ವಯಸ್ಸಾಗುತ್ತಿರುವುದನ್ನು ಮೊದಲು ಸೂಚಿಸುವುದೇ ಮುಖದಲ್ಲಿ ಕಾಣಿಸಿಕೊಳ್ಳುವ ತೆಳ್ಳಗಿನ ಗೆರೆಗಳು. ಕಣ್ಣ ಸುತ್ತಲು, ಬಾಯಿಯ ಸುತ್ತ ಮೊದಲಿಗೆ ಕಾಣಿಸಿಕೊಳ್ಳುತ್ತದೆ, ನಿಧಾನವಾಗಿ ಹೆಚ್ಚುತ್ತಾ  ಹೋಗುತ್ತದೆ. ಹೀಗೆ ವಯಸ್ಸನ್ನು ತೋರಿಸುವ ಈ ಗೆರೆಗಳೆಂದರೆ ಯಾರಿಗೆ ತಾನೇ ಪ್ರೀತಿ ಹೇಳಿ?

ಕೆಮಿಕಲ್‌ಗಳು ತ್ವಚೆಗೆ ಯಾವತ್ತಿದ್ದರೂ ಒಳ್ಳೆಯದಲ್ಲ. ನೀವೆಷ್ಟೇ ಹಣ ಕೊಟ್ಟು ಆ್ಯಂಟಿ ಏಜಿಂಗ್ ಕ್ರೀಂಗಳು, ಸೀರಂಗಳನ್ನು ತಂದು ಬಳಸಿದರೂ ಅವುಗಳು ನಿಮ್ಮ ಗಮನ ಸೆಳೆಯಲು ಕೆಮಿಕಲ್ ಜೊತೆ ಅರಿಶಿನ, ನಿಂಬೆ, ಅಲೋ ವೆರಾ ಮುಂತಾದ ಮನೆಯಲ್ಲೇ ಸಿಗುವ ವಸ್ತುಗಳನ್ನಿಟ್ಟುಕೊಂಡೇ ಮಾರ್ಕೆಟಿಂಗ್ ಮಾಡಬೇಕು. ಅಂದ ಮೇಲೆ ನ್ಯಾಚುರಲ್  ವಸ್ತುಗಳನ್ನೇ ಬಳಸಿ ತ್ವಚೆಯನ್ನು ಸುಕ್ಕುರಹಿತವಾಗಿಸಬಹುದಲ್ಲಾ... ಹಾಗೆ, ತ್ವಚೆಯ ವಯಸ್ಸನ್ನು ಕಡಿಮೆ ಮಾಡುವ ಆಹಾರ ಪದಾರ್ಥಗಳ ಕೋಂಬೋ ಇಲ್ಲಿದೆ. 

ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಿಕೊಳ್ಳಲು ಇಲ್ಲೊಂದು ಅವಕಾಶ

ಮೊಟ್ಟೆ ಮತ್ತು ನಿಂಬೆರಸ
ವಯಸ್ಸಿನ ಕಾರಣದಿಂದ ತ್ವಚೆ ಜೋತು ಬೀಳುವ ಜೊತೆಗೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತಿದ್ದರೆ ಈ ಪ್ಯಾಕ್ ಬಳಸಿ. ಎಗ್ ವೈಟನ್ನು ಬಟ್ಟಲಲ್ಲಿ ತೆಗೆದುಕೊಂಡು ಅದಕ್ಕೆ 1 ಚಮಚ ನಿಂಬೆರಸ ಹಾಕಿ. ಚೆನ್ನಾಗಿ ತಿರುವಿ ಬಳಿಕ ಹತ್ತಿಯ ತುಂಡಿನ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಒಣಗಿದ ಬಳಿಕ ಮುಖವನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ಮೊಟ್ಟೆಯಲ್ಲಿರುವ ಪ್ರೋಟೀನ್ ಚರ್ಮವನ್ನು ಬಿಗಿಗೊಳಿಸುತ್ತದೆ. ನಿಂಬೆರಸವು ಕಪ್ಪುಕಲೆಗಳನ್ನು ತೊಲಗಿಸುತ್ತದೆ. 

ಸಕ್ಕರೆ ಹಾಗೂ ಜೇನುತುಪ್ಪ
ಸಕ್ಕರೆಯು ನ್ಯಾಚುರಲ್ ಎಕ್ಸ್‌ಫೋಲಿಯೇಟರ್ ಆಗಿದ್ದು, ಮುಖದಲ್ಲಿರುವ ಒಣತ್ವಚೆ ಹಾಗೂ ಡೆಡ್ ಸೆಲ್‌ಗಳನ್ನು ತೆಗೆದು ಹಾಕಬಲ್ಲದು. 1 ಚಮಚ ಸಕ್ಕರೆಯನ್ನು 1 ಚಮಚ ಜೇನುತುಪ್ಪದಲ್ಲಿ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿ. 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿದ ಬಳಿಕ 10 ನಿಮಿಷ ಹಾಗೆಯೇ ಬಿಡಿ. ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಸಕ್ಕರೆಯು ಡೆಡ್‌ಸ್ಕಿನ್‌ನಿಂದ ಮುಕ್ತಿ ನೀಡಿದರೆ ಜೇನುತುಪ್ಪವು ತ್ವಚೆಯ ರಂಧ್ರಗಳಲ್ಲಿ ಕೂತಿರಬಹುದಾದ ಕೊಳೆಯನ್ನು ಹೊರಗೆಳೆಯುತ್ತದೆ. 

ಟೀ ಹಾಗೂ ಶುಂಠಿ
ಚಹಾದ ಎಲೆ ತ್ವಚೆಗೆ ಹಲವಾರು ಲಾಭ ತಂದುಕೊಡುವ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬಹುದು. ಅದರಲ್ಲೊಂದು ಸುಕ್ಕುಹೋಗಿಸುವುದು. ಸ್ವಲ್ಪ ಚಹಾ ಎಲೆಗಳನ್ನು ಅಥವಾ ಪೌಡರನ್ನು ನೀರಿನಲ್ಲಿ ಕುದಿಸಿ. ಇದಕ್ಕೆ ಶುಂಠಿರಸ ಸೇರಿಸಿ. ಇದು ಚೆನ್ನಾಗಿ ಕುದ್ದ ಬಳಿಕ ತಣ್ಣಗಾಗಲು ಬಿಡಿ. ಈಗ ಹತ್ತಿಯ ಸಹಾಯದಿಂದ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಇದರಿಂದ ಸುಕ್ಕು ಕಡಿಮೆಯಾಗುವ ಜೊತೆಗೆ ತ್ವಚೆಗೆ ಹೊಳಪು ಬರುತ್ತದೆ.

ನೀವೂ ಹೀಗ್ ಮಾಡ್ತೀರಾ? ಹೆಚ್ಚಿನ ಪೋಷಕರ ಕೆಟ್ಟ ಚಾಳಿ ಇದು

ಬಾಳೆಹಣ್ಣು ಹಾಗೂ ಆಲಿವ್ ಆಯಿಲ್
ಸುಕ್ಕಿನ ತೆಳುವಾದ ಗೆರೆಗಳಿಂದ ಮುಕ್ತಿ ಬೇಕೆನ್ನುವವರಿಗೆ ಇಧು ಮ್ಯಾಜಿಕ್‌ನಂತೆ ಕಾಣಿಸುತ್ತದೆ. ಒಂದು ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ 1 ಚಮಚ ಆಲಿವ್ ಆಯಿಲ್ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಬಾಳೆಹಣ್ಣುಗಳು ಪೊಟ್ಯಾಶಿಯಂ, ಝಿಂಕ್, ವಿಟಮಿನ್‌ಗಳಿಂದ ತುಂಬಿದ್ದು ಇವುಗಳ ಲಾಭ ತ್ವಚೆಗೆ ಸಿಗುತ್ತದೆ. ಮತ್ತೊಂದೆಡೆ ಆಲಿವ್ ಆಯಿಲ್‌ ನ್ಯಾಚುರಲ್ ಮಾಯಿಶ್ಚರೈಸರ್ ಆಗಿದ್ದು ಅದು ನಿಮ್ಮ ತ್ವಚೆಯು ಪ್ಯಾಕ್‌ನ ಸತ್ವಗಳನ್ನು ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ. 

ದ್ರಾಕ್ಷಿ ರಸ ಹಾಗೂ ರೋಸ್ ವಾಟರ್
ಕಪ್ಪು ಅಥವಾ ಹಸಿರು ದ್ರಾಕ್ಷಿ ಹಣ್ಣುಗಳಿಂದ ಒಂದಿಷ್ಟು ರಸ ಹಿಂಡಿ ತೆಗೆಯಿರಿ. ಇದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ದ್ರಾಕ್ಷಿಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಅವು ಮುಖದ ತ್ವಚೆಯ ಎಲಾಸ್ಟಿಸಿಟಿಯನ್ನು ಮರುಸ್ಥಾಪಿಸುತ್ತವೆ. ರೋಸ್ ವಾಟರ್ ಕೂಲಿಂಗ್ ಎಫೆಕ್ಟ್ ನೀಡುವ ಜೊತೆಗೆ ಮುಖದಿಂದ ಅಧಿಕ ತೈಲವನ್ನು ತೆಗೆದು ಹಾಕುತ್ತದೆ.