ಇತ್ತೀ​ಚೆ​ಗೆ ಕರೋನಾ ವೈರಸ್‌ ಬಗ್ಗೆ ವಿಶ್ವ​ಸಂಸ್ಥೆಯ ಯುನೆ​ಸೆಫ್‌ (ವಿ​ಶ್ವ​ಸಂಸ್ಥೆಯ ಅಂತಾ​ಷ್ಟ್ರೀಯ ಮಕ್ಕಳ ತುರ್ತು ನಿಧಿ​)ಯು ಸಲ​ಹೆಯನ್ನು ನೀಡಿದೆ ಎನ್ನುವ ಪ್ರಕ​ಟ​ಣೆ​ಯೊಂದು ಹಲ​ವಾರು ಭಾಷೆ​ಗ​ಳಲ್ಲಿ ವೈರಲ್‌ ಆಗು​ತ್ತಿ​ದೆ.

ಅದ​ರಲ್ಲಿ ‘ಕೊರೋನಾ ವೈರಸ್‌ ಗಾತ್ರ​ದಲ್ಲಿ 400-500 ಮೈಕ್ರೋ ಸೂಕ್ಷ್ಮ​ವ್ಯಾಸ ದಪ್ಪ​ನಾ​ಗಿದ್ದು, ಯಾವುದೇ ಮಾಸ್ಕ್‌ ಇದರ ಪ್ರವೇ​ಶ​ವನ್ನು ತಡೆ​ಯು​ತ್ತದೆ. ನೆಲ ವಸ್ತು​ಗಳು, ಕೈಗಳ ಮೇಲೆ ಇರು​ತ್ತದೆ ವಿನಃ ಗಾಳಿ​ಯಲ್ಲಿ ಇರು​ವು​ದಿಲ್ಲ. ಹಾಗೂ ಗಾಳಿ​ಯಲ್ಲಿ ಪ್ರಸಾ​ರ​ವಾ​ಗು​ವು​ದಿಲ್ಲ. ಕೊರೋನಾ ವೈರಸ್‌ ವಸ್ತು​ಗಳ ಮೇಲೆ 12 ಗಂಟೆ​ಗಳ ಕಾಲ ಜೀವಿ​ಸು​ತ್ತದೆ. ಆದ್ದ​ರಿಂದ ಡಿಟ​ರ್ಜೆಂನಿಂದ ಶುಚಿ ಮಡ​ಬೇಕು.

Fact Check| ದಿಲ್ಲಿ ಗಲಭೆ: ಆಪ್‌ನಿಂದ ಮುಸ್ಲಿಮರಿಗೆ ಮಾತ್ರ ಪರಿಹಾರ!

ಬಟ್ಟೆ​ಗಳ ಮೇಲೆ 9 ಗಂ​ಟೆ​ಗಳ ಕಾಲ ಜೀವಿ​ಸು​ತ್ತದೆ. ಹಾಗಾಗಿ ಬಟ್ಟೆ​ಯನ್ನು ತೊಳೆದು ಬಸಿ ಹಾಕಿ​ದರೆ ವೈರಾಣು ಸಾಯು​ತ್ತದೆ. ಈ ವೈರಸ್‌ ಅನ್ನು 26-27 ಡಿಗ್ರಿ ಉಷ್ಣಾಂಶ ಕೊಲ್ಲು​ತ್ತದೆ.  ವಿಶೇಷ ಸೂಚ​ನೆ-ಐಸ್‌​ಕ್ರೀಮ್‌ ಮತ್ತು ತಂಪು ಪಾನೀ​ಯ​ಗ​ಳಿಂದ ದೂರ ಇರಿ’ ಎಂದು ಹೇಳ​ಲಾ​ಗಿ​ದೆ. ಸಾವಿ​ರಾರು ಜನರು ಈ ಪ್ರಕ​ಟ​ಣೆ​ಯನ್ನು ಸೋಷಿ​ಯಲ್‌ ಮೀಡಿ​ಯಾ​ದಲ್ಲಿ ಪೋಸ್ಟ್‌ ಮಾಡಿ​ಕೊಂಡಿದ್ದಾ​ರೆ.

ಆದರೆ ನಿಜಕ್ಕೂ ಯುನಿ​ಸೆಫ್‌ ಈ ರೀತಿಯ ಸಲ​ಹೆ​ಗ​ಳನ್ನು ನೀಡಿ​ದೆಯೇ ಎಂದು ಪರಿ​ಶೀ​ಲಿ​ಸಿ​ದಾಗ ಇದು ಸುಳ್ಳು ಸುದ್ದಿ, ಯುನಿ​ಸೆಫ್‌ ಹೆಸ​ರಲ್ಲಿ ಸುಳ್ಳು ಹರ​ಡ​ಲಾ​ಗು​ತ್ತಿದೆ ಎಂಬುದು ಖಚಿ​ತ​ವಾ​ಗಿ​ದೆ. ಬೂಮ್‌ ಯುನಿ​ಸೆಫ್‌ ಸೋಷಿ​ಯಲ್‌ ಮೀಡಿಯಾ ಚಾನೆ​ಲ್‌​ಗ​ಳನ್ನು ಪರಿ​ಶೀ​ಲಿ​ಸಿ​ದಾಗ ಈ ರೀತಿಯ ಯಾವುದೇ ಪ್ರಕ​ಟಣೆ ಲಭ್ಯ​ವಾ​ಗಿ​ಲ್ಲ. ಅದರ ವೆಬ್‌​ಸೈ​ಟಿ​ನಲ್ಲೂ ಈ ಪ್ರಕ​ಟಣೆ ಇಲ್ಲ.

ಯುನೆ​ಸೆಫ್‌ ವಕ್ತಾ​ರ​ರೊ​ಬ್ಬರು ಈ ಬಗ್ಗೆ ಸ್ಪಷ್ಟೀ​ಕ​ರ​ಣ​ವನ್ನೂ ನೀಡಿ ಇದನ್ನು ಯುನಿ​ಸೆಫ್‌ ಬಿಡು​ಗಡೆ ಮಾಡಿಲ್ಲ ಎಂದಿ​ದ್ದಾರೆ. ಅಲ್ಲದೆ ಈ ಪ್ರಕ​ಟಣೆ​ಯಲ್ಲಿ ಹೇಳ​ಲಾದ ಬಹು​ತೇಕ ಅಂಶ​ಗ​ಳಿಗೆ ವೈಜ್ಞಾ​ನಿಕ ಆಧಾ​ರವೇ ಇಲಲ. ಹಾಗಾಗಿ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್