ಭಾರತದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರು ಹೇಳಿರುವರೆಂದು ಹೇಳಲಾದ ಒಂದು ಹೇಳಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಅದರಲ್ಲಿ ಕೊರೋನಾ ವೈರಸ್‌ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಆರ್ಥಿಕ ಹಿಂಜರಿತ ಕಾದಿದೆ ಎಂದು ಊಹಿಸಿದ ತಜ್ಞರನ್ನು ಟೀಕಿಸಲಾಗಿದೆ. ವೈರಸ್‌ ಸಂದೇಶದ ಪೂರ್ಣ ಪಾಠ ಹೀಗಿದೆ, ‘ತಜ್ಞರು ಭಾರತ ಆರ್ಥಿಕತೆ ಕುಸಿಯಲಿದೆ ಎಂದು ಅಂದಾಜಿಸಿದ್ದಾರೆ.

Fact Check: ಸಮುದ್ರಕ್ಕೆ ಕೊರೋನಾ ಸೋಂಕಿತರ ಹೆಣ, ಮೀನು ತಿನ್ಬೇಡಿ!

ಈ ತಜ್ಞರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಮಾನವನಲ್ಲಿನ ಪ್ರೇರಣಾಶಕ್ತಿ ಹಾಗೂ ದೃಢ ನಿಶ್ಚಯದ ಪ್ರಯತ್ನಗಳ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ ಎಂದನಿಸುತ್ತಿದೆ. 2ನೇ ವಿಶ್ವ ಯುದ್ಧದ ಬಳಿಕ ಜಪಾನ್‌ ಸಂಪೂರ್ಣ ನೆಲಕಚ್ಚಿತ್ತು. ಆದರೆ ಕೇವಲ ಮೂರೇ ಮೂರು ದಶಕದಲ್ಲಿ ಅಮೆರಿಕವನ್ನೇ ನಡುಗಿಸುವಷ್ಟುಎತ್ತರಕ್ಕೆ ಬೆಳೆದಿದೆ’ ಎಂದಿದೆ.

ಇದು ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ವೈರಲ್‌ ಆದ ಬಳಿಕ ಸ್ವತಃ ರತನ್‌ ಟಾಟಾ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್‌ ಮಾಡಿ, ‘ಈ ಪೋಸ್ಟನ್ನು ನಾನು ಬರೆದಿಲ್ಲ. ವಾಟ್ಸಾಪ್‌ ಮತ್ತು ಸಾಮಾಜಿಕ ತಾಣಗಳಲ್ಲಿ ನಾನೇನನ್ನೂ ಹೇಳುವುದಿಲ್ಲ. ಹಾಗೊಮ್ಮೆ ಏನನ್ನಾದರೂ ಹೇಳಬೇಕಿದ್ದರೆ, ಸುದ್ದಿ ಮಾಧ್ಯಮಗಳಿಗೇ ಮಾಹಿತಿ ನೀಡುತ್ತೇನೆ’ ಎಂದಿದ್ದಾರೆ. ಹಾಗಾಗಿ ರತನ್‌ ಟಾಟಾ ಹೆಸರಿನಲ್ಲಿ ವೈರಲ್‌ ಆಗಿರುವ ಈ ಸಂದೇಶ ಸುಳ್ಳು.

82 ವರ್ಷದ ರತನ್‌ ಟಾಟಾ, ಕೋವಿಡ್‌-19 ವಿರುದ್ಧದ ಸಮರಕ್ಕಾಗಿ 500 ಕೋಟಿ ರು. ದೇಣಿಗೆ ನೀಡಿದ್ದಾರೆ.