Fact Check: ಕೇಸರಿ ದಬ್ಬಾಳಿಕೆ ನಡೆಯುತ್ತಿದೆಯೇ?

ಕೇಸರಿ ಶಾಲು ಧರಿಸಿ, ಕತ್ತಿ ಗುರಾಣಿ ಹಿಡಿದಿರುವ ಗುಂಪೊಂದು ವ್ಯಕ್ತಿಯೊಬ್ಬನ ಕೊರಳ ಪಟ್ಟಿಹಿಡಿದು ಬೆದರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇವರು ಆರ್‌ಎಸ್‌ಎಸ್‌ ಭಯೋತ್ಪಾದಕರು. ಇವರೀಗ ಭಾರತದಲ್ಲಿ ಸರ್ಕಾರವನ್ನೇ ನಿಯಂತ್ರಿಸುತ್ತಿದ್ದಾರೆ’ ಎಂದು ಹೇಳಲಾಗುತ್ತಿದೆ. 

fact check of Parzania movie photos shared to falsely claim RSS men are terrorists

Fact Check: ಜಾಗ್ರತೆ! ವಾಟ್ಸಾಪ್‌ ಮೇಲೆ ಸರ್ಕಾರ ನಿಗಾ ಇಡುತ್ತಂತೆ!

ಮತ್ತೆ ಕೆಲವರು ಇದೇ ರೀತಿಯ ಫೋಟೋವನ್ನು ಪೋಸ್ಟ್‌ ಮಾಡಿ, ‘ಭಾರತದಲ್ಲಿ ಆರ್‌ಎಸ್‌ಎಸ್‌ ಭಯೋತ್ಪಾದಕತೆಯನ್ನು ನಿಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ಟ್ವೀಟರ್‌ನಲ್ಲಿ ಭಾರಿ’ ವೈರಲ್‌ ಆಗುತ್ತಿವೆ.

fact check of Parzania movie photos shared to falsely claim RSS men are terrorists

ಆದರೆ ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ 2002ರ ಗುಜರಾತ್‌ ಗಲಭೆಯಲ್ಲಿ ನಾಪತ್ತೆಯಾದ ಪಾರ್ಸಿ ಹುಡುಗನೊಬ್ಬನ ಜೀವನ ಆಧಾರಿತ ಸಿನಿಮಾ ‘ಪರ್ಜಾನಿಯಾ’ದ ಸ್ಕ್ರೀನ್‌ಶಾಟ್‌ ಚಿತ್ರಗಳು ದೊರೆತಿವೆ.

Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?

ಈ ಜಾಡು ಹಿಡಿದು ಪರ್ಜಾನಿಯಾ ಸಿನಿಮಾ ವೀಕ್ಷಿಸಿದಾಗ ಇದೇ ಸಿನಿಮಾದ ಸ್ಕ್ರೀನ್‌ಶಾಟ್‌ ಫೋಟೋಗಳನ್ನೇ ವೈರಲ್‌ ಪೋಸ್ಟ್‌ಗಳಲ್ಲಿ ಬಳಕೆ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಪರ್ಜಾನಿಯಾ ಸಿನಿಮಾವು 2002ರ ಗುಜರಾತ್‌ ಕೋಮುಗಲಭೆ ಬಳಿಕ ಕಣ್ಮರೆಯಾದ ಪಾರ್ಸಿ ಹುಡುಗನೊಬ್ಬನ ಜೀವನದ ಕಥಾಹಂದರವನ್ನು ಹೊಂದಿದೆ. ನಾಸಿರುದ್ದೀನ್‌ ಶಾ ಮತ್ತು ಸಾರಿಕಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

-  ವೈರಲ್ ಚೆಕ್ 

Latest Videos
Follow Us:
Download App:
  • android
  • ios