Fact Check: ಗೋಧಿ ಪ್ಯಾಕೇಟ್‌ನಲ್ಲಿ 15 ಸಾವಿರ ಇಟ್ಟು ಹಂಚಿದ ಅಮೀರ್‌ ಖಾನ್!

ಗೋಧೀ ಚೀಲಗಳಲ್ಲಿ ಹಣ ಇಡೋ ಮನುಷ್ಯ ನಾನಲ್ಲ. ಒಂದೋ ಇದು ಸಂಪೂರ್ಣ ಫೇಕ್ ನ್ಯೂಸ್ ಆಗಿರಬೇಕು ಅಥವಾ  ಆ ರಾಬಿನ್ ಹುಡ್ ಗೆ ತನ್ನ ಗುರುತು ಮುಚ್ಚಿಡೋಕೆ ಬಯಸಿರಬೇಕು' ಅಂತ ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ಅಷ್ಟರಲ್ಲಿ ಗೋಧಿ ಹಿಟ್ಟಿನಲ್ಲಿ ಅವರು ಹದಿನೈದು ಸಾವಿರ ರು. ಇಟ್ಟಿದ್ದಾರೆ ಎನ್ನಲಾದ ಆ ವೀಡಿಯೋವೂ ಡಿಲೀಟ್ ಆಗಿ ಬಿಟ್ಟಿದೆ. 

Amir khan isn't the Robin Hood  in concern

ಕಳೆದೊಂದು ವಾರದಿಂದ ವೈರಲ್ ಆಗ್ತಿದ್ದ ಸುದ್ದಿಯಿದು. ಸಿಕ್ಕ ಸಿಕ್ಕ ವೆಬ್ ಸೈಟ್ ನಲ್ಲೆಲ್ಲ ಈ ಸುದ್ದಿ ಓಡಾಡಾಡಿದ್ದೇ ಓಡಾಡಿದ್ದು. ಜನ ಎಲ್ಲಿಲ್ಲದ ಕುತೂಹಲದಿಂದ ನೋಡಿ ಲೈಕ್ ಒತ್ತಿದ್ದೇ ಒತ್ತಿದ್ದು. ಕ್ಷಣ ಮಾತ್ರದಲ್ಲಿ ಈ ವೀಡಿಯೋ ವೈರಲ್ ಆಗೋಯ್ತು. ಅರೆ, ಅಮೀರ್ ಖಾನ್ ಇಷ್ಟೊಳ್ಳೆ ಮನುಷ್ಯನಾ? ನಿಜವಾದ ಬಡವರನ್ನು ಗೊತ್ತು ಮಾಡಿದ ಅವಳ ಜಾಣ್ಮೆ ಎಂಥಾ ಗ್ರೇಟ್ ಆದದ್ದು ಅಂತೆಲ್ಲ ಮಾತಾಡಿಕೊಂಡರು. ಅಷ್ಟಕ್ಕೂ ಆ ವೀಡಿಯೋದಲ್ಲಿ ಏನಿತ್ತು? ಆ ಡೀಟೈಲ್ ಇಲ್ಲಿದೆ.

ತಮ್ಮ ಮದುವೆ ವಿಚಾರದ ಗುಟ್ಟು ಹೇಳಿದ ವಿಜಯ್ ದೇವರಕೊಂಡ

ಲಾಕ್‌ಡೌನ್ ಟೈಮ್ ನಲ್ಲಿ ನಿಜಕ್ಕೂ ಬಡತನದಿಂದ ಹಿಟ್ಟಿಗಾಗಿ ಒದ್ದಾಡುವವರಿಗೆ ಒಂದಿಷ್ಟು ಸಹಾಯ ಮಾಡಬೇಕು ಅಂತ ಅಮೀರ್ ಖಾನ್ ಯೋಚಿಸ್ತಾರೆ. ಸಿನಿಮಾ ಸ್ಟೈಲ್ ನಲ್ಲಿ ತಲೆ ಓಡಿಸ್ತಾರೆ. ಆಗ ಅವರಿಗೊಂದು ಐಡಿಯಾ ಹೊಳೆಯುತ್ತೆ. ನಿಜಕ್ಕೂ ಬಡವರಾದವರಿಗೆ ಅಮೀರ್ ಖಾನ್ ಅವರು ಟ್ರಕ್ ತುಂಬ ಒಂದೊಂದು ಕೆಜಿ ತೂಕದ ಗೋಧಿ ಹಿಟ್ಟಿನ ಪ್ಯಾಕೆಟ್ ಕಳುಹಿಸುತ್ತಾರೆ. ಉಳಿದವರೆಲ್ಲ ಹದಿನೈದು ದಿನಕ್ಕಾಗುವಷ್ಟೋ, ತಿಂಗಳಿಗಾಗುವಷ್ಟೋ ರೇಶನ್ ವಿತರಿಸಿದರೆ ಅಮೀರ್ ಖಾನ್ ಕೇವಲ ಒಂದು ಕೆಜಿಯ ಗೋಧಿ ಪ್ಯಾಕೆಟ್ ನೀಡ್ತಾರೆ. ಟ್ರಕ್ ದೆಹಲಿಯ ಗಲ್ಲಿಗಳಲ್ಲಿ ಚಲಿಸಿ ಬಡವರಿಗೆ ಈ ಒಂದು ಕೆಜಿ ಗೋಧಿ ಹಿಟ್ಟು ನೀಡಲು ಬರುತ್ತದೆ. ಒಂದು ಕೆಜಿ ಹಿಟ್ಟಿಗೋಸ್ಕರ ಯಾರು ಕ್ಯೂನಲ್ಲಿ ನಿಲ್ಲುತ್ತಾರೆ ಅಂತ ಹೆಚ್ಚಿನವರು ಉಡಾಫೆಯಿಂದ ದೂರ ಸರಿಯುತ್ತಾರೆ. ಕೆಲವರು, ನಿಜಕ್ಕೂ ಹಸಿವಿನಿಂದ ಒದ್ದಾಡುತ್ತಿದ್ದವರು ಮಾತ್ರ ಕ್ಯೂ ನಲ್ಲಿ ನಿಂತು. ಗೋಧೀ ಹಿಟ್ಟಿನ ಪ್ಯಾಕೆಟ್ ತಗೊಳ್ತಾರೆ.

ಹೆಂಗಳೆಯರಿಗೆ ಶುಭ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಮನೆಗೆ ಹೋಗಿ ಹಿಟ್ಟಿನ ಪ್ಯಾಕೆಟ್ ಬಿಡಿಸಿ ನೋಡಿದ ಅವರಿಗೆಲ್ಲ ಬಿಗ್ ಶಾಕ್! ಆ ಪ್ಯಾಕೆಟ್ ನೊಳಗೆ ಬರೋಬ್ಬರಿ ಹದಿನೈದು ಸಾವಿರ ರು ಹಣ! ನಿಜವಾದ ಬಡವರನ್ನು ಗುರುತಿಸಿ, ಅವರಿಗೆ ಸಹಾಯ ಮಾಡಲು ಅಮೀರ್ ಮಾಡಿದ ಪ್ಲ್ಯಾನ್ ಇದು ಅಂತ ಕನ್ ಕ್ಲೂಡ್ ಮಾಡಿ ಆ ವೀಡಿಯೋ ಮುಗಿಯುತ್ತದೆ.. ಈ ವೀಡಿಯೋ ಎಲ್ಲ ಕಡೆ ವೈರಲ್ ಆಗುತ್ತೆ. ದೆಹಲಿಯ ಜನ ಇನ್ನೊಮ್ಮೆ ಅಂಥಾ ಟ್ರಕ್ ಬರಬಹುದೇ, ತಮಗೂ ಹದಿನೈದು ಸಾವಿರ ರು. ಸಿಗಬಹುದೇ ಅಂತ ಆಸೆಯಿಂದ ನೋಡ್ತಾ ನಿಲ್ಲುತ್ತಾರೆ, ಅವರ ಬ್ಯಾಡ್ ಲಕ್. ಆ ಟ್ರಕ್ ವಾಪಾಸ್ ಬರಲೇ ಇಲ್ಲ.

ಊರೆಲ್ಲ ಸುತ್ತಿದ ಈ ವೀಡಿಯೋ ಅಮೀರ್ ಖಾನ್ ಅವರಿಗೂ ತಲುಪಿತು. ತಮ್ಮ ಹೆಸರಿನಲ್ಲಿ ಓಡಾಡುತ್ತಿರುವ ಈ ವೀಡಿಯೋ ಕಂಡು ದಂಗಾಗುವ ಸರದಿ ಅಮೀರ್ ಅವರದು. ಯಾರೋ ಅನಾಮಧೇಯ ಅವರಿಗೆ ಹೀಗೊಂದು ಪಬ್ಲಿಸಿಟಿ ಕೊಟ್ಟಿದ್ದು ನೋಡಿ ನಗುವುದೋ ಅಳುವುದೋ ತೋಚದ ಸ್ಥಿತಿ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅಮೀರ್ ಸ್ಪಷ್ಟನೆ ಕೊಡ್ತಾರೆ. - 'ಗೋಧೀ ಚೀಲಗಳಲ್ಲಿ ಹಣ ಇಡೋ ಮನುಷ್ಯ ನಾನಲ್ಲ. ಒಂದೋ ಇದು ಸಂಪೂರ್ಣ ಫೇಕ್ ನ್ಯೂಸ್ ಆಗಿರಬೇಕು ಅಥವಾ ಆ ರಾಬಿನ್ ಹುಡ್ ಗೆ ತನ್ನ ಗುರುತು ಮುಚ್ಚಿಡೋಕೆ ಬಯಸಿರಬೇಕು' ಅನ್ನೋದು ಅವರ ಟ್ವೀಟ್ ನ ಸಾರಾಂಶ. ಅಷ್ಟರಲ್ಲಿ ಈ ವೀಡಿಯೋವೂ ಡಿಲೀಟ್ ಆಗಿ ಬಿಟ್ಟಿದೆ. ಈ ಸ್ಟೋರಿಗೆ ಫುಲ್ ಸ್ಟಾಪ್ ಬಿದ್ದಿದೆ.

ಹಾಗಂತ ಅಮೀರ್ ಕೊರೋನಾ ಸಂತ್ರಸ್ತರಿಗೆ ಸಹಾಯವೇ ಮಾಡಿಲ್ಲ ಅಂತಿಲ್ಲ, ಪ್ರಧಾನಿಗಳ ಕೊರೋನಾ ನಿಧಿಗೆ ೨೫೦ ಕೋಟಿ ರು. ಗಳಷ್ಟು ಹಣ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಹಣ ನೀಡಿದ್ದಾರೆ. ಸದ್ಯಕ್ಕೀಗ ಅಮೀರ್ ಖಾನ್ ಲಾಕ್‌ಡೌನ್‌ ಟೈಮ್ ನಲ್ಲಿ ಫ್ಯಾಮಿಲಿ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಅವರ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ಈ ಸಿನಿಮಾದಲ್ಲಿ ಕರೀನಾ ಕಪೂರ್ ಅವರು ಅಮೀರ್ ಗೆ ಜೊತೆಯಾಗಿದ್ದಾರೆ. ಬಹಳ ಫೇಮಸ್ ಆಗಿರುವ ಅಮೆರಿಕನ್ ಸಿನಿಮಾ 'ಪಾರೆಸ್ಟ್ ಗಂಪ್' ನಿಂದ ಪ್ರೇರಣೆ ಪಡೆದ ಚಿತ್ರವಿದು.

 

 

 

Latest Videos
Follow Us:
Download App:
  • android
  • ios