Fashion
2025ರ ಹೊಸ ವರ್ಷವು ಅನೇಕ ಬದಲಾವಣೆಗಳಿಗೆ ಕಾರಣವಾಗಲಿದೆ. ಎಐನಿಂದ ಹಿಡಿದು ಹುಡುಗಿಯರ ಉಡುಪುಗಳವರೆಗೆ ಮಹತ್ತರ ಬದಲಾವಣೆಯಾಗಲಿದೆ. ಈ ವರ್ಷ ಹೆಚ್ಚು ಟ್ರೆಂಡಿಯಾಗಲಿರುವ ಹುಡುಗಿಯರ 7 ಜೀನ್ಸ್ ಫ್ಯಾಂಟ್‌ಗಳು ಯಾವವು ಗೊತ್ತಾ?
ಟ್ರೆಂಡಿ ಮತ್ತು ಕಂಫರ್ಟ್ ಗಾಗಿ ಇತ್ತೀಚಿನ ದಿನಗಳಲ್ಲಿ ವೈಡ್ ಲೆಗ್ಡ್ ಜೀನ್ಸ್ ಬಹಳ ಟ್ರೆಂಡ್‌ನಲ್ಲಿದೆ. ಇದನ್ನು ಟ್ಯೂಬ್ ಟಾಪ್ ಅಥವಾ ಕ್ರಾಪ್ ಟಾಪ್ ಜೊತೆ ನೀವು ಧರಿಸಬಹುದು.
80 ರ ದಶಕದ ಫ್ಯಾಷನ್ ಬೂಟ್‌ಕಟ್ 2025 ರಲ್ಲಿ ಬಹಳ ಟ್ರೆಂಡ್ ಆಗಲಿದೆ. ಇದನ್ನು ಕ್ಯಾಶುಯಲ್ ಮತ್ತು ಸೆಮಿ ಫಾರ್ಮಲ್ ಎರಡೂ ನೋಟಗಳಿಗೆ ಶೈಲೀಕರಿಸಬಹುದು. ಬೂಟ್‌ಕಟ್ ಜೀನ್ಸ್ ಅನ್ನು ನೀವು ಟಿ-ಶರ್ಟ್ ಟಾಪ್ ಧರಿಸಬಹುದು.
ಮಾಮ್ ಜೀನ್ಸ್ ಹೈ ವೇಸ್ಟ್ ಮತ್ತು ರಿಲ್ಯಾಕ್ಸ್ ಫಿಟ್ ಆಗಿರುತ್ತದೆ. ಇದನ್ನು ಓವರ್ ಸೈಜ್ ಶರ್ಟ್, ಟಿ-ಶರ್ಟ್ ಅಥವಾ ಸ್ವೆಟ್‌ಶರ್ಟ್ ಜೊತೆ ಧರಿಸಬಹುದು.
ಪಾರ್ಟಿ ಮತ್ತು ಎಥ್ನಿಕ್ ಲುಕ್‌ಗೆ ಫ್ಲೇರ್ಡ್ ಪ್ಯಾಂಟ್ಸ್ ಕೂಡ ಪರಿಪೂರ್ಣ ಆಯ್ಕೆಯಾಗಿದೆ. ಇದನ್ನು ಶಾರ್ಟ್ ಕುರ್ತಿ ಅಥವಾ ಕ್ರಾಪ್ ಟಾಪ್ ಜೊತೆ ಧರಿಸಿ ನೀವು ಸ್ಟೈಲಿಶ್ ಲುಕ್ ಪಡೆಯಬಹುದು.
ಬೋಲ್ಡ್ ಮತ್ತು ಸ್ಟೈಲಿಶ್ ಲುಕ್‌ಗೆ ಕಪ್ಪು ಅಥವಾ ಕಂದು ಬಣ್ಣದ ಬಾಡಿ ಫಿಟ್ಟೆಡ್ ಲೆದರ್ ಪ್ಯಾಂಟ್ಸ್ ಉತ್ತಮ ಆಯ್ಕೆಯಾಗಿದೆ. ಇದನ್ನು ಫಿಟ್ಟೆಡ್ ಟಾಪ್ ಮತ್ತು ಹೈ ಹೀಲ್ಸ್ ಅಥವಾ ಬೂಟ್ಸ್ ಜೊತೆ ಜೋಡಿಸಿ.
ಸರಳ ಮತ್ತು ವೈವಿಧ್ಯಮಯವಾಗಿ ಕಾಣಲು ನಿಮ್ಮ ವಾರ್ಡ್ರೋಬ್‌ನಲ್ಲಿ ಸ್ಟ್ರೈಟ್ ಲೆಗ್ ಜೀನ್ಸ್ ಇರಲೇಬೇಕು. ಇದನ್ನು ನೀವು ಕ್ಯಾಶುಯಲ್ ಮತ್ತು ಫಾರ್ಮಲ್ ಎರಡರಲ್ಲೂ ಧರಿಸಬಹುದು.
ಕ್ಯಾಶುಯಲ್ ಮತ್ತು ಕಂಫರ್ಟ್ ಲುಕ್ ಕಾರ್ಗೊ ಪ್ಯಾಂಟ್ಸ್ ಕೂಡ 2025ರಲ್ಲಿ ಬಹಳ ಟ್ರೆಂಡ್‌ನಲ್ಲಿ ಉಳಿಯಲಿದೆ. ಇವು ಸಡಿಲ ಮತ್ತು ಟ್ರೆಂಡಿ ಆಗಿ ಕಾಣುತ್ತವೆ. ಇದನ್ನು ನೀವು ಕ್ರಾಪ್ ಟಾಪ್ ಜೊತೆ ಧರಿಸಬಹುದು.