಂಡರ್​ವೇರ್​ ಇಲ್ಲದ ಸುಂದರಿ ಎಂದಿದ್ದಾರೆ. ಇನ್ನು ಕೆಲವರು ಇವಳು ಅಂಡರ್​ವೇರ್​ ಹಾಕಲಿ, ಬಿಡಲಿ ಆ ಸತ್ಯವನ್ನು ಧೈರ್ಯದಿಂದ ಹೇಳಿರುವುದಕ್ಕೆ ಮೆಚ್ಚಿಕೊಳ್ಳಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಈ ಸುಂದರಿಯ ಅಂಡರ್​ವೇರ್​ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಈಕೆಯ ಕಾಸ್ಟ್ಯೂಮ್​ ಡಿಸೈನರ್​ ಅಂಡರ್​ವೇರ್​ ಮರೆತದ್ದು ಯಾಕೆ ಎನ್ನುವ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ. ಒಟ್ಟಿನಲ್ಲಿ ಬ್ಯೂಟಿ ಸ್ಪರ್ಧೆಯಲ್ಲಿ ಈ ಸುಂದರಿ ಈಗ ಸದ್ಯ ಹೈಲೈಟ್​ ಆಗುತ್ತಿದ್ದಾಳೆ. 

ಜಾಹೀರಾತಿಗೆ ಮರುಳಾಗಿ ಅಪಾಯಕಾರಿ ಗೋಧಿಹಿಟ್ಟು ತರಬೇಡಿ! ಶುದ್ಧತೆ ಪರೀಕ್ಷೆಯ ಸಿಂಪಲ್​ ವಿಡಿಯೋ ಇಲ್ಲಿದೆ ನೋಡಿ..

View post on Instagram