Asianet Suvarna News Asianet Suvarna News

Fact Check: ಸಾಯಿಬಾಬಾರಂತೆ ಕಾಣುವ ಪರ್ವತ ಎಂದು ವೈರಲಾಗಿರುವ ಈ ಚಿತ್ರ ಡಿಜಿಟಲ್ ಆರ್ಟ್

Fact Check: ಸಾಯಿಬಾಬಾರಂತೆ ಕಾಣುವ ಪರ್ವತದ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಸಾಯಿಬಾಬಾ ಆಕಾರದ ನಿಜವಾದ ಪರ್ವತ ಎಂದು ಹೇಳಿಕೊಳ್ಳುತ್ತಿದ್ದಾರೆ

Picture Of Mountain That Looks Like Sai Baba Is Actually Digital Art mnj
Author
Bengaluru, First Published Jul 14, 2022, 3:39 PM IST

ನವದೆಹಲಿ (ಜು. 14): ಸಾಯಿಬಾಬಾ (Sai Baba) ಆಕಾರವಿರುವ ಪರ್ವತ ಎಂದು ಹೇಳಲಾಗಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್‌ ಆಗಿದೆ. ಸಾಯಿಬಾಬಾರಂತೆ ಕಾಣುವ ಪರ್ವತದ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಸಾಯಿಬಾಬಾ ಆಕಾರದ ನಿಜವಾದ ಪರ್ವತ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ‌ ಫ್ಯಾಕ್ಟ್‌ ಚೆಕ್‌ನಲ್ಲಿ (Fact Check) ಈ ವೈರಲ್ ಪೋಸ್ಟ್ ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಕಂಡುಬಂದಿದೆ. ವೈರಲ್ ಚಿತ್ರದಲ್ಲಿ ಕಂಡುಬರುವ ಪರ್ವತದ ಫೋಟೋವನ್ನು ಎಡಿಟ್ ಮಾಡಲಾಗಿದೆ. ನಿಜವಾದ ಪರ್ವತವು ಸಾಯಿಬಾಬಾರಂತೆ ಕಾಣುವುದಿಲ್ಲ. ವೈರಲ್ ಚಿತ್ರವನ್ನು ಡಿಜಿಟಲ್ ಕಲಾವಿರೊಬ್ಬರು ರಚಿಸಿದ್ದಾರೆ.

Claim: ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು (Cambodia Life) ಈ ಫೋಟೋವನ್ನು ಹಂಚಿಕೊಂಡಿದ್ದು  "ಪ್ರಕೃತಿಯೇ ಸಾಯಿ" (Nature is Sai) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. 

Picture Of Mountain That Looks Like Sai Baba Is Actually Digital Art mnj

Fact Check: ಏಷ್ಯಾನೆಟ್‌ ಸುವರ್ಣ ನ್ಯೂಸ್ ಈ ವೈರಲ್ ಚಿತ್ರದ ಮೇಲೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ಪೋಸ್ಟ್‌ನಲ್ಲಿ ತೋರಿಸಿರುವಂತೆ ಅಂತಹ ಯಾವುದೇ ಪರ್ವತವನ್ನು ಕಂಡುಹಿಡಿಯಲಾಗಲಿಲ್ಲ.  ಆದರೆ, ಈ ಪರ್ವತದ ಚಿತ್ರವನ್ನು ನಾವು ಅನೇಕ ವೆಬ್‌ಸೈಟ್‌ಗಳಲ್ಲಿ (Website) ಕಂಡುಕೊಂಡಿದ್ದೇವೆ, ಆದರೆ ವೈರಲ್ ಚಿತ್ರದಲ್ಲಿ ಅದರ ಮೇಲಿನ ಭಾಗವು ಹಾಗೆ ಇರಲಿಲ್ಲ. 

ನಿಜವಾದ ಪರ್ವತದ ಫೋಟೋ ಥೈಲ್ಯಾಂಡ್‌ನ  ಫಾಂಗ್ ನ್ಗಾ ಪ್ರಾಂತ್ಯದ ಅವೊ ಫಾಂಗ್ ನ್ಗಾ ರಾಷ್ಟ್ರೀಯ ಉದ್ಯಾನವನದ ( Ao Phang Nga National Park) ಸಮೀಪವಿರುವ ದ್ವೀಪವಾಗಿದೆ.  ಕೆಳಗಿನ ಕೊಲಾಜ್‌ನಲ್ಲಿ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಕಾಣಬಹುದು.

Picture Of Mountain That Looks Like Sai Baba Is Actually Digital Art mnj

ಅಲ್ಲದೇ ನಾವು ಪಿಕ್ಸೆಲ್‌ ಡಾಟ್‌ ಕಾಮ್ (pixels.com) ನಲ್ಲಿ ವೈರಲಾಗಿರುವ ಸಾಯಿಬಾಬಾರಂತಹ ಪರ್ವತದ ಚಿತ್ರವನ್ನು ಕಂಡುಕೊಂಡಿದ್ದೇವೆ. ಇಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಇದನ್ನು ಡಿಜಿಟಲ್ ಕಲಾವಿದ ಅನಿಲ್ ಸಮೋಟಿಯಾ (Anil Samotia) ರಚಿಸಿದ್ದಾರೆ. 

ಇನ್ನು ಇದಕ್ಕೆ ಸಂಬಂಧಿಸಿದಂತೆ  ಪ್ರಸಿದ್ಧ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ವಿಶ್ವಾ ನ್ಯೂಸ್‌  ನೇರವಾಗಿ ಅನಿಲ್ ಶರ್ಮಾ ಸಮೋಟಿಯಾ ಅವರನ್ನು ಮೇಲ್ ಮೂಲಕ ಸಂಪರ್ಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಹೌದು ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ, ಇದನ್ನು ನಾನು ಡಿಜಿಟಲ್ ಉಪಕರಣಗಳ ಸಹಾಯದಿಂದ ಮಾಡಿದ್ದೇನೆ. ನಿಜವಾದ ಪರ್ವತವು ಥೈಲ್ಯಾಂಡ್‌ನಲ್ಲಿದೆ, ಅದು ಸಾಯಿಬಾಬಾದಂತೆ ಕಾಣುವುದಿಲ್ಲ" ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಪುಟವಾದ ಕಾಂಬೋಡಿಯಾ ಲೈಫ್‌ನ ಪ್ರೊಫೈಲ್ ,156,652 ಅನುಯಾಯಿಗಳನ್ನು ಹೊಂದಿದೆ. 

Picture Of Mountain That Looks Like Sai Baba Is Actually Digital Art mnj

Conclusion: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೈರಲ್ ಪೋಸ್ಟನ್ನು ಪರಿಶೀಲಿಸಿದಾಗ ಈ ಮಾಹಿತಿ ಸುಳ್ಳು ಎಂದು ಕಂಡುಬಂದಿದೆ. ವೈರಲ್ ಆಗಿರುವ ಚಿತ್ರದಲ್ಲಿ ಕಂಡುಬರುವ ಪರ್ವತದ ಫೋಟೋವನ್ನು ಎಡಿಟ್ ಮಾಡಲಾಗಿದೆ. ನಿಜವಾದ ಪರ್ವತವು ಸಾಯಿಬಾಬಾರಂತೆ ಕಾಣುವುದಿಲ್ಲ. ವೈರಲ್ ಚಿತ್ರವನ್ನು ಡಿಜಿಟಲ್ ಕಲಾವಿದರು ರಚಿಸಿದ್ದಾರೆ. 

ಇದನ್ನೂ ಓದಿ'ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ' ಬಗ್ಗೆ ಮಾತನಾಡುತ್ತಿರುವ ಕತಾರಿ ಆಂಕರ್ ಎಂದು ವೈರಲಾಗಿರುವ ಚಿತ್ರ ಅಫಘಾನಿಸ್ಥಾನದ್ದು

Follow Us:
Download App:
  • android
  • ios