Fact Check| ಶಾಹೀನ್‌ ಬಾಗ್‌ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ!

ಶಾಹೀನ್‌ ಬಾಗ್‌ ಹಿಂಭಾಗ ಸ್ವಚ್ಛತೆ ವೇಳೆ ಮುನ್ಸಿಪಲ್‌ ಕಾರ್ಮಿಕರಿಗೆ ನೂರಾರು ಕಾಂಡೋಮ್‌ಗಳು ಸಿಕ್ಕಿವೆ ಎಂದು ಕಾಂಡೋಮ್‌ಗಳ ರಾಶಿಯೇ ಬಿದ್ದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ

Fact check Old photo shared claiming condoms found in Shaheen Bagh

ನವದೆಹಲಿ[ಫೆ.20]: ಪೌರತ್ವ ತಿದ್ದುಪಡಿ ಮಸೂದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ದೆಹಲಿ ಶಾಹೀನ್‌ ಬಾಗ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಶಾಹೀನ್‌ ಬಾಗ್‌ ಹಿಂಭಾಗ ಸ್ವಚ್ಛತೆ ವೇಳೆ ಮುನ್ಸಿಪಲ್‌ ಕಾರ್ಮಿಕರಿಗೆ ನೂರಾರು ಕಾಂಡೋಮ್‌ಗಳು ಸಿಕ್ಕಿವೆ ಎಂದು ಕಾಂಡೋಮ್‌ಗಳ ರಾಶಿಯೇ ಬಿದ್ದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ.

ಕೆಲವರು ಇದನ್ನು ಪೋಸ್ಟ್‌ ಮಾಡಿ, ‘ಶಾಹೀನ್‌ ಬಾಗ್‌ ಪ್ರದೇಶ ಸ್ವಚ್ಛ ಮಾಡುವಾಗ ಮುನ್ಸಿಪಲ್‌ ಸಿಬ್ಬಂದಿಗಳು ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ’ ಎಂದು ಒಕ್ಕಣೆ ಬರೆಯುತ್ತಿದ್ದಾರೆ. ಇದೀಗ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತು ಟ್ವೀಟರ್‌ನಲ್ಲಿ ವೈರಲ್‌ ಆಗುತ್ತಿದೆ.

ಆದರೆ ವೈರಲ್‌ ಆಗಿರುವ ಫೋಟೋ ಹಿಂದಿನ ಸತ್ಯಾಸತ್ಯ ಏನೆಂದು ಬೂಮ್‌ ಸುದ್ದಿಸಂಸ್ಥೆ ಪರಿಶೀಲಸಿದಾಗ, ವೈರಲ್‌ ಫೋಟೋ 2016ರದ್ದು. ಶಾಹೀನ್‌ ಬಾಗ್‌ ಪ್ರತಿಭಟನೆಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿಯ ಸುಳ್ಳುಸುದ್ದಿ ಹರಡಲಾಗಿದೆ ಎನ್ನುವ ವಾಸ್ತವ ಬಯಲಾಗಿದೆ.

ಬೆಂಗಳೂರಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿನ ಅಮೂಲ್ಯ

ರಿವರ್ಸ್‌ ಇಮೇಜ್‌ನಲ್ಲಿ ಹುಡಕಹೊರಟಾಗ ವಿಯೆಟ್ನಾಂ ಭಾಷೆಯ ವೆಬ್‌ಸೈಟ್‌ವೊಂದರಲ್ಲಿ ಮೂರು ವರ್ಷದ ಹಿಂದೆ ಇದೇ ಫೋಟೋ ಪ್ರಕಟವಾಗಿದ್ದು ಕಂಡುಬಂದಿದೆ. ಅಲ್ಲಿಗೆ ವೈರಲ್‌ ಆಗಿರುವ ಫೋಟೋ ದೆಹಲಿಯದ್ದೂ ಅಲ್ಲ, ಈಗಿನದ್ದೂ ಅಲ್ಲ ಎಂಬುದು ಸ್ಪಷ್ಟ. ಆದರೆ ಈ ಚಿತ್ರದ ಮೂಲ ಯಾವುದು ಎಂಬುದು ಇನ್ನೂ ತಿಳಿದುಬಂದಿಲ್ಲ.

Latest Videos
Follow Us:
Download App:
  • android
  • ios