Asianet Suvarna News Asianet Suvarna News

Fact Check: ಈ ಫೋಟೋಗಳು ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು, ಏಕನಾಥ್ ಶಿಂಧೆ ಅವರದ್ದಲ್ಲ

Fact Check: ನಾಲ್ಕು ರಾಜಕೀಯ ವ್ಯಕ್ತಿಗಳ ಯೌವ್ವನದ ಫೋಟೋಗಳು ಎಂದು ಹೇಳಲಾಗಿರುವ ಫೋಟೋಕೊಲಾಜ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ

These Viral photos arent of young Narendra Modi Droupadi Murmu Eknath Shinde mnj
Author
Bengaluru, First Published Aug 8, 2022, 4:28 PM IST | Last Updated Oct 19, 2022, 4:30 PM IST

ನವದೆಹಲಿ (ಆ. 08):  ನಾಲ್ಕು ರಾಜಕೀಯ ವ್ಯಕ್ತಿಗಳ ಯೌವ್ವನದ ಫೋಟೋಗಳು ಎಂದು ಹೇಳಲಾಗಿರುವ ಫೋಟೋ ಕೊಲಾಜ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್‌ ಆಗಿದೆ. ಫೋಟೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde)  ಅವರದ್ದು ಎಂದು ಹೇಳಲಾಗಿದೆ. 

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಈ ವೈರಲ್‌ ಫೋಟೋವನ್ನು ಪರೀಶಿಲಿಸಿದಾಗ (Fact Check) ಆದಿತ್ಯನಾಥ್ ಅವರ ಫೋಟೋ ಮಾತ್ರ ನಿಜವಾಗಿದ್ದು ಉಳಿದ ಮೂರು ಫೋಟೋಗಳು ತಪ್ಪುದಾರಿಯುಗೆಳೆಯುತ್ತಿವೆ ಎಂದು ಸಾಬೀತಾಗಿದೆ. ಪ್ರಧಾನಿ ಮೋದಿ, ರಾಷ್ಟ್ರಪತಿ ಅಥವಾ ಮಹಾರಾಷ್ಟ್ರ ಸಿಎಂ ಯೌವ್ವನದ ಫೋಟೋಗಳಲ್ಲ ಎಂಬ ಸತ್ಯ ಬಯಲಾಗಿದೆ. 

Claim: "ಅದೃಷ್ಟದ ಆಟವೂ ಅದ್ಭುತ ಎಂದು ನಾಲ್ಕೂ ಫೋಟೋಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. 1) ಪ್ರಧಾನಮಂತ್ರಿ 2) ರಾಷ್ಟ್ರಪತಿ  3) ಉತ್ತರ ಪ್ರದೇಶ ಮುಖ್ಯಮಂತ್ರಿ 4) ಮಹಾರಾಷ್ಟ್ರ ಮುಖ್ಯಮಂತ್ರಿ" ಹೀಗೆ ವಿವಿಧ ಶೀರ್ಷಿಕೆಗಳೊಂದಿಗೆ ವಾಟ್ಸಾಪ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋಗಳು ವೈರಲ್‌ ಆಗಿವೆ. 

These Viral photos arent of young Narendra Modi Droupadi Murmu Eknath Shinde mnj

Fact Check Step 1: ಮೊದಲನೇಯದಾಗಿ  ಪ್ರಧಾನಿ ಮೋದಿ ನೆಲವನ್ನು ಗುಡಿಸುತ್ತಿರುವುದನ್ನು ತೋರಿಸುವ ಮೊದಲ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ ಎಂಬುದು ಈ ಹಿಂದೆಯೇ ಹಲವು ಬಾರಿ ಸಾಬೀತಾಗಿದೆ. ಅದರ ಹೊರತಾಗಿಯೂ, ಫೋಟೋಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತವೆ.  2014 ರ ಲೋಕಸಭಾ ಚುನಾವಣೆಯ ಸಮಯದಿಂದ ಈ ಫೋಟೋ ಸಾಕಷ್ಟು ಬಾರಿ ವೈರಲ್‌ ಆಗಿದೆ. 

ಅಸೋಸಿಯೇಟೆಡ್ ಪ್ರೆಸ್ (Associated Press) ಪ್ರಕಾರ ಮೂಲ ಫೋಟೋವನ್ನು ಜೂನ್ 2, 1946 ರಂದು ಕ್ಲಿಕ್ಕಿಸಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಂಕ ಸೆಪ್ಟೆಂಬರ್ 17, 1950.  ಇದು "ಅಸ್ಪೃಶ್ಯ" ಜಾತಿಯ ವ್ಯಕ್ತಿಯೊಬ್ಬರು "ಬೀದಿಗಳು, ಅಂಗಳಗಳು ಮತ್ತು ಮನೆಗಳನ್ನು ಗುಡಿಸಲು ಬಳಸುವ ಪೊರಕೆಯನ್ನು" ಹಿಡಿದಿರುವುದನ್ನು ತೋರಿಸುತ್ತದೆ. ಪುಲಿಟ್ಜರ್ ಪ್ರಶಸ್ತಿ ವಿಜೇತ ಅಮೇರಿಕನ್ ಛಾಯಾಗ್ರಾಹಕ ಮ್ಯಾಕ್ಸ್ ಡೆಸ್ಫೋರ್ ಈ ಫೋಟೋವನ್ನು ತೆಗೆದಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ. 

These Viral photos arent of young Narendra Modi Droupadi Murmu Eknath Shinde mnj

Step 2: ಇನ್ನು ಎರಡನೇ ಫೋಟೋ ಇತ್ತೀಚೆಗೆ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿರುವ ದ್ರೌಪದಿ ಮುರ್ಮು ಅವರದ್ದಲ್ಲ. ಇದು ಮುರ್ಮು ಅವರು ಹುಟ್ಟಿದ ಹಳ್ಳಿಯಾದ ಒಡಿಶಾದ ಉಪರಬೇಡ ಗ್ರಾಮದ ಆಸ್ಪತ್ರೆಯೊಂದರಲ್ಲಿ ಸ್ಚಚ್ಛತಾ ಕಾರ್ಯಕರ್ತೆ ಸುಕುಮಾರ್ ತುಡು ಅವರದ್ದು. ಸುಕುಮಾರ್ ರಾಷ್ಟ್ರಪತಿ ಮುರ್ಮು ಕುರಿತು ನ್ಯೂಸ್ 18 (News 18) ವರದಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವರದಿಯ ಪ್ರಕಾರ, ಮುರ್ಮು ಅಧ್ಯಕ್ಷರಾಗಿ ಚುನಾಯಿತರಾಗುವ ಮೊದಲು ಅವರು ಅನೇಕರೊಂದಿಗೆ ನೃತ್ಯ ಮಾಡಿದರು ಮತ್ತು ಸಂಜೆ ಔತಣದಲ್ಲಿ ಭಾಗವಹಿಸಿದ್ದರು.

These Viral photos arent of young Narendra Modi Droupadi Murmu Eknath Shinde mnj  

Step 3:  ಇನ್ನು ಆಟೊರಿಕ್ಷಾದ ಪಕ್ಕದಲ್ಲಿ ನಿಂತಿರುವ ವ್ಯಕ್ತಿಯ ಫೋಟೋ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರದ್ದಲ್ಲ, ಅವರು ಶಿವಸೇನೆಯಲ್ಲಿ ಉನ್ನತ ಸ್ಥಾನಕ್ಕೆ ಏರುವ ಮೊದಲು ರಿಕ್ಷಾ ಚಾಲಕರಾಗಿದ್ದರು. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ್ ಫ್ಯಾಕ್ಟ್‌ ಚೆಕ್‌ (Fact Check) ವರದಿ ಇಲ್ಲಿದೆ. ಆಟೋ ರಿಕ್ಷಾದೊಂದಿಗೆ ನಿಂತಿರುವ ಚಿತ್ರದಲ್ಲಿರುವ ವ್ಯಕ್ತಿ ಮಹಾ ಸಿಎಂ ಏಕನಾಥ್ ಶಿಂಧೆ ಅಲ್ಲ, ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಸಂಸ್ಥಾಪಕ ಅಧ್ಯಕ್ಷ ಬಾಬಾ ಕಾಂಬಳೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. ವೈರಲ್ ಪೋಸ್ಟಿನಲ್ಲಿರುವ ಫೋಟೋವನ್ನು ಕ್ರಾಪ್ ಮಾಡಿ, ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ ಮೂಲ ಫೋಟೋಗಳ ಬಗ್ಗೆ ಮಾಹಿತಿ ಸಿಕ್ಕಿವೆ.

Step 4: ಇನ್ನು ನಾಲ್ಕನೇ ಫೋಟೋ ಮಾತ್ರ ಸರಿಯಾಗಿ ಗುರುತಿಸಲಾಗಿದ್ದು ಇದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರದ್ದು. ಚಿತ್ರವನ್ನು ಅಮರ್ ಉಜಾಲಾ (Amar Ujala) ಆಗಸ್ಟ್ 2020 ರಲ್ಲಿ ಫೋಟೋ ವರದಿಯಲ್ಲಿ ಬಳಸಿದೆ. 

These Viral photos arent of young Narendra Modi Droupadi Murmu Eknath Shinde mnj

Conclusion: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಫೋಟೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಮಾತ್ರ ಅಧಿಕೃತವಾಗಿದೆ. ಉಳಿದ ಮೂರು ಫೋಟೋಗಳು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅಥವಾ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರದ್ದಲ್ಲ.

Latest Videos
Follow Us:
Download App:
  • android
  • ios