Fact Check: 'ಗೋ ಬ್ಯಾಕ್ ಮೋದಿ' ಎಂದ ತಮಿಳುನಾಡು ಬಿಜೆಪಿ ಶಾಸಕಿ? ಇಲ್ಲಿದೆ ವೈರಲ್ ಫೋಟೋ ಅಸಲಿ ಕಹಾನಿ
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮತ್ತು ಶಾಸಕಿ ವನತಿ ಶ್ರೀನಿವಾಸನ್ ಅವರ ಎಡಿಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲ ಫೋಟೋದಲ್ಲಿ, ಅವರು 'ಧನ್ಯವಾದ ಮೋದಿ ಜೀ' ಎಂದು ಬರೆದಿರುವ ಪ್ಲ್ಯಾ ಕಾರ್ಡ್ ಹಿಡಿದಿದ್ದಾರೆ.
Fact Check: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೇ 26 ರಂದು ತಮಿಳುನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿತ್ತು. ಅದರಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ (Vanathi Srinivasan) ಅವರು ಪ್ಲೆ ಕಾರ್ಡ್ ಹಿಡಿದಿರುವುದನ್ನು ಕಾಣಬಹುದು. ಅದರ ಮೇಲೆ #GoBackModi ಎಂದು ಬರೆಯಲಾಗಿದೆ. ಆದರೆ ಈ ಫೋಟೋ ಎಡಿಟ್ ಮಾಡಲಾಗಿದ್ದು ಜನರನ್ನು ದಾರಿತಪ್ಪಿಸುತ್ತಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ. ಮೂಲ ಫೋಟೋದಲ್ಲಿ ವನತಿ ಶ್ರೀನಿವಾಸನ್ ಹಿಡಿದಿರುವ ಬೋರ್ಡ್‌ನಲ್ಲಿ 100 ಕೋಟಿ ಲಸಿಕೆಗಳನ್ನು ಪೂರೈಸಿದ್ದಾಕ್ಕಾಗಿ ಧನ್ಯವಾದಗಳು ಮೋದಿ ಜೀ ಎಂದು ಬರೆಯಲಾಗಿದೆ.
Claim: ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲಾಗಿರುವ ಪೋಸ್ಟ್‌ನಲ್ಲಿ ವನತಿ ಶ್ರೀನಿವಾಸನ್ ಅವರು ಪ್ಲೆ ಕಾರ್ಡ್ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು "ನಾವು ವನತಿ ಜೊತೆ ನಿಲ್ಲುತ್ತೇವೆ, #ಗೋಬ್ಯಾಕ್_ಮೋದಿ, #ಗೋಬ್ಯಾಕ್_ಮೋದಿ" ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಇಂಥಹ ಕೆಲವು ಪೋಸ್ಟ್‌ಗಳನ್ನು ನೀವು ಇಲ್ಲಿ ನೋಡಬಹುದು.
Fact Check: ವೈರಲ್ ಫೋಟೋ ಬಗ್ಗೆ ಹಚ್ಚಿನ ಮಾಹಿತಿ ಪಡೆಯಲು ನಾವು ಅದನ್ನು ಗೂಗಲ್ ರಿವರ್ಸ್ ಇಮೇಜ್‌ನೊಂದಿಗೆ ಹುಡುಕಿದ್ದೇವೆ. ಇದರಲ್ಲಿ ನಾವು ತಮಿಳಿನ ಈ ಆರ್ಟಿಕಲ್ (Link) ಹಾಗೂ ವನತಿ ಶ್ರೀನಿವಾಸನ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಕಂಡುಕೊಂಡಿದ್ದೇವೆ. ಅಕ್ಟೋಬರ್ 24, 2021 ರಂದು ಟ್ವೀಟ್ ಮಾಡಿದ ಈ ಫೋಟೋದಲ್ಲಿ, ವಾಣಿ ಹಿಡಿದಿರುವ ಪ್ಲ್ಯಾ ಕಾರ್ಡ್‌ನಲ್ಲಿ "India creates history 100 crore vaccinations, Thank you MODI Ji" ಎಂದು ಬರೆಯಲಾಗಿದೆ
ಜತೆಗೆ 100 ಕೋಟಿ ಲಸಿಕೆ ಹಾಕಿ ದಾಖಲೆ ಸೃಷ್ಟಿಸಿದ ಬಳಿಕ ಕೊಯಮತ್ತೂರಿನಲ್ಲಿ ನೆಲೆಸಿರುವ ಆದಿಯೋಗಿಯ ಪ್ರತಿಮೆ ಎದುರು ಯುವಕರು ರಾಜ್ಯಾಧ್ಯಕ್ಷರೊಂದಿಗೆ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಫೋಟೋ ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ. ಇನ್ನು ಇದೇ ಮಾಹಿತಿಯೊಂದಿಗೆ ಇನ್ಸ್ಟಾಗ್ರಾಮಿನಲ್ಲೂ ವನತಿ ಶ್ರೀನಿವಾಸನ್ ಪೋಸ್ಟ್ ಹಂಚಿಕೊಂಡಿದ್ದಾರೆ (Link)
ಇನ್ನು ಈ ಕಾರ್ಯಕ್ರಮದ ವೀಡಿಯೊವನ್ನು 24 ಅಕ್ಟೋಬರ್ 2021 ರಂದು ಬಿಜೆಪಿ ದಿಂಡಿಗಲ್ (BJP DINDIGUL DISTRIC ) ಜಿಲ್ಲೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಸಹ ಅಪ್‌ಲೋಡ್ ಮಾಡಲಾಗಿದೆ.
ಹೀಗಾಗಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮತ್ತು ಶಾಸಕಿ ವನತಿ ಶ್ರೀನಿವಾಸನ್ ಅವರ ಎಡಿಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂಲ ಫೋಟೋದಲ್ಲಿ, ಅವರು 'ಧನ್ಯವಾದ ಮೋದಿ ಜೀ' ಎಂದು ಬರೆದಿರುವ ಪ್ಲ್ಯಾ ಕಾರ್ಡ್ ಅನ್ನು ಹಿಡಿದಿದ್ದಾರೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ.