Asianet Suvarna News Asianet Suvarna News

Fact Check: 'ಹಿಟ್ಟು ಅಂದು ಲೀಟರ್‌ಗೆ ₹22, ಇಂದು ₹40' ಎಂದು ಹೇಳಿ ಬಳಿಕ ಸರಿಪಡಿಸಿಕೊಂಡ ರಾಹುಲ್‌ ಗಾಂಧಿ

Rahul Gandhi Viral Video Fact Check: ರಾಹುಲ್ ಗಾಂಧಿ ಅವರ ವಿಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು "ಆಟ್ಟಾ (ಹಿಟ್ಟು) ಲೀಟರ್‌ಗೆ 22 ರೂ ಇತ್ತು ಆದರೆ ಇಂದು ಅದು ಲೀಟರ್‌ಗೆ 40 ರೂ ಆಗಿದೆ" ಎಂದು ಹೇಳುತ್ತಿದ್ದಾರೆ.

Rahul Gandhi Viral Video Using liter as Unit for atta is incomplete mnj
Author
First Published Sep 5, 2022, 1:52 PM IST

ನವದೆಹಲಿ (ಸೆ. 05): ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಭಾನುವಾರ ಕಾಂಗ್ರೆಸ್ ಬೃಹತ್‌ ರ‍್ಯಾಲಿ ನಡೆಸಿದೆ. ರಾಮಲೀಲಾ ಮೈದಾನದಲ್ಲಿ ನಡೆದ ‘ಮೆಹಂಗಾಯಿ ಪರ್‌ ಹಲ್ಲಾ ಬೋಲ್‌ ರ‍್ಯಾಲಿ’ಯಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರದ ಆಡಳಿತಾರೂಢ ಎನ್‌ಡಿಎ (NDA) ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ (Rahul Gandhi) ಕೇಂದ್ರ ಸರ್ಕಾರವನ್ನು ಟೀಕಿಸಿಸುವ ಅವಸರದಲ್ಲಿ ತಪ್ಪೊಂದನ್ನು ಮಾಡಿದ್ದಾರೆ. ಅದೇ ಸಕತ್ತೂ ವೈರಲ್ ಆಗುತ್ತಿದೆ. 

ಸರಕು ಮಾರುಕಟ್ಟೆಗೆ ಹಣದುಬ್ಬರದ ಬಿಸಿ ಹೇಗೆ ತಟ್ಟಿದೆ ಎಂಬುದನ್ನು ತಿಳಿಸಲು ರಾಹುಲ್ ಗಾಂಧಿ ವಿವಿಧ ಸರಕುಗಳ ಬೆಲೆಗಳನ್ನು ವಿವರಿಸಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಅವರ ವಿಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳ್ಲಲಿ ವೈರಲ್ ಆಗಿದೆ. ವೈರಲ್ ಕ್ಲಿಪ್‌ನಲ್ಲಿ, "ಆಟ್ಟಾ (ಹಿಟ್ಟು) ಲೀಟರ್‌ಗೆ 22 ರೂ ಇತ್ತು ಆದರೆ ಇಂದು ಅದು ಲೀಟರ್‌ಗೆ 40 ರೂ ಆಗಿದೆ" ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ.

Claim: ಹಲವಾರು ಫೇಸ್‌ಬುಕ್ ಬಳಕೆದಾರರು ವಿವಿಧ ಶಿರ್ಷಿಕೆಗಳೊಂದಿಗೆ ರಾಹುಲ್ ಗಾಂಧಿಯವರ ವೈರಲ್ ಕ್ಲಿಪ್ಪನ್ನು ಪೋಸ್ಟ್ ಮಾಡಿದ್ದಾರೆ. ಬಳಕೆದಾರರೊಬ್ಬರು "ಅಂದು ಗೋಧಿ ಹಿಟ್ಟು 22 ರೂ. ಒಂದು ಲೀಟರಿಗೆ ಇಂದು 40 ರೂ. ಒಂದು ಲೀಟರಿಗೆ, ಹಿಟ್ಟು ಹೇಗೆ ಅಳತೆ ಮಾಡುತ್ತಾರೆ ಅನ್ನೋದನ್ನೇ ಗೊತ್ತಿರದ ಮಕ್ಕಳೆಲ್ಲಾ "ಬೆಲೆ ಏರಿಕೆ" ಬಗ್ಗೆ ಹೋರಾಟ ಮಾಡುತ್ತಾರಂತೆ" ಎಂಬ ಶಿರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಹೀಗೆ ವಿವಿಧ  ಶಿರ್ಷಿಕೆಗಳೊಂದಿಗೆ ರಾಹುಲ್‌ ಗಾಂಧಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಕೆಲ ನೆಟ್ಟಿಗರು ಟ್ರೋಲ್‌ ಕೂಡ ಮಾಡಿದ್ದಾರೆ. 

Rahul Gandhi Viral Video Using liter as Unit for atta is incomplete mnj

Fact Check: ಈ ವೈರಲ್‌ ವಿಡಿಯೋ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತನಿಖೆ ನಡೆಸಿದಾಗ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹಿಂದಿನ ವರ್ಷಗಳೊಂದಿಗೆ ವಿವಿಧ ಸರಕುಗಳ ಬೆಲೆಗಳನ್ನು ಹೋಲಿಸುವಾಗ  ಹಿಟ್ಟಿಗೆ "ಲೀಟರ್" ಅನ್ನು ಅಳತೆಯ ಮಾಪನವನ್ನಾಗಿ ಬಳಸಿದ್ದಾರೆ. ಆದರೆ ಅವರು ತಕ್ಷಣವೇ ಅದನ್ನು ಸರಿಪಡಿಸಿಕೊಂಡಿದ್ದು, ಬಳಿಕ "ಕೆಜಿ" ಎಂದು ಹೇಳಿದ್ದಾರೆ. ಹೀಗಾಗಿ ವೈರಲ್ ವೀಡಿಯೊ ಕ್ಲಿಪ್ ಅಪೂರ್ಣವಾಗಿದ್ದು ರಾಹುಲ್‌ ಗಾಂಧಿ ಭಾಷಣದ ಕೆಲ ಸೆಕೆಂಡುಗಳನ್ನು ಮಾತ್ರ ಹೊಂದಿದೆ. 

ಸೆಪ್ಟೆಂಬರ್ 4 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಮಾಡಿದ ಸಂಪೂರ್ಣ ಭಾಷಣವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ (Indian National Congress) ವೇರಿಫೈಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ತಮ್ಮ  ಭಾಷಣದ ಮಧ್ಯದಲ್ಲಿ, ರಾಹುಲ್ ಗಾಂಧಿ 2014 ರಲ್ಲಿ ಕೆಲವು ಅಗತ್ಯ ವಸ್ತುಗಳ ಬೆಲೆಗಳನ್ನು ಅವುಗಳ ಇಂದಿನ ಬೆಲೆಗಳೊಂದಿಗೆ ಹೋಲಿಸಲು ಪ್ರಾರಂಭಿಸಿದರು. ರಾಹುಲ್ ವಿವಿಧ ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡುವಾಗ ಬಹುತೇಕ ವಸ್ತುಗಳ ಅಳತೆಯ ಮಾಪನಗಳು ಲೀಟರ್‌ಗಳಲ್ಲಿದ್ದವು. ಹೀಗಾಗಿ ಹಿಟ್ಟಿಗೂ ರಾಹುಲ್‌ ಗಾಂಧಿ ಲೀಟರ್‌ನ್ನೇ ಬಳಸಿದ್ದು ಬಳಿಕ ಸರಿಪಡಿಸಿಕೊಂಡಿದ್ದಾರೆ.  

ಯೂಟ್ಯೂಬ್ ವಿಡಿಯೋದಲ್ಲಿ ಟೈಮ್ ಸ್ಟ್ಯಾಂಪ್ 1.52.00 ರಿಂದ, “2014 ರಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ 410 ರೂ.ಗೆ ಇದ್ದ ಅಂಕಿ ಅಂಶಗಳು ನನ್ನ ಬಳಿ ಇವೆ, ಇಂದು ಅದು 1050 ರೂ. ಆಗಿದೆ. ಪೆಟ್ರೋಲ್ ಲೀಟರ್‌ಗೆ 70 ರೂ. ಇಂದು ಪ್ರತಿ ಲೀಟರ್‌ಗೆ 100 ರೂ. ಡೀಸೆಲ್ ಲೀಟರ್‌ಗೆ 55 ರೂ., ಇಂದು 90 ರೂ. ಸಾಸಿವೆ ಎಣ್ಣೆ ಲೀಟರ್‌ಗೆ 90 ರೂ., ಇಂದು 200 ರೂ. ಹಾಲು ಲೀಟರ್‌ಗೆ 35 ರೂ., ಇಂದು 60 ರೂ. ಆಟಾ (ಹಿಟ್ಟು) ಲೀಟರ್‌ಗೆ 22 ರೂ., ಇಂದು ಲೀಟರ್‌ಗೆ 40 ರೂ." ಎಂದು ರಾಹುಲ್‌ ಹೇಳಿದ್ದಾರೆ. 

ಸಾಯಿಬಾಬಾರಂತೆ ಕಾಣುವ ಪರ್ವತ ಎಂದು ವೈರಲಾಗಿರುವ ಈ ಚಿತ್ರ ಡಿಜಿಟಲ್ ಆರ್ಟ್

ನಂತರ ತಕ್ಷಣವೇ ರಾಹುಲ್ ತಪ್ಪನ್ನು ಸರಿಪಡಿಸಿಕೊಂಡಿದ್ದು "ಓಹ್ ಕೆಜಿ" ಎಂದು ಹೇಳಿ  "ಒಂದು ಕಡೆ ನಿರುದ್ಯೋಗದಿಂದ ನೀವು ಬಳಲುತ್ತಿದ್ದೀರಿ, ಇನ್ನೊಂದು ಕಡೆ ಭಯಾನಕ ಹಣದುಬ್ಬರವಿದೆ" ಎಂದು ಹೇಳಿ ತಮ್ಮ ಭಾಷಣ ಮುಂದುವರೆಸಿದ್ದಾರೆ.  ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್‌ ಕೂಡ ಇಲ್ಲಿದೆ.  ಆದರೆ ವೈರಲ್ ಕ್ಲಿಪ್‌ನಲ್ಲಿ ರಾಹುಲ್ ಗಾಂಧಿ ತಮ್ಮ ತಪ್ಪನ್ನು ಸರಿಪಡಿಸುವ ಭಾಗವನ್ನು ತೋರಿಸಲಾಗಿಲ್ಲ.

 

 

Follow Us:
Download App:
  • android
  • ios