Asianet Suvarna News Asianet Suvarna News

Fact Check : ಆರ್‌ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ?

ಫಲಿತಾಂಶ ಉಲ್ಟಾಆಗುತ್ತಿದ್ದಂತೆಯೇ ನಿರಾಸೆಯಿಂದ ಪಟನಾದ ಆರ್‌ಜೆಡಿ ಮುಖ್ಯಕಚೇರಿಯಲ್ಲಿದ್ದ ಸಿಹಿ ತಿಸಿಸನ್ನು ಕಸದ ಬುಟ್ಟಿಗೆ ಎಸೆಯಲಾಯಿತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

Fact Check of Sweets dumped in the RJD Office after Bihar poll Verdict hls
Author
Bengaluru, First Published Nov 13, 2020, 1:58 PM IST

ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜಯಭೇರಿ ಭಾರಿಸಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಮಹಾಗಠಬಂಧನಕ್ಕೇ ಜಯ ಎಂದು ಹೇಳಿದ್ದವು. ಹೀಗಾಗಿ ಮತ ಎಣಿಕೆಗೂ ಮುನ್ನ ಆರ್‌ಜೆಡಿ ಕಚೇರಿಯಲ್ಲಿ ಭಾರೀ ಉತ್ಸಾಹ ಮನೆಮಾಡಿತ್ತು.

ವಿಜಯೋತ್ಸವ ಆಚರಣೆಗಾಗಿ ಭಾರೀ ಪ್ರಮಾಣದ ಸಿಹಿ ತಿಂಡಿಯನ್ನು ತಯಾರಿಸಲಾಗಿತ್ತು. ಆದರೆ ಫಲಿತಾಂಶ ಉಲ್ಟಾಆಗುತ್ತಿದ್ದಂತೆಯೇ ನಿರಾಸೆಯಿಂದ ಪಟನಾದ ಆರ್‌ಜೆಡಿ ಮುಖ್ಯಕಚೇರಿಯಲ್ಲಿದ್ದ ಸಿಹಿ ತಿಸಿಸನ್ನು ಕಸದ ಬುಟ್ಟಿಗೆ ಎಸೆಯಲಾಯಿತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಭಾರೀ ಪ್ರಮಾಣದ ಸಿಹಿ ತಿನಿಸುಗಳನ್ನು ಎಸೆಯುತ್ತಿರುವ ಎರಡು ಫೋಟೋಗಳನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

 

ಆದರೆ ನಿಜಕ್ಕೂ ವೈರಲ್‌ ಫೋಟೋಗಳು ಆರ್‌ಜೆಡಿ ಕಚೇರಿಯದ್ದೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಈ ಚಿತ್ರಗಳಿಗೂ ಬಿಹಾರ ಚುನಾವಣೆಗೂ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮಧ್ಯಪ್ರದೇಶ ಮತ್ತು ಹರಾರ‍ಯಣ ರಾಜ್ಯಗಳ ಹಳೆಯ ಚಿತ್ರಗಳು ಎಂದು ತಿಳಿದುಬಂದಿದೆ.

ಬೈಡೆನ್ ಪ್ರಮಾಣ ಕಾರ್ಯಕ್ರಮಕ್ಕೆ ಮನಮೋಹನ್ ಸಿಂಗ್ ಮುಖ್ಯ ಅತಿಥಿ?

ಈ ಫೋಟೋಗಳು ಹಿಂದಿ ಸುದ್ದಿವಾಹಿನಿಗಳಲ್ಲಿ ಪ್ರಕಟವಾಗಿರುವುದು ಪತ್ತೆಯಾಗಿದೆ. ಅದರಲ್ಲಿ ಒಂದು ದೀಪಾವಳಿ ಹಿನ್ನೆಲೆಯಲ್ಲಿ ಇದೇ ನ.10 ಮತ್ತು 11ರಂದು ್ತ ಹರಾರ‍ಯಣದ ಸಿಹಿ ಉತ್ಪನ್ನ ಮತ್ತಿತರ ಆಹಾರ ಉತ್ಪನ್ನಗಳನ್ನು ತಯಾರಿಸುವ ಎರಡು ಕಡೆಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ತಯಾರಿಸುತ್ತದೆ ಸಹಿ ತಿನಿಸುಗಳನ್ನು ಕಸಕ್ಕೆ ಎಸೆಯಗಾಗಿತ್ತು. ಇನ್ನೊಂದು ಚಿತ್ರ ಜೋದಪುರದ್ದು.

- ವೈರಲ್ ಚೆಕ್ 

Follow Us:
Download App:
  • android
  • ios