ನವದೆಹಲಿ (ಡಿ. 01): ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ವಿರೋಧಿಸಿ ಕಳೆದ 5ದಿನಗಳಿಂದ ಪಂಜಾಬ್‌, ಹರಾರ‍ಯಣ ರೈತರು ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ 2019ರಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರೋಧಿಸಿ ಶಹೀನ್‌ ಭಾಗ್‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಯೋವೃದ್ಧೆ ಬಿಲ್ಕಿಸ್‌ ಬಾನು ಅವರು ಪಂಜಾಬಿನ ರೈತಳಾಗಿ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದಾರೆ.

ಕೃಷಿ ಮಸೂದೆಯ ಹೆಸರಿನಲ್ಲಿ ರೈತರ ವೇಷದಲ್ಲಿ ಪ್ರತಿಭಟನೆ ಮಾಡುತ್ತಿರುವುದು ಯಾರೆಂದು ಈಗ ಅರ್ಥವಾಯಿತೇ’ ಎಂಬ ವಿಡಂಬನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಕೂಡ ಇದನ್ನು ಟ್ವೀಟ್‌ ಮಾಡಿದ್ದಾರೆ.

Fact Check : 2024 ರ ಚುನಾವಣೆಯಲ್ಲಿ ಮತ ಹಾಕದಿದ್ರೆ 350 ರೂ ದಂಡ?

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಬಿಲ್ಕಿಸ್‌ ಬಾನು ಅವರು ಭಾಗಿಯಾಗಿದ್ದ ಫೋಟೋ ಮತ್ತು ಹಳದಿ ಬಣ್ಣದ ಬಟ್ಟೆಯನ್ನು ತಲೆಗೆ ಸುತ್ತಿಕೊಂಡು ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗಿಯಾದ ವಯೋವೃದ್ಧೆಯೊಬ್ಬರ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

 

ಆದರೆ ನಿಜಕ್ಕೂ ಬಿಲ್ಕಿಸ್‌ ಬಾನು ದಾದಿ ಕೃಷಿ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿಯೂ ಪಾಲ್ಗೊಂಡಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ. ಫೋಟೋದಲ್ಲಿರುವ ಇಬ್ಬರೂ ಬೇರೆ ಬೇರೆ ಎಂದು ತಿಳಿದುಬಂದಿದೆ. ಸ್ವತಃ ಬಿಲ್ಕಿಸ್‌ ಬಾನು ಅವರೇ ಈ ಬಗ್ಗೆ ಪ್ರತಿಕ್ರಿಯಿಸಿ, ‘ನಾನು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದಿದ್ದೆ. ಆದರೆ ಪಾಲ್ಗೊಳ್ಳಲು ಆಗಲಿಲ್ಲ. ವೈರಲ್‌ ಆಗಿರುವ ಫೋಟೋದಲ್ಲಿರುವ ಮಹಿಳೆ ನಾನಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

- ವೈರಲ್ ಚೆಕ್