ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯ ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ರೆಸಾರ್ಟ್‌ಗಳನ್ನು ಅಕ್ಟೋಬರ್‌ 15ರ ವರೆಗೆ ಮುಚ್ಚಲು ಸೂಚಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯ ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ರೆಸಾರ್ಟ್‌ಗಳನ್ನು ಅಕ್ಟೋಬರ್‌ 15ರ ವರೆಗೆ ಮುಚ್ಚಲು ಸೂಚಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರವಾಸೋದ್ಯಮ ಇಲಾಖೆ ಹೆಸರಿನ ಪ್ರಕಟಣೆಯೊಂದನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ. ಅದರಲ್ಲಿ ಕೊರೋನಾ ವೈರಸ್‌ ವಿಶ್ವವ್ಯಾಪಿ ವ್ಯಾಪಿಸಿರುವ ಹಿನ್ನೆಲೆ ಭಾರತ ಪ್ರವಾಸೋದ್ಯಮ ಸಚಿವಾಲಯವು ದೇಶದ ಎಲ್ಲಾ ರೆಸ್ಟೋರೆಂಟ್‌, ಹೋಟೆಲ್‌, ರೆಸಾರ್ಟ್‌ಗಳನ್ನು ಅಕ್ಟೋಬರ್‌ 15ರ ವರೆಗೆ ಮುಚ್ಚಲು ಸೂಚಿಸಿದೆ. ಅದರಲ್ಲೂ ಉತ್ತರ ಭಾರತದ ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ಮುಚ್ಚಲು ಕಡ್ಡಾಯವಾಗಿ ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ತೆರೆದಿದ್ದರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ' ಎಂದಿದೆ.

Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ ವೈರಲ್‌ ಸುದ್ದಿ ಸುಳ್ಳು. ಪ್ರವಾಸೋದ್ಯಮ ಸಚಿವಾಲಯ ಇಂಥ ಯಾವುದೇ ಆದೇಶವನ್ನೂ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿ ಟ್ವೀಟ್‌ ಮಾಡಿದೆ.

Scroll to load tweet…
 ಜೊತೆಗೆ ವೈರಲ್‌ ಆಗಿರುವ ಪ್ರಕಟಣೆಯಲ್ಲಿ ಸಾಕಷ್ಟುವ್ಯಾಕರಣ ದೋಷಗಳಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ನಕಲಿ ಪ್ರಕಟಣೆ ಎಂದುಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಪ್ರವಾಸೋದ್ಯಮ ಸಚಿವಾಲಯದ ಆದೇಶ ಎಂದು ಪದೇ ಪದೇ ಹೇಳಲಾಗಿದೆ. ಹಾಗೆಯೇ ಇಲ್ಲಿ ಉಲ್ಲೇಖಿಸಿರುವ ವೆಬ್‌ಸೈಟ್‌ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಕೂಡ ಅಲ್ಲ.

- ವೈರಲ್ ಚೆಕ್