85 ವರ್ಷದ ಹಳೆಯ ಕಿತ್ತೋಗಿರೋ ಟಿ-ಶರ್ಟ್ ₹2.14 ಲಕ್ಷಕ್ಕೆ ಮಾರಿದ ಭೂಪ; ತಗೊಂಡಿದ್ಯಾರು ಗೊತ್ತಾ?
8 ದಶಕಗಳಷ್ಟು ಹಳೆಯದಾದ, ಹರಿದ ಶರ್ಟ್ ಅನ್ನು ಒಬ್ಬ ವ್ಯಕ್ತಿ ₹2.14 ಲಕ್ಷಕ್ಕೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಫ್ಯಾಷನ್ ಲೋಕದ ಹೊಸ ಟ್ರೆಂಡ್‌ಗಳು ಆಗಾಗ್ಗೆ ಆಶ್ಚರ್ಯ ಮತ್ತು ಕುತುಹಲ ಮೂಡಿಸುತ್ತವೆ. ಕೆಲವೊಮ್ಮೆ ಕಾಣಲು ವಿಚಿತ್ರವೆನಿಸಿದರೂ, ಅವುಗಳಲ್ಲಿ ಹಲವು ಫ್ಯಾಷನ್ ಲೋಕದಲ್ಲಿ ಬಹಳ ಮೌಲ್ಯಯುತವಾಗಿವೆ. ಇಂದು ಹರಿದ ಬಟ್ಟೆಗಳನ್ನು ಧರಿಸುವುದು ಒಂದು ಹೊಸ ಟ್ರೆಂಡ್ ಆಗಿದೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. 8 ದಶಕಗಳಷ್ಟು ಹಳೆಯದಾದ, ಕೊಳಕು ಮತ್ತು ಹರಿದ ಶರ್ಟ್ ಅನ್ನು ಒಬ್ಬ ವ್ಯಕ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ದೃಶ್ಯಗಳಿವು.
'1940ರ ದಶಕದ ಕೋಟ್' ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಇದನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅದು ನಿಜವಾಗಿದ್ದರೆ, ಈ ಬಟ್ಟೆಗೆ 85 ವರ್ಷಗಳಷ್ಟು ಹಳೆಯದಾಗಿರುತ್ತದೆ. ಈಗ ಬಣ್ಣ ಮಾಸಿದ, ಮಣ್ಣು ಹಿಡಿದ ಮತ್ತು ಹರಿದ ಈ ಶರ್ಟ್‌ನ ಬೆಲೆ ಎಷ್ಟು ಗೊತ್ತೇ? 2,500 ಡಾಲರ್ ಅಂದರೆ ಭಾರತೀಯ ಕರೆನ್ಸಿಗೆ ಹೋಲಿಸಿದರೆ 2.14 ಲಕ್ಷ ರೂಪಾಯಿಗಳು ಎಂದು ಮಾರಾಟಗಾರ ನಿಗದಿಪಡಿಸಿದ್ದಾನೆ.
'ಬಿಡ್‌ಸ್ಟಿಚ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಈ ವಿಚಿತ್ರ ಮಾರಾಟದ ದೃಶ್ಯಗಳಿವೆ. 'ವಿಂಟೇಜ್ ಶರ್ಟ್' ಎಂದು ಹೇಳಿಕೊಂಡು ಇದನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ. ವಾಸಕ್ಕೆ ಯೋಗ್ಯವಲ್ಲದ ಹಾಗೂ ಹಳೆಯ ಮನೆಯೊಂದರಲ್ಲಿ ಈ ಶರ್ಟ್ ಸಿಕ್ಕಿತು ಎಂದು ವಿಡಿಯೋದಲ್ಲಿ ಹೇಳುತ್ತಾನೆ.
ಇದನ್ನೂ ಓದಿ: ಓರಿ ಹಿಡಿದಿದ್ದು ಚಿಪ್ಸ್ ಪ್ಯಾಕ್ ಅಲ್ಲ, ಬೆಲೆ ಕೇಳಿದ್ರೆ ದಂಗಾಗ್ತೀರಿ
ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಗಮನ ಸೆಳೆದ ಈ ವಿಡಿಯೋವನ್ನು ಈಗಾಗಲೇ 82 ಲಕ್ಷ ಜನರು ವೀಕ್ಷಿಸಿದ್ದಾರೆ. ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಡತನವು ಒಂದು ಫ್ಯಾಷನ್ ಹೇಳಿಕೆಯಾಗಿದೆ ಎಂದು ಒಬ್ಬರು ಅಭಿಪ್ರಾಯಪಟ್ಟರು. ಈ ಬಟ್ಟೆಯನ್ನು ಯಾವುದಾದರೂ ಸ್ಮಶಾನದಿಂದ ಕದ್ದಿರಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ. ಮಾರಾಟಗಾರ ಶರ್ಟ್ ಮಾರಾಟದ ಮೂಲಕ ಫ್ಯಾಷನ್ ಲೋಕವನ್ನು ಗೇಲಿ ಮಾಡುತ್ತಿದ್ದಾನೆ ಎಂದು ಕೆಲವರು ಬರೆದಿದ್ದಾರೆ.
ಅದೇನೇ ಇರಲಿ ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಫ್ಯಾಶನ್ ಡಿಸೈನ್ ಲೋಕದಲ್ಲಿ ಹರಿದು ಚಿಂದಿಯಾಗಿರುವ ಬಟ್ಟೆಯನ್ನು ಶಾಪಿಂಗ್ ಮಾಲ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಇಟ್ಟು ಸ್ವಲ್ಪ ಬಣ್ಣದ ಮಾತುಗಳನ್ನು ಸೇರಿಸಿದರೆ ಖರೀದಿ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಅದೇ ರೀತಿ ಇಲ್ಲಿನ ವ್ಯಕ್ತಿಯೂ ಕೂಡ ಹರಿದು ಚಿಂದಿ ಚಿತ್ರಾನ್ನವಾಗಿರುವ ಬಟ್ಟೆಯನ್ನು 2,500 ಡಾಲರ್‌ಗಿಂದ ಒಂದು ಡಾಲರ್ ಕೂಡ ಕಡಿಮೆ ಕೊಡುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ವ್ಯಕ್ತಿಯೊಬ್ಬರು ನನಗೆ ಈ ಟಿ-ಶರ್ಟ್ ಬೇಕು ಕಡಿಮೆ ಬೆಲೆಗೆ ಕೊಡಿ ಎಂದರೂ ಆತ ನಿರಾಕರಣೆ ಮಾಡಿದ್ದಾನೆ.
ಇದನ್ನೂ ಓದಿ: 2025ರಲ್ಲಿ ಹುಡುಗಿಯರ ಬಳಿ ಇರಲೇಬೇಕಾದ 7 ಟ್ರೆಂಡಿ ಜೀನ್ಸ್ ಪ್ಯಾಂಟ್‌ಗಳು ಇವೇ ನೋಡಿ