Fact Check: ವೈರಲ್‌ ಚಿತ್ರದಲ್ಲಿ ಆಟೋ ರಿಕ್ಷಾ ಜತೆ ನಿಂತಿರುವ ವ್ಯಕ್ತಿ ಮಹಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಲ್ಲ

Fact Check: ಆಟೊದೊಂದಿಗೆ ನಿಂತಿರುವ ಚಿತ್ರದಲ್ಲಿರುವ ವ್ಯಕ್ತಿ ಮಹಾ ಸಿಎಂ ಏಕನಾಥ್ ಶಿಂಧೆ ಅಲ್ಲ, ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಸಂಸ್ಥಾಪಕ ಅಧ್ಯಕ್ಷ ಬಾಬಾ ಕಾಂಬಳೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ 

Man Standing With Auto Rickshaw In Viral Photo Is Not Maharashtra CM Eknath Shinde mnj

ನವದೆಹಲಿ (ಜು. 27): ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಟೋ ರಿಕ್ಷಾದ ಮುಂದೆ ನಿಂತಿರುವ ವ್ಯಕ್ತಿಯ ಚಿತ್ರವೊಂದು ವೈರಲ್‌ ಆಗುತ್ತಿದೆ. ಚಿತ್ರದಲ್ಲಿ ಕಾಣುತ್ತಿರುವವರು ಪ್ರಸ್ತುತ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತನಿಖೆಯಲ್ಲಿ ಆ ವ್ಯಕ್ತಿ ಮಹಾರಾಷ್ಟ್ರ ಸಿಎಂ ಶಿಂಧೆ ಅಲ್ಲ, ಆದರೆ ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಸ್ಥಾಪಕ ಅಧ್ಯಕ್ಷ ಬಾಬಾ ಕಾಂಬ್ಳೆ ಎಂದು ಕಂಡುಹಿಡಿದಿದೆ.

Claim: ಟ್ವಿಟ್ಟರ್ ಬಳಕೆದಾರರೊಬ್ಬರು ವೈರಲ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಮತ್ತು "#EknathShinde the CM of Maharashtra This is stupendous achievement" ಎಂದು ಬರೆದಿದ್ದಾರೆ. 

Man Standing With Auto Rickshaw In Viral Photo Is Not Maharashtra CM Eknath Shinde mnj

Fact Check: ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ತನಿಖೆ ಮಾಡಿದಾಗ ಚಿತ್ರದಲ್ಲಿ ಕಾಣುವ ಆಟೋ ರಿಕ್ಷಾದ ನಂಬರ್ಪ್ಲೇಟ್ ‘MH 14 8172’ ಆಗಿದೆ.  ನಾವು ನಂತರ 'MH 14' ಎಂಬ ಕೋಡ್ ಎಲ್ಲಿದೆ ಎಂದು ಪರಿಶೀಲಿಸಿದಾಗ ಆರ್‌ಟಿವೋ (RTO) ವಾಹನ ನೋಂದಣಿ ವಿವರಗಳ ಪ್ರಕಾರ, 'MH-14' ಪುಣೆಯಲ್ಲಿರುವ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡದ್ದ ಎಂದು ತಿಳಿದುದಂದಿದೆ. ಆದರೆ, ಈಗಿನ ಮಹಾ ಸಿಎಂ ನವಿ ಮುಂಬೈನ ಥಾಣೆಯವರು ಎಂಬುದು ಗಮನಿಸಬೇಕಾದ ಸಂಗತಿ.

ಹೆಚ್ಚಿನ ತನಿಖೆಗಾಗಿ ಚಿತ್ರದ ಮೇಲೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ನಾವು ಫೇಸ್‌ಬುಕ್‌ನಲ್ಲಿ ವಿವಿಧ ಪ್ರೊಫೈಲ್‌ಗಳನ್ನು ಕಂಡುಕೊಂಡಿದ್ದೇವೆ ಮತ್ತು ಇದೇ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ  ಕೆಲವರು ಅಪ್‌ಲೋಡ್ ಮಾಡಿದ್ದು (Link) ಚಿತ್ರದಲ್ಲಿರುವ ವ್ಯಕ್ತಿ ಏಕನಾಥ್ ಶಿಂಧೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಚಿತ್ರದಲ್ಲಿರುವವರು ಏಕನಾಥ್ ಶಿಂಧೆ ಅಲ್ಲ, ಬಾಬಾ ಕಾಂಬ್ಳೆ ಎಂದು ಈ ಪೋಸ್ಟ್ ಹೇಳಿದೆ. ನಂತರ ಸೂಕ್ತ ಕೀವರ್ಡ್‌ಗಳ ಮೂಲಕ ಫೇಸ್‌ಬುಕ್‌ನಲ್ಲಿ ಹುಡುಕಿದಾಗ  ನಾವು 'महाराष्ट्र रिक्षा पंचायत पुणे'  ಈ ಫೇಸ್‌ಬುಕ್ ಪುಟವನ್ನು ಕಂಡುಕೊಂಡಿದ್ದೇವೆ.  

ಈ ಪುಟವು ಚಿತ್ರವನ್ನು ಅಪ್‌ಲೋಡ್ ಮಾಡಿದ್ದ ಹೀಗೆ ಹೇಳಿದೆ: महाराष्ट्र रिक्षा पंचायत संस्थापक अध्यक्ष कष्टकऱ्यांचे नेते बाबा कांबळे यांचा रिक्षा सोबत फोटो रिक्षा चालवताना 19 97 सालीचा रिक्षा चालवत असतानाचा हा फोटो आहे” श्रावण मधे रिक्षा पूजा करतानाचा, पिंपरी रातराणी रिक्षा स्टॅन्ड" 

ಅನುವಾದ: ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಸ್ಥಾಪಕ ಅಧ್ಯಕ್ಷ ನಾಯಕ ಬಾಬಾ ಕಾಂಬಳೆ ರಿಕ್ಷಾದೊಂದಿಗೆ ಅವರ ಫೋಟೋ ಇದು 1997 ರಲ್ಲಿ ರಿಕ್ಷಾ ಓಡಿಸುತ್ತಿರುವ ಫೋಟೋ, ರಾತ್ರಾಣಿ ರಿಕ್ಷಾ ನಿಲ್ದಾಣದಲ್ಲಿ ಶ್ರಾವಣ ಮಾಸದ ಪೂಜೆ ಇತ್ತು.  ಈ ಚಿತ್ರವು ಬಾಬಾ ಕಾಂಬಳೆ ಅವರದ್ದು ಮತ್ತು ಮಹಾ ಸಿಎಂ ಏಕನಾಥ್ ಶಿಂಧೆ ಅಲ್ಲ ಎಂಬುದು ಸ್ಪಷ್ಟವಾಗಿದೆ. 

Man Standing With Auto Rickshaw In Viral Photo Is Not Maharashtra CM Eknath Shinde mnj

ಇನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಸಿದ್ಧ ಫ್ಯಾಕ್ಟ್‌ಚೆಕ್‌ ನ್ಯೂಸ್‌ ವಿಶ್ವಾಸ್‌ ನ್ಯೂಸ್‌ ಮೂಲಕ ಏಕನಾಥ್ ಶಿಂಧೆ ಅವರ ಮಾಧ್ಯಮ ಸಂಯೋಜಕ ವಿರಾಜ್ ಮುಲೆ ಅವರನ್ನು ವಿಚಾರಿಸಿದಾಗ ಈ ಬಗ್ಗೆ ಚಿತ್ರದಲ್ಲಿರುವವರು ಏಕನಾಥ್ ಶಿಂಧೆ ಅಲ್ಲ, ವೈರಲ್ ಹೇಳಿಕೆ ಸುಳ್ಳು ಎಂದು ಅವರು ತಿಳಿಸಿದ್ದಾರೆ.  

Conclusion: ಆಟೊದೊಂದಿಗೆ ನಿಂತಿರುವ ಚಿತ್ರದಲ್ಲಿರುವ ವ್ಯಕ್ತಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅಲ್ಲ, ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಸಂಸ್ಥಾಪಕ ಅಧ್ಯಕ್ಷ ಬಾಬಾ ಕಾಂಬಳೆ ಎಂದು ಫ್ಯಾಕ್ಡ್‌ ಚೆಕ್‌ನಲ್ಲಿ ಸಾಬೀತಾಗಿದೆ. 

Latest Videos
Follow Us:
Download App:
  • android
  • ios