Asianet Suvarna News Asianet Suvarna News

Fact Check: ಸ್ವತಂತ್ರ ಭಾರತದ ಮೊದಲ ಇಫ್ತಾರ್ ಪಾರ್ಟಿಯಲ್ಲಿ‌ ನೆಹರು, ಅಂಬೇಡ್ಕರ್? ವೈರಲ್‌ ಫೋಟೊ ಸತ್ಯಾಸತ್ಯತೆ ಏನು?

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಬಿ.ಆರ್. ಅಂಬೇಡ್ಕರ್ ಮತ್ತು ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಇತರರೊಂದಿಗೆ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Jawaharlal Nehru s first Iftar Party viral photo is of having meal with cabinet mnj
Author
Bengaluru, First Published Apr 18, 2022, 3:54 PM IST

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಬಿ.ಆರ್. ಅಂಬೇಡ್ಕರ್ ಮತ್ತು ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಇತರರೊಂದಿಗೆ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು 1947 ರಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರು ಜವಾಹರ್ ಲಾಲ್ ನೆಹರು, ಬಿ.ಆರ್. ಅಂಬೇಡ್ಕರ್ ಮತ್ತು ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಅವರ ಸಹೋದ್ಯೋಗಿಗಳಿಗೆ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಟ‌ ಎಂಬ  ಹೇಳಿಕೆಯೊಂದಿಗೆ ವೈರಲ್ ಮಾಡಲಾಗಿದೆ. 

ಕಳೆದ ಕೆಲವು ವರ್ಷಗಳಿಂದ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ ಫೋಟೋ ಕ್ಯಾಪ್ಶನ್‌ನಲ್ಲಿ ಬರೆದಿರುವಂತೆ ಇದು ಮೌಲಾನಾ ಅಬ್ದುಲ್ ಕಲಾಂ ಸಹೋದ್ಯೋಗಿಗಳಿಗೆ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಟ ಅಲ್ಲ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ. 1948ರಲ್ಲಿ ಸಿ. ರಾಜಗೋಪಾಲಾಚಾರಿ ಗವರ್ನರ್-ಜನರಲ್ ಆದ ನಂತರ ಸರ್ದಾರ್ ಪಟೇಲ್ ಅವರು ಆಯೋಜಿಸಿದ್ದ ಔತಣ ಕೂಟ ಇದಾಗಿದೆ.

Claim: "ಸ್ವತಂತ್ರ ಭಾರತದ ಮೊದಲ ಇಫ್ತಾರ್ ಪಾರ್ಟಿ. 1947 ರಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಇಫ್ತಾರ್ ಕೂಟವನ್ನು ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಜವಾಹರ್ ಲಾಲ್ ನೆಹರು, ಬಿ.ಆರ್. ಅಂಬೇಡ್ಕರ್ ಮತ್ತು ಡಾ.ರಾಜೇಂದರ್ ಪ್ರಸಾದ್. ಸೇರಿದಂತೆ ಅವರ ಸಹೋದ್ಯೋಗಿಗಳಿಗೆ ಆಯೋಜಿಸಿದರು" ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ.

Jawaharlal Nehru s first Iftar Party viral photo is of having meal with cabinet mnj

ಇದೇ ಮಾದರಿಯಲ್ಲಿ ಫೇಸಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್‌ ಆಗಿವೆ

Jawaharlal Nehru s first Iftar Party viral photo is of having meal with cabinet mnj

Fact Check: ಏಷ್ಯಾನೆಟ್ ಸುವರ್ಣ ನ್ಯೂಸ್ ಗೂಗಲ್ ಲೆನ್ಸ್ ಮೂಲಕ ಫೋಟೋವನ್ನು ಪರಿಶೀಲಿಸಿದಾಗ,  alamyಯ ಈ ಲಿಂಕ್ಕನ್ನು ಪಡೆದುಕೊಂಡಿದೆ.  'ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಂಪುಟದ ಜೊತೆಗೆ ಆಗಿನ ಕಾನೂನು ಸಚಿವರಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಇತರರು ಊಟಕ್ಕೆ ಕುಳಿತಿದ್ದಾರೆ. ಶೀರ್ಷಿಕೆಗಳನ್ನು ನಮ್ಮ ಕೊಡುಗೆದಾರರು ಒದಗಿಸಿದ್ದಾರೆ' ಎಂಬ ಶೀರ್ಷಿಕೆಯನ್ನು ಫೋಟೋ ಹೊಂದಿದೆ. ಫೋಟೋದೊಂದಿಗೆ ಫೋಟೋ ವಿವರಗಳು ಸಹ ಲಭ್ಯವಿವೆ.

Jawaharlal Nehru s first Iftar Party viral photo is of having meal with cabinet mnj

ನಾವು ಚಿತ್ರವನ್ನು ಮತ್ತಷ್ಟು ಡೀಬಗ್ ಮಾಡಿದರೆ  ವಿಕಿಪೀಡಿಯಾದ ಈ ಲಿಂಕ್ಕನ್ನು ಪಡೆದುಕೊಂಡಿದ್ದೇವೆ. ಡಾ. ಚಕ್ರವರ್ತಿ ರಾಜಗೋಪಾಲಾಚಾರಿ  ಮೊದಲ ಭಾರತೀಯ ಜನರಲ್ ಗವರ್ನರ್ ಆದಾಗ  ವಲ್ಲಭಭಾಯಿ ಪಟೇಲ್ ಅವರು ಸಂಪುಟಕ್ಕೆ ನೀಡಿದ ಔತಣಕೂಟದ ಆಹ್ವಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರು, ಮೌಲಾನಾ ಆಜಾದ್ ಮತ್ತು ಇತರ ಸಚಿವರು ಉಪಸ್ಥಿತರಿದ್ದರು. ಜೂನ್ 1948 ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಕಾಶ್ಮೀರ ಫೈಲ್ಸ್‌ ತಂಡ ₹200 ಕೋಟಿ ದೇಣಿಗೆ ನೀಡಿದ್ರಾ?

ಇನ್ನು ಈ ಫೋಟೋ ಬಗ್ಗೆ ಇನಷ್ಟು ಮಾಹಿತಿ ಹುಡುಕಿದಾಗ ಭಾರತೀಯ ಪತ್ರಿಕಾ ಛಾಯಾಗ್ರಹಣದ (Press Photogarphy) ಕ್ಷೇತ್ರದ ಪ್ರಥಮ ಮಹಿಳೆ ಹೋಮೈ ವ್ಯಾರವಲ್ಲ (Homai Vyarawalla) ಇದೇ ಔತನಕೂಟದ ಫೋಟೋವೊಂದನ್ನು ಕ್ಲಿಕ್ಕಿಸಿದ್ದಾರೆ ಎಂದು ತಿಳಿದು ಬರುತ್ತದೆ. ಹೋಮೈ ವ್ಯಾರವಲ್ಲ ಕ್ಲಿಕ್ಕಿಸಿದ ಕೆಲವು ಐತಿಹಾಸಿಕ ಫೋಟೋಗಳ ಸಂಗ್ರಹ ಇಲ್ಲಿದೆ.

"ಈ ಡಾಕುಮೆಂಟ್‌ನಲ್ಲಿನ ಫೋಟೋದಲ್ಲಿ  1948ರಲ್ಲಿ ಸಿ. ರಾಜಗೋಪಾಲಾಚಾರಿ ಗವರ್ನರ್-ಜನರಲ್ ಆದ ನಂತರ ಸರ್ದಾರ್ ಪಟೇಲ್ ಅವರು ಆಯೋಜಿಸಿದ್ದ ಔತನ ಕೂಟದಲ್ಲಿ ನೆಹರೂ ಅವರ ಕ್ಯಾಬಿನೆಟ್" ಎಂದು ಬರೆಯಲಾಗಿದೆ. ಚಿತ್ರದಲ್ಲಿ ನೆಹರೂ ಅವರ ಪಕ್ಕದಲ್ಲಿ  ರಾಜ್ ಕುಮಾರಿ ಅಮೃತಾ ಕೌರ್ ಕುಳಿತಿರುವುದನ್ನು ಕೂಡ ಕಾಣಬಹುದು. 

Jawaharlal Nehru s first Iftar Party viral photo is of having meal with cabinet mnj

Conclusion: ಹೀಗಾಗಿ ಈ ಫೋಟೋ ಸತ್ಯ. ಆದರೆ ವೈರಲ್‌ ಪೋಸ್ಟ್‌ನೊಂದಿಗೆ ಬರೆಯಲಾಗಿರುವ ಮಾಹಿತಿ ಸುಳ್ಳು ಎನ್ನುವುದು ಫ್ಯಾಕ್ಟ್‌ ಚೆಕ್ ಮೂಲಕ ಸ್ಫಷ್ಟವಾಗುತ್ತದೆ. 

Follow Us:
Download App:
  • android
  • ios