24 ವರ್ಷದ ಮಿಯಾ ಮೆಕ್‌ಗ್ರಾತ್ ಬ್ರೆಡ್, ಮೊಟ್ಟೆ ತಿಂದು 83 ಲಕ್ಷ ರೂ ಉಳಿಸಿದ್ದಾಳೆ. 40 ವರ್ಷಕ್ಕೆ 11 ಕೋಟಿ ರೂ ಗಳಿಸುವ ಗುರಿ ಹೊಂದಿದ್ದಾಳೆ. ಆರ್ಥಿಕ ಶಿಸ್ತು, ಉಳಿತಾಯ ಅಭ್ಯಾಸಗಳ ಬಗ್ಗೆ ಆಕೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದೆ. ಆದರೆ ಭಾರತೀಯರು ಈ ರೀತಿ ಮಾಡುವುದು ಬೇಡ, ಇದು ಆರೋಗ್ಯಕ್ಕೆ ಹಾನಿಕರ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಹಣ ಉಳಿಸಲು ಹಲವಾರು ಮಾರ್ಗಗಳನ್ನು ಜನರು ಯೋಚಿಸುತ್ತಿರುತ್ತಾರೆ. ಊಟ-ತಿಂಡಿ-ನಿದ್ದೆ ಬಿಟ್ಟಾದರೂ ಹಣ ಗಳಿಸುವವರು ಇದ್ದರೆ, ಮತ್ತ ಕೆಲವರಿಗೆ ತುತ್ತು ಊಟಕ್ಕಾಗಿಯಾದರೂ ಹಣ ಉಳಿಸುವುದು ಅನಿವಾರ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ 24 ವರ್ಷದ ಯುವತಿ ಹೆಚ್ಚು ಹಣ ಮಾಡುವ ಆಸೆಯಿಂದ ಕೆಲವು ವರ್ಷಗಳಿಂದ ಬರೀ ಬ್ರೆಡ್ಡು, ಮೊಟ್ಟೆ ತಿಂದುಕೊಂಡು ಬದುಕಿದ್ದಾಳಂತೆ. ಇದರಿಂದ ಅವಳು ಇದಾಗಲೇ 83 ಲಕ್ಷ ರೂಪಾಯಿ ಉಳಿಸಿದ್ದಾಳಂತೆ. ಅವಳಿಗೆ 40 ವರ್ಷ ಆಗುವುದರೊಳಗೆ 11 ಕೋಟಿಯನ್ನು ಉಳಿಸುವ ಇರಾದೆ ಇದೆಯಂತೆ!
24 ವರ್ಷ ವಯಸ್ಸಿನ ಮಿಯಾ ಮೆಕ್‌ಗ್ರಾತ್ ಈಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಆಕರ್ಷಕ ಫ್ಯಾಷನ್ ಉದ್ಯಮದಲ್ಲಿ ಉದ್ಯೋಗದಲ್ಲಿರುವ ಮಿಯಾ, ತನ್ನ ಆರ್ಥಿಕ ಗುರಿಯತ್ತ ಬದ್ಧತೆ ತೋರಿಸುತ್ತಿರುವುದಾಗಿ ಹೇಳಲಾಗುತ್ತಿದೆ. ತಮ್ಮ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸಲು ಬಯಸುವ ಯಾರಿಗಾದರೂ ಇದು ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ಈಕೆಯ ಆರ್ಥಿಕ ಜೀವನಶೈಲಿ ಮತ್ತು ಕಾರ್ಯತಂತ್ರದ ಉಳಿತಾಯ ಅಭ್ಯಾಸಗಳು ಆರ್ಥಿಕ ಶಿಸ್ತಿನ ಶಕ್ತಿ ಮತ್ತು ದೀರ್ಘಕಾಲೀನ ಆರ್ಥಿಕ ಭದ್ರತೆಯನ್ನು ಸಾಧಿಸುವ ಸಾಮರ್ಥ್ಯವನ್ನು ತೋರಿಸುತ್ತವೆ ಎಂದೆಲ್ಲಾ ಈ ಪೋಸ್ಟ್ನಲ್ಲಿ ಹೊಗಳಾಗಿದೆ.
ಜಾಹೀರಾತಿಗೆ ಮರುಳಾಗಿ ಅಪಾಯಕಾರಿ ಗೋಧಿಹಿಟ್ಟು ತರಬೇಡಿ! ಶುದ್ಧತೆ ಪರೀಕ್ಷೆಯ ಸಿಂಪಲ್ ವಿಡಿಯೋ ಇಲ್ಲಿದೆ ನೋಡಿ..
ಆದರೆ ಭಾರತೀಯರು ಈ ರೀತಿ ಮಾಡುವ ದುಸ್ಸಾಹಸಕ್ಕೆ ಇಳಿಯುವುದು ಬೇಡ ಎನ್ನಿಸುತ್ತದೆ. ಅಷ್ಟಕ್ಕೂ ಬ್ರೆಡ್ಡು, ಬನ್ನು ನಮ್ಮ ಭಾರತೀಯ ಆಹಾರ ಅಲ್ಲವೇ ಅಲ್ಲ. ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಭಾರತದಲ್ಲಿ ಸಿಗುವಷ್ಟು ಪೌಷ್ಠಿಕಾಂಶದ ತಾಜಾ ಆಹಾರಗಳು ಸಿಗದ ಹಿನ್ನೆಲೆಯಲ್ಲಿ, ರೋಗಿಗಳಿಗೆ ಬ್ರೆಡ್ಡು, ಬಿಸ್ಕತ್ತು, ಬನ್ನು ನೀಡಲಾಗುತ್ತದೆ. ಆದರೆ ವಿದೇಶಿ ಸಂಸ್ಕೃತಿಗೆ ಮರುಳಾಗುವ ಭಾರತೀಯರು ಅಲ್ಲಿ ಮಾಡಿದ್ದೇ ಸರಿ ಎಂದುಕೊಂಡು ಇಲ್ಲಿ ಕೂಡ ಬ್ರೆಡ್ಡು, ಬನ್ನು ನೀಡುತ್ತಿದ್ದೇವೆ. ಆದರೆ ಈ ಬಗ್ಗೆ ಇದಾಗಲೇ ಹಲವಾರು ಆರೋಗ್ಯ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರಲ್ಲಿ ಇರುವ ಮೈದಾ ನಮ್ಮ ಭಾರತೀಯರ ದೇಹಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ ಎನ್ನುವ ಎಚ್ಚರಿಕೆಗಳ ಹೊರತಾಗಿಯೂ ವಿದೇಶಿಗರು ಮಾಡಿದ್ದೇ ನಮಗೆ ಚೆನ್ನ ಆಗಿದೆ. ಆದ್ದರಿಂದ ಇವಳು ಹಣ ಉಳಿಸಲು ಇಂಥ ಸಾಹಸ ಮಾಡಿದ್ದಾಳೆಂದು ನಾವು ಭಾರತೀಯರು ಮಾಡಲು ಹೋದರೆ ಉಳಿಸಿದ ಹಣ ಆಸ್ಪತ್ರೆಗೆ ಸಾಕಾಗುತ್ತದೆ ಎಂದೂ ಕೆಲವು ಕಮೆಂಟಿಗರು ಬರೆದಿರುವುದನ್ನು ನೋಡಬಹುದು.
ಇನ್ನು ಈ ಯುವತಿಯ ಬಗ್ಗೆ ಹೇಳುವುದಾದರೆ, ಸೋಷಿಯಲ್ ಮೀಡಿಯಾದಲ್ಲಿ ಈಕೆಯ ಬಗ್ಗೆ ಹಾಡಿ ಹೊಗಳಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆರ್ಥಿಕವಾಗಿ ಸದೃಢಳಾಗಳು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾಳೆ. ಖರ್ಚು ಮಾಡುವುದಕ್ಕಿಂತ ಉಳಿತಾಯವನ್ನು ಈಕೆ ಆರಿಸಿಕೊಂಡಿರುವುದು ಗ್ರೇಟ್ ಎಂದಿದ್ದಾರೆ. ಅಗ್ಗದ ಮೊಟ್ಟೆ ಮತ್ತು ಬ್ರೆಡ್ ಅನ್ನು ಉಪಾಹಾರವಾಗಿ ಬಳಸುವ ಮೂಲಕ ಎಲ್ಲರಿಗೂ ಮಾದರಿಯಾಗುತ್ತಿದ್ದಾಳೆ ಎನ್ನಲಾಗಿದೆ. ಇಷ್ಟೇ ಅಲ್ಲದೇ ಹಣ ಉಳಿಸಲು ಈಕೆ, ತನ್ನದೇ ಆದ ಕಾಫಿಯನ್ನು ತಯಾರಿಸಿಕೊಳ್ಳುತ್ತಾಳಂತೆ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಲು ನೀರಿನ ಬಾಟಲಿಯನ್ನು ಇಟ್ಟುಕೊಳ್ಳುತ್ತಾಳಂತೆ. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಆರಿಸಿಕೊಳ್ಳಲು ಅವಳು ಬಜೆಟ್ ಸ್ನೇಹಿ ಸೌಂದರ್ಯವರ್ಧಕಗಳು ಮತ್ತು ಬಟ್ಟೆಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡುತ್ತಾಳಂತೆ ಹೀಗೆ ಈಕೆಯ ಗುಣಗಾನ ಮಾಡಲಾಗಿದೆ. 40 ನೇ ವಯಸ್ಸಿಗೆ ಮನೆ ಖರೀದಿಸಲು 11 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯತ್ತ ಈಕೆ ಸಾಗಿದ್ದು, ಇಂಥ ಟಿಪ್ಸ್ ನಮಗೆ ನೀಡಬೇಡಿಯಪ್ಪ ಎನ್ನುತ್ತಿದ್ದಾರೆ ಭಾರತದ ನೆಟ್ಟಿಗರು!
ಬೇಳೆ ಬೇಯಿಸುವಾಗ ಬರುವ ನೊರೆ ಎಷ್ಟು ಡೇಂಜರ್ ಎನ್ನುವುದು ಗೊತ್ತಾ? ಸೇವಿಸಿದ್ರೆ ಏನಾಗುತ್ತೆ ನೋಡಿ!
