Fact Check: ಜಯಾ ಪಕ್ಕ ನಿರ್ಮಲಾ ಸೀತಾರಾಮನ್, ಹಳೆ ಪೋಟೋದ ಹೊಸ ಕತೆ!

ನಿರ್ಮಲಾ ಸೀತಾರಾಮನ್ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಒಂದೇ ಪೋಟೋದಲ್ಲಿ/ ವೈರಲ್ ಪೋಟೋದ ಅಸಲಿ ಸತ್ಯ ಏನು?/ ನಿಜಕ್ಕೂ ಚಿತ್ರದಲ್ಲಿ ಇರುವವರು ನಿರ್ಮಲಾ ಅವರೇನಾ?

Fact Check woman with Jayalalitha in viral picture is not Nirmala Sitharaman

ಬೆಂಗಳೂರು(ಮೇ 19)  ನಿರ್ಮಲಾ ಸೀತಾರಾಮನ್ ಭಾರತದ ಹಣಕಾಸು ಸಚಿವೆ. ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ನಿರ್ಮಲಾ ದೊಡ್ಡ ಸ್ಥಾನವನ್ನು ತಲುಪಿದ್ದಾರೆ.  ಕರ್ನಾಟಕ ಮೂಲದವರಾಗಿದ್ದರೂ ತಮಿಳುನಾಡಿನಲ್ಲಿ ಮನೆಮಾತಾದ ಇನ್ನೊಬ್ಬ ನಾಯಕಿ ಜಯಲಲಿತಾ.

ಸೋಶಿಯಲ್ ಮೀಡಿಯಾದಲ್ಲಿ ಪೋಟೋಒಂದು ವೈರಲ್ ಆಗಿದೆ.  ಕಪ್ಪು ಬಿಳುಪಿನ ಪೋಟೋದಲ್ಲಿ ಮಹಿಳೆಯರಿಬ್ಬರು ಇದ್ದಾರೆ.  ಈ ಪೋಟೋದಲ್ಲಿ ಇರುವವರು ಜಯಲಲಿತಾ ಮತ್ತು ನಿರ್ಮಲಾ ಸೀತಾರಾಮನ್ ಎಂದು ಸೋಶಿಯಲ್ ಮೀಡಿಯಾ ಹೇಳುತ್ತಿದೆ. ಹಲವಾರು ಜನ ಶೇರ್ ಸಹ ಮಾಡಿಕೊಂಡಿದ್ದಾರೆ.

Fact Check:  ಚೌಕಿದಾರ್ ಚೋರ್ ಎಂದು ಮೋದಿಗೆ ಸ್ವಾಗತ!

ಹಾಗಾದರೆ ಈ ಪೊಟೋದ ಅಸಲಿ ಕತೆ ಏನು? ಇಬ್ಬರು ತಮಿಳುನಾಡಿಲ್ಲಿಯೇ ರಾಜಕಾರಣದ ಜೀವನ ಕಳೆದವರು. ಆದರೆ ಜಯಲಲಿತಾ ಹುಟ್ಟಿದ್ದು 1948ರಲ್ಲಿ ನಿರ್ಮಲಾ ಜನ್ಮತಾಳಿದ್ದು 1959ರಲ್ಲಿ. ಶೇರ್ ಆಗುತ್ತಿರುವ ಪೋಟೋದಲ್ಲಿ ಅಂಥ ಯಾವ ಹೋಲಿಕೆ ಕಂಡುಬರುತ್ತಿಲ್ಲ. 

ಫಾರ್ ದ ಲವ್ ಆಫ್ ಸಾರಿ ಫೇಸ್ ಬುಕ್ ಪೇಜ್ ನಲ್ಲಿ ಈ ಪೋಟೋವನ್ನು ಮೊದಲ ಸಾರಿ ಹರಿಯಬಿಡಲಾಗಿದೆ. ತಮಿಳುನಾಡು ಸಿಎಂ ಜಯಲಲಿತಾ ಅವರೊಂದಿಗೆ ಪ್ರಖ್ಯಾತ ಲೇಖಕಿ ಶಿವಶಂಕರಿ  ಎಂಬ ಕ್ಯಾಪ್ಶನ್ ನೀಡಲಾಗಿತ್ತು. ಆದರೆ ಶೇರ್ ಮಾಡುವವರು ನಿರ್ಮಲಾ ಹೆಸರನ್ನು ಜತೆ ಮಾಡಿದ್ದಾರೆ. ಹಾಗಾಗಿ ಚಿತ್ರದಲ್ಲಿ ಇರುವ ಒಬ್ಬರು ಜಯಲಲಿತಾ ಆದರೆ ಇನ್ನೊಬ್ಬರು ಶಿವಶಂಕರಿ ಎಂಬುದು ದಾಖಲಾಗಿದೆ.

 

 

 

 

Latest Videos
Follow Us:
Download App:
  • android
  • ios