Asianet Suvarna News Asianet Suvarna News

Fact Check : ಟಾಟಾದಿಂದ ಓಲಾ, ಊಬರ್‌ಗೆ ಸಡ್ಡು! ಟ್ಯಾಕ್ಸಿ ಸೇವೆ ಆರಂಭ?

ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೊಬೈಲ್‌ ಕಂಪನಿ ಟಾಟಾ ಮೋಟ​ರ್‍ ಕಾಲಿಡದ ಜಾಗವೇ ಇಲ್ಲ ಎನ್ನಬಹುದು. ಇದೀಗ ಓಲಾ, ಊಬರ್‌ ಕಂಪನಿಗಳಿಗೆ ಸಡ್ಡು ಹೊಡೆಯಲು ‘ಕ್ಯಾಬ್‌ ಇ’ ಎಂಬ ನೂತನ ಟ್ಯಾಕ್ಸಿ ಸೇವೆ ಆರಂಭಿಸಿದೆ ಎನ್ನಲಾಗುತ್ತದೆ. ನಿಜನಾ ಈ ಸುದ್ದಿ? ನಾವು ಈ ಸೇವೆಯನ್ನು ಪಡೆಯಬಹುದಾ? ಇಲ್ಲಿದೆ ಸತ್ಯಾಸತ್ಯತೆ!

Fact Check of TATA Motors Launch Cab Service Against Uber Ola
Author
Bengaluru, First Published Sep 11, 2020, 9:56 AM IST

ನವದೆಹಲಿ (ಸೆ. 11): ಓಲಾ, ಊಬರ್‌ ಕಂಪನಿಗಳಿಗೆ ಸಡ್ಡು ಹೊಡೆಯಲು ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೊಬೈಲ್‌ ಕಂಪನಿ ಟಾಟಾ ಮೋಟ​ರ್‍ಸ್ ‘ಕ್ಯಾಬ್‌ ಇ’ ಎಂಬ ನೂತನ ಟ್ಯಾಕ್ಸಿ ಸೇವೆ ಆರಂಭಿಸಿದೆ. ಸದ್ಯಕ್ಕೆ ಇದು ಮುಂಬೈ ಮತ್ತು ಪುಣೆಯಲ್ಲಿ ಆರಂಭವಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

‘ದೇಶ ಸಂಕಷ್ಟದಲ್ಲಿರುವಾಗ ಯಾವಾಗಲೂ ಟಾಟಾ ಕಂಪನಿ ಕೈಜೋಡಿಸುತ್ತದೆ. ಟಾಟಾ ಮೋಟ​ರ್‍ಸ್ ಮುಂಬೈ ಮತ್ತು ಪುಣೆಯಲ್ಲಿ ಕ್ಯಾಬ್‌ ಇ ಎಂಬ ಟ್ಯಾಕ್ಸಿ ಸೇವೆ ಆರಂಭಿಸಿದೆ. ಈ ಸಂದೇಶವನ್ನು ಸಾಧ್ಯವಾದಷ್ಟುಶೇರ್‌ ಮಾಡಿ ಎಂದು ಬರೆದಿರುವ ಫಾರ್ವರ್ಡ್‌ ಸಂದೇಶವನ್ನು ನೆಟ್ಟಿಗರು ಶೇರ್‌ ಮಾಡುತ್ತಿದ್ದಾರೆ.

Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ- ಚೀನಾ ಯುದ್ಧ?

ಆದರೆ ನಿಜಕ್ಕೂ ಟಾಟಾ ಮೋಟ​ರ್‍ಸ್ ಹೊಸ ಟ್ಯಾಕ್ಸಿ ಸೇವೆ ಆರಂಭಿಸಿತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಕ್ಯಾಬ್‌ ಇ ಎನ್ನುವ ಟ್ಯಾಕ್ಸಿ ಸೇವೆ ಆರಂಭಿಸಿದ್ದು ಟಾಟಾ ಅಲ್ಲ. ಇಇಜೆಡ್‌ ಇನ್‌ಫ್ರಾ ಟೆಕ್‌ ಎನ್ನುವ ಕಂಪನಿ. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ನೀಡಿರುವ ವಿವರಣೆಯ ಪ್ರಕಾರ ಇದು ನಗರದ ಒಳಗೆ ಮತ್ತು ಹೊರಗೆ ಕಾರುಗಳನ್ನು ಬಾಡಿಗೆಗೆ ಒದಗಿಸುವ ಟೆಕ್ನಾಲಜಿ ಪ್ಲಾರ್ಟ್‌ಫಾಮ್‌ರ್‍. ಇದಕ್ಕೂ ಟಾಟಾ ಮೋಟ​ರ್‍ಸ್ಗೂ ಯಾವುದೇ ಸಂಬಂಧವಿಲ್ಲ.

- ವೈರಲ್ ಚೆಕ್ 

Follow Us:
Download App:
  • android
  • ios