ಈಗ ದುಬಾರಿ ಕ್ರೀಮ್‌ಗಳು ಅಥವಾ ಸೀರಮ್‌ಗಳಿಗೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೆಳಗೆ ತಿಳಿಸಲಾದ ಈ 5 ಜ್ಯೂಸ್ ಸೇವಿಸಿ ಸಾಕು.
Natural Anti Ageing Remedies: ವಯಸ್ಸಾದಂತೆ ಕಾಣಿಸುವ ಕೆಲವು ಲಕ್ಷಣಗಳನ್ನು ಮರೆಮಾಡುವುದು ಅಷ್ಟು ಸುಲಭವಲ್ಲ. ಆದರೆ ಅದನ್ನು ಖಂಡಿತವಾಗಿಯೂ ಗೊತ್ತಾಗದ ಹಾಗೆ ಮಾಡಬಹುದು. ಸುಕ್ಕುಗಳು, ಸಡಿಲತೆ, ಶುಷ್ಕತೆ ಮತ್ತು ದಣಿದ ಚರ್ಮ...ಇವೆಲ್ಲವೂ ವಯಸ್ಸಾಗಿದೆ ಎಂದು ತೋರಿಸುವ ಚಿಹ್ನೆಗಳು. ಆದರೆ ಪ್ರತಿದಿನ ಕೆಲವು ಸಿಂಪಲ್ ಜ್ಯೂಸ್ ಸೇವನೆ ಮಾಡುವುದರಿಂದ ನಿಮ್ಮ ಚರ್ಮ ಯಂಗ್ ಆಗಿಡಲು ಸಹಾಯ ಆಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಹೌದು, ಈಗ ದುಬಾರಿ ಕ್ರೀಮ್‌ಗಳು ಅಥವಾ ಸೀರಮ್‌ಗಳಿಗೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೆಳಗೆ ತಿಳಿಸಲಾದ ಈ 5 ಜ್ಯೂಸ್ (drinks for younger skin) ಸೇವಿಸಿ ಸಾಕು. ಇವೆಲ್ಲಾ ನಿಮಗೆ ನಿಮ್ಮ ಅಡುಗೆಮನೆಯಲ್ಲಿಯೇ ಲಭ್ಯ. ಹಾಗಾಗಿ ಅವುಗಳನ್ನು ಪ್ರತಿದಿನ ಕುಡಿಯುವುದರಿಂದ ನೀವು ಹೊಳೆಯುವ, ತಾಜಾ ಮತ್ತು ಆರೋಗ್ಯಕರ ತ್ವಚೆ ಪಡೆಯಬಹುದು.
ಗ್ರೀನ್ ಟೀ (Green tea ಹೊಳೆಯುವ ತ್ವಚೆಗೆ)
ಗ್ರೀನ್ ಟೀ ತೂಕ ಇಳಿಸಿಕೊಳ್ಳಲು ಮಾತ್ರವಲ್ಲದೆ, ಚರ್ಮಕ್ಕೂ ಒಳ್ಳೆಯದು. ಇದರಲ್ಲಿರುವ EGCG ಅಂಶವು ಬಲವಾದ ಉತ್ಕರ್ಷಣ ನಿರೋಧಕ ಹೊಂದಿದ್ದು, ಅದು ನಿಮ್ಮ ಚರ್ಮವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಗ್ಗೆ ಒಂದು ಕಪ್ ಗ್ರೀನ್ ಟೀ ಕುಡಿಯುವುದು ಚರ್ಮದಿಂದ ಕೊಳೆಯನ್ನು ತೆಗೆದುಹಾಕುವುದಲ್ಲದೆ, ಮುಖಕ್ಕೆ ಹೊಸ ಹೊಳಪನ್ನು ತರುತ್ತದೆ.
ಬೀಟ್ರೂಟ್ ಜ್ಯೂಸ್(Beetroot juice ಒಳಗಿನಿಂದ ಶುದ್ಧ, ಹೊರಗಿನಿಂದ ಹೊಳಪು)
ಬೀಟ್ರೂಟ್ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಆಮ್ಲಜನಕದ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರ ರಸವು ಚರ್ಮಕ್ಕೆ ಕೆಂಪು ಮತ್ತು ಹೊಳಪನ್ನು ತರುವ ಕೆಲಸ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದ ಟೋನ್ ಅನ್ನು ಸಮಗೊಳಿಸಲು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದಿನವನ್ನು ಒಂದು ಲೋಟ ತಾಜಾ ಬೀಟ್ರೂಟ್ ಜ್ಯೂಸ್ ಜೊತೆ ಪ್ರಾರಂಭಿಸಿ ಮತ್ತು ನಿಮ್ಮ ಮುಖವು ಹೇಗೆ ಹೊಳೆಯುತ್ತದೆ ಎಂಬುದನ್ನು ನೋಡಿ.
ದಾಳಿಂಬೆ ಜ್ಯೂಸ್ (Pomegranate juice ಕಾಲಜನ್-ಉತ್ತೇಜಿಸುವ ಹಣ್ಣು)
ದಾಳಿಂಬೆಯಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಇತರ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸರಿಪಡಿಸಲು ಮತ್ತು ಕಾಲಜನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ, ಅಷ್ಟೇ ಏಕೆ ಇಬ್ಬನಿಯಂತೆ ಹೊಳಪನ್ನು ನೀಡುತ್ತದೆ.
ಅಲೋವೆರಾ ಜ್ಯೂಸ್ (Aloe vera juice ಒಳಗಿನಿಂದ ಶುದ್ಧ, ಹೊರಗಿನಿಂದ ಸಾಫ್ಟ್)
ಅಲೋವೆರಾದ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಆದರೆ ಅದರ ಜ್ಯೂಸ್ ಕುಡಿಯುವುದು ಹಲವು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಇ ಇದ್ದು, ಇದು ಚರ್ಮವನ್ನು ಯಂಗ್ ಆಗಿ ಇಡಲು ಸಹಾಯ ಮಾಡುತ್ತದೆ. ಅಲೋವೆರಾ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಚರ್ಮದ ಉರಿಯೂತ ಕಡಿಮೆಯಾಗುತ್ತದೆ ಮತ್ತು ಕಾಲಜನ್ ಉತ್ಪಾದನೆಯೂ ಹೆಚ್ಚಾಗುತ್ತದೆ. ಇದು ಕಲೆಯನ್ನು ಮಸುಕಾಗಿ ಕಾಣುವಂತೆ ಮಾಡುತ್ತದೆ.
ಕ್ಯಾರೆಟ್ ಜ್ಯೂಸ್ (Carrot juice ವಿಟಮಿನ್ ಎ ಯ ನಿಧಿ)
ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಈ ವಿಟಮಿನ್ ಚರ್ಮವನ್ನು ಸರಿಪಡಿಸುವಲ್ಲಿ ಮತ್ತು ಹೊಸ ಕೋಶಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಕುಡಿಯುವುದರಿಂದ ದೃಷ್ಟಿ ಸುಧಾರಿಸುವುದಲ್ಲದೆ, ಚರ್ಮವು ಸಾಫ್ಟ್ ಆಗಿ ಹೊಳೆಯುತ್ತದೆ.
