Fact Check: ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಕಾಶ್ಮೀರ ಫೈಲ್ಸ್‌ ತಂಡ ₹200 ಕೋಟಿ ದೇಣಿಗೆ ನೀಡಿದ್ದು ಸುಳ್ಳು

ಅನುಪಮ್‌ ಖೇರ್‌ ಮತ್ತು ಮಿಥುನ್‌ ಚಕ್ರವರ್ತಿ ಅಭಿನಯಿಸಿರುವ ‘ದಿ ಕಾಶ್ಮೀರಿ ಫೈಲ್ಸ್‌’ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು

Rs200 collection of Kashmir Files donated to PM welfare fund is false mnj

Fact check: ಅನುಪಮ್‌ ಖೇರ್‌ ಮತ್ತು ಮಿಥುನ್‌ ಚಕ್ರವರ್ತಿ ಅಭಿನಯಿಸಿರುವ ‘ದಿ ಕಾಶ್ಮೀರಿ ಫೈಲ್ಸ್‌’ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಕಾಶ್ಮೀರಿ ಪಂಡಿತರ ನರಮೇಧ ಬಿಂಬಿಸುವ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ  ಬಿಡುಗಡೆಗೂ ಮುನ್ನ ಸಾಕಷ್ಟು ಕಾನೂನಾತ್ಮಕ ಅಡೆತಡೆಗಳನ್ನು ಎದುರಿಸಿಯೂ ನಿಗದಿಯಂತೆ ಮಾ.11ರಂದು ಸೀಮಿತ ಸಂಖ್ಯೆಯ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ದೇಶಾದ್ಯಂತ ಭಾರೀ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಅನೇಕ ವಿವಾದಗಳ ನಡುವೆಯೂ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಶನ್‌ ಮಾಡಿದೆ. 

ಈ ನಡುವೆ, "ಭರವಸೆಯಂತೆ 200 ಕೋಟಿ ರೂಪಾಯಿಗಳನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ದೇಣಿಗೆ ನೀಡಲಾಗಿದೆ" ಎಂಬ ಹೇಳಿಕೆಯೊಂದಿಗೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಟಿ ಪಲ್ಲವಿ ಜೋಷಿ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ

ದಿ ಕಾಶ್ಮೀರ್ ಫೈಲ್ಸ್  ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ನಿಜ ಆದರೆ ಪ್ರಧಾನಮಂತ್ರಿ ನಿಧಿಗೆ  ನಿರ್ಮಾಪಕರು 200 ಕೋಟಿ  ದೇಣಿಗೆ ನೀಡಿದ್ದಾರೆ ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದು ಬಂದಿದೆ.   

Claim: "ಅಭಿನಂದನೆಗಳು ಹಿಂದೂಗಳೇ, ಪ್ರಧಾನಿ ಪರಿಹಾರ ನಿಧಿಗೆ ದಿ ಕಶ್ಮೀರ ಫೈಲ್ಸ್  200 ಕೋಟಿಗಳ ಸಂಪೂರ್ಣ ಸಂಗ್ರಹವನ್ನು (ಗಳಿಕೆಯ) ದೇಣಿಗೆ ನೀಡಿದ  ವಿವೇಕ್ ಅಗ್ನಿಹೋತ್ರಿಯವರಿಗೆ, ಕೇಶವ ಅರೋರಾ ರಾಜ್ಯಾಧ್ಯಕ್ಷ ಹಿಂದೂ ಯುವ ವಾಹಿನಿಯ ವಂದನೆಗಳು" ಎಂಬ ಹೇಳಿಕೆಯೊಂದಿಗೆ ದಿ ಕಾಶ್ಮೀರ್ ಫೈಲ್ಸ್  ತಂಡವು ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗಿದೆ. ಇದೇ ಮಾದರಿಯಲ್ಲಿ ಹಲವು ಫೋಸ್ಟ್‌ಗಳು ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

Rs200 collection of Kashmir Files donated to PM welfare fund is false mnj

Fact Chek (Claim Review): ಗೂಗಲ್ ರಿವರ್ಸ್ ಇಮೇಜ್ ಬಳಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿತ್ರವನ್ನು ಹುಡುಕಿದಾಗ, ಮಾರ್ಚ್ 12, 2022 ರಂದು ಚಲನಚಿತ್ರದ ತಂಡವು ಪಿಎಂ ಮೋದಿ ಅವರನ್ನು ಭೇಟಿಯಾದ ಚಿತ್ರ ಸಿಕ್ಕಿದೆ. ಅಗ್ನಿಹೋತ್ರಿ, ಅವರ ಪತ್ನಿ ಮತ್ತು ನಟಿ ಪಲ್ಲವಿ ಜೋಶಿ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇರುವ ಫೋಟೋವನ್ನು ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.

ಮಾರ್ಚ್ 12 ರಂದು ಈ ಫೋಟೋವನ್ನುಅಗರ್ವಾಲ್ ಟ್ವೀಟ್‌ ಮಾಡಿದ್ದು "ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. #TheKashmirFiles ಕುರಿತು ಅವರ ಮೆಚ್ಚುಗೆ ಮತ್ತು ಉದಾತ್ತ ಮಾತುಗಳು ಅದನ್ನು ಹೆಚ್ಚು ವಿಶೇಷಗೊಳಿಸುತ್ತವೆ. ಈ ಚಿತ್ರ ನಿರ್ಮಿಸಲು ನಮಗೆ ಹೆಮ್ಮೆಯಾಗುತ್ತದೆ. ಧನ್ಯವಾದಗಳು ಮೋದಿಜಿ" ಎಂದಿದ್ದಾರೆ 

 

 

ಇನ್ನು ನಾವು ಗೂಗಲ್ ಕೀವರ್ಡ್‌ಗಳೊಂದಿಗೆ 'ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಕಾಶ್ಮೀರ ಫೈಲ್ಸ್ ಲಾಭವನ್ನು ದೇಣಿಗೆ ನೀಡುತ್ತಿದ್ದಾರೆ' ಎಂಬ ಕ್ಲೈಮ್ ಕುರಿತು ಹುಡುಕಿದಾಗ, ಚಲನಚಿತ್ರದ ಕಲ್ಯಾಣಕ್ಕಾಗಿ ದೇಣಿಗೆ ನೀಡುವ ಬಗ್ಗೆ ಪಲ್ಲವಿ ಜೋಶಿ ಅವರ ಪ್ರತಿಕ್ರಿಯೆಯ ಲಿಂಕ್ಕನ್ನು ನಾವು ಕಂಡುಹಿಡಿಯಬಹುದು. ಲಿಂಕ್‌ ಇಲ್ಲಿದೆ 

ಆರ್‌ಜೆ ಸಿದ್ಧಾರ್ಥ್ ಕಾನನ್ ಅವರೊಂದಿಗೆ ಮಾತನಾಡುವಾಗ, ಪಲ್ಲವಿ ಅವರು ದಿ ಟಾಸ್ಕೆಂಟ್ ಫೈಲ್ಸ್ ಗಳಿಕೆಯನ್ನು ದಿ ಕಾಶ್ಮೀರ್ ಫೈಲ್ಸ್ ಸಂಶೋಧನೆಗೆ ಬಳಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಂತರ ಅಗ್ನಿಹೋತ್ರಿ ಮಧ್ಯಪ್ರವೇಶಿಸಿ, "ಕಳೆದ ಕೆಲವು ವರ್ಷಗಳಿಂದ ನಾವು ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದೇವೆ ಮತ್ತು ಈ ಸೇವೆಯ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದರು. ನಾವು ಇದನ್ನು ಬಹಳ ಸಮಯದಿಂದ ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಮಾಡುತ್ತಲೇ ಇರುತ್ತೇವೆ. ಇದು ನಮ್ಮ ಮತ್ತು ಅವರ ನಡುವಿನ ವಿಷಯವಾಗಿದೆ ನಾವು 3ನೇ ವ್ಯಕ್ತಿಗೆ ಏನನ್ನೂ ನೀಡಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

'ಆರ್‌ಜೆ ಸಿದ್ಧಾರ್ಥ್ ಕಾನನ್ ಅವರೊಂದಿಗೆ ವಿವೇಕ್ ಅಗ್ನಿಹೋತ್ರಿ ಅವರ ರೇಡಿಯೊ ಸಂದರ್ಶನ' ಎಂದು ಇಂಗ್ಲೀಷ್‌ನಲ್ಲಿ ಹುಡುಕಿದಾಗ ನಮಗೆ ಶೀರ್ಷಿಕೆಯೊಂದಿಗೆ ಕೆಳಗಿನ ಲಿಂಕ್ ಸಿಕ್ಕಿತು. 

Vivek Agnihotri : Powerful Bollywood people spread fake news about The Kashmir Files!

ಪಲ್ಲವಿ ಜೋಶಿ ಅಥವಾ ವಿವೇಕ್ ಅಗ್ನಿಹೋತ್ರಿ ಅವರು ವೈರಲ್‌ ಪೋಸ್ಟ್‌ಗಳಲ್ಲಿ ಹೇಳಿರುವಂತೆ 200 ಕೋಟಿ ರೂ. ದೇಣಿಗೆ ನೀಡಿರುವ ಬಗ್ಗೆ ಎಲ್ಲೂ ಖಚಿತಪಡಿಸಿಲ್ಲ. ಹೀಗಾಗಿ ಕಾಶ್ಮೀರ ಪಂಡಿತರ ಕಲ್ಯಾಣಕ್ಕಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೇಳಿಕೊಂಡಂತೆ ನಿರ್ಮಾಪಕರಾಗಲಿ ಅಥವಾ ನಿರ್ದೇಶಕರಾಗಲಿ ಎಲ್ಲಿಯೂ ದೇಣಿಗೆಯನ್ನು ಬಹಿರಂಗಪಡಿಸಿಲ್ಲ.ಆದ್ದರಿಂದ ಸಾಮಾಜಿಕ ಜಾಲತಾಣಗಳಲಿ ವೈರಲ್‌ ಆಗಿರುವ ಚಿತ್ರ ನಿಜವಾಗಿದ್ದರೂ, ಅದರ ಜತೆ ವೈರಲ್‌ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. 

Latest Videos
Follow Us:
Download App:
  • android
  • ios