ಡಿಕೆ ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದು, ಮೊದಲ ಪಟ್ಟಿಯಲ್ಲಿ ಹಲವು ಘಟಾನುಘಟಿ ನಾಯಕರಿಗೆ ಸ್ಥಾನ ಸಿಕ್ಕಿಲ್ಲ.
ಬೆಂಗಳೂರು: ಇಂದು ಡಿಕೆ ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಜೊತೆಯಲ್ಲಿ 13 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮಾಹಿತಿ ಲಭ್ಯವಾಗಿದೆ. ಮಾಜಿ ಸಚಿವ ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರ ಪಟ್ಟಿ
- ಜಿ.ಪರಮೇಶ್ವರ್
- ಕೆ.ಎಚ್.ಮುನಿಯಪ್ಪ
- ಕೆ.ಜೆ.ಜಾರ್ಜ್
- ಎಂ.ಬಿ.ಪಾಟೀಲ್
- ರಾಮಲಿಂಗಾ ರೆಡ್ಡಿ
- ಸತೀಶ್ ಜಾರಕಿಹೊಳಿ
- ಕೃಷ್ಣ ಬೈರೇಗೌಡ
- ಪ್ರಿಯಾಂಕ್ ಖರ್ಗೆ
- ಯು.ಟಿ.ಖಾದರ್
- ಈಶ್ವರ್ ಖಂಡ್ರೆ
- ಯತೀಂದ್ರ ಸಿದ್ದರಾಮಯ್ಯ
- ಬೈರತಿ ಸುರೇಶ್
- ಶರಣಪ್ರಕಾಶ್ ಪಾಟೀಲ್
ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದ ಘಟಾನುಘಟಿ ನಾಯಕರು
- ಜಮೀರ್ ಅಹಮದ್ ಖಾನ್
- ಎಚ್ ಕೆ ಪಾಟೀಲ್
- ಶಿವರಾಜ ತಂಗಡಗಿ
- ಸಂತೋಷ ಲಾಡ್
- ಚಲುವರಾಯಸ್ವಾಮಿ
- ದಿನೇಶ್ ಗುಂಡೂರಾವ್
- ಎಚ್ ಸಿ ಮಹದೇವಪ್ಪ
- ಎಂಸಿ ಸುಧಾಕರ್
- ಲಕ್ಷ್ಮಿ ಹೆಬ್ಬಾಳ್ಕರ್
- ಎನ್ ಎಸ್ ಭೋಸರಾಜು
- ಶಿವಾನಂದ ಪಾಟೀಲ್
- ಆರ್ ಬಿ ತಿಮ್ಮಾಪುರ್
- ಶರಣ ಬಸಪ್ಪ ದರ್ಶನಾಪುರ್
- ಮಧು ಬಂಗಾರಪ್ಪ
ಇಂದು ಬೆಳಗ್ಗೆಯಿಂದಲೇ ರಾಜ್ಯದ ಪ್ರಮುಖ ರಾಜಕೀಯ ಗಣ್ಯರನ್ನು ಡಿಕೆ ಶಿವಕುಮಾರ್ ಭೇಟಿಯಾಗುತ್ತಿದ್ದರು. ಬಿಜೆಪಿಯ ಬಿ.ಎಸ್.ಯಡಿಯೂಪ್ಪ, ಜೆಡಿಎಸ್‌ನ ಹೆಚ್‌ಡಿ ದೇವೇಗೌಡರನ್ನು ಸಹ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಹಿರಿಯರ ಆಶೀರ್ವಾದ ಪಡೆದುಕೊಂಡಿದ್ದೇನೆ. ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ ಎಂದು ಹೇಳಿದರು.


