Fact Check: ಎಚ್‌ಸಿಕ್ಯೂ ಮಾತ್ರೆ ನೀಡಿದ್ದಕ್ಕೆ ಸ್ವಿಸ್ ಗೌರವ?
ಸ್ವಿಟ್ಜರ್ಲೆಂಡ್‌ನ ಮೌಟರ್ ಹಾರ್ನ್ ಪರ್ವತದ ಮೇಲೆ ಭಾರತದ ಧ್ವಜವನ್ನು ಬೆಳಕಿನ ಮೂಲಕ ಇತ್ತೀಚೆಗೆ ಚಿತ್ರಿಸಲಾಗಿತ್ತು. ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಮಾತ್ರೆಗಳನ್ನು ನೀಡಿದಕ್ಕೆ ಕೃತಜ್ಞಾಪೂರ್ವಕವಾಗಿ ಸ್ವಿಟ್ಜರ್ಲೆಂಡ್ ಸರ್ಕಾರ ಈ ರೀತಿ ಗೌರವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು.
ಸ್ವಿಟ್ಜರ್ಲೆಂಡ್‌ನ ಮೌಟರ್ ಹಾರ್ನ್ ಪರ್ವತದ ಮೇಲೆ ಭಾರತದ ಧ್ವಜವನ್ನು ಬೆಳಕಿನ ಮೂಲಕ ಇತ್ತೀಚೆಗೆ ಚಿತ್ರಿಸಲಾಗಿತ್ತು. ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಮಾತ್ರೆಗಳನ್ನು ನೀಡಿದಕ್ಕೆ ಕೃತಜ್ಞಾಪೂರ್ವಕವಾಗಿ ಸ್ವಿಟ್ಜರ್ಲೆಂಡ್ ಸರ್ಕಾರ ಈ ರೀತಿ ಗೌರವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಕೆಲ ರಾಜಕೀಯ ಮುಖಂಡರೂ, ಕೆಲ ಸುದ್ದಿಸಂಸ್ಥೆಗಳೂ ಇದೇ ಅರ್ಥದಲ್ಲಿ ಈ ಫೋಟೋವನ್ನು್ನ ಶೇರ್ ಮಾಡಿದ್ದರು.
Fact Check| ಮಾಧ್ಯಮಗಳ ಎಡವಟ್ಟಿಂದ ಮುಸ್ಲಿಂಗೆ ಥಳಿತ!
ಆದರ ಭಾರತ ಎಚ್‌ಸಿಕ್ಯು ಮಾತ್ರೆಯನ್ನು ನೀಡಿದ್ದಕ್ಕಾಗಿ ಸ್ವಿಸ್ ಸರ್ಕಾರ ತ್ರಿರಂಗ ಧ್ವಜವನ್ನು ಮೌಟರ್ ಪರ್ವತದ ಮೇಲೆ ಬೆಳಕಿನ ರೇಖೆಗಳಲ್ಲಿ ಚಿತ್ರೀಕರಿಸಿ ಕೃತಜ್ಞತೆ ಸಲ್ಲಿಸಿತ್ತೇ ಎಂದು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ವಾಸ್ತವವಾಗಿ ಸ್ವಿಟ್ಜರ್ಲೆಂಡ್ ಸರ್ಕಾರ ಭಾರತದ ತ್ರಿವರ್ಣ ಧ್ವಜವನ್ನು ಮೌಟರ್ ಹಾರ್ನ್ ಪರ್ವತದ ಮೇಲೆ ಮೂಡಿಸಿದ್ದು ನಿಜ. ಆದರೆ ಎಚ್‌ಸಿಕ್ಯೂ ಮಾತ್ರೆಗಳನ್ನು ನೀಡಿದ್ದಕ್ಕಾಗಿ ಈ ಗೌರವ ಸಮರ್ಪಿಸಿದ್ದಲ್ಲ. ಏಕತೆಯ ಸಂಕೇತವಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಹಲವಾರು ದೇಶಗಳ ಧ್ವಜವನ್ನು ಹೀಗೆ ಬೆಳಕಿನ ಮೂಲಕ ಚಿತ್ರಿಸಲಾಗಿತ್ತು.
Fact Check: ಕೇಸರಿ ದಬ್ಬಾಳಿಕೆ ನಡೆಯುತ್ತಿದೆಯೇ?
ಚೀನಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ಜಪಾನ್ ಈ ಪಟ್ಟಿಯಲ್ಲಿವೆ. ಮೌಟರ್‌ಹಾರ್ನ್ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಭಾರತವಷ್ಟೇ ಅಲ್ಲದೆ ಈ ಎಲ್ಲಾ ದೇಶಗಳ ಧ್ವಜವನ್ನು ಬೆಳಕಿನಲ್ಲಿ ಚಿತ್ರಿಸಿ, ಆ ಎಲ್ಲಾ ದೇಶಗಳ ಕೊರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿರುವುದಾಗಿ ಹೇಳಲಾಗಿದೆ. ಅಲ್ಲಿನ ಭಾರತದ ರಾಯಭಾರ ಕಚೇರಿ ಕೂಡ ಇದೇ ಅರ್ಥದಲ್ಲಿ ಟ್ವೀಟ್ ಮಾಡಿದೆ.