Fact Check: 'ಟಿಪ್ಪು' ಸಿನಿಮಾದಲ್ಲಿ ಶಾರುಖ್ ಅಭಿನಯಿಸ್ತಿದಾರಾ?
ಬಾಲಿವುಡ್ ನಟ ಶಾರುಖ್ ಖಾನ್ ನಾಯಕತ್ವದಲ್ಲಿ ಚಿತ್ರೀಕರಣವಾಗುತ್ತಿರುವ ‘ಟಿಪ್ಪು ಸುಲ್ತಾನ್’ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಾರುಖ್ ಟಿಪ್ಪು ವೇಷಧಾರಿಯಾಗಿ ಕಾಣಿಸಿಕೊಂಡಿರುವ ಪೋಸ್ಟರ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.
ಬಾಲಿವುಡ್ ನಟ ಶಾರುಖ್ ಖಾನ್ ನಾಯಕತ್ವದಲ್ಲಿ ಚಿತ್ರೀಕರಣವಾಗುತ್ತಿರುವ ‘ಟಿಪ್ಪು ಸುಲ್ತಾನ್’ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶಾರುಖ್ ಟಿಪ್ಪು ವೇಷಧಾರಿಯಾಗಿ ಕಾಣಿಸಿಕೊಂಡಿರುವ ಪೋಸ್ಟರ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ‘ಈ ಪೋಸ್ಟ್‌ನಲ್ಲಿ ಇರುವವರು ಯಾರೆಂದು ತಿಳಿಯಿತೇ? ಟಿಪ್ಪು ಸುಲ್ತಾನ್ ಹೆಸರನ್ನು ನೀವು ಕೇಳಿರುತ್ತೀರಿ. ಭಾರತವನ್ನು ಲೂಟಿ ಮಾಡಿದ, ಲಕ್ಷಾಂತರ ಹಿಂದುಗಳನ್ನು ದುರ್ಬಲಗೊಳಿಸಿದ ಮತ್ತು ಸಾವಿರಾರು ದೇವಸ್ಥಾನಗಳನ್ನು ಅಪವಿತ್ರಗೊಳಿಸಿದ ವ್ಯಕ್ತಿಯನ್ನು ಚಿತ್ರದಲ್ಲಿ ವೀರನಂತೆ ಬಿಂಬಿಸಲಾಗಿದೆ. ಅದಕ್ಕಾಗಿ ಜಿಹಾದಿ ಮನಸ್ಥಿತಿ ಇರುವ ನಟನನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗ ಹಿಂದುಗಳು ಸಿನಿಮಾ ನೋಡಲು 300-500 ರು. ಖರ್ಚು ಮಾಡಬೇಕು. ದೇಶ ನಮ್ಮದು, ಹಣ ನಮ್ಮದು, ದೌರ್ಜನ್ಯವೂ ನಮ್ಮ ಮೇಲೆ. ಹಿಂದುಗಳೇ ಈ ಸಿನಿಮಾಕ್ಕೆ ಬಹಿಷ್ಕಾರ ಹಾಕಿ’ ಎಂದು ಬರೆಯಲಾಗಿದೆ. ಇದೀಗ 32 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿ, ಟ್ವೀಟರ್‌ನಲ್ಲೂ ವೈರಲ್ ಆಗುತ್ತಿದೆ.
ಆದರೆ ಟಿಪ್ಪು ಸುಲ್ತಾನ್ ಹೆಸರಿನ ಯಾವುದೇ ಸಿನಿಮಾವೂ ನಿರ್ಮಾಣವಾಗುತ್ತಿಲ್ಲ ಎಂದು ಖಚಿತತೆ ಸಿಕ್ಕಿದೆ. ಶಾರುಖ್ ಅಭಿಮಾನಿಯೊಬ್ಬರು ರಚಿಸಿದ ಈ ಚಿತ್ರವನ್ನು ಸಿನಿಮಾ ಪೋಸ್ಟರ್ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.
Fact Check: ಗೋಧಿ ಪ್ಯಾಕೇಟ್‌ನಲ್ಲಿ 15 ಸಾವಿರ ಇಟ್ಟು ಹಂಚಿದ ಅಮೀರ್ ಖಾನ್!
ಖಾನ್ ಅವರ ಫೋಟೋವನ್ನು ಎಡಿಟ್ ಮಾಡಿ ನಿರ್ಮಿಸಲಾದ ‘ಟಿಪ್ಪುಸುಲ್ತಾನ್’ ವಿಡಿಯೋವನ್ನು 2018ರಲ್ಲಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅಲ್ಲದೆ ಇದು ಫ್ಯಾನ್‌ಮೇಡ್ ಸಿನಿಮಾ ಎಂಬ ಸ್ಪಷ್ಟನೆಯನ್ನೂ ಅದರಲ್ಲಿ ನೀಡಲಾಗಿತ್ತು. ಸದ್ಯ ಅದನ್ನೇ ಬಳಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ. ಅಲ್ಲದೆ ವೈರಲ್ ಪೋಸ್ಟರ್‌ನಲ್ಲಿ ನಿರ್ದೇಶಕ, ನಿರ್ಮಾಪಕ ಯಾರೊಬ್ಬರ ಹೆಸರೂ ಇಲ್ಲ.
- ವೈರಲ್ ಚೆಕ್