Fact Check: ತಮಿಳುನಾಡಿನಲ್ಲಿ ಮಸೀದಿಗಿಂತ, ದೇವಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ನಿಗದಿ.?
ತಮಿಳುನಾಡಿನಲ್ಲಿ (Tamilnadu) ಧಾರ್ಮಿಕ ಕೇಂದ್ರಗಳ ವಿದ್ಯುತ್ ದರ (Power Tariff) ನಿಗದಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನಲ್ಲಿ (Tamilnadu) ಧಾರ್ಮಿಕ ಕೇಂದ್ರಗಳ ವಿದ್ಯುತ್ ದರ (Power Tariff) ನಿಗದಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನಲ್ಲಿ ಹಿಂದೂ ದೇಗುಲಗಳಿಗೇ ಒಂದು ವಿದ್ಯುತ್ ದರ ಮತ್ತು ಚರ್ಚ್ (Chaurch) ಮತ್ತು ಮಸೀದಿಗಳಿಗೇ ಪ್ರತ್ಯೇಕ ವಿದ್ಯುತ್ ದರ (Power Tariff) ವಿಧಿಸಲಾಗುತ್ತಿದೆ. ಹಿಂದೂ ದೇವಾಲಯಗಳು ಒಂದು ಯುನಿಟ್ ವಿದ್ಯುತ್ ಬಳಕೆಗೆ 8 ರು. ನೀಡಬೇಕು. ಆದರೆ ಚರ್ಚ್ ಮತ್ತು ಮಸೀದಿಗಳು ಒಂದು ಯುನಿಟ್ ವಿದ್ಯುತ್‌ಗೆ ಕೇವಲ 2.85 ರುಪಾಯಿ ನೀಡಬೇಕು ಎಂದು ಈ ಚಿತ್ರದಲ್ಲಿ ಬರೆಯಲಾಗಿದೆ. ಈ ಪೋಸ್ಟರ್‌ನೊಂದಿಗೆ ‘ತಮಿಳುನಾಡು ಸರ್ಕಾರ ಅಲ್ಪಸಂಖ್ಯಾತ ಧರ್ಮಗಳ ಪರವಾಗಿದೆ. ಇದು ಭಾರತದ ಜಾತ್ಯತೀತ ನಿಲುವಿನ ಅವಸ್ಥೆ’ ಎಂದು ನೆಟ್ಟಿಗರು ಒಕ್ಕಣೆ ಬರೆದುಕೊಂಡಿದ್ದಾರೆ. ಇದೀಗ ವಾಟ್ಸ್‌ಆ್ಯಪ್ ಸೇರಿದಂತೆ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
Fact check: ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಕಾಶ್ಮೀರ ಫೈಲ್ಸ್ ದೇಣಿಗೆ ನೀಡಿದ್ದು ಸುಳ್ಳು
ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಮತ್ತು ತಪ್ಪು ಮಾಹಿತಿ ಎಂಬುದು ಖಚಿತವಾಗಿದೆ. ವಾಸ್ತವವಾಗಿ ತಮಿಳುನಾಡು ಸರ್ಕಾರ ಧರ್ಮದ ಆಧಾರದಲ್ಲಿ ವಿದ್ಯುತ್ ದರ ನಿಗದಿ ಮಾಡಿಲ್ಲ. ವಿದ್ಯುತ್ ದರವನ್ನು 2017ರಲ್ಲಿ ಕಡೆಯಬಾರಿಗೆ ಪರಿಷ್ಕರಣೆ ಮಾಡಲಾಗಿದೆ. 2020ರಲ್ಲಿಯೂ ಇಂಥದ್ದೇ ವದಂತಿ ತಮಿಳುನಾಡಿನಲ್ಲಿ ಹಬ್ಬಿತ್ತು. ಹಾಗಾಗಿ ವೈರಲ್ ಸುದ್ದಿ ಸುಳ್ಳು.
- ವೈರಲ್ ಚೆಕ್