Asianet Suvarna News Asianet Suvarna News

'ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ' ಬಗ್ಗೆ ಮಾತನಾಡುತ್ತಿರುವ ಕತಾರಿ ಆಂಕರ್ ಎಂದು ವೈರಲಾಗಿರುವ ಚಿತ್ರ ಅಫಘಾನಿಸ್ಥಾನದ್ದು

Fact Check: ಬುರ್ಖಾ ಧರಿಸಿರುವ ಮಹಿಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜತೆಗೆ 'ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ' ದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕತಾರಿ ಆಂಕರ್ ಎಂದು ಬರೆಯಲಾಗಿದೆ

Photo of Afghanistan Anchor shared as Qatari Anchor Talking About Religious Freedom in India mnj
Author
Bengaluru, First Published Jul 8, 2022, 8:24 PM IST

ನವದೆಹಲಿ (ಜು. 08): ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ (Nupur Sharma) ವಿವಾದ ದೇಶ ವಿದೇಶಗಳಲ್ಲಿ ಭಾರೀ ಸುದ್ದಿಯಾಗಿದೆ. ಈ ನಡುವೆ ಬುರ್ಖಾ ಧರಿಸಿರುವ ಮಹಿಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದ್ದು, ಜತೆಗೆ 'ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ' ದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕತಾರಿ ಆಂಕರ್ (Qatari Anchor) ಎಂದು ಬರೆಯಲಾಗಿದೆ.  ಪ್ರವಾದಿ ಮೊಹಮ್ಮದ್‌ರ  (Prophet Muhammad) ವಿರುದ್ಧ ಭಾರತದಲ್ಲಿ ಕೇಳಿಬಂದ ಹೇಳಿಕೆ ಸಂಬಂಧ ಇರಾನ್‌, ಕತಾರ್‌ ಹಾಗೂ ಕುವೈತ್‌ ಅಸಮಾಧಾನ ವ್ಯಕ್ತಪಡಿಸಿದ್ದವು. 

ಈ ನಡುವೆ ಬುರ್ಖಾ ಧರಿಸಿರುವ ಈ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಈ ಚಿತ್ರವು ಕತಾರ್‌ನ ಟಿವಿ ಆಂಕರ್‌ ಚಿತ್ರವಲ್ಲ ಬದಲಾಗಿ ಅಫ್ಘಾನಿಸ್ತಾನದ  ಟಿವಿ ಆಂಕರ್ ಚಿತ್ರ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ (Fact Check) ತಿಳಿದುಬಂದಿದೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಟಿವಿಯಲ್ಲಿನ ಎಲ್ಲಾ ಮಹಿಳಾ ನಿರೂಪಕರಿಗೆ ತಮ್ಮ ಮುಖವನ್ನು ಲೈವ್‌ನಲ್ಲಿ ಮುಚ್ಚುವಂತೆ ಆದೇಶಿಸಿದ್ದರು. ಹೀಗಾಗಿ ಅಫ್ಘಾನಿಸ್ತಾನದ ಈ ಟಿವಿ ಆಂಕರ್ ಬುರ್ಖಾ ಧರಿಸಿ ನಿರೂಪಣೆ ಮಾಡಿದ್ದರು. 

Claim: ಫೋಟೋದಲ್ಲಿರುವ ಮಹಿಳೆ 'ಫಾತಿಮಾ ಶೇಖ್,' ಕತಾರಿ ಸುದ್ದಿ ನಿರೂಪಕಿ ಎಂದು ಹೇಳುವ ಮೂಲಕ ಫೋಟೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. "ಕತಾರಿ ಆಂಕರ್ ಫಾತಿಮಾ ಶೇಖ್ ಅವರು ರಾಷ್ಟ್ರೀಯ ಟಿವಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ" ಎಂದು ಸೋಷಿಯಲ್‌ ಮೀಡಿಯಾ ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ. 

Photo of Afghanistan Anchor shared as Qatari Anchor Talking About Religious Freedom in India mnj

ಅನೇಕರು ಇದೇ ಮಾಹಿತಿ ಕಾಪಿ-ಪೇಸ್ಟ್ ಮಾಡುವ ಮೂಲಕ ಚಿತ್ರವನ್ನು ಹಂಚಿಕೊಂಡಿದ್ದರೆ, ಕೆಲವರು ಈ ಮಾಹಿತಿಯನ್ನು '#HindusUnderAttackInIndia' ಜೊತೆಗೆ ಹಂಚಿಕೊಂಡಿದ್ದಾರೆ. ಇಂಥಹ ಕೆಲವು ಪೋಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು 

Fact Check: ಈ ಫೋಟೋದ ಸತ್ಯಾಸತ್ಯತೆ ತಿಳಿಯಲು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಹಲವು ವರದಿಗಳು ಲಭ್ಯವಾಗುತ್ತವೆ. ಲಾಭೋದ್ದೇಶವಿಲ್ಲದ ಸಂಸ್ಥೆಯಾದ ನ್ಯಾಷನಲ್ ಪಬ್ಲಿಕ್ ರೇಡಿಯೊ (NPR) ವೆಬ್‌ಸೈಟ್‌ನಲ್ಲಿನ ಲೇಖನವೊಂದರಲ್ಲಿ ಈ ಚಿತ್ರವನ್ನು ಕಂಡುಕೊಂಡಿದ್ದೇವೆ, ವರದಿ ಈ ಚಿತ್ರ ಅಫ್ಘಾನಿಸ್ತಾನದ ಟಿವಿ ಆಂಕರ್ 'ಖತೇರೆಹ್ ಅಹ್ಮದಿ' ಚಿತ್ರ  ಎಂದು ಉಲ್ಲೇಖಿಸಿದೆ.

ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಟಿವಿ ಚಾನೆಲ್‌ಗಳಲ್ಲಿನ ಎಲ್ಲಾ ಮಹಿಳಾ ನಿರೂಪಕರಿಗೆ ತಮ್ಮ ಮುಖವನ್ನು ಲೈವ್‌ನಲ್ಲಿದ್ದಾಗ ಮುಚ್ಚುವಂತೆ ಆದೇಶಿಸಿದ್ದರು. ಇದಾದ ಬಳಿಕ ಮಹಿಳಾ ಆಂಕರ್ಸ್‌ ಲೈವ್‌ ಕಾರ್ಯಕ್ರಮಗಳಲ್ಲಿ ಮುಖ ಮುಚ್ಚಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. 

ಈಗ ವೈರಲ್‌ ಆಗಿರುವ ಫೋಟೋ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ನದ್ದಾಗಿದ್ದು (Associated Press), ಇದೇ ವಿವರಗಳೊಂದಿಗೆ   ಸುದ್ದಿ ಸಂಸ್ಥೆಯ ಆರ್ಕೈವ್‌ನಲ್ಲಿ ನಾವು ಚಿತ್ರವನ್ನು ಕಾಣಬಹುದು. 

Photo of Afghanistan Anchor shared as Qatari Anchor Talking About Religious Freedom in India mnj

ಇದಲ್ಲದೆ ಸಾಮಾಜಿಕ ಜಲಾತಾಣದಲ್ಲಿ ಈ ಫೋಟೋಗಾಗಿ ಹೆಚ್ಚು ಎಂಗೇಜಮೆಂಟ ಪಡೆದಿರುವ ಟ್ವೀಟ್‌ '@AdvisorZaidu'  (AdvisorZaidu) ಖಾತೆಯ ಬಯೋದಲ್ಲಿ 'ಎಲ್ಲಾ ಟ್ವೀಟ್‌ಗಳು 100 ಪ್ರತಿಶತ ನಕಲಿ' ಎಂದು ಉಲ್ಲೇಖಿಸಲಾಗಿದೆ. 

ಅಫ್ಘಾನಿಸ್ತಾನಕ್ಕೆ ಅಮೆರಿಕಾದ ಮಾಜಿ ರಾಯಭಾರಿ ಹಾಗೂ ಮಹಿಳಾ ಹಕ್ಕುಗಳ ವಕೀಲೆ ರೋಯಾ ರಹಮಾನಿ (Roya Rahmani) ಕೂಡ ಈ ಬಗ್ಗೆ ಟ್ವೀಟ್‌ ಮಾಡಿದ್ದು ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಬುರ್ಖಾ ಹಾಕಿರುವ ಮಹಿಳಾ ನಿರೂಪಕಿಯನ್ನು ಕಾಣಬಹುದು.  

 

 

Conclusion: ಹೀಗಾಗಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕತಾರಿ ಆಂಕರ್ ಎಂಬ ಮಾಹಿತಿಯೊಂದಿಗೆ ತಪ್ಪು ದಾರಿಗೆಳೆಯುವ  ಹಾಗೂ ಸಂಬಂಧವಿಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. 

ಇದನ್ನೂ ಓದಿ: ಕ್ರಿಕೆಟಿಗ ಶಕೀಬ್ ಅಲ್ ಹಸನ್ ನಿರ್ಮಿಸಿದ ಮಸೀದಿ ಹೆಸರಲ್ಲಿ ಉಕ್ರೇನ್ ರೈಲ್ವೆ ನಿಲ್ದಾಣದ ಫೋಟೋ ವೈರಲ್

ಇದನ್ನೂ ಓದಿ: ತಮಿಳುನಾಡಿನಲ್ಲಿ ಮಸೀದಿಗಿಂತ, ದೇವಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ನಿಗದಿ.?

Follow Us:
Download App:
  • android
  • ios