Fact Check: ಬಿಜೆಪಿ ಸೇರಿದ್ರಾ ಸಚಿನ್ ಪೈಲಟ್.?
ರಾಜಸ್ಥಾನದ ಬಂಡಾಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ರಾಜಸ್ಥಾನದ ಬಂಡಾಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅದರಲ್ಲಿ ನಡ್ಡಾ ಅವರು ಹೂ ಗುಚ್ಛವನ್ನು ಹಿಡಿದು ಸಚಿನ್ ಪೈಲಟ್ ಅವರನ್ನು ಸ್ವಾಗತಿಸುವ ದೃಶ್ಯವಿದೆ. ನೆಟ್ಟಿಗರು ಈ ಫೋಟೋವನ್ನು ಪೋಸ್ಟ್ ಮಾಡಿ, ‘ಭಾರತೀಯ ಜನತಾ ಪಾರ್ಟಿಗೆ ಸೇರಿದ್ದಕ್ಕೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. 18 ಶಾಸಕರೊಂದಿಗೆ ಸಚಿನ್ ಪೈಲಟ್ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದ ಬೆನ್ನಲ್ಲೇ ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
Fact Check:'ಮುಸ್ಲಿಂ ಟೋಪಿ' ಧರಿಸಿದ್ರಾ ಮೋದಿ, ಶಾ!
ಆದರೆ ನಿಜಕ್ಕೂ ಪೈಲಟ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ವೈರಲ್ ಫೋಟೋ ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವಂಥದ್ದು, ಸಚಿನ್ ಪೈಲಟ್ ಭಾರತೀಯ ಜನತಾ ಪಾರ್ಟಿಯನ್ನು ಸೇರಿಲ್ಲ ಎಂಬುದು ಸ್ಪಷ್ಟವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ಮೂಲ ಚಿತ್ರ ಪತ್ತೆಯಾಗಿದೆ. ಅದರಲ್ಲಿ ಮಾಜಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಸಿಂಧಿಯಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸ್ವಾಗತಿಸುವ ದೃಶ್ಯವಿದೆ. ಕೆಲ ತಿಂಗಳ ಹಿಂದೆ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದೇ ಫೋಟೋವನ್ನು ಎಡಿಟ್ ಮಾಡಿ ಸಿಂಧಿಯಾ ಜಾಗದಲ್ಲಿ ಪೈಲಟ್ ಫೋಟೋವನ್ನು ಸಂಕಲಿಸಲಾಗಿದೆ.
- ವೈರಲ್ ಚೆಕ್