Fact Check| ಶಾಹೀನ್ ಬಾಗ್ ಪ್ರತಿಭಟನಾ ಸ್ಥಳದಲ್ಲಿ ಅನೈತಿಕ ಚಟುವಟಿಕೆ!
ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ನೆಪದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಫ್ಯಾಕ್ಟ್ ಚೆಕ್
ನವದೆಹಲಿ[ಮಾ.16]: ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ನೆಪದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪೋರ್ನ್ ವಿಡಿಯೋ ಮತ್ತು ಆ ವಿಡಿಯೋದ ಸ್ಕ್ರೀನ್ಶಾಟ್ ಫೋಟೋವನ್ನು ಪೋಸ್ಟ್ ಮಾಡಿ, ‘ಮಾಧ್ಯಮಗಳು ಈ ರೀತಿಯ ಪ್ರತಿಭಟನೆಯನ್ನು ನಿಮಗೆ ತೋರಿಸಲ್ಲ. ಇದು ಶಾಹೀನ್ ಬಾಗ್ನಲ್ಲಿ ನಡೆದ ಇತ್ತೀಚಿನ ಪ್ರತಿಭಟನೆ ’ ಎಂದು ಹಿಂದಿಯಲ್ಲಿ ವಿಡಂಬನಾತ್ಮಕವಾಗಿ ಬರೆದು ಪೋಸ್ಟ್ ಮಾಡಲಾಗಿತ್ತು. ಅನಂತರ ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
Fact Check| ಶಾಹೀನ್ ಬಾಗ್ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ!
ಆದರೆ ನಿಜಕ್ಕೂ ಇದು ಶಾಹೀನ್ ಬಾಗ್‌ನದ್ದೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ವೈರಲ್ ವಿಡಿಯೋದ ಅಸಲಿ ಕತೆ ಬಯಲಾಗಿದೆ.
ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಹೊರಟಾಗ ವಿಡಿಯೋ ಎರಡು ವರ್ಷ ಹಳೆಯದ್ದು, ಇದಕ್ಕೂ ಶಾಹೀನ್ ಬಾಗ್ ಪ್ರತಿಭಟನೆಗೂ ಸಂಬಂಧ ಇಲ್ಲ ಎಂಬುದು ಖಚಿತವಾಗಿದೆ. ಈ ವಿಡಿಯೋದ ಎರಡು ಫೋಟೋಗಳನ್ನು ಪೋರ್ನ್ ವೆಬ್ಸೈಟ್ವೊಂದು ಮೇ 30, 2018ರಂದು ಟ್ವೀಟ್ ಮಾಡಿತ್ತು. ಅದರಲ್ಲಿ ವಿಡಿಯೋದಲ್ಲಿ ಇರುವವರು ಉಜ್ಬೇಕಿಸ್ತಾನದವರು ಎಂದು ಹೇಳಲಾಗಿತ್ತು.
ಅಲ್ಲಿಗೆ ಈ ವಿಡಿಯೋಗೂ ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟಿಸುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧ ಇಲ್ಲ. ಶಾಹೀನ್ ಬಾಗ್ ಪ್ರತಿಭಟನೆಗೆ ಮಸಿ ಬಳಿಯುವ ಉದ್ದೇಶ