Indian politicians luxury lifestyle: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಪ್ರಮಾಣ ವಚನದ ಲುಕ್‌ನಿಂದ ಹಿಡಿದು ಪ್ರಧಾನಿ ಮೋದಿಯವರ ವಾಚ್‌ವರೆಗೆ ಸದ್ದು ಮಾಡುತ್ತಿರುವ ನಮ್ಮ ನಾಯಕರ ನ್ಯೂ ಏಜ್ ಫ್ಯಾಷನ್ ಟ್ರೆಂಡ್ ಇಲ್ಲಿದೆ.
ಕೋಟಿ ಕೋಟಿ ಇದ್ದರೂ ಬಡವರ ಜೊತೆ ಬಡವನಾಗಿ ನಾನೂ ಹೀಗೆ ಅಂತ ಮನ ಗೆಲ್ಲಬೇಕು ಅನ್ನೋ ರಾಜಕಾರಣಿಗಳಿಗೇನು ಕೊರತೆ ಇಲ್ಲ. ಬಡವರು ಬಡವರಾಗೇ ಇರಬೇಕಿಲ್ಲ.. ಬಟ್ಟೆ ಲೈಫ್ ಸ್ಟೈಲ್ ಅನ್ನೋದು ನಮ್ಮನ್ನು ನಾವು ರೂಪಿಸಿಕೊಳ್ಳುವ ಬಗೆ ಅನ್ನೋ ನಿಟ್ಟಿನಿಲ್ಲ ಹಲವು ರಾಜಕಾರಣಿಗಳು ಬದಲವಾಣೆಯ ಘಟ್ಟ ದಾಟಿದ್ದಾರೆ. ಇವತ್ತು ಆಸ್ಪಿರೇಷನಲ್ ಯೂಥ್‌ನ ಟೇಸ್ಟ್ ಗೆ ತಕ್ಕಹಾಗೆಯೇ ತಾವೂ ಅಷ್ಟೇ ಟ್ರೆಂಡಿಯಾಗಿ ಮಿಂಚುತ್ತಿದ್ದಾರೆ. ಇನ್ ಫ್ಯಾಕ್ಟ್ ನಾವು ತೊಡುವ ಬಟ್ಟೆ, ನಾವು ಕಟ್ಟೋ ವಾಚು, ನಾವೂ ತಿನ್ನೋ ಆಹಾರ ಇನ್ನೊಬ್ಬರ ಮೆಚ್ಚುಗೆಗೆ ಇರಬೇಕಿಲ್ಲ. ಆದ್ರೆ ಅದನ್ನ ಎಷ್ಟು ಕಾರುವಕ್ಕಾಗಿ ಮಾಡುತ್ತೇವೆಯೋ ಅಷ್ಟೇ ನಮಗೆ ನಾವು ಇಂಪ್ರೆಸ್ಸಿವ್ ಆಗಿ ಕಾಣುತ್ತೇವೆ.
ಅದೇ ನಿಟ್ಟಿನಲ್ಲಿ ಇಂದು ನಮ್ಮ ರಾಜಕಾರಣಿಗಳೂ ಬದಲಾಗಿದ್ದಾರೆ. ಅದು ನಮ್ಮ ಪ್ರಧಾನ ಮಂತ್ರಿಗಳಿಂದ ಹಿಡಿದು ಮುಖ್ಯ ಮಂತ್ರಿಗಳ ತನಕ, ಅತ್ಯುನ್ನತ ಹುದ್ದೆಯಿಂದ ಕಚೇರಿ ಸಹಾಯಕನ ತನಕ ಟೇಸ್ಟ್ ಬದಲಾಗುತ್ತಿದೆ. ಟೇಸ್ಟ್‌ಗೆ ತಕ್ಕಂತೆ ಟ್ರೆಂಡ್ ಕೂಡ ರೂಪಗೊಳಳುತ್ತಿದ್ದೆ. ಇದಕ್ಕೆ ಆ ಪಕ್ಷ ಈ ಪಕ್ಷ ಅಂತಿಲ್ಲ. ಇಲ್ಲಿ ಎಲ್ಲರೂ ಒಂದೇ ಪಕ್ಷ. ಅದು ಟ್ರೆಂಡ್, ಫ್ಯಾಷನ್ ಮತ್ತು ಪ್ಯಾಷನ್ ಅನ್ನೋ ಪಕ್ಷ.
ಈ ವಿಚಾರ ಈಗ ಇಂಟರೆಸ್ಟಿಂಗ್ ಚರ್ಚೆಗೆ ಕಾರಣವಾಗುತ್ತಿರೋದಕ್ಕೆ ಕಾರಣ ಈಗಷ್ಟೇ ಮುಖ್ಯಂತ್ರಿಗಳಾಗಿರುವ ಡಿ.ಕೆ ಶಿವಕುಮಾರ್. ಅವರು ಪ್ರಮಾಣ ವಚನ ಸ್ವೀಕರಿಸುವಾಗ ಧರಿಸಿದ್ದ ಬಟ್ಟೆ ಹಾಗೂ ತ್ರಿವರ್ಣ ಸ್ಕಾರ್ಫ್‌ಗೆ ಸ್ವತಃ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿಯವರೇ ಬೆಕ್ಕಸ ಬೆರಗಾದ ದೃಶ್ಯ ವೈರಲ್ ಆಗ್ತಿದೆ.
ಹಾಗಿದ್ರೆ ಈ ನ್ಯೂ ಏಜ್ ಫ್ಯಾಶನ್ ಟ್ರೆಂಡ್‌ನಲ್ಲಿ ಇತ್ತೀಚೆಗೆ ಗಮನ ಸೆಳೆದ ರಾಜಕಾರಣಿಗಳತ್ತ ಒಂದು ಗಮನ ಹರಿಸೋದಾದ್ರೆ..!
ಮೋದಿಯವರ 'ಮೊವಾಡೊ' ವಾಚ್
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಫ್ಯಾಷನ್ ಸೆನ್ಸ್ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧ. ಇವರು ಬಳಸುವ ಜರ್ಮನಿ ಮೂಲದ 'ಮೊಂಟ್ ಬ್ಲಾಂಕ್' ಬ್ರಾಂಡ್‌ನ ಪೆನ್ ಬೆಲೆ ಸುಮಾರು ₹1.3 ಲಕ್ಷ ಎನ್ನಲಾಗುತ್ತದೆ. ಹಾಗೆಯೇ ಇಟಾಲಿಯನ್ ಐಷಾರಾಮಿ ಬ್ರಾಂಡ್ 'ಬುಲ್ಗರಿ'ಯ ಸನ್‌ಗ್ಲಾಸ್‌ಗಳ ಬೆಲೆ ₹30,000 to ₹40,000 ರಷ್ಟಿದೆ. ಸ್ವಿಟ್ಜರ್‌ಲ್ಯಾಂಡ್ ಮೂಲದ ಮೊವಾಡೊ ಕೈಗಡಿಯಾರದ ಬೆಲೆ ಸುಮಾರು ₹40,000 ದಿಂದ ₹1.5 ಲಕ್ಷ. 2015ರಲ್ಲಿ ಒಬಾಮಾ ಭಾರತಕ್ಕೆ ಬಂದಾಗ ಮೋದಿ ಧರಿಸಿದ್ದ, ಅವರದ್ದೇ ಹೆಸರು (Narendra Damodardas Modi) ಪ್ರಿಂಟ್ ಆಗಿದ್ದ ಸೂಟ್ ಬರೋಬ್ಬರಿ ₹4.31 ಕೋಟಿಗೆ ಹರಾಜಾಗಿ ಗಿನ್ನಿಸ್ ದಾಖಲೆ ಬರೆದಿತ್ತು.

ರಾಹುಲ್ 'ಕ್ವಿಲ್ಟೆಡ್' ಜಾಕೆಟ್
ಸಿಂಪಲ್ ಟಿ-ಶರ್ಟ್ ಮತ್ತು ಜೀನ್ಸ್ ಧರಿಸುವಂತೆ ಕಂಡರೂ, ರಾಹುಲ್ ಗಾಂಧಿ ಅವರ ವಾರ್ಡ್‌ರೋಬ್‌ನಲ್ಲಿ ಅತ್ಯಂತ ದುಬಾರಿ ಜಾಗತಿಕ ಬ್ರಾಂಡ್‌ಗಳಿವೆ. 'ಭಾರತ್ ಜೋಡೋ ಯಾತ್ರೆ'ಯ ಸಂದರ್ಭದಲ್ಲಿ ಅವರು ಧರಿಸಿದ್ದ ಬಿಳಿ ಬಣ್ಣದ 'ಬರಬೆರಿ' ಬ್ರಾಂಡ್‌ನ ಟಿ-ಶರ್ಟ್ ಭಾರಿ ವಿವಾದ ಸೃಷ್ಟಿಸಿತ್ತು. ಅದರ ಬೆಲೆ ಸುಮಾರು ₹41,000 ಕ್ಕೂ ಅಧಿಕವಾಗಿತ್ತು. ಈ ಹಿಂದೆ ಮೇಘಾಲಯದ ಪ್ರವಾಸದಲ್ಲಿದ್ದಾಗ ಅವರು ಧರಿಸಿದ್ದ ಕಪ್ಪು ಬಣ್ಣದ ಬ್ರಾಂಡೆಡ್ ಕ್ವಿಲ್ಟೆಡ್ ಜಾಕೆಟ್ ಬೆಲೆ ಸುಮಾರು ₹70,000 ಆಗಿತ್ತು.

ಖರ್ಗೆಯವರ ‘ಲೂಯಿ ವಿಟಾನ್ ಮೊನೊಗ್ರಾಮ್ ಕಾರ್ಡಿಫ್’ ಸ್ಕಾರ್ಫ್
ಇನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಧರಿಸಿದ್ದ ‘ಲೂಯಿ ವಿಟಾನ್ ಮೊನೊಗ್ರಾಮ್ ಕಾರ್ಡಿಫ್’ ಸ್ಕಾರ್ಫ್ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕುತ್ತಿಗೆಗೆ ಹಾಕಿಕೊಳ್ಳುವ ಆ ಒಂದು ಸಿಂಪಲ್ ಸ್ಕಾರ್ಫ್‌ನ ಬೆಲೆ ಬರೋಬ್ಬರಿ ₹56,000 ಆಗಿತ್ತು.
ಡಿ.ಕೆ. ಶಿವಕುಮಾರ್ ಅವರ ಕಾರ್ಟಿಯರ್ ಸಾಂಟೋಸ್ ವಾಚ್
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಒಟ್ಟಿಗೆ ಧರಿಸಿ ಕಾಣಿಸಿಕೊಂಡಿದ್ದ ಈ ಗೋಲ್ಡ್-ಟೋನ್ ಐಷಾರಾಮಿ ವಾಚ್‌ನ ಪ್ರಸ್ತುತ ಮಾರುಕಟ್ಟೆ ಬೆಲೆ ತೆರಿಗೆ ಸೇರಿ ಸುಮಾರು ₹43 ಲಕ್ಷದಿಂದ ₹47 ಲಕ್ಷ ರೂಪಾಯಿಗಳು. ಇವರ ಅಫಿಡವಿಟ್ ಪ್ರಕಾರ ಇವರ ಬಳಿ ₹23.9 ಲಕ್ಷ ಹಾಗೂ ₹12 ಲಕ್ಷ ಮೌಲ್ಯದ ಎರಡು ಕಾರ್ಟಿಯರ್ ವಾಚ್‌ಗಳಿವೆ. ಅಷ್ಟೇ ಅಲ್ಲ, ಶಿವಕುಮಾರ್ ಅವರು ಧರಿಸುವ ಗುಸ್ಸಿ ಬ್ರ್ಯಾಂಡ್‌ನ ಉಣ್ಣೆಯ ಸ್ಕಾರ್ಫ್‌ಗಳ ಬೆಲೆ ಸುಮಾರು ₹54,೦೦೦ ದಿಂದ ಆರಂಭವಾಗುತ್ತದೆ. ಇದಲ್ಲದೆ ಇವರು ಫೆರಗಾಮೊ (Ferragamo) ಬ್ರ್ಯಾಂಡ್‌ನ ವಸ್ತುಗಳನ್ನು ಕೂಡ ಇಷ್ಟಪಟ್ಟು ಧರಿಸುತ್ತಾರೆ.

ಸಿದ್ದರಾಮಯ್ಯ ಅವರ ‘ಹ್ಯುಬ್ಲೋಟ್ ಬಿಗ್ ಬ್ಯಾಂಗ್’ ವಾಚ್
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸಿದ್ದ ವಜ್ರ ಖಚಿತ ‘ಹ್ಯುಬ್ಲೋಟ್ ಬಿಗ್ ಬ್ಯಾಂಗ್’ ಕೈಗಡಿಯಾರದ ಬೆಲೆ ಬರೋಬ್ಬರಿ ₹70 ಲಕ್ಷ ರೂಪಾಯಿಗಳಾಗಿತ್ತು. ನಂತರ ಇದು ಸ್ನೇಹಿತನೊಬ್ಬ ಕೊಟ್ಟ ಗಿಫ್ಟ್ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಕಂಗನಾ ಧರಿಸಿದ್ದ ‘ಹರ್ಮೆಸ್ ಹರ್ಬ್ಯಾಗ್ ಮೆಸೆಂಜರ್’ ಬ್ಯಾಗ್
ಬಾಲಿವುಡ್ ಕ್ವೀನ್ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ರಾಜಕೀಯದಲ್ಲೂ ತಮ್ಮ ಹೈ-ಫೈ ಫ್ಯಾಷನ್ ಕಂಟಿನ್ಯೂ ಮಾಡಿದ್ದಾರೆ. ಸಂಸತ್ತಿನ ಸಭೆಯೊಂದರಲ್ಲಿ ಅವರು ಹಿಡಿದಿದ್ದ ‘ಹರ್ಮೆಸ್ ಹರ್ಬ್ಯಾಗ್ ಮೆಸೆಂಜರ್’ ಬ್ಯಾಗ್‌ನ ಬೆಲೆಯೇ ₹4.18 ಲಕ್ಷದಿಂದ ₹4.25 ಲಕ್ಷದಷ್ಟಿದೆ. ಇದರೊಂದಿಗೆ ಕಾಲಿಗೆ ₹85,000 ವರೆಗಿನ ‘ಟಾಡ್ಸ್’ ಬ್ರಾಂಡ್‌ನ ಲೋಫರ್ಸ್ ಶೂಸ್ ಹಾಗೂ ಕೈಗೆ ದುಬಾರಿ ರೋಲೆಕ್ಸ್ ವಾಚ್ ಧರಿಸಿ ಅವರು ಮಿಂಚಿದ್ದಾರೆ.

ಮಹುವಾ 'ಲೂಯಿ ವಿಟಾನ್' ಹ್ಯಾಂಡ್‌ಬ್ಯಾಗ್
ಮತ್ತೊಂದೆಡೆ, ಟಿಎಂಸಿ ಸಂಸದೆ
ಅವರ ‘ಲೂಯಿ ವಿಟಾನ್’ ಹ್ಯಾಂಡ್‌ಬ್ಯಾಗ್ 2022 ರ ಲೋಕಸಭೆ ಕಲಾಪದ ವೇಳೆ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು.
ಅನುರಾಗ್ ಠಾಕೂರ್ ‘ಲೂಯಿ ವಿಟಾನ್ ರಿವರ್ಸಿಬಲ್’ ಬೆಲ್ಟ್
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಧರಿಸಿದ್ದ ವಿಶೇಷ ಬೆಲ್ಟ್ ನೆಟ್ಟಿಗರ ಕಣ್ಣಿಗೆ ಬಿದ್ದಿತ್ತು. ಕೇವಲ ಒಂದು ‘ಲೂಯಿ ವಿಟಾನ್ ರಿವರ್ಸಿಬಲ್’ ಬೆಲ್ಟ್‌ಗಾಗಿ ಅವರು ಬರೋಬ್ಬರಿ ₹60,000 ಖರ್ಚು ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆದಿತ್ತು.

ಚಿರಾಗ್ ಪಾಸ್ವಾನ್ ‘ಮಾಂಕ್ಲರ್ ಜಾಕೆಟ್’
ಇನ್ನು ಕೇಂದ್ರದ ಮತ್ತೊರ್ವ ಯುವ ಸಚಿವ ಚಿರಾಗ್ ಪಾಸ್ವಾನ್ ತಮ್ಮ ವಿದೇಶಿ ಪ್ರವಾಸಗಳಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿದ್ದಾಗ ಅವರು ಧರಿಸಿದ್ದ ‘ಮಾಂಕ್ಲರ್ ಜಾಕೆಟ್’ ಬೆಲೆ ₹1.8 ರಿಂದ ₹2.6 ಲಕ್ಷದಷ್ಟಿದ್ದರೆ, ಅವರ ಕೈಯಲ್ಲಿದ್ದ ‘ಕಾರ್ಟಿಯರ್ ಸಾಂಟೋಸ್’ ಗೋಲ್ಡ್ ವಾಚ್ ಬೆಲೆ ಸುಮಾರು ₹11 ರಿಂದ ₹15 ಲಕ್ಷ ರೂಪಾಯಿಗಳು. ಇವರ ಬಳಿ ಅಂದಾಜು ₹23 ಲಕ್ಷದ ರೋಲೆಕ್ಸ್ ವಾಚ್ ಕೂಡ ಇರುವುದಾಗಿ ವರದಿಗಳು ತಿಳಿಸುತ್ತವೆ.
![]()
ಸುಖ್‌ಬೀರ್ ಸಿಂಗ್ ಬಾದಲ್ 'ಪಾಟೆಕ್ ಫಿಲಿಪ್' ವಾಚ್
ಪಂಜಾಬ್‌ನ ಶಿರೋಮಣಿ ಅಕಾಲಿದಳದ ಪ್ರಮುಖ ನಾಯಕರಾದ ಸುಖ್‌ಬೀರ್ ಸಿಂಗ್ ಬಾದಲ್ ಭಾರತದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಇವರು ಧರಿಸುವ ಕೈಗಡಿಯಾರಗಳು ಜಗತ್ತಿನ ಅತ್ಯಂತ ಐಷಾರಾಮಿ ಬ್ರಾಂಡ್‌ಗಳಾದ 'ಪಾಟೆಕ್ ಫಿಲಿಪ್' (Patek Philippe) ಮತ್ತು 'ಆಡೆಮಾರ್ಸ್ ಪಿಗುಯೆಟ್' (Audemars Piguet) ಗೆ ಸೇರಿದ್ದಾಗಿವೆ. ಇವುಗಳ ಬೆಲೆ ₹50 ಲಕ್ಷದಿಂದ ₹3 ಕೋಟಿ ರೂಪಾಯಿಗಳವರೆಗೆ ಇರುತ್ತದೆ.

ಅಖಿಲೇಶ್ ಯಾದವ್ ಇಂಪೋರ್ಟೆಡ್ ಸೈಕಲ್
ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಸ್ಪೋರ್ಟ್ಸ್ ಲೈಫ್‌ಸ್ಟೈಲ್ ತುಂಬಾ ದುಬಾರಿಯಾಗಿದೆ. ಇವರು ಸದಾ ಧರಿಸುವ ಕಪ್ಪು ಬಣ್ಣದ ಸ್ನೀಕರ್ಸ್ (ಶೂಸ್) ಜಾಗತಿಕ ಮಟ್ಟದ ಪ್ರೀಮಿಯಂ ಸ್ಪೋರ್ಟ್ಸ್ ಬ್ರಾಂಡ್ ಆಗಿದ್ದು, ಇವುಗಳ ಬೆಲೆ ಸಾವಿರಾರು ರೂಪಾಯಿಗಳಷ್ಟಿರುತ್ತದೆ.
ಸಮಾಜವಾದಿ ಪಕ್ಷದ ಗುರುತಾದ ಸೈಕಲ್ ಅನ್ನು ಇವರು ಪ್ರಚಾರಕ್ಕೆ ಬಳಸುತ್ತಾರೆ. ಆದರೆ ಇವರು ವೈಯಕ್ತಿಕವಾಗಿ ಬಳಸುವ ಹೈ-ಟೆಕ್ ಇಂಪೋರ್ಟೆಡ್ ಸೈಕಲ್‌ನ ಬೆಲೆ ಲಕ್ಷಾಂತರ ರೂಪಾಯಿಗಳಷ್ಟಿದೆ.

ಅಸಾದುದ್ದೀನ್ ಓವೈಸಿ ಶೇರ್ವಾನಿ
ಹೈದರಾಬಾದ್‌ನ ಎಂಪಿ ಓವೈಸಿ ಅವರು ತಮ್ಮ ರಾಜಕೀಯ ಶೈಲಿಯ ಜೊತೆಗೆ ರಾಯಲ್ ಲೈಫ್‌ಸ್ಟೈಲ್‌ಗೂ ಹೆಸರಾಗಿದ್ದಾರೆ. ಇವರು ಧರಿಸುವ ಸಾಂಪ್ರದಾಯಿಕ ಶೇರ್ವಾನಿಗಳನ್ನು ಹೈದರಾಬಾದ್‌ನ ಅತ್ಯಂತ ದುಬಾರಿ ರಾಯಲ್ ದರ್ಜಿಗಳು ಸಿದ್ಧಪಡಿಸುತ್ತಾರೆ. ಇದರೊಂದಿಗೆ ಇವರು ಬಳಸುವ ಅರಬಿಕ್ 'ಅತ್ತರ್' (ಸುಗಂಧ ದ್ರವ್ಯ) ಬೆಲೆ ಕೂಡ ಅತ್ಯಂತ ದುಬಾರಿಯಾಗಿರುತ್ತದೆ.
![]()

