fact Check : ರಾಮಮಂದಿರ ಕೆಲಸ ಅರ್ಧ ಮುಗಿಯಿತಾ?

ಇಡೀ ದೇಶದ ಜನರು ಕುತೂಹಲದಿಂದ ಕಾಯುತ್ತಿರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೊದಲ ಹಂತದ ನಿರ್ಮಾಣ ಕಾಮಗಾರಿ ಮುಗಿದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ನಿಜವೇ ಆಗಿದ್ದರೆ ಸಂತೋಷದ ಸುದ್ದಿ. ಹಾಗಾದ್ರೆ ನಿಜನಾ ಇದು? 

fact Check of Images of the Ram Temple in Ayodhya Under construction hls

ಇಡೀ ದೇಶದ ಜನರು ಕುತೂಹಲದಿಂದ ಕಾಯುತ್ತಿರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೊದಲ ಹಂತದ ನಿರ್ಮಾಣ ಕಾಮಗಾರಿ ಮುಗಿದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಎರಡು ಫೋಟೋಗಳನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ನೆಟ್ಟಿಗರು ಈ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಅಯೋಧ್ಯೆಯ ರಾಮ ಮಂದಿರದ ಮೊದಲ ಹಂತದ ಕಾಮಗಾರಿಯ ಚಿತ್ರ ಇದು. ಈ ಫೋಟೋ ನೋಡಿ ಸಂತೋಷಪಡುವವರು ಒಳ್ಳೆಯ ಮನಸ್ಸಿನಿಂದ ಜೈ ಶ್ರೀರಾಮ್‌ ಎಂದು ಹೇಳಿ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

fact Check of Images of the Ram Temple in Ayodhya Under construction hls

ಆದರೆ ನಿಜಕ್ಕೂ ವೈರಲ್‌ ಫೋಟೋಗಳು ನಿರ್ಮಾಣ ಹಂತದ ರಾಮಮಂದಿರದ್ದೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಸುದ್ದಿಸಂಸ್ಥೆಯೊಂದು ಈ ಫೋಟೋ ಪ್ರಕಟಿಸಿ ಅಕ್ಟೋಬರ್‌ 30 ರಂದು ವರದಿ ಮಾಡಿರುವುದು ಪತ್ತೆಯಾಗಿದೆ.

Fact Check : ಪ್ಯಾಂಗಾಂಗ್ ಸರೋವರದ ಬಳಿ 2 ಸ್ಥಾನ ಆಕ್ರಮಿಸಿಕೊಂಡಿತಾ ಚೀನಾ?

ಅದರಲ್ಲಿ ಕಾಮಗಾರಿ ಹಂತದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದ ಮುಖ್ಯ ಸಂಕೀರ್ಣ ಎಂದು ಫೋಟೋ ಶೀರ್ಷಿಕೆ ಬರೆಯಲಾಗಿತ್ತು. ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆ ಅಡಿಯಲ್ಲಿ ಈ ಕಾಮಗಾರಿ ನಡೆಸುತ್ತಿದ್ದು, ಕಳೆದ ವರ್ಷ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿ 1000 ಕೋಟಿ ಮೊತ್ತದ ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಹಾಗಾಗಿ ವೈರಲ್‌ ಫೋಟೋ ರಾಮಮಂದಿರದ್ದಲ್ಲ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

Latest Videos
Follow Us:
Download App:
  • android
  • ios